ಟಿ20 ವಿಶ್ವಕಪ್‌ಗೆ ಟೀಮ್ ಇಂಡಿಯಾದ ಬಲಿಷ್ಠ ಪ್ಲೇಯಿಂಗ್ 11 ಹೀಗಿದೆ!

ಈ ಬಾರಿಯ ಟಿ20 ವಿಶ್ವಕಪ್‌ಗೆ ದಿನಗಣನೆ ಶುರುವಾಗಿದ್ದು ಟೀಮ್ ಇಂಡಿಯಾ ಕೂಡ ಇದಕ್ಕಾಗಿ ಸಜ್ಜಾಗಿದೆ. ಬುಧವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟೀಮ್ ಇಂಡಿಯಾದ 15 ಮಂದಿ ಆಡುವ ಬಳಗವನ್ನು ಘೋಷಣೆ ಮಾಡಿದೆ. ಇದರೊಂದಿಗೆ ಮೂವರು ಮೀಸಲು ಆಟಗಾರರು ಕೂಡ ಭಾರತೀಯ ತಂಡದಲ್ಲಿದ್ದಾರೆ. ಕೆಲ ಪ್ರಮುಖ ಆಟಗಾರರ ಸೇರ್ಪಡೆ ಹಾಗೂ ಬಿಡುಗಡೆ ಈ ಬಾರಿಯ ಟಿ20 ವಿಶ್ವಕಪ್‌ನ ತಂಡದಲ್ಲಿ ಗಮನಸೆಳೆದಿದೆ. ಹೀಗಾಗಿ ಸದ್ಯ ಭಾರತೀಯ ತಂಡದ ಆಯ್ಕೆಯ ಬಗ್ಗೆ ಸಾಕಷ್ಟು ಚರ್ಚಗಳು ನಡೆಯುತ್ತಿದೆ.

ಅನುಭವು ಆಟಗಾರರಾದ ಶಿಖರ್ ಧವನ್ ಹಾಗೂ ಯುಜುವೇಂದ್ರ ಚಾಹಲ್ ಈ ತಂಡದಲ್ಲಿ ಸ್ಥಾನವನ್ನು ಪಡೆಯಲು ವಿಫಲವಾಗಿದ್ದಾರೆ. ಮತ್ತೊಂದೆಡೆ ಯುವ ಆಟಗಾರಾದ ಇಶಾನ್ ಕಿಶನ್ ಹಾಗೂ ರಾಹುಲ್ ಚಹರ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ದೀಪಕ್ ಚಹರ್, ಶ್ರೇಯಸ್ ಐಯ್ಯರ್ ಹಾಗೂ ಶಾರ್ದೂಲ್ ಠಾಕೂರ್ ಈ ತಂಡದಲ್ಲಿ ಸ್ಥಾನವನ್ನು ಸಂಪಾದಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಮೀಸಲು ಆಟಗಾರರಾಗಿ ಇವರು ತಂಡದಲ್ಲಿ ಇರಲಿದ್ದಾರೆ. ಇನ್ನು ಅನುಭವು ಆರ್ ಅಶ್ವಿನ್ ತಂಡಕ್ಕೆ ನಾಲ್ಕು ವರ್ಷಗಳ ನಂತರ ಸೇರ್ಪಡೆಯಾಗಿರುವುದು ಮತ್ತೊಂದು ಪ್ರಮುಖ ಸಂಗತಿಯಾಗಿದೆ.

ಟಿ20 ವಿಶ್ವಕಪ್‌: ಟೀಮ್ ಇಂಡಿಯಾದಲ್ಲಿಲ್ಲ ಈ ಪ್ರಮುಖ ಆಟಗಾರರಿಗೆ ಸ್ಥಾನಟಿ20 ವಿಶ್ವಕಪ್‌: ಟೀಮ್ ಇಂಡಿಯಾದಲ್ಲಿಲ್ಲ ಈ ಪ್ರಮುಖ ಆಟಗಾರರಿಗೆ ಸ್ಥಾನ

ಹಾಗಾದರೆ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತದ ಬಲಿಷ್ಠ ಆಡುವ ಬಳಗ ಹೇಗಿರಲಿದೆ? ಈ ಬಗ್ಗೆ ಸಾಕಷ್ಟು ಅಭಿಪ್ರಾಯಗಳು ಚರ್ಚೆಯಾಗುತ್ತಿದೆ. ಮೈಖೇಲ್ ಕನ್ನಡ ಭಾರರತದ ಸಂಭಾವ್ಯ ಆಡುವ ಬಳಗವನ್ನು ನಿಮ್ಮ ಮುಂದಿಡುತ್ತಿದೆ ಓದಿ..

ಟಿ 20 ವಿಶ್ವಕಪ್‌ಗೆ ಆಯ್ಕೆಯಾದ ಭಾರತ ತಂಡ

ಟಿ 20 ವಿಶ್ವಕಪ್‌ಗೆ ಆಯ್ಕೆಯಾದ ಭಾರತ ತಂಡ

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಜಸ್ಪ್ರಿತ್ ಬೂಮ್ರ, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ,

ಮೀಸಲು ಆಟಗಾರರು: ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಶ್ರೇಯಸ್ ಅಯ್ಯರ್

ಆರಂಭಿಕರಾಗಿ ರೋಹಿತ್-ರಾಹುಲ್

ಆರಂಭಿಕರಾಗಿ ರೋಹಿತ್-ರಾಹುಲ್

ವೈಟ್‌ಬಾಲ್ ಕ್ರಿಕೆಟ್‌ನ ಅತ್ಯುತ್ತಮ ಆಟಗಾರರಲ್ಲಿ ಒಬ್ಬ ಎನಿಸಿಕೊಂಡಿರುವ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಉಪನಾಯಕನೂ ಆಗಿದ್ದಾರೆ. ಸುದೀರ್ಘ ಕಾಲದಿಮದ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ರೋಹಿತ್ ಟಿ20 ವಿಶ್ವಕಪ್‌ನಲ್ಲಿಯೂ ಈ ಜವಾಬ್ಧಾರಿಯನ್ನು ಸಮರ್ಥವಾಗಿ ವಹಿಸಲಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಭಾರತ ಸೀಮಿತ ಓವರ್‌ಗಳ ತಂಡದ ಆರಂಭಿಕನಾಗಿ ಸಾಥ್ ನಿಡುತ್ತಿರುವ ಕೆಎಲ್ ರಾಹುಲ್ ಟಿ20 ವಿಶ್ವಕಪ್‌ನಲ್ಲಿಯೂ ರೋಹಿತ್‌ಗೆ ಜೊತೆಯಾಗಲಿದ್ದಾರೆ. ಕಳೆದ ಕೆಲ ಸರಣಿಗಳಲ್ಲಿ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಜೋಡಿ ಆರಂಭಿಕರಾಗಿ ಮಿಂಚಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಕೂಡ ಈ ಜೋಡಿ ಆರಂಭಿಕರಾಗಿ ತಂಡಕ್ಕೆ ಉತ್ತಮ ಯಶಸ್ಸು ನೀಡುತ್ತಿದ್ದಾರೆ.

ಮಧ್ಯಮ ಕ್ರಮಾಂಕ

ಮಧ್ಯಮ ಕ್ರಮಾಂಕ

ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯಲಿದ್ದಾರೆ. ಐಸಿಸಿ ಟೂರ್ನಮೆಂಟ್‌ಗಳಲ್ಲಿ ಈವರೆಗೆ ನಾಯಕನಾಗಿಉ ಯಶಸ್ಸು ಸಾಧಿಸಲು ವಿಫಲವಾಗಿರುವ ಕೊಹ್ಲಿ ಮೇಲೆ ಈ ಬಾರಿ ಹೆಚ್ಚಿನ ಜವಾಬ್ಧಾರಿಯಿದೆ. ಬ್ಯಾಟಿಂಗ್‌ನಲ್ಲಿ ಅಗ್ರ ಕ್ರಮಾಂಕದಲ್ಲಿ ತಂಡದ ಪಾಲಿಗೆ ಹೆಚ್ಚಿನ ಕೊಡುಗೆಯನ್ನು ಕೊಹ್ಲಿಯಿಂದ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

ಇನ್ನು ಸೂರ್ಯಕುಮಾರ್ ಯಾದವ್ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ಮಿಂಚಿಹರಿಸಿದ್ದಾರೆ. ಒಟ್ಟು ಕೇವಲ 7 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮಾತ್ರವೇ ಆಡಿರುವ ಸೂರ್ಯಕುಮಾರ್ ಯಾದವ್ 4 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಸ್ಪಿನ್ ದಾಳಿಯನ್ನು ಅದ್ಭುತವಾಗಿ ಎದುರಿಸುವ ಸಾಮರ್ಥ್ಯ ಸೂರ್ಯಕುಮಾರ್ ಯಾದವ್‌ಗೆ ಇದೆ. ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿಯಲಿದ್ದಾರೆ ಸೂರ್ಯಕುಮಾರ್ ಯಾದವ್. ಇನ್ನು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ರಿಷಭ್ ಪಂತ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳಲಿದ್ದಾರೆ. ವೈಟ್‌ಬಾಲ್ ಕ್ರಿಕೆಟ್‌ನಲ್ಲಿಯೂ ಪಂತ್ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭರವಸೆಯ ಹೆಜ್ಜೆಗಳನ್ನಿಡುತ್ತಿದ್ದಾರೆ.

ಆಲ್‌ರೌಂಡರ್‌ಗಳಾಗಿ ಪಾಂಡ್ಯ- ಜಡ್ಡು

ಆಲ್‌ರೌಂಡರ್‌ಗಳಾಗಿ ಪಾಂಡ್ಯ- ಜಡ್ಡು

ಇನ್ನು ಟೀಮ್ ಇಂಡಿಯಾದ ವಿಶ್ವಕಪ್‌ನ ಆಡುವ ಬಳಗದಲ್ಲಿ ಆರು ಹಾಗೂ ಏಳನೇ ಕ್ರಮಾಂಕದಲ್ಲಿ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ ಜಡೇಜಾ ಸ್ಥಾನವನ್ನು ಪಡೆಯಲಿದ್ದಾರೆ. ಹಾರ್ದಿಕ್ ಪಂಡ್ಯ ಇತ್ತೀಚಿನ ದಿನಗಳಲ್ಲಿ ಕಳೆಗುಂದಿದಂತೆ ಕಂಡುಬರುತ್ತಿದ್ದ ಹಿನ್ನೆಲೆಯಲ್ಲಿ ವಿಶ್ವಕಪ್‌ನ ತಂಡಕ್ಕೆ ಆಯ್ಕೆಯಾಗುವ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿತ್ತು. ಫಿಟ್‌ನೆಸ್ ಸಮಸ್ಯೆ ಕೂಡ ಕಾಡುತ್ತಿರುವುದು ಇದಕ್ಕೆ ಕಾರಣವಾಗಿದೆ.

ಇನ್ನು ಮತ್ತೋರ್ವ ಆಲ್‌ರೌಂಡರ್ ರವೀಂದ್ರ ಜಡೇಜಾ ಟೀಮ್ ಇಂಡಿಯಾದ ಅತ್ಯಂತ ಮೌಲ್ಯಯುತವಾದ ಆಲ್‌ರೌಂಡರ್ ಆಗಿದ್ದು ಸ್ಪಿನ್ ವಿಭಾಗಕ್ಕೆ ಸಾಕಷ್ಟು ಬಲವನ್ನು ತುಂಬಲಿದ್ದಾರೆ. ಅದರಲ್ಲೂ ಈ ಬಾರಿಯ ಐಪಿಎಲ್‌ನ ಮೊದಲಾರ್ಧದಲ್ಲಿ ಜಡ್ಡು ನೀಡಿದ ಪ್ರದರ್ಶನ ಅಮೋಘವಾಗಿದ್ದು ಇದೇ ಪ್ರದರ್ಶನ ವಿಶ್ವಕೊ್‌ನಲ್ಲಿಯೂ ಮುಂದುವರಿಸುವ ವಿಶ್ವಾಸವನ್ನು ಹೊಂದಿದ್ದಾರೆ.

ಟೀಮ್ ಇಂಡಿಯಾ ನಾಯಕತ್ವದಿಂದ ವಿರಾಟ್ ಔಟ್ | Oneindia Kannada
ಭಾರತದ ಬಲಿಷ್ಠ ಬೌಲಿಂಗ್ ವಿಭಾಗ

ಭಾರತದ ಬಲಿಷ್ಠ ಬೌಲಿಂಗ್ ವಿಭಾಗ

ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಎಷ್ಟು ವೇಗಿಗಳೊಂದಿಗೆ ಕಣಕ್ಕಿಳಿಯಬೇಕು ಎಂಬದನ್ನು ಸಂದರ್ಭ ನೋಡಿಕೊಂಡು ನಿರ್ಧರಿಸಲಿದ್ದಾರೆ. ಆದರೆ ಯುಎಇನ ಪಿಚ್‌ನಲ್ಲಿ ಸ್ಪಿನ್ನರ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಮಿಂಚುವ ಸಾಧ್ಯತೆಯಿರುವ ಕಾರಣದಿಂದಾಗಿ ಸ್ಪಿನ್ ವಿಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜಸ್ಪ್ರೀತ್ ಬೂಮ್ರಾ ವೇಗದ ಬೌಲಿಂಗ್ ಪಡೆಯ ನೇತೃತ್ವ ವಹಿಸಲಿದ್ದಾರೆ. ಎರಡನೇ ವೇಗಿಯಾಗಿ ಭುವನೇಶ್ವರ್ ಕುಮಾರ್ ಸ್ಥಾನ ಪಡೆಯಲಿದ್ದಾರೆ. ಮೊಹಮ್ಮದ್ ಶಮಿ ಕೂಡ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಪೈಪೋಟಿ ನಡೆಸಲಿದ್ದಾರೆ. ಮೂರನೇ ವೇಗಿಯಾಗಿ ಅಗತ್ಯ ಕಾಣಿಸಿದರೆ ಶಮಿ ಡೆತ್ ಓವರ್‌ನಲ್ಲಿ ತಂಡಕ್ಕೆ ನೆರವಾಗಲಿದ್ದಾರೆ. ಇನ್ನು ಸ್ಪಿನ್ನರ್‌ಗಳಾಗಿ ತಂಡದಲ್ಲಿ ಅನುಭವಿ ಆರ್ ಅಶ್ವಿನ್ ಯುವ ಬೌಲರ್‌ಗಳಾದ ವರುಣ್ ಚಕ್ರವರ್ತಿ ಹಾಗೂ ರಾಹುಲ್ ಚಹರ್ ಜೊತೆಗೆ ಪೈಪೋಟಿ ನಡೆಸಲಿದ್ದಾರೆ. ಅನುಭವದ ಆಧಾರದಲ್ಲಿ ಅಶ್ವಿನ್ ಸ್ಥಾನ ಸಂಪಾದಿಸಿದರೆ ಬೌಲಿಂಗ್‌ನಲ್ಲಿನ ಭಿನ್ನತೆಯಿಂದಾಗಿ ವರುಣ್ ಚಕ್ರವರ್ತಿ ಆಡುವ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬಹುದು.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Thursday, September 9, 2021, 11:11 [IST]
Other articles published on Sep 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X