ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ ತಂಡಲ್ಲಿ ಶೋಯೆಬ್ ಮಲಿಕ್ ಆಯ್ಕೆಯಾಗದಿರಲು ಆ ಒಂದು ಟ್ವೀಟ್ ಕಾರಣ

ಮುಂಬರುವ ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದೆ. ಏಷ್ಯಾಕಪ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡದ ಹಲವು ಆಟಗಾರರ ಬದಲಿಗೆ ಬದಲಿ ಅನುಭವಿ ಆಟಗಾರರಿಗೆ ಅವಕಾಶ ಸಿಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು, ಶೋಯೆಬ್ ಮಲಿಕ್ ಟಿ20ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆ ಇತ್ತು, ಆದರೆ ಅವರ ಆಯ್ಕೆಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪರಿಗಣಿಸಿಲ್ಲ. ಶೋಯೆಬ್ ಮಲಿಕ್‌ರನ್ನು ಯಾಕೆ ಆಯ್ಕೆ ಮಾಡಿಲ್ಲ ಎನ್ನುವುದಕ್ಕೆ ಹಲವರು ಕಾರಣಗಳನ್ನು ಹುಡುಕುತ್ತಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಶೋಯೆಬ್ ಮಲಿಕ್ ಅವರ ಅನುಭವವು ಪಾಕಿಸ್ತಾನಕ್ಕೆ ಸೂಕ್ತವಾಗಿರುತ್ತಿತ್ತು ಎಂದು ಮಾಜಿ ಕ್ರಿಕೆಟರ್ ಕಮ್ರಾನ್ ಅಕ್ಮಲ್ ಅಭಿಪ್ರಾಯಪಟ್ಟಿದ್ದಾರೆ. ಈ ತಿಂಗಳ ಆರಂಭದಲ್ಲಿ ಏಷ್ಯಾ ಕಪ್‌ನಿಂದ ಪಾಕಿಸ್ತಾನ ನಿರ್ಗಮಿಸಿದ ನಂತರ ಶೋಯೆಬ್ ಮಲಿಕ್ ಮಾಡಿದ ರಹಸ್ಯ ಟ್ವೀಟ್ ಅವರ ಆಯ್ಕೆಯನ್ನು ತಡೆಯಿತು ಎಂದು ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ಕಮ್ರಾನ್ ಅಕ್ಮಲ್ ಅಭಿಪ್ರಾಯಪಟ್ಟಿದ್ದಾರೆ.

ಟಿ20 ವಿಶ್ವಕಪ್‌: ಅಕ್ಷರ್ ಪಟೇಲ್ ಅಲ್ಲ, ಈತ ರವೀಂದ್ರ ಜಡೇಜಾ ಸ್ಥಾನ ತುಂಬಲಿದ್ದಾರೆ; ವೆಟ್ಟೋರಿಟಿ20 ವಿಶ್ವಕಪ್‌: ಅಕ್ಷರ್ ಪಟೇಲ್ ಅಲ್ಲ, ಈತ ರವೀಂದ್ರ ಜಡೇಜಾ ಸ್ಥಾನ ತುಂಬಲಿದ್ದಾರೆ; ವೆಟ್ಟೋರಿ

ಶ್ರೀಲಂಕಾ ವಿರುದ್ಧದ ಅಂತಿಮ ಸೋಲಿನಲ್ಲಿ 23 ರನ್‌ಗಳಿಂದ ಸೋತ ನಂತರ ಪಾಕಿಸ್ತಾನದ ಆಯ್ಕೆ ನೀತಿಯನ್ನು ಟೀಕಿಸಿದ್ದ ಶೋಯೆಬ್ ಮಲಿಕ್, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಸಮಾಧಾನಕ್ಕೆ ಕಾರಣವಾದರು.

ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಕ್ಮಲ್, ಸಾಮಾಜಿಕ ಮಾಧ್ಯಮದಲ್ಲಿ ಮಲಿಕ್ ಅವರ ಪ್ರಾಮಾಣಿಕತೆ ಟಿ 20 ವಿಶ್ವಕಪ್ ತಂಡದಲ್ಲಿ ಅವರ ಆಯ್ಕೆಯ ದಾರಿಯನ್ನು ಮುಚ್ಚಿದೆ ಎಂದು ಹೇಳಿದರು.

 ಶೋಯೆಬ್ ಮಲಿಕ್‌ರನ್ನು ಆಯ್ಕೆ ಮಾಡಬೇಕಿತ್ತು

ಶೋಯೆಬ್ ಮಲಿಕ್‌ರನ್ನು ಆಯ್ಕೆ ಮಾಡಬೇಕಿತ್ತು

ಶೋಯೆಬ್ ಮಲಿಕ್ ಆಯ್ಕೆ ಕುರಿತಂತೆ ಮಾತನಾಡಿರುವ ಕಮ್ರಾನ್ ಅಕ್ಮಲ್, "ಅನೇಕ ಆಟಗಾರರು ಅವಕಾಶಗಳಿಗೆ ಅರ್ಹರಾಗಿದ್ದಾರೆ, ವಿಶೇಷವಾಗಿ ಮಧ್ಯಮ ಕ್ರಮಾಂಕದಲ್ಲಿ. ಶೋಯೆಬ್ ಮಲಿಕ್ ಅವರಂತಹ ಅನುಭವಿ ಆಟಗಾರನನ್ನು ಬಳಸಿಕೊಳ್ಳಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ

ಶೋಯೆಬ್ ಮಲಿಕ್ ಮಾಡಿದ್ದ ಟ್ವೀಟ್ ಅವರ ಆಯ್ಕೆಯನ್ನು ತಡೆಯಿತು ಎಂದು ನಾನು ಭಾವಿಸುತ್ತೇನೆ. ಅವರು ಪ್ರಾಮಾಣಿಕರಾಗಿದ್ದರು. ಮಲಿಕ್ ಅವರಂತಹ ಅನುಭವಿ ಆಟಗಾರರು ಕ್ರೀಡೆಯಲ್ಲಿ ಉತ್ತಮ ಸಾಧನೆಗಾಗಿ ತಮ್ಮ ಸಾಮರ್ಥ್ಯವನ್ನು ಮುಂದಿಡಬೇಕು ಎಂದು ನಾನು ಭಾವಿಸುತ್ತೇನೆ. ಎಂದು ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಸೋಲಿನ ಬೆನ್ನಲ್ಲೇ ಶೋಯೆಬ್ ಮಲಿಕ್ ನಿಗೂಢ ಟ್ವೀಟ್: ಕಿಡಿಕಾರಿದ ಪಾಕ್ ಅಭಿಮಾನಿಗಳು

 ಇನ್ನೂ ಉತ್ತಮ ತಂಡ ಆಯ್ಕೆ ಮಾಡಬಹುದಿತ್ತು

ಇನ್ನೂ ಉತ್ತಮ ತಂಡ ಆಯ್ಕೆ ಮಾಡಬಹುದಿತ್ತು

"ಜನರ ನೆನಪಿನ ಶಕ್ತಿ ಕಡಿಮೆಯಾಗಿದೆ ಎಂದು ನಾನು ಭಾವಿಸುತ್ತೇನೆ ಮತ್ತು ಮಲಿಕ್ ಮುಂದಿನ ಅದೃಷ್ಟಕ್ಕಾಗಿ ಕಾಯುತ್ತಿದ್ದಾರೆ. ಆಯ್ಕೆದಾರರು ಅದೇ ರೀತಿ ಮಾಡಿದರು ಮತ್ತು ತಂಡವನ್ನು ಪ್ರಕಟಿಸುವಲ್ಲಿ ಅವರು ಉತ್ತಮ ಕೆಲಸವನ್ನು ಮಾಡಬಹುದಿತ್ತು. ಶಾರ್ಜೀಲ್ ಖಾನ್ ಉತ್ತಮ ಪ್ರದರ್ಶನ ನೀಡಿದ್ದರು ಅವರನ್ನೂ ಆಯ್ಕೆಯಲ್ಲಿ ಪರಿಗಣಿಸಬಹುದಿತ್ತು" ಎಂದು ಹೇಳಿದ್ದಾರೆ.

"ಬೌಲಿಂಗ್ ವಿಭಾಗದಲ್ಲಿ, ಹಸನ್ ಅಲಿಯನ್ನು ಹೊರಗಿಡಲಾಗಿದೆ, ಆದರೆ ಅವರು ಪ್ರಸ್ತುತ ಲಯವನ್ನು ಹೊಂದಿಲ್ಲ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಅವರು ದೇಶೀಯ ಕ್ರಿಕೆಟ್‌ನಲ್ಲಿ ಆಡುವ ಮೂಲಕ ಫಾರ್ಮ್ ಅನ್ನು ಮರಳಿ ಪಡೆಯುತ್ತಾರೆ ಮತ್ತು ತಂಡಕ್ಕೆ ಮರಳುತ್ತಾರೆ ಎಂದು ನಾನು ಭಾವಿಸುತ್ತೇನೆ."

 2021ರ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ

2021ರ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ

ಶೋಯೆಬ್ ಮಲಿಕ್, ಪಾಕಿಸ್ತಾನದ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಟಿ20 ಆಟಗಾರ ಮತ್ತು ಟಿ20 ಸ್ವರೂಪದಲ್ಲಿ ಅವರ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ, ನವೆಂಬರ್ 2021 ರಲ್ಲಿ ಯುಎಇಯಲ್ಲಿ ಟಿ20 ವಿಶ್ವಕಪ್‌ನ ಆವೃತ್ತಿಯಲ್ಲಿ ಪಾಕಿಸ್ತಾನ ತಂಡಕ್ಕಾಗಿ ಕೊನೆಯ ಬಾರಿಗೆ ಆಡಿದರು. ಕಳೆದ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಸೆಮಿ-ಫೈನಲ್‌ ತಲುಪುವಲ್ಲಿ ಶೋಯೆಬ್ ಮಲಿಕ್ ಉತ್ತಮ ಪಾತ್ರವನ್ನು ವಹಿಸಿದರು.

 ಪಿಸಿಬಿಯನ್ನು ಟೀಕಿಸಿದ್ದ ಶೋಯೆಬ್ ಮಲಿಕ್

ಪಿಸಿಬಿಯನ್ನು ಟೀಕಿಸಿದ್ದ ಶೋಯೆಬ್ ಮಲಿಕ್

ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ತಂಡ ಅನುಭವಿಸಿದ ಈ ಸೋಲಿನ ಬಳಿಕ ಪಾಕಿಸ್ತಾನದ ಹಿರಿಯ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್ ಟ್ವೀಟ್‌ ಮಾಡಿದ್ದರು. "ಗೆಳೆತನ, ಇಷ್ಟ ಹಾಗೂ ಇಷ್ಟಪಡದ ಸಂಸ್ಕೃತಿಯಿಂದ ನಾವು ಯಾವಾಗ ಹೊರಗೆ ಬರುತ್ತೇವೆ. ಅಲ್ಲಾ ಯಾವಾಗಲೂ ಪ್ರಾಮಾಣಿಕರಿಗೆ ಸಹಾಯ ಮಾಡುತ್ತಾನೆ" ಎಂದು ಶೋಯೆಬ್ ಮಲಿಕ್ ಪರೋಕ್ಷವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿಯನ್ನು ಟೀಕಿಸಿದ್ದರು.

ಶೋಯೆಬ್ ಮಲಿಕ್‌ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದ ಕಮ್ರಾನ್ ಅಕ್ಮಲ್ ಜಾಸ್ತಿ ಪ್ರಾಮಾಣಿಕರಾಗಿರಬೇಡಿ ಎಂದು ಹೇಳಿದ್ದರು. ಮತ್ತೆ ಹಲವರು ಶೋಯೆಬ್ ಮಲಿಕ್ ಟ್ವೀಟ್‌ಗೆ ಟೀಕೆ ಮಾಡಿದ್ದರು.

Story first published: Friday, September 16, 2022, 9:38 [IST]
Other articles published on Sep 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X