ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್‌ನಲ್ಲಿ ಸಿಕ್ಸರ್ ಸುರಿಮಳೆಗೈದ ಆಟಗಾರರಿವರು: ಟಾಪ್ 5 ಪಟ್ಟಿಯಲ್ಲಿ ಓರ್ವ ಭಾರತೀಯ

Test cricket: Top 5 Batters With Most Sixes in test cricket, one Indian amoung the list

ಕ್ರಿಕೆಟ್‌ನ ಸುದೀರ್ಘ ಮಾದರಿಯಾದ ಟೆಸ್ಟ್ ಈಗಲೂ ತನ್ನ ಘನತೆಯನ್ನು ಉಳಿಸಿಕೊಂಡಿದೆ ಎಂಬುದರಲ್ಲಿ ಅನುಮಾನವಿಲ್ಲ. ಸೀಮಿತ ಓವರ್‌ಗಳ ಅಬ್ಬರದ ಮಧ್ಯೆಯೂ ಟೆಸ್ಟ್ ಕ್ರಿಕೆಟ್‌ಗೆ ಮಾದರೇ ನಿಜವಾದ ಕ್ರಿಕೆಟ್ ಮಾದರಿ ಎಂಬುದನ್ನು ಕ್ರಿಕೆಟ್ ಅಭಿಮಾನಿಗಳು ಕೂಡ ಒಪ್ಪಿಕೊಳ್ಳುತ್ತಾರೆ. ಟೆಸ್ಟ್ ಕ್ರಿಕೆಟ್ ಅತ್ಯಂತ ಕಠಿಣ ಮಾದರಿಯೂ ಆಗಿದ್ದು ಆಟಗಾರರ ತಾಳ್ಮೆ, ಮನೋಧರ್ಮ ಹಾಗೂ ಕೌಶಲ್ಯವನ್ನು ಪರೀಕ್ಷಿಸುತ್ತದೆ.

ಹೆಚ್ಚಿನ ಕ್ರಿಕೆಟಿಗರಿಗೆ ಐದು ದಿನಗಳ ಕಾಲ ಪಂದ್ಯವನ್ನು ಆಡುವ ತಾಳ್ಮೆ ಹಾಗೂ ಇಚ್ಛಾಶಕ್ತಿ ಇರುವುದಿಲ್ಲ. ಆದರೆ ಕೆಲ ಆಟಗಾರರು ಈ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಸಾಕಷ್ಟು ದಿಗ್ಗಜ ಆಟಗಾರರನ್ನು ಟೆಸ್ಟ್ ಕ್ರಿಕೆಟ್ ನೀಡಿದೆ. ಆದರೆ ಕೆಲ ಆಕ್ರಮಣಕಾರಿ ಆಟಗಾರರು ಕೂಡ ಈ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚಿನ ಯಶಸ್ಸು ಕಂಡಿರುವ ಉದಾಹರಣೆಗಳಿದೆ.

ರವೀಂದ್ರ ಜಡೇಜಾಗೆ ಬಿಸಿಸಿಐ A+ ಗ್ರೇಡ್ ಕಾಂಟ್ರ್ಯಾಕ್ಟ್ ನೀಡಬೇಕು: ವಾಸಿಂ ಜಾಫರ್ರವೀಂದ್ರ ಜಡೇಜಾಗೆ ಬಿಸಿಸಿಐ A+ ಗ್ರೇಡ್ ಕಾಂಟ್ರ್ಯಾಕ್ಟ್ ನೀಡಬೇಕು: ವಾಸಿಂ ಜಾಫರ್

ಅಂಥಾ ಆಟಗಾರರು ಟೆಸ್ಟ್ ಮಾದರಿಯನ್ನು ಕೂಡ ಸೀಮಿತ ಓವರ್‌ಗಳ ಮಾದರಿಯಂತೆಯೇ ಆಕ್ರಮಣಕಾರಿಯಾಗಿ ಆಡಿ ಯಶಸ್ಸು ಸಾಧಿಸಿದ್ದಾರೆ. ಹೀಗಾಗಿಯೇ ಟೆಸ್ಟ್ ಕ್ರಿಕೆಟ್‌ನಲ್ಲಿ ಕುಇಡ ಅಭಿಮಾನಿಗಳು ಹೆಚ್ಚಿನ ಸಿಕ್ಸರ್‌ಗಳನ್ನು ಕಂಡಿದ್ದಾರೆ. ಈ ಸಂದರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಐವರು ಕ್ರಿಕೆಟರ್‌ಗಳ ಬಗ್ಗೆ ನೊಡೋಣ. ಈ ಐವರ ಪೈಕಿ ಓರ್ವ ಭಾರತೀಯ ಆಟಗಾರ ಕೂಡ ಇದ್ದಾರೆ ಎಂಬುದು ಗಮನಾರ್ಹ

ವಿರೇಂದ್ರ ಸೆಹ್ವಾಗ್: 91 ಸಿಕ್ಸರ್

ವಿರೇಂದ್ರ ಸೆಹ್ವಾಗ್: 91 ಸಿಕ್ಸರ್

ಭಾರತೀಯ ಕ್ರಿಕೆಟ್‌ನ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಆಕ್ರಮಣಕಾರಿ ಆಟಗಾರ. ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಹೇಳಿ ಮಾಡಿಸಿದಂತಿರುವ ಈ ಕ್ರಿಕೆಟಿಗ ಟೆಸ್ಟ್ ಕ್ರಿಕೆಟ್‌ನಲ್ಲಿ ಕುಡ ಅತ್ಯಂತ ಯಶಸ್ವಿ ಆಟಗಾರನಾಗಿ ಮಿಂಚಿದ್ದಾರೆ ಎಂಬುದು ಗಮನಾರ್ಹ ಸಂಗತಿ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರವಾಗಿ ಎರಡು ತ್ರಿ ಶತಕ ದಾಖಲಿಸಿದ ಏಕೈಕ ಕ್ರಿಕೆಟರ್‌ ಕೂಡ ಆಗಿದ್ದಾರೆ. 104 ಟೆಸ್ಟ್ ಪಂದ್ಯಗಳನ್ನು ಆಡಿರುವ ವಿರೇಂದ್ರ ಸೆಹ್ವಾಗ್ 49.3ರ ಸರಾಸರಿಯಲ್ಲಿ 8586 ರನ್‌ಗಳಿಸಿದ್ದಾರೆ. ಅತಿ ಹೆಚ್ಚು ಸಿಕ್ಸರ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸೆಹ್ವಾಗ್ 5ನೇ ಸ್ಥಾನದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಸೆಹ್ವಾಗ್ 91 ಸಿಕ್ಸರ್ ಸಿಡಿಸಿದ್ದಾರೆ.

ಜಾಕ್ ಕ್ಯಾಲೀಸ್, 97 ಸಿಕ್ಸರ್

ಜಾಕ್ ಕ್ಯಾಲೀಸ್, 97 ಸಿಕ್ಸರ್

ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಜ್ಯಾಕ್ ಕ್ಯಾಲೀಸ್ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕ್ರಿಕೆಟ್ ಕಂಡ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರು ಎನಿಸಿರುವ ಜಾಕ್ ಕ್ಯಾಲೀಸ್ ತಮ್ಮ ವೃತ್ತಿ ಜೀವನದುದ್ದಕ್ಕೂ ದಕ್ಷಿಣ ಆಫ್ರಿಕಾ ತಂಡದ ಎಲ್ಲಾ ಮಾದರಿಯಲ್ಲಿಯೂ ಪ್ರಮುಖ ಆಟಗಾರನಾಗಿದ್ದರು. ಜಾಕ್ ಕ್ಯಾಲೀಸ್ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಅದ್ಭುತವಾಗಿ ಕೊಡುಗೆ ನೀಡಿದ್ದಾರೆ. 55.37ರ ಸರಾಸರಿಯಲ್ಲಿ ಜ್ಯಾಕ್ ಕ್ಯಾಲೀಸ್ 13,000ಕ್ಕೂ ಅಧಿಕ ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಜಾಕ್ ಕ್ಯಾಲೀಸ್ 97 ಸಿಕ್ಸರ್ ಬಾರಿಸಿದ್ದಾರೆ.

ಕ್ರಿಸ್ ಗೇಲ್, 98 ಸಿಕ್ಸರ್

ಕ್ರಿಸ್ ಗೇಲ್, 98 ಸಿಕ್ಸರ್

ಈ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಮತ್ತೋರ್ವ ಸ್ಪೋಟಕ ಬ್ಯಾಟರ್ ಕ್ರಿಸ್ ಗೇಲ್. ಚುಟುಕು ಕ್ರಿಕೆಟ್‌ನ ದಿಗ್ಗಜ ಎನಿಸಿಕೊಳ್ಳುವ ಕ್ರಿಸ್ ಗೇಲ್ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿಯೂ ಯಶಸ್ಸು ಗಳಿಸಿದ ಆಟಗಾರ. ಟೆಸ್ಟ್ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ತಂಡದ ಪರವಾಗಿ ಗೇಲ್ 103 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು 42.2ರ ಸರಾಸರಿಯಲ್ಲಿ 7214 ರನ್ ಗಳಿಸಿದ್ದಾರೆ. ಸುಲಲಿತವಾಗಿ ಸಿಕ್ಸರ್‌ಗಳನ್ನು ಬಾರಿಸುವುದಲ್ಲಿ ಖ್ಯಾತವಾಗಿರುವ ಗೇಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಕ್ರಿಸ್ ಗೇಲ್ 98 ಸಿಕ್ಸರ್ ಬಾರಿಸಿ ಈ ಸಾಧನೆ ಮಾಡಿದ್ದಾರೆ.

ಆಡಮ್ ಗಿಲ್‌ಕ್ರಿಸ್ಟ್, 100 ಸಿಕ್ಸರ್

ಆಡಮ್ ಗಿಲ್‌ಕ್ರಿಸ್ಟ್, 100 ಸಿಕ್ಸರ್

ಆಸ್ಟ್ರೇಲಲಿಯಾ ಕ್ರಿಕೆಟ್ ಕಂಡ ಶ್ರೇಷ್ಠ ವಿಕೆಟ್ ಕೀಪರ್ ಬ್ಯಾಟರ್ ಆಡಮ್ ಗಿಲ್‌ಕ್ರಿಸ್ಟ್ ಕೂಡ ಆಕ್ರಮಣಕಾರಿ ಆಟಗಾರ. ಟೆಸ್ಟ್ ಕ್ರಿಕೆಟ್‌ನಲ್ಲಿ ಗಿಲ್‌ಕ್ರಿಸ್ಟ್ ಅವರ ಸ್ಟ್ರೈಕ್‌ರೇಟ್ ಎಲ್ಲರಿಗಿಂತ ಹೆಚ್ಚಿನದ್ದಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಆಟಗಾರರ ಪೈಕಿ ಯಶಸ್ವೀ ಕ್ರಿಕೆಟಿಗರಲ್ಲಿ ಗಿಲ್‌ಕ್ರಿಸ್ಟ್ ಕೂಡ ಒಬ್ಬರು. ಒಟ್ಟು 96 ಟೆಸ್ಟ್ ಪಂದ್ಯಗಳನ್ನು ಆಡಿರುವ ಗಿಲ್ ಕ್ರಿಸ್ಟ್ 100 ಸಿಕ್ಸರ್ ಬಾರಿಸಿದ್ದು ಟೆಸ್ಟ್ ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಬ್ರೆಂಡನ್ ಮೆಕ್ಕಲಮ್, 107 ಸಿಕ್ಸರ್

ಬ್ರೆಂಡನ್ ಮೆಕ್ಕಲಮ್, 107 ಸಿಕ್ಸರ್

ನ್ಯೂಜಿಲೆಂಡ್ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರ ಪೈಕಿ ಒಬ್ಬರಾಗಿರುವ ಬ್ರೆಂಡನ್ ಮೆಕ್ಕಲಮ್ ಟಿ20, ಏಕದಿನ ಹಾಗೂ ಟೆಸ್ಟ್ ಮಾದರಿಯಲ್ಲಿ ಒಂದೇ ರೀತಿಯಲ್ಲಿ ಬ್ಯಾಟ್ ಬೀಸುವ ಆಟಗಾರ. ಕ್ರಿಕೆಟ್‌ನಲ್ಲಿ ಬೌಲರ್‌ಗಳ ಪಾಲಿಗೆ ಅತ್ಯಂತ ಅಪಾಯಕಾರಿ ದಾಂಡಿಗ ಮೆಕ್ಕಲಮ್. ನ್ಯೂಜಿಲೆಂಡ್ ಪರವಾಗಿ ಶರಂಭಿಕನಾಗಿ ಕಣಕ್ಕಿಳಿಯುತ್ತಿದ್ದ ಮೆಕ್ಕಲಮ್ ಎಲ್ಲಾ ಮಾದರಿಯಲ್ಲಿಯೂ ಹೆಚ್ಚಿನ ರನ್‌ಗಳಿಸಿ ತಂಡಕ್ಕೆ ನೆರವಾಗಿದ್ದಾರೆ. ಒಂದು ಕ್ಯಾಲೆಂಡರ್ ವರ್ಷದಲ್ಲಿ 1000 ರನ್‌ಗಳಿಸಿದ ಪ್ರಥಮ ನ್ಯೂಜಿಲೆಂಡ್ ಆಟಗಾರ ಎಂಬ ಹೆಗ್ಗಳಿಕೆ ಮೆಕ್ಕಲಮ್‌ಗೆ ಇದೆ. ಇದೇ ವರ್ಷ ಮೆಕ್ಕಲಮ್ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕವನ್ನು ಕೂಡ ದಾಖಲಿಸಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಬ್ರೆಂಡನ್ ಮೆಕ್ಕಲಮ್ ಅವರ ಹೆಸರಿನಲ್ಲಿದ್ದು ಸುದೀರ್ಘ ಮಾದರಿಯಲ್ಲಿ ಕಿವೀಸ್ ಆಟಗಾರ 107 ಸಿಕ್ಸರ್ ಬಾರಿಸಿದ್ದಾರೆ.

Story first published: Tuesday, March 8, 2022, 17:55 [IST]
Other articles published on Mar 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X