ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಇನ್ನಿಂಗ್ಸ್‌ನಲ್ಲಿ 11ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅತೀ ಹೆಚ್ಚು ರನ್‌ಗಳಿಸಿದ ಟಾಪ್ 5 ಆಟಗಾರರು: ಓರ್ವ ಭಾರತೀಯ!

Test Record: Top 5 individual score by number 11 position batter in test cricket

ಟಿ20 ಕ್ರಿಕೆಟ್‌ನ ಜನಪ್ರಿಯತೆ ಹಾಗೂ ಪ್ರಖ್ಯಾತಿಯ ಮಧ್ಯೆಯೂ ಕ್ರಿಕೆಟ್‌ನ ಅತ್ಯಂತ ಹಳೇಯ ಮಾದರಿಯಾದ ಟೆಸ್ಟ್ ತನ್ನ ಜನಪ್ರಿಯತೆ ಹಾಗೂ ಗೌರವವನ್ನು ಉಳಿಸಿಕೊಂಡಿರುವುದು ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಹೆಮ್ಮೆಯ ಅಂಶ. ಟೆಸ್ಟ್ ಕ್ರಿಕೆಟ್ ಕ್ರಿಕೆಟ್‌ನ ಎಲ್ಲಾ ಮಾದರಿಗಿಂತಲೂ ಕಠಿಣ ಮಾದರಿ ಎಂಬುದು ಕೂಡ ಅಷ್ಟೇ ನಿಜ. ಬಹುತೇಕ ಕ್ರಿಕೆಟ್ ಆಟಗಾರರು ಟೆಸ್ಟ್ ಮಾದರಿಯನ್ನು ಪ್ರತಿನಿಧಿಸುವುದು ಎಂಬ ಮಾತನ್ನು ಹೇಳಿರುವುದನ್ನು ಕೂಡ ಕ್ರಿಕೆಟ್ ಪ್ರೇಮಿಗಳು ಆಗಾಗ ಕೇಳಿರುತ್ತಾರೆ.

ಟೆಸ್ಟ್ ಕ್ರಿಕೆಟ್ ಆಟಗಾರರ ತಾಳ್ಮೆ, ಕೌಶಲ್ಯ ಆಟದಲ್ಲಿನ ತಲ್ಲೀನತೆ ಎಲ್ಲವನ್ನೂ ಪರೀಕ್ಷಿಸುತ್ತದೆ. ಇಂತಾ ಟೆಸ್ಟ್ ಕ್ರಿಕೆಟ್‌ನಲ್ಲಿ ಸಾಕಷ್ಟು ದಾಖಲೆಗಳು ಸೃಷ್ಟಿಯಾಗಿದೆ, ಆಗುತ್ತಲೇ ಇದೆ. ಇಂತಾ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ 11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ದೊಡ್ಡ ಮೊತ್ತದ ರನ್ ಗಳಿಸುವುದು ಸುಲಭದ ಮಾತಲ್ಲ. ಆದರೆ ಕೆಲ ಆಟಗಾರರು 11ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ದೃಷ್ಟಾಂತಗಳಿವೆ.

ಭಾರತ vs ಶ್ರೀಲಂಕಾ ದ್ವಿತೀಯ ಟೆಸ್ಟ್: ಮಿಂಚಿದ ಬುಮ್ರಾ, ಶಮಿ; ಮೊದಲ ದಿನ ಮೇಲುಗೈ ಸಾಧಿಸಿದ ಭಾರತಭಾರತ vs ಶ್ರೀಲಂಕಾ ದ್ವಿತೀಯ ಟೆಸ್ಟ್: ಮಿಂಚಿದ ಬುಮ್ರಾ, ಶಮಿ; ಮೊದಲ ದಿನ ಮೇಲುಗೈ ಸಾಧಿಸಿದ ಭಾರತ

ಈ ವರದಿಯಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 11ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಇನ್ನಿಂಗ್ಸ್‌ವೊಂದರಲ್ಲಿ ಅತೀ ಹೆಚ್ಚಿನ ರನ್‌ಗಳಿಸಿದ ಟಾಪ್ 5 ಆಟಗಾರರು ಯಾರು ಎಂಬುದನ್ನು ಬನ್ನಿ ನೋಡೋಣ

ಟಾಪ್ 5, ಅಲ್‌ಬರ್ಟ್ ಎಡ್ವರ್ಡ್ ವೋಗ್ಲರ್, ದಕ್ಷಿಣ ಆಫ್ರಿಕಾ, 62 ರನ್

ಟಾಪ್ 5, ಅಲ್‌ಬರ್ಟ್ ಎಡ್ವರ್ಡ್ ವೋಗ್ಲರ್, ದಕ್ಷಿಣ ಆಫ್ರಿಕಾ, 62 ರನ್

ಈ ಮೈಲುಗಲ್ಲು ದಾಖಲಾಗಿದ್ದು 1906ರಷ್ಟು ಹಿಂದೆ. ದಕ್ಷಿಣ ಆಪ್ರಿಕಾದ ಕ್ರಿಕೆಟಿಗ ಅಲ್ಬರ್ಟ್ ಎಡ್ವರ್ಡ್ ಅರ್ನೆಸ್ಟ್ ವೋಗ್ಲರ್ ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಈ ಸಾಧನೆ ಮಾಡಿ ಸುದ್ದಿಯಾದರು. ಆ ಕಾಲದಲ್ಲಿನ ವಿಶ್ವದ ಅತ್ಯುತ್ತಮ ವೇಗದ ಬೌಲರ್ ಎನಿಸಿಕೊಂಡಿದ್ದರು ವೋಗ್ಲರ್. 15 ಟೆಸ್ಟ್ ಪಂದ್ಯಗಳನ್ನಾಡಿದ್ದ ವೋಗ್ಲರ್ 22.73ರ ಸರಾಸರಿಯಲ್ಲಿ 64 ವಿಕೆಟ್ ಕಬಳಿಸಿದ್ದರು. ಅವರ ಅತ್ಯುತ್ತಮ ಸ್ಕೋರ್ ಇಂಗ್ಲೆಂಡ್ ವಿರುದ್ಧ ಬಂದಿತ್ತು. 11ನೇ ಕ್ರಮಾಂಖದಲ್ಲಿ ಕಣಕ್ಕಿಳಿದು ಅಜೇಯ 62 ರನ್‌ಗಳಿಸಿದ್ದರು. ಈ ಸಾಧನೆ ಈಗಲೇ 11ನೇ ಕ್ರಮಾಂಕದಲ್ಲಿ ಅತೀ ಹೆಚ್ಚಿನ ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

ಟಾಪ್ 4, ಜಹೀರ್ ಖಾನ್, ಬಾಂಗ್ಲಾದೇಶದ ವಿರುದ್ಧ 75 ರನ್

ಟಾಪ್ 4, ಜಹೀರ್ ಖಾನ್, ಬಾಂಗ್ಲಾದೇಶದ ವಿರುದ್ಧ 75 ರನ್

ಭಾರತ ಕಂಡು ಅತ್ಯುತ್ತಮ ವೇಗದ ಬೌಲರ್‌ಗಳ ಜಹೀರ್ ಖಾನ್ ಕೂಡ ಒಬ್ಬರು. ಸುದೀರ್ಘ ಕಾಲ ಭಾರತ ತಂಡವನ್ನು ಪ್ರತಿನಿಧಿಸಿದ ಜಹೀರ್ ಖಾನ್ 92 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು 32.9ರ ಸರಾಸರಿಯಲ್ಲಿ 311 ವಿಕೆಟ್ ಸಂಪಾದಿಸಿದ್ದಾರೆ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಿದ್ದ ಜಹೀರ್ ಖಾನ್ ಹಲವು ಅತ್ತುತ್ತಮ ಇನ್ನಿಂಗ್ಸ್‌ಗಳನ್ನು ನೀಡಿದ್ದಾರೆ. ಅವರ ಅತ್ಯುತ್ತಮ ರನ್ ಬಂದಿರುವುದು 11ನೇ ಕ್ರಮಾಂಕದಲ್ಲಿ ಎಂಬುದು ಗಮನಾರ್ಹ ಅಂಶ. 11ನೇ ಕ್ರಮಾಂಕದಲ್ಲಿ ಅತೀ ಹೆಚ್ಚಿನ ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಜಹೀರ್ ಖಾನ್ 4ನೇ ಸ್ಥಾನದಲ್ಲಿದ್ದಾರೆ. 2004ರಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧ ಸರಣಿಯಲ್ಲಿ ಜಹೀರ್ ಖಾನ್ ತಮ್ಮ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದರು. ಡಾಕಾದಲ್ಲಿ ನಡೆದ ಪಂದ್ಯದಲ್ಲಿ ಜಹೀರ್ ಖಾನ್ 115 ಎಸೆತಗಳನ್ನು ಎದುರಿಸಿ 75 ರನ್‌ಗಳಿಸಿದ್ದರು. ಇದರಲ್ಲಿ 2 ಸಿಕ್ಸರ್ ಹಾಗೂ 10 ಬೌಂಡರಿಗಳು ಇತ್ತು.

ಟಾಪ್ 3 ಜೇಮ್ಸ ಆಂಡರ್ಸನ್, ಭಾರತದ ವಿರುದ್ಧ 81 ರನ್

ಟಾಪ್ 3 ಜೇಮ್ಸ ಆಂಡರ್ಸನ್, ಭಾರತದ ವಿರುದ್ಧ 81 ರನ್

ಇಂಗ್ಲೆಂಡ್ ತಂಡದ ಅನುಭವಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಟೆಸ್ಟ್ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು. 39ರ ಹರೆಯದ ಆಂಡರ್ಸನ್ ಈಗಲೂ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡದ ಭಾಗವಾಗಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಆಂಡರ್ಸನ್ ಮೂರನೇ ಸ್ಥಾನದಲ್ಲಿದ್ದು 169 ಟೆಸ್ಟ್ ಪಂದ್ಯಗಳಲ್ಲಿ ಆಂಡರ್ಸನ್ 640 ವಿಕೆಟ್ ಪಡೆದಿದ್ದಾರೆ. ಇನ್ನು 11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಅತೀ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಆಂಡರ್ಸನ್ 3ನೇ ಸ್ಥಾನದಲ್ಲಿದ್ದಾರೆ.

2014ರಲ್ಲಿ ಭಾರತದ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಆಂಡರ್ಸನ್ ಈ ಸಾಧನೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 457 ರನ್‌ಗಳ ಬೃಹತ್ ಮೊತ್ತ ದಾಖಲಿಸಿದ ಬಳಿಕ ಇಂಗ್ಲೆಂಡ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 496 ರನ್‌ಗಳಿಸಿತು. ಈ ಇನ್ನಿಂಗ್ಸ್‌ನಲ್ಲಿ 11ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಂಡರ್ಸನ್ 130 ಎಸೆತಗಳನ್ನು ಎದುರಿಸಿ 81 ರನ್‌ಗಳಿಸಿ ದಾಖಲೆ ಬರೆದರು. ಈ ಪಂದ್ಯ ಡ್ರಾ ಫಲಿತಾಂಶವನ್ನು ಪಡಯಿತು.

ಟಾಪ್ 2, ಟಿನೋ ಬೆಸ್ಟ್, ಇಂಗ್ಲೆಂಡ್ ವಿರುದ್ಧ 95 ರನ್

ಟಾಪ್ 2, ಟಿನೋ ಬೆಸ್ಟ್, ಇಂಗ್ಲೆಂಡ್ ವಿರುದ್ಧ 95 ರನ್

ವೆಸ್ಟ್ ಇಂಡೀಸ್ ತಂಡದ ಮಾಜಿ ವೇಗದ ಬೌಲರ್ ಟಿನೋ ಬೆಸ್ಟ್ ವಿಶ್ವ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ವೇಗಿ ಎಂದು ಹೆಸರಾಗಿದ್ದಾರೆ. ವೆಸ್ಟ್ ಇಂಡೀಸ್ ತಂಡದ ಪರವಾಗಿ 25 ಟೆಸ್ಟ್ ಪಂದ್ಯಗಳನ್ನಾಡಿರುವ ಟಿನೋ ಬೆಸ್ಟ್ 57 ವಿಕೆಟ್ ಸಂಪಾದಿಸಿದ್ದಾರೆ. ವಿಂಡೀಸ್ ತಂಡದ ಈ ಮಾಜಿ ವೇಗಿ 11ನೇ ಕ್ರಮಾಂಕದಲ್ಲಿ ದಾಖಲೆಯ ರನ್‌ಗಳಿಸಿ ಮಿಂಚಿದ್ದಾರೆ.

2012ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ 11ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 112 ಎಸೆತಗಳನ್ನು ಎದುರಿಸಿ 95 ರನ್‌ಗಳಿಸಿ ದಾಖಲೆ ಬರೆದಿದ್ದಾರೆ ಟಿನೋ ಬೆಸ್ಟ್. ಈ ದಾಖಲೆಯ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ್ದರು. 11ನೇ ಕ್ರಮಾಂಕದಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಅತೀ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಈಗಲೂ ಈ ಇದು ಎರಡನೇ ಸ್ಥಾನದಲ್ಲಿದೆ.

Chinnaswamy Stadiumನಲ್ಲಿ ಅಭಿಮಾನಿಗಳಿಗಾಗಿ Virat Kohli ಏನೇನ್ ಮಾಡಿದ್ರು?ವೈರಲ್ ವಿಡಿಯೋ | Oneindia Kannada
ಟಾಪ್ 1, ಆಷ್ಟನ್ ಅಗರ್, ಇಂಗ್ಲೆಂಡ್ ವಿರುದ್ಧ 98 ರನ್

ಟಾಪ್ 1, ಆಷ್ಟನ್ ಅಗರ್, ಇಂಗ್ಲೆಂಡ್ ವಿರುದ್ಧ 98 ರನ್

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಪಿನ್ನರ್ 2013ರಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೇ ದಾಖಲೆಯನ್ನು ಬರೆಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 215 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಂಆಡಿದ್ದ ಆಸ್ಟ್ರೇಲಿಯಾ ಒಂದು ಹಂತದಲ್ಲಿ 117 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು. ಆದರೆ 11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಣಕ್ಕಿಳಿದ ಆಷ್ಟನ್ ಅಗರ್ 101 ಎಸೆತಗಳಲ್ಲಿ 98 ರನ್‌ಗಳಿಸಿ ತಂಡಕ್ಕೆ ನೆರವಾದರು. ಇದರ ಪರಿಣಾಮವಾಗಿ ಆಸ್ಟ್ರೇಲಿಯಾ 280 ರನ್‌ಗಳ ಗೌರವಯುತ ಮೊತ್ತ ಪೇರಿಸಲು ಸಾಧ್ಯವಾಯಿತು. 12 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡಿತ್ತು ಆಷ್ಟನ್ ಅಗರ್ ಅವರ ಈ ಇನ್ನಿಂಗ್ಸ್. ಟೆಸ್ಟ್ ಇತಿಹಾಸದಲ್ಲಿ 11ನೇ ಕ್ರಮಾಂಕದಲ್ಲಿ ಗಳಿಸಿದ ಅತೀ ಹೆಚ್ಚಿನ ಸ್ಕೋರ್ ಎಂಬ ದಾಖಲೆಗೆ ಈ ಪಂದ್ಯದಲ್ಲಿ ಆಷ್ಟನ್ ಅಗರ್ ಪಾತ್ರವಾಗಿದ್ದಾರೆ.

Story first published: Sunday, March 13, 2022, 13:44 [IST]
Other articles published on Mar 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X