ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಬ್ರೆಂಡನ್‌ ಮೆಕಲಮ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದು ಇದೇ ದಿನ!

The Brendon McCullum blitz launches Indian Premier League

ಬೆಂಗಳೂರು, ಏಪ್ರಿಲ್ 18: ಇಂಡಿಯನ್ ಪ್ರೀಮಿಯರ್ ಲೀಗ್ ಅಧಿಕೃತವಾಗಿ ಆರಂಭವಾಗಿದ್ದು 2008ರಲ್ಲಿ. ಐಪಿಎಲ್ ಆರಂಭಕ್ಕೂ ವರ್ಷದ ಹಿಂದೆ ಅಂದರೆ 2007ರಲ್ಲಿ ಭಾರತ ಟಿ20 ವಿಶ್ವಕಪ್ ಟ್ರೋಫಿ ಗೆದ್ದಿತ್ತು. ಇದೇ ಕಾರಣಕ್ಕೆ ಭಾರತೀಯ ಅಭಿಮಾನಿಗಳು ಹೊಸ ಮಾದರಿಯ ಟೂರ್ನಿ ಬಗ್ಗೆ ಆಸಕ್ತಿ ತಾಳಿದ್ದರು. ಐಪಿಎಲ್ ಉದ್ಘಾಟನಾ ಸೀಸನ್‌ನಲ್ಲೇ ಬಹಳಷ್ಟು ಕ್ರಿಕೆಟ್‌ ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಳ್ಳಲು ಇನ್ನೊಂದು ಕಾರಣ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ ಬ್ರೆಂಡನ್ ಮೆಕಲಮ್.

ನಾಯಕನಾಗಿ ಕೊಹ್ಲಿ, ರೋಹಿತ್ ನಡುವಿನ ವ್ಯತ್ಯಾಸ ತಿಳಿಸಿದ ಕಿವೀಸ್ ಕ್ರಿಕೆಟಿಗನಾಯಕನಾಗಿ ಕೊಹ್ಲಿ, ರೋಹಿತ್ ನಡುವಿನ ವ್ಯತ್ಯಾಸ ತಿಳಿಸಿದ ಕಿವೀಸ್ ಕ್ರಿಕೆಟಿಗ

ಐಪಿಎಲ್ ಮೊದಲ ಸೀಸನ್‌ನ ಆರಂಭಿಕ ಪಂದ್ಯದಲ್ಲೇ ಮೆಕಲಮ್ ದಾಖಲೆಯ ಬ್ಯಾಟಿಂಗ್ ಮಾಡಿದ್ದರು. ಐಪಿಎಲ್ ಉದ್ಘಾಟನಾ ಸೀಸನ್‌ನ ಮೊದಲ ಪಂದ್ಯ ನಡೆದಿದ್ದು 2008ರ ಏಪ್ರಿಲ್ 18ರ ದಿನೇ ದಿನ.

'ರಾಹುಲ್ ದ್ರಾವಿಡ್ ಎದುರು ನಾನೊಬ್ಬ 11ರ ಹರೆಯದ ಮಗು ಅನ್ನಿಸುತ್ತಿತ್ತು''ರಾಹುಲ್ ದ್ರಾವಿಡ್ ಎದುರು ನಾನೊಬ್ಬ 11ರ ಹರೆಯದ ಮಗು ಅನ್ನಿಸುತ್ತಿತ್ತು'

ಐಪಿಎಲ್‌ ಇತಿಹಾಸದ ಚೊಚ್ಚಲ ಪಂದ್ಯದಲ್ಲಿ ಆರ್‌ಸಿಬಿ-ಕೆಕೆಆರ್ ಕಾದಾಡಿದ್ದವು. ಐಪಿಎಲ್ ಮೊದಲ ಪಂದ್ಯ, ಮೆಕಲಮ್ ದಾಖಲೆಯ ಬ್ಯಾಟಿಂಗ್ ಮಾಡಿದ್ದ ಕ್ಷಣ ನೆನಪಿಸಿಕೊಳ್ಳೋಣ ಬನ್ನಿ.

ಮೆಕಲಮ್ ಸ್ಫೋಟಕ ಬ್ಯಾಟಿಂಗ್

ಮೆಕಲಮ್ ಸ್ಫೋಟಕ ಬ್ಯಾಟಿಂಗ್

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅದ್ದೂರಿ ಕ್ರಿಕೆಟ್‌ ಹಬ್ಬ ಐಪಿಎಲ್‌ನ ಆರಂಭಿಕ ಪಂದ್ಯ ನಡೆದಿತ್ತು. ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಅಂದು ಕೋಲ್ಕತ್ತಾ ಪರ ಆಡಿದ್ದ ಮೆಕಲಮ್ ಸ್ಫೋಟಕ ಶತಕ ಸಿಡಿಸಿದ್ದರು.

ಬರೋಬ್ಬರಿ 13 ಸಿಕ್ಸರ್‌ಗಳು

ಬರೋಬ್ಬರಿ 13 ಸಿಕ್ಸರ್‌ಗಳು

ಟಾಸ್ ಗೆದ್ದಿದ್ದ ಆರ್‌ಸಿಬಿ ಬೌಲಿಂಗ್ ಆಯ್ದುಕೊಂಡಿತ್ತು. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೆಕೆಆರ್ ನಿಂದ ಮೊಹಮ್ಮದ್ ಹಫೀಜ್ 5, ರಿಕಿ ಪಾಂಟಿಂಗ್ 20, ಡೇವಿಡ್ ಹಸ್ಸಿ 12, ಸೌರವ್ ಗಂಗೂಲಿ 10, ಬ್ರೆಂಡನ್ ಮೆಕಲಮ್ ಅಜೇಯ 158 ರನ್ ಬಾರಿಸಿದ್ದರು. ಇದರಲ್ಲಿ 10 ಬೌಂಡರಿ, 13 ಸಿಕ್ಸರ್‌ಗಳು ಸೇರಿದ್ದವು. ಕೆಕೆಆರ್ 20 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 222 ರನ್ ಕಲೆ ಹಾಕಿತ್ತು.

ಆರ್‌ಸಿಬಿಗೆ ಹೀನಾಯ ಸೋಲು

ಆರ್‌ಸಿಬಿಗೆ ಹೀನಾಯ ಸೋಲು

ಐಪಿಎಲ್ ಆರಂಭಿಕ ಪಂದ್ಯದಲ್ಲೇ ಆರ್‌ಸಿಬಿ ಹೀನಾಯವಾಗಿ ಸೋತಿತ್ತು. ಅದೂ ಮೆಕಲಮ್‌ನಿಂದಾಗಿ. ಗುರಿ ಬೆನ್ನಟ್ಟಿದ ಆರ್‌ಸಿಬಿ ಪರ ಝಹೀರ್ ಖಾನ್ 3, ಪ್ರವೀಣ್ ಕುಮಾರ್ 18, ಆಶ್ಲೇ ನೋಫ್ಕೆ 9, ಮಾರ್ಕ್ ಬೌಚರ್ 7, ರಾಹುಲ್ ದ್ರಾವಿಡ್ 2, ಕೆಮರಾನ್ ವೈಟ್ 6, ವಾಸಿಮ್ ಜಾಫರ್ 6, ಸುನಿಲ್ ಜೋಷಿ 3, ಜಾಕ್ ಕ್ಯಾಲೀಸ್ 8, ವಿರಾಟ್ ಕೊಹ್ಲಿ 1 ರನ್ ಬಾರಿಸಿದ್ದರು. ಆರ್‌ಸಿಬಿ 15.1 ಓವರ್‌ಗೆ ಎಲ್ಲಾ ವಿಕೆಟ್‌ಗಳನ್ನು ಕಳೆದು 82 ರನ್ ಬಾರಿಸಿ 140 ರನ್‌ನಿಂದ ಸೋತಿತ್ತು.

ಅಗರ್ಕರ್, ದಿಂಡಾ ಮಾರಕ ಬೌಲಿಂಗ್

ಅಗರ್ಕರ್, ದಿಂಡಾ ಮಾರಕ ಬೌಲಿಂಗ್

ಆರ್‌ಸಿಬಿ ತಂಡ ಅಂದು 140 ರನ್‌ ಸೋಲನುಭವಿಸಲು ಮತ್ತೊಂದು ಕಾರಣ ಕೆಕೆಆರ್‌ನಿಂದ ಮಾರಕ ಬೌಲಿಂಗ್. ಆವತ್ತು ಕೆಕೆಆರ್‌ನಿಂದ ಲಕ್ಷ್ಮಿ ಶುಕ್ಲಾ 1, ಸೌರವ್ ಗಂಗೂಲಿ 2, ಅಶೋಕ್ ದಿಂಗಾ 9 ರನ್‌ಗೆ 2, ಅಜಿತ್ ಅಗಕರ್ಕರ್ 25 ರನ್‌ಗೆ 3, ಇಶಾಂತ್ ಶರ್ಮಾ 1 ವಿಕೆಟ್ ಮುರಿದಿದ್ದರು. ಬ್ರೆಂಡನ್ ಮೆಕಲಮ್ ಪಂದ್ಯಶ್ರೇಷ್ಠರೆನಿಸಿದ್ದರು.

Story first published: Saturday, April 18, 2020, 11:31 [IST]
Other articles published on Apr 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X