ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರೂ ಲೀಗ್ ಕ್ರಿಕೆಟ್‌ನಲ್ಲಿ ಆರ್ಭಟಿಸುತ್ತಿದ್ದಾರೆ ಈ 5 ಕ್ರಿಕೆಟಿಗರು!

These 5 cricketers retired from international cricket but excelling in T20 franchise league

ಈ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ಆಟಗಾರರ ನಿವೃತ್ತಿ ಘೋಷಿಸಿದರೆ ಬಳಿಕ ಆತನ ಆಟವನ್ನು ಅಭಿಮಾನಿಗಳು ನೋಡುವುದು ಅಸಾಧ್ಯವಾಗಿತ್ತು. ಆಟಗಾರನಿಗೂ ಮತ್ತೆ ಬ್ಯಾಟ್ ಹಿಡಿದು ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಆಡುವ ಅವಕಾಶವೇ ಇರುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಟಿ20 ಲೀಗ್‌ಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆಟಗಾರರಿಗೆ ಆಟವನ್ನು ಮುಂದುವರಿಸುವ ಸ್ವಾತಂತ್ರ್ಯ ನೀಡಿದೆ. ಅಂತಾ ವೇದಿಕೆಯಲ್ಲಿ ಆಟಗಾರರು ಉತ್ತಮ ಪ್ರದರ್ಶನ ನೀಡಿದರೆ ಆರ್ಥಿಕವಾಗಿಯೂ ದೊಡ್ಡ ಮೊತ್ತದ ಲಾಭವನ್ನು ಗಳಿಸಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ ಬಳಿಕವೂ ಲೀಗ್ ಕ್ರಿಕೆಟ್‌ನಲ್ಲಿ ಮಿಂಚಿರುವ ಮಿಂಚುತ್ತಿರುವ ಅನೇಕ ಆಟಗಾರರು ನಮ್ಮ ಮುಂದಿದ್ದಾರೆ. ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರೂ ಬಳಿಕ ಮೂರು ವರ್ಷಗಳ ಕಾಲ ಐಪಿಎಲ್ ಸಹಿತ ಟಿ20 ಲೀಗ್‌ಗಳಲ್ಲಿ ಭಾಗವಹಿಸಿ ಅಬ್ಬರಿಸಿದ್ದರು ಎಂಬುದನ್ನು ನಾವಿಲ್ಲಿ ಸ್ಮರಿಸಬಹುದು.

ಭಾರತದ ದಿಗ್ಗಜ ಆಟಗಾರ್ತಿ ನೀಡಿದ ಸಲಹೆ ಸಹಕಾರಿಯಾಯಿತು ಎಂದ U-19 ಆಟಗಾರ್ತಿ ತಿತಾಸ್ ಸಧುಭಾರತದ ದಿಗ್ಗಜ ಆಟಗಾರ್ತಿ ನೀಡಿದ ಸಲಹೆ ಸಹಕಾರಿಯಾಯಿತು ಎಂದ U-19 ಆಟಗಾರ್ತಿ ತಿತಾಸ್ ಸಧು

ಈಗಲು ಕೂಡ ಹಲವು ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ ಬಳಿಕ ಲೀಗ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅಂಥಾ ಐವರು ಆಟಗಾರರ ಮಾಹಿತಿ ಇಲ್ಲಿದೆ. ಮುಂದೆ ಓದಿ..

ಲೀಗ್‌ನಲ್ಲಿ ಮಿಂಚುತ್ತಿದ್ದಾರೆ ನಮನ್ ಓಜಾ

ಲೀಗ್‌ನಲ್ಲಿ ಮಿಂಚುತ್ತಿದ್ದಾರೆ ನಮನ್ ಓಜಾ

ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ನಮನೆ ಓಜಾ ಹೆಚ್ಚಿನ ಅವಕಾಶ ದೊರೆಯದ ಕಾರಣ ಬೇಗನೆ ನಿವೃತ್ತಿ ಘೋಷಣೆ ಮಾಡಿದ್ದರು. ಆದರೆ ಅವರು ನಿವೃತ್ತಿಯ ಬಳಿಕ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಹಾಗೂ ಲೆಜೆಂಡ್ಸ್ ಕ್ರಿಕೆಟ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಇಂಡಿಯಾ ಲೆಜೆಂಡ್ಸ್ ಹಾಗೂ ಇಂಡಿಯಾ ಮಹಾರಾಜಾಸ್ ತಂಡದ ಪರವಾಗಿ ಆಡುತ್ತಿರುವ ನಮನ್ ಓಜಾ ಅಮೋಘ ಪ್ರದರ್ಶನ ನೀಡುತ್ತಾ ಅಭಿಮಾನಿಗಳ ಗಮನಸೆಳೆಯುತ್ತಿದ್ದಾರೆ.

ಇರ್ಫಾನ್ ಪಠಾಣ್ ಆರ್ಭಟವೂ ಕಡಿಮೆಯಾಗಿಲ್ಲ

ಇರ್ಫಾನ್ ಪಠಾಣ್ ಆರ್ಭಟವೂ ಕಡಿಮೆಯಾಗಿಲ್ಲ

ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ಈ ಪಟ್ಟಿಯಲ್ಲಿ ಬರುವ ಮತ್ತೋರ್ವ ಭಾರತೀಯ ಕ್ರಿಕೆಟಿಗ. ಇರ್ಫಾನ್ ಪಠಾಣ್ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಹಾಗೂ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಭಾಗವಹಿಸಿದ್ದು ಅಮೋಘ ಪ್ರದರ್ಶನ ನೀಡಿ ಮಿಂಚುತ್ತಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಇರ್ಫಾನ್ ಪಠಾಣ್ ಅದ್ಭುತ ಫಾರ್ಮ್‌ನಲ್ಲಿದ್ದು ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಂಡೀಸ್ ದಿಗ್ಗಜ ಕೀರನ್ ಪೊಲಾರ್ಡ್

ವಿಂಡೀಸ್ ದಿಗ್ಗಜ ಕೀರನ್ ಪೊಲಾರ್ಡ್

ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಕೀರನ್ ಪೊಲಾರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಾಗೂ ಐಪಿಎಲ್‌ಗೆ ಈಗಾಗಲೇ ವಿದಾಯವನ್ನು ಘೋಷಿಸಿದ್ದಾರೆ. ಆದರೆ ಇತರ ಲೀಗ್‌ಗಳಲ್ಲಿ ಪೊಲಾರ್ಡ್ ಅದ್ಭುತವಾಗಿ ಆಡುತ್ತಿದ್ದಾರೆ. ಸದ್ಯ ಯುಎಇಯ ಚೊಚ್ಚಲ ಇಂಟರ್‌ನ್ಯಾಶನಲ್ ಲೀಗ್ ಟಿ20(ಐಎಲ್‌ಟಿ20) ಟೂರ್ನಿಯಲ್ಲಿ ಭಾಗವಹಿಸಿರುವ ಪೊಲಾರ್ಡ್ ಅಬ್ಬರದ ಪ್ರದರ್ಶನ ನೀಡುತ್ತಿದ್ದು ಎರಡನೇ ಅತೀ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ವಿಂಡೀಸ್ ಮಾಜಿ ಆಲ್‌ರೌಂಡರ್ ಡ್ವೇಯ್ನ್ ಬ್ರಾವೋ

ವಿಂಡೀಸ್ ಮಾಜಿ ಆಲ್‌ರೌಂಡರ್ ಡ್ವೇಯ್ನ್ ಬ್ರಾವೋ

ಈ ಪಟ್ಟಿಯಲ್ಲಿರುವ ಎರಡನೇ ವೆಸ್ಟ್ ಇಂಡೀಸ್‌ನ ಕ್ರಿಕೆಟಿಗ ಡ್ವೇಯ್ನ್ ಬ್ರಾವೋ. ಈ ಸ್ಟಾರ್ ಅಲ್‌ರೌಂಡರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಈಗಾಗಲೇ ವಿದಾಯವನ್ನು ಘೋಷಿಸಿಯಾಗಿದೆ. ಆದರೆ ಲೀಗ್ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿರುವ ಬ್ರಾವೋ ಪ್ರಸ್ತುತ ಇಂಟರ್‌ನ್ಯಾಶನಲ್ ಲೀಗ್ ಟಿ20(ಐಎಲ್‌ಟಿ20)ಯಲ್ಲಿ ಭಾಗವಹಿಸಿದ್ದು ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ.

ಮಾಜಿ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್

ಮಾಜಿ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್

ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಚ್ಚರಿಯೆನ್ನುವಂತೆ ನಿವೃತ್ತಿ ಘೋಷಣೆ ಮಾಡಿದ್ದರು. ಆದರೆ ಮಾರ್ಗನ್ ಅವರಲ್ಲಿನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ ಎನ್ನುವುದು ಅಭಿಮಾನಿಗಳ ಅಭಿಪ್ರಾಯ. ಇದಕ್ಕೆ ಪೂರಕವಾಗಿ ಅವರು ಲೀಗ್ ಕ್ರಿಕೆಟ್‌ನಲ್ಲಿ ಅದ್ಭುತವಾಗಿ ಆಡುತ್ತಿದ್ದು ನ್ಯೂಯಾರ್ಕ್ ಸ್ಟ್ರೈಕರ್ಸ್ ಪಾರ್ಲ್ ರಾಯಲ್ಸ್ ತಂಡದ ಪರವಾಘಿ ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.

Story first published: Tuesday, January 31, 2023, 10:24 [IST]
Other articles published on Jan 31, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X