ಟೀಮ್ ಇಂಡಿಯಾದ ಮೊದಲ ಸೋಲಿಗೆ ಹೇಳಿಕೆ ನೀಡಿದ ಮಾರ್ಟಿನ್ ಗಪ್ಟಿಲ್

ಆಕ್ಲೆಂಡ್, ಫೆಬ್ರವರಿ 7: ನ್ಯೂಜಿಲೆಂಡ್‌ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಐದರಲ್ಲೂ ಗೆಲುವು ಸಾಧಿಸಿ ಪಾರಮ್ಯ ಮೆರೆದಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಿಕ ಪಂದ್ಯದಲ್ಲೇ ಮುಗ್ಗರಿಸಿದೆ. ಮೊದಲು ಇನ್ನಿಂಗ್ಸ್‌ ಆಡಿದ್ದ ಭಾರತ ಎದುರಾಳಿಗೆ ಸವಾಲಿನ 348 ರನ್‌ ಗುರಿ ನೀಡಿತ್ತಾದರೂ ಕಿವೀಸ್ ಗೆಲುವಿನ ಜವಾಬ್ದಾರಿ ಹೊತ್ತ ರಾಸ್ ಟೇಲರ್‌ (109 ರನ್) ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ಮೇಲುಗೈ ಸಾಧಿಸಿತ್ತು.

ಬಿಸಿಸಿಐ ಮತ್ತು ಆಯ್ಕೆ ಸಮಿತಿಯ ವಿರುದ್ದ ಯುವರಾಜ್ ಸಿಂಗ್ ವಾಗ್ದಾಳಿ

ಮೂರು ಪಂದ್ಯಗಳ ಸರಣಿ ಯಾರದ್ದಾಗಲಿದೆ ಎಂದು ನಿರ್ಧರಿಸಲಿರುವ ದ್ವಿತೀಯ ಪಂದ್ಯ ಶನಿವಾರ (ಫೆಬ್ರವರಿ 8) ಆಕ್ಲೆಂಡ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಕಿವೀಸ್ ಅನುಭವಿ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್, ವಿರಾಟ್ ಕೊಹ್ಲಿ ಬಳಗದ ಬಗ್ಗೆ ಹೇಳಿಕೆ ನೀಡಿದ್ದಾರೆ.

ಕುತೂಹಲಕಾರಿ ಬುಷ್‌ಫೈರ್ ಬ್ಯಾಷ್‌ ಪಂದ್ಯಕ್ಕೆ ದಿಗ್ಗಜರ ತಂಡಗಳು ಪ್ರಕಟ

ಆಕ್ಲೆಂಡ್‌ನಲ್ಲಿನ ಪಂದ್ಯಕ್ಕೆ ಕಿವೀಸ್ ಸಜ್ಜಾಗಿದೆ ಎಂದು ಭರವಸೆಯ ಮಾತುಗಳನ್ನಾಡಿರುವ ಮಾರ್ಟಿನ್ ಗಪ್ಟಿಲ್, ಮೆನ್ ಇನ್ ಬ್ಲೂ ಬಗ್ಗೆಯೂ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಅಲ್ಲಿನ ಪರಿಸ್ಥಿತಿಯೇ ಬೇರೆ

ಅಲ್ಲಿನ ಪರಿಸ್ಥಿತಿಯೇ ಬೇರೆ

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗಪ್ಟಿಲ್, 'ಅಲ್ಲಿನ ಪರಿಸ್ಥಿತಿಯೇ ಬೇರೆ. ಆದರೆ ಇಲ್ಲಿನ ಪರಿಸ್ಥಿತಿ ಬೇರೆ ಅಲ್ಲವೆ?ಇಲ್ಲಿ (ಆಕ್ಲೆಂಡ್‌ ಗ್ರೌಂಡ್‌ನಲ್ಲಿ) ಭಾರತದ ಬೌಲರ್‌ಗಳು ಇನ್ನೂ ದಾಳಿಯಾತ್ಮಕವಾಗಿ ಬದಲಾಗಲಿದ್ದಾರೆ ಎಂದು ನನಗನ್ನಿಸುತ್ತಿದೆ,' ಎಂದರು.

ಭಾರತದ ಸೋಲಿಗೆ ಕಾರಣ

ಭಾರತದ ಸೋಲಿಗೆ ಕಾರಣ

ಹ್ಯಾಮಿಲ್ಟನ್‌ ಪಂದ್ಯದಲ್ಲಿ ಕಿವೀಸ್ ಗೆಲ್ಲಲು ಕಾರಣ ಸ್ವಿನ್ನರ್‌ಗಳು ದುಬಾರಿಯಾಗಿದ್ದು. ಆ ಪಂದ್ಯದಲ್ಲಿ ಕುಲದೀಪ್ ಯಾದವ್ 84 (2 ವಿಕೆಟ್), ರವೀಂದ್ರ ಜಡೇಜಾ 64 ರನ್ ನೀಡಿದ್ದರು. ಇವರಲ್ಲಿ ಕುಲದೀಪ್‌ 2 ವಿಕೆಟ್ ಪಡೆದಿದ್ದರೆ, ಜಡೇಜಾಗೆ ವಿಕೆಟ್‌ ಲಭಿಸಿರಲಿಲ್ಲ. ಎದುರಾಳಿಗೆ ರನ್ ಕಡಿವಾಣ ಹಾಕುವಲ್ಲಿ ವೇಗಿಗಳೂ ವೈಫಲ್ಯ ಅನುಭವಿಸಿದ್ದು ತಂಡದ ಹಿನ್ನಡೆಗೆ ಕಾರಣವಾಗಿತ್ತು.

ಭಾರತ ಸೋಲಿಗೆ ಗಪ್ಟಿಲ್ ಪ್ರತಿಕ್ರಿಯೆ

ಭಾರತ ಸೋಲಿಗೆ ಗಪ್ಟಿಲ್ ಪ್ರತಿಕ್ರಿಯೆ

ಆರಂಭಿಕ ಏಕದಿನದಲ್ಲಿ ಭಾರತ ಸೋತಿರುವ ಬಗ್ಗೆ ಪ್ರತಿಕ್ರಿಯಿಸಿದ ಮಾರ್ಟಿನ್ ಗಪ್ಟಿಲ್, ವಿಶ್ವಶ್ರೇಷ್ಠ ತಂಡ ಭಾರತವನ್ನು ಹಗುರವಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ. 'ನೀವು ಭಾರತವನ್ನು ಸುಲಭವಾಗಿ ಪರಿಗಣಿಸುತ್ತೀರಿ ಎಂದು ಅನ್ನಿಸುತ್ತಿಲ್ಲ. ಯಾಕೆಂದರೆ ಅವರದ್ದು ವರ್ಲ್ಡ್ ಕ್ಲಾಸ್ ತಂಡ. ಅಲ್ಲಿ ಪಂದ್ಯ ಗೆಲ್ಲಿಸುವ ಬ್ಯಾಟ್ಸ್‌ಮನ್‌ಗಳು, ಬೌಲರ್‌ಗಳಿದ್ದಾರೆ,' ಎಂದು ಗಪ್ಟಿಲ್ ತನ್ನ ತಂಡವನ್ನು ಎಚ್ಚರಿಸಿದ್ದಾರೆ.

ನಮ್ಮ ಕೌಶಲ ಪ್ರದರ್ಶಿಸುತ್ತೇವೆ

ನಮ್ಮ ಕೌಶಲ ಪ್ರದರ್ಶಿಸುತ್ತೇವೆ

ಮಾತು ಮುಂದುವರೆಸಿದ ಗಪ್ಟಿಲ್, 'ನಾಳಿನ ಪಂದ್ಯದಲ್ಲಿ ಚೆನ್ನಾಗಿ ಆಡುತ್ತೇವೆ, ನಮ್ಮ ಕೌಶಲ ಪ್ರದರ್ಶಿಸುತ್ತೇವೆಂಬ ಭರವಸೆಯಿದೆ,' ಎಂದರು. ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ಶನಿವಾರ (ಫೆಬ್ರವರಿ 8) ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ 2ನೇ ಪಂದ್ಯವನ್ನಾಡಲಿದೆ. ಭಾರತೀಯ ಕಾಲಮಾನ 7.30 amಗೆ ಪಂದ್ಯ ಆರಂಭಗೊಳ್ಳಲಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, February 7, 2020, 19:46 [IST]
Other articles published on Feb 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X