ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: 13 ಸೀಸನ್ ಗಳ ಅತಿ ದೊಡ್ಡ ಸಿಕ್ಸರ್ ದಾಖಲೆ ವಿವರ

Top 10 longest/Biggest sixes in IPL all seasons

ಹೊಡಿ ಬಡಿ ಆಟಕ್ಕೆ ಹೆಸರುವಾಸಿಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಸಿಕ್ಸರ್ ಗಳ ಸುರಿಮಳೆ ಸಾಮಾನ್ಯ ಸಂಗತಿ. ಆದರೆ, ಯುಎಇಯಲ್ಲಿ ನಡೆದಿರುವ 2020ನೇ ಸೀಸನ್ ನಲ್ಲಿ ಇಲ್ಲಿ ತನಕ ಒಂದಿಬ್ಬರು ಬ್ಯಾಟ್ಸ್ ಮನ್ ಗಳು ಮಾತ್ರ 100 ಪ್ಲಸ್ ಮೀಟರ್ ದೂರಕ್ಕೆ ಸಿಕ್ಸ್ ಎತ್ತಿದ್ದಾರೆ. ಸೀಸನ್ ನಿಂದ ಸೀಸನ್ ಗೆ ಅತಿದೊಡ್ಡ ಸಿಕ್ಸರ್ ಬಾರಿಸುವವರ ಪಟ್ಟಿ ಬದಲಾದರೂ 2008ರ ಸೀಸನ್ ನಲ್ಲಿ ಆಲ್ಬಿ ಮಾರ್ಕೆಲ್ ಸಿಡಿಸಿದ ಸಿಕ್ಸರ್ ದೂರವನ್ನು ಇನ್ನೂ ಯಾರು ಸರಿಗಟ್ಟಿಲ್ಲ ಎಂಬುದು ಅಚ್ಚರಿಯಾದರೂ ಸತ್ಯ.

ಅತಿ ದೂರಕ್ಕೆ ಸಿಕ್ಸರ್ ಬಾರಿಸಿದ ದಾಖಲೆ ಇನ್ನೂ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಆಲ್ಬಿ ಮಾರ್ಕೆಲ್ ಹೆಸರಿನಲ್ಲಿದೆ. ಐಪಿಎಲ್ ನಲ್ಲಿ ಆರ್ ಸಿಬಿ, ಡೆಲ್ಲಿ ಡೇರ್ ಡೆವಿಲ್, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಆಡಿದ್ದ ಮಾರ್ಕೆಲ್ ಮಿಂಚಿದ್ದು ಮಾತ್ರ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದಾಗ ಮಾತ್ರ. 2008ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಾ ಮಾರ್ಕೆಲ್ ಸಿಡಿಸಿದ 125 ಮೀಟರ್ ದೂರದ ಸಿಕ್ಸರ್ ದಾಖಲೆ ಇನ್ನೂ ಯಾರೂ ಮುರಿದಿಲ್ಲ. ಹಾಗೆ ನೋಡಿದರೆ 120 ಮೀಟರ್ ದಾಟಿರುವುದು ಮಾರ್ಕೆಲ್, ಆಡಂ ಗಿಲ್ ಕ್ರಿಸ್ಟ್ ಹಾಗೂ ರಾಬಿನ್ ಉತ್ತಪ್ಪ ಮಾತ್ರ.

 ಐಪಿಎಲ್ 2020: ರಾಜಸ್ಥಾನ ಆಟಗಾರರ ಚುರುಕುತನ ಹಿಂದಿನ ಶಕ್ತಿ ಐಪಿಎಲ್ 2020: ರಾಜಸ್ಥಾನ ಆಟಗಾರರ ಚುರುಕುತನ ಹಿಂದಿನ ಶಕ್ತಿ

ಐಪಿಎಲ್ 2020ರಲ್ಲಿ ಅಕ್ಟೋಬರ್ 05ರಂತೆ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಜೋಫ್ರಾ ಆರ್ಚರ್ 105 ಮೀಟರ್ ಸಿಕ್ಸರ್ ಸಿಡಿಸಿದ್ದರೆ, ಚೆನ್ನೈನ ಶೇನ್ ವಾಟ್ಸನ್ 101,ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ 99, ಪಂಜಾಬ್ ತಂಡದ ನಿಕೋಲಾಸ್ ಪೂರನ್ 97, ಮುಂಬೈನ ಕಿರಾನ್ ಪೊಲ್ಲಾರ್ಡ್ 97 ಮೀಟರ್ ಸಿಕ್ಸ್ ಸಿಡಿದ್ದಾರೆ.

ಐಪಿಎಲ್ ಎಲ್ಲಾ ಸೀಸನ್ ಅತಿ ದೊಡ್ಡ ಸಿಕ್ಸರ್ ಟಾಪ್ 5 ಪಟ್ಟಿ;

2008: ಆಲ್ಬಿ ಮಾರ್ಕೆಲ್- ಚೆನ್ನೈ ಸೂಪರ್ ಕಿಂಗ್ಸ್-125 ಮೀಟರ್ಸ್
2011: ಆಡಂ ಗಿಲ್ ಕ್ರಿಸ್ಟ್ -ಕಿಂಗ್ಸ್ ಎಲೆವನ್ ಪಂಜಾಬ್- 122
2010: ರಾಬಿನ್ ಉತ್ತಪ್ಪ-ರಾಯಲ್ ಚಾಲೆಂಜರ್ಸ್ ಬೆಂಗಳೂರು-120
2009: ಯುವರಾಜ್ ಸಿಂಗ್-ಕಿಂಗ್ಸ್ ಎಲೆವನ್ ಪಂಜಾಬ್- 119
2016: ಬೆನ್ ಕಟ್ಟಿಂಗ್-ಸನ್ ರೈಸರ್ಸ್ ಹೈದರಾಬಾದ್-117
**
2008-2019 ಸೀಸನ್ ನಿಂದ ಸೀಸನ್ ಅತಿ ದೊಡ್ಡ ಸಿಕ್ಸರ್ ಟಾಪ್ 10 ಪಟ್ಟಿ:

2019: ಎಂಎಸ್ ಧೋನಿ-ಚೆನ್ನೈ ಸೂಪರ್ ಕಿಂಗ್ಸ್ -111
2018: ಎಬಿ ಡಿ ವಿಲಿಯರ್ಸ್- ರಾಯಲ್ ಚಾಲೆಂಜರ್ಸ್ ಬೆಂಗಳೂರು-111
2017: ಟ್ರಾವಿಸ್ ಹೆಡ್-ರಾಯಲ್ ಚಾಲೆಂಜರ್ಸ್ ಬೆಂಗಳೂರು-109
2016: ಬೆನ್ ಕಟ್ಟಿಂಗ್-ಸನ್ ರೈಸರ್ಸ್ ಹೈದರಾಬಾದ್-117
2015:ಎಬಿ ಡಿ ವಿಲಿಯರ್ಸ್- ರಾಯಲ್ ಚಾಲೆಂಜರ್ಸ್ ಬೆಂಗಳೂರು-108
2014: ಡೇವಿಡ್ ಮಿಲ್ಲರ್-ಕಿಂಗ್ಸ್ ಎಲೆವನ್ ಪಂಜಾಬ್- 102
2013: ಕ್ರಿಸ್ ಗೇಲ್- ರಾಯಲ್ ಚಾಲೆಂಜರ್ಸ್ ಬೆಂಗಳೂರು-112
2012: ಎಂಎಸ್ ಧೋನಿ-ಚೆನ್ನೈ ಸೂಪರ್ ಕಿಂಗ್ಸ್ -112
2011: ಆಡಂ ಗಿಲ್ ಕ್ರಿಸ್ಟ್ -ಕಿಂಗ್ಸ್ ಎಲೆವನ್ ಪಂಜಾಬ್- 122
2010: ರಾಬಿನ್ ಉತ್ತಪ್ಪ-ರಾಯಲ್ ಚಾಲೆಂಜರ್ಸ್ ಬೆಂಗಳೂರು-120
2009: ಯುವರಾಜ್ ಸಿಂಗ್-ಕಿಂಗ್ಸ್ ಎಲೆವನ್ ಪಂಜಾಬ್- 119
2008: ಆಲ್ಬಿ ಮಾರ್ಕೆಲ್- ಚೆನ್ನೈ ಸೂಪರ್ ಕಿಂಗ್ಸ್-125 ಮೀಟರ್ಸ್

ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ

Story first published: Monday, October 5, 2020, 15:54 [IST]
Other articles published on Oct 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X