ಟೆಸ್ಟ್‌ ಕ್ರಿಕೆಟ್: ವಿದರ್ಭ ತಂಡಕ್ಕೆ ಮೊದಲ ದಿನದ ಗೌರವ, ಜಾಫರ್ ಶತಕ

Posted By:
Vidarbha team scores 289/2 in first test agianst Rest of India

ನಾಗ್ಪುರ, ಮಾರ್ಚ್ 14: ಇರಾನಿ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವಿದರ್ಭ ತಂಡ ಮೊದಲ ದಿನದಾಂತ್ಯಕ್ಕೆ ಉತ್ತಮ ಮೊತ್ತ ಗಳಿಸಿ ಸುಸ್ಥಿತಿಯಲ್ಲಿದೆ.

ದೇವಧರ್ ಟ್ರೋಫಿ ಗೆದ್ದ ವಿದರ್ಭ ತಂಡದ ವಿರುದ್ಧ ಕರ್ನಾಟಕದ ಕರುಣ್ ನಾಯರ್ ನಾಯಕರಾಗಿರುವ ಭಾರತ ಇತರೆ ತಂಡವು ನಾಗ್ಪುರದ ವಿದರ್ಭ ಕ್ರೀಡಾಂಗಣದಲ್ಲಿ ಇರಾನಿ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯ ಆಡಿ ಮೊದಲ ದಿನದಾಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 289 ರನ್ ಗಳಿಸಿದೆ.

ಮೊದಲು ಟಾಸ್ ಗೆದ್ದ ವಿದರ್ಭ ಸಪಾಟು ಪಿಚ್‌ನಲ್ಲಿ ನಿರೀಕ್ಷೆಯಂತೆ ಉತ್ತಮ ಆರಂಭ ಕಂಡಿತು. ಆರಂಭಿಕ ಬ್ಯಾಟ್ಸ್‌ಮನ್‌ ಮತ್ತು ಕ್ಯಾಪ್ಟನ್ ಎಫ್.ಫೈಜ್ಲ ಭಾರತ ಇತರೆ ತಂಡದ ಬೌಲರ್‌ಗಳನ್ನು ಕಾಡಿ 190 ಎಸೆತಗಳಲ್ಲಿ 89 ರನ್ ಗಳಿಸಿದರು. ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್‌ ಸಂಜಯ್ ರಾಮಸ್ವಾಮಿ 53 ರನ್ ಗಳಿಸಿದರು. ಅವರು 111 ಎಸೆತ ಎದುರಿಸಿದರು 6 ಬೌಂಡರಿ ಮತ್ತು ಒಂದು ಸಿಕ್ಸರ್‌ ಭಾರಿಸಿದರು.

ಆ ನಂತರ ಸ್ಕ್ರೀಸಿಗೆ ಬಂದ ಹಿರಿಯ ಆಟಗಾರ ವಾಸಿಮ್ ಜಾಫರ್ 166 ಎಸೆತ ಎದುರಿಸಿ ಭರ್ಜರಿ 113 ರನ್ ಗಳಿಸಿ ನಾಟೌಟ್‌ ಆಗಿ ಉಳಿದರು. ಅವರ ಇನ್ನಿಂಗ್ಸ್‌ನಲ್ಲಿ 16 ಬೌಂಡರಿ ಮತ್ತು 1 ಸಿಕ್ಸರ್‌ ಭಾರಿಸಿದರು.

ವಾಸಿಂ ಜಾಫರ್ ಜೊತೆಗೆ ಜಿ.ಸತೀಶ್‌ 74 ಬಾಲ್ ಎದುರಿಸಿ 29 ಭಾರಿಸಿ ಆಡುತ್ತಿದ್ದಾರೆ. ಭಾರತ ಇತರೆ ತಂಡದ ಬೌಲರ್‌ಗಳ ಪೈಕೆ ಬಹುತೇಕ ಎಲ್ಲರೂ ಬೆಳಿಗಿನಿಂದ ಬೆವರು ಹರಿಸಿದ್ದೇ ಬಂತು. ರವಿಚಂದ್ರನ್ ಅಶ್ವಿನ್ ಅವರು 25 ಓವರ್ ಎಸೆತು 1 ವಿಕೆಟ್ ಗಳಿಸಿದರು. ಜಯದೇವ್ ಉನದ್ಕತ್ 18 ಓವರ್ ಹಾಕಿ 1 ವಿಕೆಟ್ ತೆಗೆದರು.

ಭಾರತ ಇತರೆ ತಂಡದಲ್ಲಿ ಕರ್ನಾಟಕದ ಆಟಗಾರರಾದ ಕರುಣ್ ನಾಯರ್, ಮಯಾಂಕ್ ಅಗರ್ವಾಲ್, ಆರ್.ಸಮರ್ಥ್‌ ಇದ್ದಾರೆ. ಕಿರಿಯರ ವರ್ಲ್ಡ್‌ಕಪ್ ಜಯಿಸಿದ ಭಾರತ ತಂಡದ ನಾಯಕ ಪೃಥ್ವಿ ಶಾ, ಹಿರಿಯ ಆಟಗಾರರಾದ ರವಿಚಂದ್ರನ್ ಅಶ್ವಿನ್, ಹನುಮ ವಿಹಾರಿ, ಶಾಬಾಜ್ ನದೀಮ್ ಅವರುಗಳಿದ್ದಾರೆ.

Story first published: Wednesday, March 14, 2018, 17:00 [IST]
Other articles published on Mar 14, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ