ದೆಹಲಿಯನ್ನು ಮಣಿಸಿ ಚೊಚ್ಚಲ ರಣಜಿ ಟ್ರೋಫಿ ಪ್ರಶಸ್ತಿ ಮುಡಿಗೇರಿಸಿಕೊಂಡ ವಿದರ್ಭ

Posted By:

ಇಂದೋರ್, ಜನವರಿ 01: 2017-18ರ ರಣಜಿ ಫೈನಲ್ ನಲ್ಲಿ ವಿದರ್ಭ ತಂಡ ದೆಹಲಿಯನ್ನು ಒಂಭತ್ತು ವಿಕೆಟ್ ಗಳಿಂದ ಮಣಿಸಿ ಚೊಚ್ಚಲ ರಣಜಿ ಟ್ರೋಫಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಇಂದೋರ್ ನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆದ 2017-18ರ ರಣಜಿ ಫೈನಲ್ ನಲ್ಲಿ ದೆಹಲಿ ನೀಡಿದ 26 ರನ್ ಗಳ ಸುಲಭದ ಗುರಿಯನ್ನು ಬೆನ್ನಟ್ಟಿದ ವಿದರ್ಭ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಈ ಮೂಲಕ ವಿದರ್ಭ ಚೊಚ್ಚಲ ರಣಜಿ ಟ್ರೋಫಿಗೆ ಮುತ್ತಿಕ್ಕಿತು.

Vidharba beat Delhi by 9 wickets to win first ever Ranji Trophy

ಮೊದಲ ಬ್ಯಾಟಿಂಗ್ ಮಾಡಿದ ದೆಹಲಿ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 295 ರನ್ ಗಳಿಗೆ ಸರ್ವತನ ಕಡಿತ್ತು. ಬಳಿಕ ತನ್ನ ಮೊದಲ ಇನ್ನಿಂಗ್ಸ್ ನ ಬ್ಯಾಟಿಂಗ್ ಮಾಡಿದ ವಿದರ್ಭ ವಡ್ಕರೆ (133) ಅವರ ಅಬ್ಬರದ ಶತಕದ ನೆರವಿನಿಂದ 547 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿ ಮುನ್ನಡೆ ಸಾಧಿಸಿತ್ತು.

ನಂತರ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ದೆಹಲಿ 280 ರನ್ ಗಳಿಸಿ ವಿದರ್ಭಕ್ಕೆ 26 ರನ್ ಗಳ ಸುಲಭ ಗುರಿ ನೀಡಿತು. ಇದನ್ನು ಬೆನ್ನಟ್ಟಿದ ವಿದರ್ಭ ಒಂದು ವಿಕೆಟ್ ಕಳೆದಕೊಂಡು ಗೆಲುವಿನ ಸಂಭ್ರಮ ಆಚರಿಸಿತು. ಈ ಮೂಲಕ ವಿದರ್ಭ 2017-18ರ ಸಾಲಿನ ರಣಜಿ ಟ್ರೋಫಿ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿತು.

ಸಂಕ್ಷಿಪ್ತ ಸ್ಕೋರ್

ದೆಹಲಿ ಮೊದಲ ಇನ್ನಿಂಗ್ಸ್: 295 ಮತ್ತು ಎರಡನೇ ಇನ್ನಿಂಗ್ಸ್ 280.

ವಿದರ್ಭ ಇನ್ನಿಂಗ್ಸ್: ಮೊದಲ ಇನ್ನಿಂಗ್ಸ್ 547 ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ ಒಂದು ವಿಕೆಟ್ ಕಳೆದುಕೊಂಡು 32 ರನ್ ಗಳಿಸುವ ಮೂಲಕ ಜಯಗಳಿಸಿತು

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, January 1, 2018, 17:47 [IST]
Other articles published on Jan 1, 2018
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ