ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ ಟ್ರೋಫಿ 2021: ಕರ್ನಾಟಕ ತಂಡ ಪ್ರಕಟ, ಯಾರಿಗೆಲ್ಲಾ ಅವಕಾಶ?

Karnataka Team

ಡಿಸೆಂಬರ್ 8ರಿಂದ ಪ್ರಾರಂಭಗೊಳ್ಳಲಿರುವ ವಿಜಯ್ ಹಜಾರೆ ಟ್ರೋಫಿ 2021ಕ್ಕೆ ಬಲಿಷ್ಠ ಕರ್ನಾಟಕ ತಂಡವು ಪ್ರಕಟಗೊಂಡಿದೆ. ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ವಿರೋಚಿತ ಸೋಲನ್ನ ಅನುಭವಿಸಿದ ಮನೀಷ್ ಪಾಂಡೆ ಬಳಗವು, ದೇಶೀಯ ಪ್ರತಿಷ್ಠಿತ ಏಕದಿನ ಟೂರ್ನಮೆಂಟ್‌ಗೆ ಸಿದ್ಧಗೊಂಡಿದೆ.

ಡಿಸೆಂಬರ್ 8ರಂದು ಉತ್ತರ ಪ್ರದೇಶ ಮತ್ತು ಸೌರಾಷ್ಟ್ರ ತಂಡಗಳು ಎಲೈಟ್ ಗ್ರೂಪ್ ಸಿಯಲ್ಲಿ ಚಂಡೀಗಡದಲ್ಲಿ ಮುಖಾಮುಖಿ ಆಗುವ ಮೂಲಕ ವಿಜಯ್ ಹಜಾರೆ ಟ್ರೋಫಿಗೆ ಚಾಲನೆ ಸಿಗಲಿದೆ. ಇದೇ ದಿನ ವಿವಿಧ ರಾಜ್ಯಗಳ ಸ್ಟೇಡಿಯಂನಲ್ಲಿ ವಿವಿಧ ತಂಡಗಳು 19 ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ.

ಮೊದಲ ಟೆಸ್ಟ್‌: ನ್ಯೂಜಿಲೆಂಡ್ 296 ರನ್‌ಗಳಿಗೆ ಆಲೌಟ್‌, ಕಿವೀಸ್‌ಗೆ 49 ರನ್‌ಗಳ ಹಿನ್ನಡೆಮೊದಲ ಟೆಸ್ಟ್‌: ನ್ಯೂಜಿಲೆಂಡ್ 296 ರನ್‌ಗಳಿಗೆ ಆಲೌಟ್‌, ಕಿವೀಸ್‌ಗೆ 49 ರನ್‌ಗಳ ಹಿನ್ನಡೆ

ಡಿಸೆಂಬರ್ 24ರಂದು ಶುಕ್ರವಾರ ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಡಿಸೆಂಬರ್ 26ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ಫೈನಲ್ ಪಂದ್ಯ ನಡೆಯಲಿದೆ. ಕ್ವಾರ್ಟರ್‌ಫೈನಲ್, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳ ಆತಿಥ್ಯ ಸ್ಥಳ ಇನ್ನೂ ಘೋಷಣೆಯಾಗಿಲ್ಲ.

ವಿಜಯ್ ಹಜಾರೆ ಟ್ರೋಫಿಗೆ ಕರ್ನಾಟಕ ಸ್ಕ್ವಾಡ್‌
ಮನೀಷ್ ಪಾಂಡೆ (ನಾಯಕ), ರೋಹನ್ ಕದಂ, ಸಮರ್ಥ್‌ ಆರ್‌., ಕರುಣ್ ನಾಯರ್, ಸಿದ್ಧಾರ್ಥ್‌ ಕೆ.ವಿ, ಅಭಿನವ್ ಮನೋಹರ್, ನಿಶ್ಚಲ್ ಡಿ, ಸಮರ್ಥ್‌ ಬಿ.ಆರ್‌., ಶರತ್‌ ಬಿ.ಆರ್, ಶರತ್ ಶ್ರೀನಿವಾಸ್, ಸುಚಿತ್ ಜೆ, ಶ್ರೇಯಸ್ ಗೋಪಾಲ್, ಕರಿಯಪ್ಪ ಕೆ.ಸಿ, ರಿತೇಶ್ ಬಟ್ಕಳ್‌, ಪ್ರವೀಣ್ ದುಬೆ, ವಿದ್ಯಾದರ ಪಾಟೀಲ್, ಕೌಶಿಕ್ ವಿ, ಪ್ರತೀಕ್ ಜೈನ್, ದರ್ಶನ್ ಎಂ.ಬಿ, ವೈಶಾಕ್ ವಿ, ವೆಂಕಟೇಶ್ ಎಂ.

ದಕ್ಷಿಣ ಆಫ್ರಿಕಾ ಎ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಭಾರತ ಎ ಸರಣಿ ಅರ್ಧಕ್ಕೆ ರದ್ದುಗೊಂಡರೆ, ದೇವದತ್ ಪಡಿಕ್ಕಲ್ ಮತ್ತು ಕೃಷ್ಣಪ್ಪ ಗೌತಮ್ ಕರ್ನಾಟಕ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.

ಕರ್ನಾಟಕ ವಿರುದ್ಧ SMAT ಫೈನಲ್‌ನಲ್ಲಿ ಕೊನೆಯ ಎಸೆತದಲ್ಲಿ ಜಯವನ್ನ ಪಡೆದ ತಮಿಳುನಾಡು ತಂಡ ಸೈಯದ್ ಮುಷ್ತಾಕ್ ಅಲಿ ಟಿ20 ಟೈಟಲ್ ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಗೆಲುವಿನ ಜೋಶ್‌ನಲ್ಲಿರುವ ತಮಿಳುನಾಡು ಟೀಮ್ ಕೂಡ ಇತ್ತೀಚೆಗಷ್ಟೇ 20 ಸದಸ್ಯರನ್ನೊಳಗೊಂಡ ಬಲಿಷ್ಠ ತಂಡವನ್ನ ಪ್ರಕಟಿಸಿತು.

ವಿಜಯ್ ಹಜಾರೆ ಟ್ರೋಫಿ 2021-22: ಬಲಿಷ್ಠ ತಂಡ ಪ್ರಕಟಿಸಿದ ತಮಿಳುನಾಡು, ದಿನೇಶ್ ಕಾರ್ತಿಕ್, ಸುಂದರ್ ಕಂಬ್ಯಾಕ್ವಿಜಯ್ ಹಜಾರೆ ಟ್ರೋಫಿ 2021-22: ಬಲಿಷ್ಠ ತಂಡ ಪ್ರಕಟಿಸಿದ ತಮಿಳುನಾಡು, ದಿನೇಶ್ ಕಾರ್ತಿಕ್, ಸುಂದರ್ ಕಂಬ್ಯಾಕ್

ತಮಿಳುನಾಡು ತಂಡದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ತಮಿಳುನಾಡು ತಂಡಕ್ಕೆ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಈ ಮೂಲಕ ತಮಿಳುನಾಡು ತಂಡದ ಬಲ ಮತ್ತಷ್ಟು ಹೆಚ್ಚಿದೆ. ಓಪನಿಂಗ್ ಬ್ಯಾಟ್ಸ್‌ಮನ್ ನಾರಾಯಣ್ ಜಗದೀಶನ್ ಉಪನಾಯಕನಾಗಿ ಆಯ್ಕೆಗೊಂಡಿದ್ದಾರೆ.

ವಿಜಯ್ ಹಜಾರೆ ಟೂರ್ನಿಗೆ ತಮಿಳುನಾಡು ಸ್ಕ್ವಾಡ್
ವಿಜಯ್ ಶಂಕರ್ (ನಾಯಕ), ನಾರಾಯಣ ಜಗದೀಶನ್ (ಉಪನಾಯಕ), ದಿನೇಶ್ ಕಾರ್ತಿಕ್, ಹರಿ ನಿಶಾಂತ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಶಾರುಖ್ ಖಾನ್, ಮುರುಗನ್ ಅಶ್ವಿನ್, ಸಂದೀಪ್ ವಾರಿಯರ್, ವಾಷಿಂಗ್ಟನ್ ಸುಂದರ್, ಮಣಿಮಾರನ್ ಸಿದ್ಧಾರ್ಥ್, ಬಿ. ಸಾಯಿ ಸುದರ್ಶನ್, ವಿ.ಗಂಗಾ ಶ್ರೀಧರ್ ರಾಜು, ಎಂ ಮೊಹಮ್ಮದ್, ಜೆ.ಕೌಸಿಕ್, ಪಿ.ಸರವಣ ಕುಮಾರ್, ಎಲ್.ಸೂರ್ಯಪ್ರಕಾಶ್, ಬಾಬಾ ಇಂದ್ರಜಿತ್, ಆರ್.ಸಂಜಯ್ ಯಾದವ್, ಎಂ.ಕೌಶಿಕ್ ಗಾಂಧಿ, ಆರ್.ಸಿಲಂಬರಸನ್

Story first published: Saturday, November 27, 2021, 20:07 [IST]
Other articles published on Nov 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X