Vijay Hazare Trophy 2021/22: ಇಂದಿನಿಂದ ಆರಂಭ, ಕರ್ನಾಟಕ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ?

ವಿಜಯ್ ಹಜಾರೆ ಟ್ರೋಫಿ 2021ಕ್ಕೆ ಇಂದು (ಡಿ. 8) ಚಾಲನೆ ಸಿಗಲಿದೆ. ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಬಳಿಕ ಪ್ರತಿಷ್ಠಿತ ದೇಶೀಯ ಟೂರ್ನಿಗಳಲ್ಲಿ ವಿಜಯ್ ಹಜಾರೆ ಕೂಡ ಒಂದಾಗಿದೆ. ಏಕದಿನ ಫಾರ್ಮೆಟ್‌ನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಹಲವು ತಂಡಗಳು ಭಾಗಿಯಾಗಲಿದೆ.

ಬುಧವಾರದಿಂದ ಆರಂಭವಾಗುವ ಈ ಟೂರ್ನಿ ಡಿಸೆಂಬರ್ 26ರವರೆಗೆ ನಡೆಯಲಿದ್ದು, ಒಟ್ಟು 105 ಪಂದ್ಯಗಳು ನಡೆಯಲಿವೆ. ದೇಶದ 38 ತಂಡಗಳು ಇದರಲ್ಲಿ ಭಾಗವಹಿಸಲಿದ್ದು, ಆರು ಗುಂಪುಗಳಾಗಿ ವಿಂಗಡಿಸಲಾಗಿದೆ.

ಪ್ರತಿ ಎಲೈಟ್ ಗುಂಪಿನಲ್ಲಿ 6 ತಂಡಗಳನ್ನು ಇರಿಸಲಾಗಿದೆ. ಹಾಗೆಯೇ ಪ್ಲೇಟ್ ಗುಂಪಿನಲ್ಲಿ 8 ತಂಡಗಳು ಇರುತ್ತವೆ. ಗುಂಪು ಹಂತದಲ್ಲಿ ಪ್ರತಿ ತಂಡವು ತಲಾ 6 ಪಂದ್ಯಗಳನ್ನು ಆಡಲಿದೆ. ಇದಾದ ಬಳಿಕ ಡಿಸೆಂಬರ್ 19ರಿಂದ ನಾಕೌಟ್ ಹಂತದ ಪಂದ್ಯಗಳು ಶುರುವಾಗಲಿದೆ. ಡಿಸೆಂಬರ್ 19 ರಂದು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿದ್ದು, ಡಿಸೆಂಬರ್ 21 ಮತ್ತು 22 ರಂದು ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿವೆ. ಸೆಮಿಫೈನಲ್ ಡಿಸೆಂಬರ್ 24 ರಂದು ನಡೆಯಲಿದ್ದು, ಫೈನಲ್ ಪಂದ್ಯವು ಡಿಸೆಂಬರ್ 25 ರಂದು ಜರುಗಲಿದೆ.

ವಿರಾಟ್ ಕೊಹ್ಲಿ ಅದ್ಭುತ ನಾಯಕ, ಆತನಿಗೆ ಇನ್ನೂ 5 ವರ್ಷ ಟೆಸ್ಟ್ ಕ್ರಿಕೆಟ್ ಬಾಕಿಯಿದೆ : MSK ಪ್ರಸಾದ್ವಿರಾಟ್ ಕೊಹ್ಲಿ ಅದ್ಭುತ ನಾಯಕ, ಆತನಿಗೆ ಇನ್ನೂ 5 ವರ್ಷ ಟೆಸ್ಟ್ ಕ್ರಿಕೆಟ್ ಬಾಕಿಯಿದೆ : MSK ಪ್ರಸಾದ್

ಟೂರ್ನಿಯ ಆರಂಭಿಕ ಪಂದ್ಯದಲ್ಲಿ ತಮಿಳುನಾಡು, ಹಾಲಿ ಚಾಂಪಿಯನ್ ಮುಂಬೈನೊಂದಿಗೆ ಸೆಣಸಾಟ ನಡೆಸಲಿದೆ. ಮುಂಬೈ ತಂಡದ ನಾಯಕನಾಗಿ ಶಮ್ಸ್ ಮುಲಾನಿ ತಂಡವನ್ನು ಮುನ್ನಡೆಸಲಿದ್ದು, ಬಿ ಗುಂಪಿನ ಈ ಪಂದ್ಯ ತಿರುವನಂತಪುರದಲ್ಲಿ ನಡೆಯಲಿದೆ. ಮುಂಬೈ ತಂಡವು ಎಡಗೈ ಆರಂಭಿಕರಾದ ಯಶಸ್ವಿ ಜೈಸ್ವಾಲ್, ಅರ್ಮಾನ್ ಜಾಫರ್, ಸಿದ್ಧೇಶ್ ಲಾಡ್ ಮತ್ತು ಆಲ್ ರೌಂಡರ್ ಶಿವಂ ದುಬೆ ಅವರನ್ನು ಒಳಗೊಂಡಿದೆ. ಹಾಗೆಯೇ ಬೌಲಿಂಗ್​ನಲ್ಲಿ ಅನುಭವಿ ಧವಳ್ ಕುಲಕರ್ಣಿ ಇದ್ದಾರೆ.

ಇನ್ನೊಂದೆಡೆ ತಮಿಳುನಾಡು ತಂಡದಲ್ಲಿ ದಿನೇಶ್ ಕಾರ್ತಿಕ್ ಮತ್ತು ವಾಷಿಂಗ್ಟನ್ ಸುಂದರ್ ಇದ್ದಾರೆ. ಇನ್ನು ಕರ್ನಾಟಕ ತಂಡವು ಬುಧವಾರದ ಮತ್ತೊಂದು ಪಂದ್ಯದಲ್ಲಿ ಪುದುಚೇರಿಯನ್ನು ಎದುರಿಸಲಿರುವುದು ವಿಶೇಷ.

ಅಜಾಜ್ ಪಟೇಲ್ 10 ವಿಕೆಟ್ ಸಾಧನೆ: ಅನಿಲ್ ಕುಂಬ್ಳೆ, ಜಿಮ್ ಲೇಕರ್‌ಗಿಂತ ಗ್ರೇಟ್ ಎಂದ ದೀಪಕ್ ಪಟೇಲ್ ಅಜಾಜ್ ಪಟೇಲ್ 10 ವಿಕೆಟ್ ಸಾಧನೆ: ಅನಿಲ್ ಕುಂಬ್ಳೆ, ಜಿಮ್ ಲೇಕರ್‌ಗಿಂತ ಗ್ರೇಟ್ ಎಂದ ದೀಪಕ್ ಪಟೇಲ್

ವಿಜಯ್ ಹಜಾರೆ ಟ್ರೋಫಿಗೆ ಕರ್ನಾಟಕ ಸ್ಕ್ವಾಡ್‌
ಮನೀಷ್ ಪಾಂಡೆ (ನಾಯಕ), ರೋಹನ್ ಕದಂ, ಸಮರ್ಥ್‌ ಆರ್‌., ಕರುಣ್ ನಾಯರ್, ಸಿದ್ಧಾರ್ಥ್‌ ಕೆ.ವಿ, ಅಭಿನವ್ ಮನೋಹರ್, ನಿಶ್ಚಲ್ ಡಿ, ಸಮರ್ಥ್‌ ಬಿ.ಆರ್‌., ಶರತ್‌ ಬಿ.ಆರ್, ಶರತ್ ಶ್ರೀನಿವಾಸ್, ಸುಚಿತ್ ಜೆ, ಶ್ರೇಯಸ್ ಗೋಪಾಲ್, ಕರಿಯಪ್ಪ ಕೆ.ಸಿ, ರಿತೇಶ್ ಬಟ್ಕಳ್‌, ಪ್ರವೀಣ್ ದುಬೆ, ವಿದ್ಯಾದರ ಪಾಟೀಲ್, ಕೌಶಿಕ್ ವಿ, ಪ್ರತೀಕ್ ಜೈನ್, ದರ್ಶನ್ ಎಂ.ಬಿ, ವೈಶಾಕ್ ವಿ, ವೆಂಕಟೇಶ್ ಎಂ.

South Africa ವಿರುದ್ಧದ ಸರಣಿಗೆ ಈ ಆಟಗಾರರು ಅನುಮಾನ | Oneindia Kannada

ವಿಜಯ್ ಹಜಾರೆ ಟೂರ್ನಿಗೆ ತಮಿಳುನಾಡು ಸ್ಕ್ವಾಡ್
ವಿಜಯ್ ಶಂಕರ್ (ನಾಯಕ), ನಾರಾಯಣ ಜಗದೀಶನ್ (ಉಪನಾಯಕ), ದಿನೇಶ್ ಕಾರ್ತಿಕ್, ಹರಿ ನಿಶಾಂತ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಶಾರುಖ್ ಖಾನ್, ಮುರುಗನ್ ಅಶ್ವಿನ್, ಸಂದೀಪ್ ವಾರಿಯರ್, ವಾಷಿಂಗ್ಟನ್ ಸುಂದರ್, ಮಣಿಮಾರನ್ ಸಿದ್ಧಾರ್ಥ್, ಬಿ. ಸಾಯಿ ಸುದರ್ಶನ್, ವಿ.ಗಂಗಾ ಶ್ರೀಧರ್ ರಾಜು, ಎಂ ಮೊಹಮ್ಮದ್, ಜೆ.ಕೌಸಿಕ್, ಪಿ.ಸರವಣ ಕುಮಾರ್, ಎಲ್.ಸೂರ್ಯಪ್ರಕಾಶ್, ಬಾಬಾ ಇಂದ್ರಜಿತ್, ಆರ್.ಸಂಜಯ್ ಯಾದವ್, ಎಂ.ಕೌಶಿಕ್ ಗಾಂಧಿ, ಆರ್.ಸಿಲಂಬರಸನ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, December 7, 2021, 23:15 [IST]
Other articles published on Dec 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X