ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್‌ ಫೈನಲ್: ಕರ್ನಾಟಕಕ್ಕೆ ತಮಿಳುನಾಡು ಸವಾಲು

Vijay Hazare Trophy Quarterfinals: Karnataka vs Tamil Nadu, Preview and match details

ಪ್ರತಿಷ್ಠಿತ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಹಂತಕ್ಕೆ ಕರ್ನಾಟಕ ತಂಡ ಪ್ರವೇಶ ಮಾಡಿದ್ದು ಮಂಗಳವಾರ ತಮಿಳುನಾಡು ತಂಡ ಕರ್ನಾಟಕಕ್ಕೆ ಕಠಿಣ ಸವಾಲೊಡ್ಡಲಿದೆ. ಇತ್ತೀಚೆಗಷ್ಟೇ ಅಂತ್ಯವಾದ ಟಿ20 ಮಾದರಿಯ ದೇಶೀಯ ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಪಿಯ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಈ ಎರಡು ತಂಡಗಳು ಈಗ ಸೆಮಿಫೈನಲ್ ಪ್ರವೇಶಕ್ಕಾಗಿ ಪರಸ್ಪರ ಸೆಣೆಸಾಟವನ್ನು ನಡೆಸಲಿದೆ. ಈ ಎರಡು ಬದ್ಧ ಎದುರಾಳಿಗಳ ಮುಖಾಮುಖಿ ಈಗ ಕುತೂಹಲ ಮೂಡಿಸಿದೆ.

ತಮಿಳುನಾಡು ತಂಡ ನೇರವಾಗಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದರೆ ಕರ್ನಾಟಕ ತಂಡ ಪ್ರಿ ಕ್ವಾರ್ಟರ್‌ಫೈನಲ್ ಪಂದ್ಯವನ್ನು ಆಡಿ ರಾಜಸ್ಥಾನದ ವಿರುದ್ಧ ಗೆದ್ದು ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಸಂಪಾದಿಸಿದೆ. ರಾಜಸ್ಥಾನ ತಂಡದ ವಿರುದ್ಧ ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 8 ವಿಕೆಟ್‌ಗಳ ಅಂತರದ ಭಾರೀ ಗೆಲುವು ಸಾಧಿಸಿರುವುದು ಕರ್ನಾಟಕದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಅಲ್ಲದೆ ಈ ಪಂದ್ಯದಲ್ಲಿ ತಂಡದ ಅಗ್ರ ಕ್ರಮಾಂಕದ ನಾಲ್ಕು ಆಟಗಾರರ ಪೈಕಿ ಮೂವರಿಂದ ಅರ್ಧ ಶತಕ ದಾಖಲಾಗಿರುವುದು ಕೂಡ ತಂಡಕ್ಕೆ ಸಕಾರಾತ್ಮಕ ಅಂಶವಾಗಿದೆ.

ರಾಹುಲ್ ದ್ರಾವಿಡ್‌ಗೆ ದಕ್ಷಿಣ ಆಫ್ರಿಕಾದಲ್ಲಿ ಬಹುದೊಡ್ಡ ಸವಾಲಿದೆ: ರೀತೀಂದರ್ ಸಿಂಗ್ ಸೋಧಿರಾಹುಲ್ ದ್ರಾವಿಡ್‌ಗೆ ದಕ್ಷಿಣ ಆಫ್ರಿಕಾದಲ್ಲಿ ಬಹುದೊಡ್ಡ ಸವಾಲಿದೆ: ರೀತೀಂದರ್ ಸಿಂಗ್ ಸೋಧಿ

ಇನ್ನು ಕರ್ನಾಟಕ ತಂಡ ಅತ್ಯುತ್ತಮವಾದ ಬ್ಯಾಟಿಂಗ್ ಲೈನ್‌ಅಪ್ ಅನ್ನು ಹೊಂದಿದೆ ಎಂಬುದರಲ್ಲಿ ಅನುಮಾನವಿಲ್ಲ. ರವಿಕುಮಾರ್ ಸಮರ್ಥ್, ದೇವದತ್ ಪಡಿಕ್ಕಲ್, ಕೆ ಸಿದ್ಧಾರ್ಥ್, ನಾಯಕ ಮನೀಶ್ ಪಾಂಡೆ, ಅಭಿನವ್ ಮನೋಹರ್ ಮತ್ತು ಕೆ ಗೌತಮ್ ಕರ್ನಾಟಕ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಈ ಬ್ಯಾಟಿಂಗ್ ಬಳಹ ಯಾವುದೇ ಎದುರಾಳಿಗೂ ಸವಾಲಾಗಬಲ್ಲದು. ಕರ್ನಾಟಕ ತಂಡದ ಈ ಬ್ಯಾಟಿಂಗ್ ಶಕ್ತಿ ತಮಿಳುನಾಡು ವಿರುದ್ಧದ ಪಂದ್ಯದಲ್ಲಿಯೂ ಸಮರ್ಥವಾದ ಪ್ರದರ್ಶನ ನೀಡಬೇಕಿದೆ.

ಆದರೆ ಕರ್ನಾಟಕ ತಂಡ ಇದೇ ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಸೋಲು ಅನುಭವಿಸಿತ್ತು. ತಿರುವನಂತಪುರಂನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ತಮಿಳುನಾಡು ಕರ್ನಾಟಕವನ್ನು ಮಣಿಸುವಲ್ಲಿ ಯಶಸ್ವಿಯಾಗಿತ್ತು. ಅದೇ ಪ್ರದರ್ಶನವನ್ನು ಮತ್ತೊಮ್ಮೆ ನಿಡುವ ಉತ್ಸಾಹದಲ್ಲಿ ತಮಿಳುನಾಡು ತಂಡ ಇದೆ. ಆದರೆ ಈ ಪಂದ್ಯ ವಿಭಿನ್ನ ತಾಣ ಹಾಗೂ ಪರಿಸ್ಥಿತಿಯಲ್ಲಿ ನಡೆಯುತ್ತಿದ್ದು ತಮಿಳುನಾಡಿಗೆ ಸವಾಲಾಗಲಿದೆ.

ತಮಿಳುನಾಡು ತಂಡದಲ್ಲಿಯೂ ಸಾಕಷ್ಟು ಖ್ಯಾತನಾಮ ಆಟಗಾರರಿದ್ದಾರೆ. ಎನ್ ಜಗದೀಶನ್, ಬಿ ಇಂದ್ರಜಿತ್, ದಿನೇಶ್ ಕಾರ್ತಿಕ್, ನಾಯಕ ವಿಜಯ್ ಶಂಕರ್, ವಾಶಿಂಗ್ಟನ್ ಸುಂದರ್, ಶಾರೂಖ್ ಖಾನ್ ತಂಡದ ಬ್ಯಾಟಿಂಗ್ ಶಕ್ತಿಗಳಾಗಿದ್ದಾರೆ. ಅಲ್ಲದೆ ಇದೇ ಮೊದಲ ಬಾರಿಗೆ ತಮಿಳುನಾಡು ತಂಡವನ್ನು ಪ್ರತಿನಿಧಿಸುತ್ತಿರುವ ಬ್ಯಾಟರ್ ಬಿ ಸಾಯಿ ಸುದರ್ಶನ್ ಕೂಡ ತಮಿಳುನಾಡು ತಂಡದ ಬ್ಯಾಟಿಂಗೆ ಬಲ ನೀಡಲಿದ್ದಾರೆ.

ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್: ರಜತ ಗೆದ್ದು ಇತಿಹಾಸ ರಚಿಸಿದ ಕಿಡಂಬಿ ಶ್ರೀಕಾಂತ್ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್: ರಜತ ಗೆದ್ದು ಇತಿಹಾಸ ರಚಿಸಿದ ಕಿಡಂಬಿ ಶ್ರೀಕಾಂತ್

ಇನ್ನು ಆಲ್ರೌಂಡರ್ ವಾಶಿಂಗ್ಟನ್ ಸುಂದರ್ ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಗಾಯಗೊಂಡು ಮರಳಿದ್ದ ಬಳಿಕ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಾಸಾಗಿದ್ದಾರೆ. ಟೂರ್ನಿಯಲ್ಲಿ ಸುಂದರ್ ಈವರೆಗೆ ಬೌಲಿಂಗ್‌ನಲ್ಲಿ ಉತ್ತಮವಾಗಿ ಮಿಂಚಿದ್ದು 12 ವಿಕೆಟ್ ಸಂಪಾದಿಸಿದ್ದಾರೆ. ಆದರೆ ಬ್ಯಾಟಿಂಗ್‌ನಲ್ಲಿ ಅವರಿಂದ ಹೇಳಿಕೊಳ್ಳುವಂತಾ ಪ್ರದರ್ಶನ ಬಂದಿಲ್ಲ. ಹೀಗಾಗಿ ತಮಿಳುನಾಡು ತಂಡ ಸುಂದರ್ ಬ್ಯಾಟ್ ಮೂಲಕವೂ ಕೊಡುಗೆ ನೀಡುವುದನ್ನು ನಿರೀಕ್ಷಿಸುತ್ತಿದೆ.

ಕರ್ನಾಟಕ ತಂಡ: ಮನೀಶ್ ಪಾಂಡೆ (ನಾಯಕ), ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್), ರವಿಕುಮಾರ್ ಸಮರ್ಥ್, ದೇವದತ್ತ್ ಪಡಿಕಲ್, ಕೃಷ್ಣಮೂರ್ತಿ ಸಿದ್ಧಾರ್ಥ್, ಅಭಿನವ್ ಮನೋಹರ್, ಕೃಷ್ಣಪ್ಪ ಗೌತಮ್, ವೆಂಕಟೇಶ್ ಮುರಳೀಧರ, ಪ್ರವೀಣ್ ದುಬೆ, ವಿಜಯ್ ಕುಮಾರ್ ವೈಶಾಕ್, ಪ್ರಸಿದ್ಧ್ ಕೃಷ್ಣ, ಕರುಣ್ ನಾಯರ್, ದೇಗಾ ನಿಶ್ಚಲ್, ಎಸ್. , ಕೆ.ಸಿ ಕಾರಿಯಪ್ಪ, ಜಗದೀಶ ಸುಚಿತ್, ರೋಹನ್ ಕದಂ, ವಿ ಕೌಶಿಕ್, ಪ್ರತೀಕ್ ಜೈನ್, ಶರತ್ ಬಿ.ಆರ್, ರಿತೇಶ್ ಭಟ್ಕಳ್, ದರ್ಶನ್ ಎಂ.ಬಿ, ವಿದ್ಯಾಧರ್ ಪಾಟೀಲ್

ತಮಿಳುನಾಡು ತಂಡ: ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವಿಜಯ್ ಶಂಕರ್ (ನಾಯಕ), ಹರಿ ನಿಶಾಂತ್, ಎನ್ ಜಗದೀಸನ್, ಬಾಬಾ ಇಂದ್ರಜಿತ್, ವಾಷಿಂಗ್ಟನ್ ಸುಂದರ್, ಸಂಜಯ್ ಯಾದವ್, ಶಾರುಖ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಮಣಿಮಾರನ್ ಸಿದ್ಧಾರ್ಥ್, ಸಂದೀಪ್ ವಾರಿಯರ್, ಕೌಶಿಕ್ ಗಾಂಧಿ, ಮುರುಗನ್ ಅಶ್ವಿನ್, ಎಂ ಮಹಮ್ಮದ್, ಲಕ್ಷ್ಮೇಶ ಸೂರ್ಯಪ್ರಕಾಶ್, ಜಗತೀಶನ್ ಕೌಸಿಕ್, ಗಂಗಾ ಶ್ರೀಧರ್ ರಾಜು, ಆರ್ ಸಿಲಂಬರಸನ್, ಪಿ ಸರವಣ ಕುಮಾರ್, ಸಾಯಿ ಸುದರ್ಶನ್

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯಕ್ಕೆ ಮಳೆ ಅಡ್ಡಿ | Oneindia Kannada

Story first published: Tuesday, December 21, 2021, 9:28 [IST]
Other articles published on Dec 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X