ಗವಾಸ್ಕರ್ ದಾಖಲೆ ಮುರಿದ ನಾಯಕ ವಿರಾಟ್ ಕೊಹ್ಲಿ

Posted By:

ನಾಗ್ಪುರ್, ನವೆಂಬರ್ 26: ಪ್ರವಾಸಿ ಶ್ರೀಲಂಕಾ ವಿರುದ್ಧ ಎರದನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ.

ದಾಖಲೆಗಳ ಸರದಾರ ಕೊಹ್ಲಿಗೆ 50ನೇ ಶತಕದ ಸಂಭ್ರಮ

ಶತಕ ಬಾರಿಸಿದ ಕೊಹ್ಲಿ ಅವರು ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಗವಾಸ್ಕರ್ ಅವರು ನಾಯಕನಾಗಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆ ಹೊಂದಿದ್ದರು.

ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ 105 ಬಾರಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಮ್ಮ 50ನೇ ಶತಕ ಪೂರೈಸಿದ್ದರು. ಇದರ ಜತೆಗೆ ನಾಯಕನಾಗಿ 11ನೇ ಶತಕ ಬಾರಿಸಿದ್ದರು. ಈ ಮೂಲಕ ಗವಾಸ್ಕರ್ ಅವರ ಸಮಕ್ಕೆ ನಿಂತಿದ್ದರು.

2ನೇ ಟೆಸ್ಟ್ : ಮೂರನೇ ದಿನದಂದು ಶತಕ ಬಾರಿಸಿದ ಕೊಹ್ಲಿ

ಈಗ ನಾಗ್ಪುರ್ ನಲ್ಲಿ ನಡೆದಿರುವ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ವೃತ್ತಿ ಜೀವನದ 19ನೇ ಹಾಗೂ ಒಟ್ಟಾರೆ 51ನೇ ಶತಕ ಬಾರಿಸಿದ್ದಾರೆ. ಭಾರತದ ನಾಯಕನಾಗಿ 12ನೇ ಶತಕ ಗಳಿಸಿದ್ದು, ಎಲ್ಲರಿಗಿಂತ ಮುಂದಿದ್ದಾರೆ.

ವಿರಾಟ್ ಕೊಹ್ಲಿ ಸಾಧನೆ

ವಿರಾಟ್ ಕೊಹ್ಲಿ ಸಾಧನೆ

ಈ ಶತಕದ ನೆರವಿನಿಂದ ಕೊಹ್ಲಿ ಟೆಸ್ಟ್ ನಲ್ಲಿ 19 ಹಾಗೂ ಏಕದಿನ ಕ್ರಿಕೆಟ್ 32 ಶತಕಗಳಿಸಿದ್ದಾರೆ. ಒಟ್ಟು 51 ಶತಕ ಬಾರಿಸಿದ್ದು, ಅತಿ ಹೆಚ್ಚು ಶತಕ ಗಳಿಸಿರುವ ಭಾರತೀಯ ಆಟಗಾರರ ಪೈಕಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ನಂತರದ ಸ್ಥಾನದಲ್ಲಿದ್ದಾರೆ.

ಕೊಹ್ಲಿ ಅವರು 31 ಪಂದ್ಯಗಳಲ್ಲಿ 49 ಇನ್ನಿಂಗ್ಸ್ ಗಳಿಂದ 12 ಶತಕ ಹಾಗೂ 4 ಅರ್ಧಶತಕ ಗಳಿಸಿದ್ದಾರೆ.

ಸುನಿಲ್ ಗವಾಸ್ಕರ್

ಸುನಿಲ್ ಗವಾಸ್ಕರ್

ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅವರು ನಾಯಕರಾಗಿ 11 ಶತಕ ಗಳಿಸಿದ್ದು ಇಲ್ಲಿ ತನಕ ದಾಖಲೆಯಾಗಿತ್ತು.

47 ಪಂದ್ಯಗಳಿಂದ 74 ಇನ್ನಿಂಗ್ಸ್ ಗಳಲ್ಲಿ 11 ಶತಕ, 14 ಅರ್ಧಶತಕಗಳನ್ನು ಗವಾಸ್ಕರ್ ಗಳಿಸಿದ್ದಾರೆ.

ಮೊಹಮ್ಮದ್ ಅಜರುದ್ದೀನ್

ಮೊಹಮ್ಮದ್ ಅಜರುದ್ದೀನ್

ಮೊಹಮ್ಮದ್ ಅಜರುದ್ದೀನ್ ಅವರು 47 ಪಂದ್ಯಗಳ 68 ಇನ್ನಿಂಗ್ಸ್ ಗಳಲ್ಲಿ 9 ಶತಕ ಹಾಗೂ 9 ಅರ್ಧಶತಕ ಗಳಿಸಿ, ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್

ಒಟ್ಟಾರೆ ಅತ್ಯಧಿಕ ಶತಕಗಳ ವೀರ ಸಚಿನ್ ತೆಂಡೂಲ್ಕರ್ ಅವರು ನಾಯಕರಾಗಿ 25 ಪಂದ್ಯಗಳ 43 ಇನ್ನಿಂಗ್ಸ್ ಗಳಿಂದ 7 ಶತಕ ಹಾಗೂ 7 ಅರ್ಧಶತಕ ಗಳಿಸಿದ್ದಾರೆ.

ಎಂಎಸ್ ಧೋನಿ

ಎಂಎಸ್ ಧೋನಿ

ಎಂಎಸ್ ಧೋನಿ ಅವರು ಟೆಸ್ಟ್ ನಾಯಕನಾಗಿ 60 ಪಂದ್ಯಗಳ 96 ಇನ್ನಿಂಗ್ಸ್ ಗಳಿಂದ 5 ಶತಕ ಹಾಗೂ 24 ಅರ್ಧಶತಕಗಳನ್ನು ಗಳಿಸಿದ್ದಾರೆ.

* ಸೌರವ್ ಗಂಗೂಲಿ 5 ಶತಕ, ಪಟೌಡಿ 5 ಶತಕ ಗಳಿಸಿದ್ದರೆ, ರಾಹುಲ್ ದ್ರಾವಿಡ್ 4 ಶತಕ ಗಳಿಸಿದ್ದಾರೆ

Story first published: Sunday, November 26, 2017, 11:26 [IST]
Other articles published on Nov 26, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ