ಬ್ರಿಯಾನ್ ಲಾರಾ ದಾಖಲೆ ಸಮಕ್ಕೆ ನಿಂತ ಕೊಹ್ಲಿ

Posted By:

ನಾಗ್ಪುರ್, ನವೆಂಬರ್ 26: ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರು ಶತಕ, ದ್ವಿಶತಕ ಗಳನ್ನು ಸಿಡಿಸುತ್ತಿದ್ದಂತೆ ಅಂಕಿ ಅಂಶ ಕಲೆ ಹಾಕುವವರಿಗೆ ಹಬ್ಬ ಶುರುವಾಗುತ್ತದೆ. ಕ್ರಿಕೆಟ್ ದಿಗ್ಗಜರ ದಾಖಲೆಗಳನ್ನು ಮುರಿದು ಕೊಹ್ಲಿ ಮುನ್ನುಗ್ಗುತ್ತಿದ್ದಾರೆ.

ಗವಾಸ್ಕರ್ ದಾಖಲೆ ಮುರಿದ ನಾಯಕ ವಿರಾಟ್ ಕೊಹ್ಲಿ

ನಾಗ್ಪುರ್‌ ಟೆಸ್ಟ್‌ ಪಂದ್ಯದ ಮೂರನೇ ದಿನವಾದ ಇಂದು ನಾಯಕ ವಿರಾಟ್ ಕೊಹ್ಲಿ ಅವರು ಪಂದ್ಯದ 168ನೇ ಓವರ್ ನಲ್ಲಿ ತಂಡದ ಮೊತ್ತ 566/4 ಸ್ಕೋರ್ ಆಗಿದ್ದಾಗ ಸಿಂಗಲ್ ತೆಗೆದುಕೊಂಡು 200ರನ್ ಗಡಿ ದಾಟಿದರು.

Virat Kohli equals Brian Lara's record for most Test double hundreds as captain

ಅಂತಿಮವಾಗಿ 213ರನ್ ಗಳಿಸಿ ಔಟಾದರು. ಈ ಮೂಲಕ ನಾಯಕನಾಗಿ ಬ್ರಿಯಾನ್‌ ಲಾರಾ ಅವರ ಹೆಸರಿನಲ್ಲಿದ್ದ ವಿಶ್ವದಾಖಲೆ ಸಮಕ್ಕೆ ಕೊಹ್ಲಿ ನಿಂತಿದ್ದಾರೆ.

ವೆಸ್ಟ್‌ ಇಂಡೀಸ್‌ ತಂಡದ ನಾಯಕರಾಗಿ ಬ್ರಿಯಾನ್ ಲಾರಾ ಅವರು ಐದು ಬಾರಿ ಇನ್ನೂರಕ್ಕೂ ಅಧಿಕ ರನ್‌ಗಳನ್ನು ಹೊಡೆದಿದ್ದರು. ಈಗ ಕೊಹ್ಲಿ ಕೂಡಾ ಭಾರತದ ನಾಯಕರಾದ ಬಳಿಕ ಐದು ಬಾರಿ 200ರನ್ ಗಡಿ ದಾಟಿದ್ದಾರೆ.

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಕೊಹ್ಲಿ ದ್ವಿಶತಕ ಸಿಡಿಸಿದ್ದಾರೆ.

ದಾಖಲೆಗಳ ಸರದಾರ ಕೊಹ್ಲಿಗೆ 50ನೇ ಶತಕದ ಸಂಭ್ರಮ

ಈ ಹಿಂದೆ ವೆಸ್ಟ್‌ ಇಂಡೀಸ್‌, ನ್ಯೂಜಿಲೆಂಡ್‌, ಇಂಗ್ಲೆಂಡ್‌ ಹಾಗೂ ಬಾಂಗ್ಲಾದೇಶದ ವಿರುದ್ಧ ಕೊಹ್ಲಿ ದ್ವಿಶತಕ ಬಾರಿಸಿದ್ದಾರೆ.

ಇದಲ್ಲದೆ ಒಂದು ಕ್ಯಾಲೆಂಡರ್ ವರ್ಷದಲ್ಲಿ 10 ಶತಕ ಗಳಿಸಿದ ಮೊದಲ ನಾಯಕ ಎನಿಸಿಕೊಂಡಿದ್ದಾರೆ.

Story first published: Sunday, November 26, 2017, 18:02 [IST]
Other articles published on Nov 26, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ