ದಾಖಲೆಗಳ ಸರದಾರ ಕೊಹ್ಲಿಗೆ 50ನೇ ಶತಕದ ಸಂಭ್ರಮ

Posted By:

ಕೋಲ್ಕತಾ, ನವೆಂಬರ್ 20: ಈಡನ್‌ ಗಾರ್ಡನ್‌ ಮೈದಾನದಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ ಕ್ರಿಕೆಟ್‌ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ. ಆದರೆ, ಐದನೇ ಹಾಗೂ ಕೊನೆಯ ದಿನದಂದು ನಾಯಕ ವಿರಾಟ್‌ ಕೊಹ್ಲಿ ಶತಕ ಸಿಡಿಸಿ, ದಾಖಲೆ ಬರೆದಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50ನೇ ಶತಕ ಬಾರಿಸಿದ ಆಟಗಾರ ಎನಿಸಿಕೊಂಡರು.ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಯಕನಾಗಿ 11ನೇ ಬಾರಿ ಶತಕ ದಾಖಲಿಸಿದರು.

Virat Kohli's staggering success story continues with 50th century

ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದ ಕೊಹ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ 105 ರನ್ ಗಳಿಸಿ ಅಜೇಯರಾಗಿ ಉಳಿದರು.

ಕೊಹ್ಲಿಯ ಶತಕದ ನೆರವಿನಿಂದ ಭಾರತ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ ನಷ್ಟಕ್ಕೆ 352 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಲಂಕಾ ತಂಡಕ್ಕೆ 231 ರನ್‌ಗಳ ಗುರಿ ನೀಡಲಾಗಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ ತಂಡ 75/7 ಸ್ಕೋರ್ ಮಾಡಿದ್ದಾಗ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳಿಸಿದವರ ಪಟ್ಟಿ:

ಸಚಿನ್‌ ತೆಂಡೂಲ್ಕರ್‌ (ಭಾರತ) 100
ರಿಕಿ ಪಾಂಟಿಂಗ್‌ (ಆಸ್ಟ್ರೇಲಿಯಾ) 71
ಕುಮಾರ ಸಂಗಕ್ಕಾರ (ಶ್ರೀಲಂಕಾ) 63
ಜಾಕ್‌ ಕಾಲಿಸ್‌ (ದಕ್ಷಿಣ ಆಫ್ರಿಕಾ) 62
ಹಾಶೀಂ ಆಮ್ಲಾ (ದಕ್ಷಿಣ ಆಫ್ರಿಕಾ) 54
ಮಹೇಲ ಜಯವರ್ಧನೆ (ಶ್ರೀಲಂಕಾ) 54
ಬ್ರಿಯಾನ್‌ ಲಾರಾ (ವೆಸ್ಟ್‌ ಇಂಡೀಸ್‌)53
ವಿರಾಟ್‌ ಕೊಹ್ಲಿ (ಭಾರತ)50
ರಾಹುಲ್‌ ದ್ರಾವಿಡ್‌ (ಭಾರತ)48
ಎಬಿ ಡಿ ವಿಲಿಯರ್ಸ್‌ (ದಕ್ಷಿಣ ಆಫ್ರಿಕಾ)46

Story first published: Monday, November 20, 2017, 21:02 [IST]
Other articles published on Nov 20, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ