ವಿರಾಟ್‌ ಕೊಹ್ಲಿ or ಸ್ಟೀವ್ ಸ್ಮಿತ್?: ಇಂಗ್ಲೆಂಡ್‌ ಕ್ರಿಕೆಟಿಗ ಆರಿಸಿದ್ದು ಇವರನ್ನ!

Michael Vaughan vouches for Virat Kohli as the best all-format batsman | Virat Kohli | ICC | Cricket

ಬೆಂಗಳೂರು, ಜನವರಿ 20: ಸದ್ಯ ಕ್ರಿಕೆಟ್‌ ಜಗತ್ತಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಬೆಸ್ಟ್ ಬ್ಯಾಟ್ಸ್‌ಮನ್ ಯಾರು ಅನ್ನೋ ಪ್ರಶ್ನೆ ಕ್ರಿಕೆಟ್‌ ವಲಯದಲ್ಲಿ ಆಗೀಗ ಕೇಳಿಬರುತ್ತಲೇಯಿದೆ. ಒಂದೊಂದು ಕ್ರಿಕೆಟ್‌ ಮಾದರಿಯಲ್ಲಿ ಒಬ್ಬೊಬ್ಬ ಮಿನುಗಿ 'ನಾನೇ ಬೆಸ್ಟು' ಅಂತ ಸಾರಿ ಹೇಳುತ್ತಿದ್ದಾರೆ ಕೂಡ.

ಹೇಡನ್-ಗಿಲ್‌ಕ್ರಿಸ್ಟ್‌ ದಾಖಲೆ ಮುರಿದ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ!

ಜಗತ್ತಿನಲ್ಲಿ ಸದ್ಯ ಸಕ್ರಿಯ ಆಟಗಾರರ ಸಾಲಿನಲ್ಲಿ ಬೆಸ್ಟ್ ಬ್ಯಾಟ್ಸ್‌ಮನ್‌ಗಳಲ್ಲಿ ಹೆಚ್ಚು ಕೇಳಿಬರುತ್ತಿರುವ ಹೆಸರೆಂದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ. ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಕೂಡ ಬೆಸ್ಟ್ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಕೊಹ್ಲಿಗೆ ಫೈಟ್‌ ನೀಡುತ್ತಿರುವುದೂ ಸುಳ್ಳಲ್ಲ.

ಐಸಿಸಿ ಏಕದಿನ ಶ್ರೇಯಾಂಕ: ಅಗ್ರಸ್ಥಾನದಲ್ಲಿ ಮುಂದುವರಿದ ವಿರಾಟ್, ರೋಹಿತ್

ಇತ್ತೀಚೆಗೆ ಮುಕ್ತಾಯಗೊಂಡ ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ಕೊಹ್ಲಿ (16+78+89 ರನ್) ಮತ್ತು ಸ್ಮಿತ್ (ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ ಸಿಕ್ಕಿರಲಿಲ್ಲ, 98+131 ರನ್) ಇಬ್ಬರೂ ಉತ್ತಮ ಪ್ರದರ್ಶನ ನೀಡಿದ್ದರು. ಇದಕ್ಕೂ ಮುನ್ನ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಸ್ಮಿತ್ ಭರ್ಜರಿ ಬ್ಯಾಟಿಂಗ್‌ಗಾಗಿ ವಿಶ್ವದ ಗಮನ ಸೆಳೆದಿದ್ದರು. ಹಾಗಾದರೆ ನಿಜಕ್ಕೂ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಬೆಸ್ಟ್ ಬ್ಯಾಟ್ಸ್‌ಮನ್ ಯಾರು?

ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಬೆಸ್ಟ್ ಬ್ಯಾಟ್ಸ್‌ಮನ್ ಯಾರು ಎಂಬ ಪ್ರಶ್ನೆಯನ್ನು ಇಂಗ್ಲೆಂಡ್‌ ಮಾಜಿ ನಾಯಕ ಮೈಕೆಲ್ ವಾಘನ್ ಎದುರಿಗಿಟ್ಟಾಗ ಅವರು ಕೊಟ್ಟ ಉತ್ತರವೇನುಗೊತ್ತಾ? 'ವಿರಾಟ್ ಕೊಹ್ಲಿ!'. ಬೆಸ್ಟ್ ಬ್ಯಾಟ್ಸ್‌ಮನ್ ಕೊಹ್ಲಿ ಎಂದು ವಾಘನ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಟಿ20 ಇತಿಹಾಸದಲ್ಲೆ ಕೆಟ್ಟ ದಾಖಲೆ ಬರೆದ ಡಿ ವಿಲಿಯರ್ಸ್ ತಂಡ: ವೀಡಿಯೋ

ಐಲ್ಯಾಂಡ್ ಕ್ರಿಕೆಟ್‌ ಡಾಟ್‌ ಎಲ್‌ಕೆ (islandcricket.lk) ನಿರ್ವಾಹಕರಾಗಿರುವ, ಮೂಲತಃ ಶ್ರೀಲಂಕಾದವರಾದ ಡೇನಿಯಲ್ ಅಲೆಕ್ಸಾಂಡರ್ ಟ್ವೀಟೊಂದರಲ್ಲಿ, 'ಈ ದಿನಗಳಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಸ್ಟೀವ್ ಸ್ಮಿತ್ ಉತ್ತಮ ಬ್ಯಾಟ್ಸ್‌ಮನ್. ಅದನ್ನು ಮತ್ತೆ ಸಾಬೀತುಪಡಿಸಿದ್ದಾರೆ,' ಎಂದು ಬರೆದುಕೊಂಡಿದ್ದರು. ಇದಕ್ಕೆ ಮೈಕೆಲ್ ವಾಘನ್, 'ಒಪ್ಪಲಾರೆ.. ಎಲ್ಲದರಲ್ಲೂ ವಿರಾಟ್ ಬೆಸ್ಟ್,' ಎಂದು ಪ್ರತಿಕ್ರಿಯಿಸಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, January 20, 2020, 19:40 [IST]
Other articles published on Jan 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X