ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ನಮ್ಮದೇ ಜೆರ್ಸಿ ಧರಿಸಿ ಆಡೋ ಮಹಿಳೆಯರನ್ನು ನೋಡುವಾಗ ಹೆಮ್ಮೆಯೆನಿಸುತ್ತೆ'

Virat Kohli sends best wishes to Women in Blue

ನವದೆಹಲಿ, ನವೆಂಬರ್ 15: ಗಯಾನಾದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ವಿಶ್ವ ಟಿ20 ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತದ ಮಹಿಳಾ ತಂಡಕ್ಕೆ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಶುಭ ಕೋರಿದ್ದಾರೆ. ಜೊತೆಗೆ ಮಹಿಳಾ ತಂಡವನ್ನು ಬೆಂಬಲಿಸಿ ಕೊಹ್ಲಿ ಪ್ರಚಾರವನ್ನು ಆರಂಭಿಸಿದ್ದಾರೆ.

18 ಆಟಗಾರರನ್ನು ಉಳಿಸಿಕೊಂಡು, 10 ಕೈಬಿಟ್ಟ ಮುಂಬೈ ಇಂಡಿಯನ್ಸ್18 ಆಟಗಾರರನ್ನು ಉಳಿಸಿಕೊಂಡು, 10 ಕೈಬಿಟ್ಟ ಮುಂಬೈ ಇಂಡಿಯನ್ಸ್

ಗುರುವಾರ (ನವೆಂಬರ್ 15) ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿಯ 13ನೇ ಪಂದ್ಯದಲ್ಲಿ ಗ್ರೂಪ್ ಬಿಯಲ್ಲಿರುವ ಭಾರತ ತಂಡ, ಐರ್ಲೆಂಡ್ ತಂಡದ ಸವಾಲು ಸ್ವೀಕರಿಸುವುದರಲ್ಲಿದೆ. ಐರ್ಲೆಂಡ್ ವನಿತೆಯನ್ನು ಸೋಲಿಸುವ ವಿಶ್ವಾಸದಲ್ಲಿ ಭಾರತ ತಂಡವಿದೆ.

ಎಂಎಸ್‌ಎಲ್‌: ಮತ್ತೆ ಕ್ರಿಕೆಟ್ ರಸದೌತಣ ಬಡಿಸಲಿದ್ದಾರೆ ಎಬಿ ಡಿ ವಿಲಿಯರ್ಸ್!ಎಂಎಸ್‌ಎಲ್‌: ಮತ್ತೆ ಕ್ರಿಕೆಟ್ ರಸದೌತಣ ಬಡಿಸಲಿದ್ದಾರೆ ಎಬಿ ಡಿ ವಿಲಿಯರ್ಸ್!

ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಕೊಹ್ಲಿ ಬೆಂಬಲ ಸೂಚಿಸುವ ಜೊತೆ ಜೊತೆಗೆ ಲಿಂಗ ತಾರತಮ್ಯ ವಿರೋಧಿಸಿ ಅಭಿಯಾನವನ್ನೂ ಆರಂಭಿಸಿದ್ದಾರೆ. ಹ್ಯಾಷ್‌ಟ್ಯಾಗ್ ನೊಂದಿಗೆ ಕೊಹ್ಲಿ ಶುರು ಮಾಡಿರುವ ಈ ಅಭಿಯಾನ ಟ್ರೆಂಡ್ ಆಗಿದೆ, ಆಗುತ್ತಿದೆ.

ತಾರತಮ್ಯ ವಿರೋಧಿ ಅಭಿಯಾನ

ತಾರತಮ್ಯ ವಿರೋಧಿ ಅಭಿಯಾನ

ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಕೋರಿ ಕೊಹ್ಲಿ ಲಿಂಗ ತಾರತಮ್ಯ ವಿರೋಧಿ '#JerseyKnowsNoGender' ಅಭಿಯಾನ ಶುರು ಮಾಡಿದ್ದಾರೆ. 'ಜೆರ್ಸಿ ಒಂದೇ ಗೊತ್ತು, ಲಿಂಗ ಗೊತ್ತಿಲ್ಲ' ಎನ್ನುವ ಈ ಅಭಿಯಾನ, 'ಭಾರತದ ಜೆರ್ಸಿಯೊಂದಿಗೆ ಆಡುವ ಎಲ್ಲರೂ ನಮ್ಮವರೇ; ಅಲ್ಲಿ ಲಿಂಗ ಬೇಧವಿಲ್ಲ, ಜಾತಿಬೇಧವಿಲ್ಲ, ಮೇಲು-ಕೀಳಿಲ್ಲ' ಎಂಬರ್ಥವನ್ನು ಸಾರುತ್ತಿದೆ.

ಸೋಲಿಲ್ಲದ ತಂಡ

ಸೋಲಿಲ್ಲದ ತಂಡ

ಐಸಿಸಿ ಮಹಿಳಾ ವಿಶ್ವ ಟಿ20ಯಲ್ಲಿ ಆಡುತ್ತಿರುವ ಭಾರತ ತಂಡ ಟೂರ್ನಿಯಲ್ಲಿ ಸೋಲು ಕಂಡಿಲ್ಲ. ಭಾರತ ಎರಡು ಪಂದ್ಯಗಳನ್ನಾಡಿದ್ದು, ಕ್ರಮವಾಗಿ ನ್ಯೂಜಿಲ್ಯಾಂಡ್ ವಿರುದ್ಧ ಮತ್ತು ಪಾಕಿಸ್ತಾನ ವಿರುದ್ಧ ಜಯ ಸಾಧಿಸಿತ್ತು. ಆರಂಭಿಕ ಪಂದ್ಯದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಮಿಂಚಿದ್ದರೆ, ಎರಡನೇ ಪಂದ್ಯದಲ್ಲಿ ಮಿಥಾಲಿ ಆಕರ್ಷಣೆ ಮೂಡಿಸಿದ್ದರು.

ಅತೀವ ಹೆಮ್ಮೆಯೆನಿಸಯತ್ತೆ

ಅತೀವ ಹೆಮ್ಮೆಯೆನಿಸಯತ್ತೆ

ಅಭಿಯಾನದ ಬಗ್ಗೆ ಮಾತನಾಡುತ್ತ ಕೊಹ್ಲಿ, 'ನಾವು ಧರಿಸುವ ಬಣ್ಣದ, ಅದೇ ರೀತಿಯ ಜೆರ್ಸಿ ಧರಿಸಿ ನಮ್ಮ ದೇಶಕ್ಕಾಗಿ ಆಡುವ ಮಹಿಳಾ ತಂಡವನ್ನು ನೋಡುವಾಗ ನನಗೆ ಅತೀವ ಹೆಮ್ಮೆಯೆನಿಸುತ್ತೆ. ಭಾರತವನ್ನು ಪ್ರತಿನಿಧಿಸಿ ಈ ಜರ್ಸಿ ಧರಿಸೋದೇ ಒಂದು ಹೆಮ್ಮೆಯ ಕ್ಷಣ' ಎಂದರು.

ನೀವ್ಯಾರೋ ಕೇಳೋಲ್ಲ

ನೀವ್ಯಾರೋ ಕೇಳೋಲ್ಲ

'ನಾವು ಧರಿಸುತ್ತೇವಲ್ಲ ಈ ಭಾರತದ ಜೆರ್ಸಿ? ಇದು ನೀನ್ಯಾರು ಅಂತ ಕೇಳಲ್ಲ. ಎಲ್ಲಿಂದ ಬಂದಿದ್ದೀಯ ಎಂದಾಗಲಿ, ನೀನು ಗಂಡೋ-ಹೆಣ್ಣೋ ಎಂದಾಗಲಿ ಕೇಳೋದೇಯಿಲ್ಲ. ಈ ಜೆರ್ಸಿ ನೀನು ಭಾರತೀಯ ಎಂಬ ಹೆಮ್ಮೆಯೊಂದನ್ನಷ್ಟೇ ಪಿಸುಗುಡುತ್ತಿರುತ್ತೆ' ಎಂದು ಕೊಹ್ಲಿ ಹೇಳಿದರು.

Story first published: Thursday, November 15, 2018, 18:17 [IST]
Other articles published on Nov 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X