ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗೂಗಲ್‌ 2015 ಸರ್ಚ್: ವಿರಾಟ್ ಕೊಹ್ಲಿಗೆ ಟಾಪ್ ಸ್ಥಾನ

By Mahesh

ಬೆಂಗಳೂರು, ಡಿ.17: 2015ರಲ್ಲಿ ಗೂಗಲ್‌ ಸರ್ಚ್ ಇಂಜಿನ್ ನಲ್ಲಿ ಅತಿ ಹೆಚ್ಚು ಬಾರಿ ಯಾವ ಕ್ರೀಡಾಪಟುವಿಗಾಗಿ ಹುಡುಕಾಟ ನಡೆಸಲಾಗಿದೆ ಎಂಬ ವಿಷಯವನ್ನು ಪ್ರಕಟಿಸಲಾಗಿದೆ. ಭಾರತದ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಫುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿ ಅವರನ್ನು ಹಿಂದೆ ಹಾಕಿ ನಂ.1 ಸ್ಥಾನಕ್ಕೇರಿದ್ದಾರೆ.

ಗೂಗಲ್ ಸರ್ಚ್ ಇಂಜಿನ್ ನಲ್ಲಿ ಅತಿ ಹೆಚ್ಚು ಹುಡಕಲ್ಪಟ್ಟಿರುವ ಸರ್ಚ್ ರಿಸಲ್ಟ್ ನ ಟಾಪ್ 10 ಪಟ್ಟಿಯಲ್ಲಿ ಆರು ಭಾರತೀಯ ಕ್ರೀಡಾಪಟುಗಳಿರುವುದು ವಿಶೇಷ.

ಕ್ರಿಕೆಟ್ ನಿಂದ ನಿವೃತ್ತಿಯಾಗಿ 2 ವರ್ಷ ಕಳೆದರೂ ಸಚಿನ್ ತೆಂಡೂಲ್ಕರ್ ಅವರು ಜನಪ್ರಿಯತೆ ಕುಗ್ಗಿಲ್ಲ. ಗೂಗಲ್ ಸರ್ಚ್‌ನಲ್ಲಿ ಭಾರತದ ಏಕದಿನ ಕ್ರಿಕೆಟ್ ನಾಯಕ ಎಂಎಸ್ ಧೋನಿಯನ್ನು ಹಿಂದಿಕ್ಕಿ ಸಚಿನ್ ಮುಂದಿದ್ದಾರೆ. ತೆಂಡೂಲ್ಕರ್ ಅವರು 3ನೇ ಸ್ಥಾನ ಹಾಗೂ ಧೋನಿ 4ನೇ ಸ್ಥಾನದಲ್ಲಿದ್ದಾರೆ. ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ 2015 ಅತ್ಯಂತ ಯಶಸ್ಸು ತಂಪುಕೊಟ್ಟ ವರ್ಷವಾಗಿದ್ದು, 7ನೇ ಸ್ಥಾನದಲ್ಲಿದ್ದಾರೆ.

Virat Kohli tops the Most searched Sports Persons Google India List

ಕ್ರಿಕೆಟಿಗರಾದ ರೋಹಿತ್ ಶರ್ಮ ಹಾಗೂ ಯುವರಾಜ್ ಸಿಂಗ್ ಕ್ರಮವಾಗಿ 8 ಹಾಗೂ 9ನೇ ಸ್ಥಾನದಲ್ಲಿದ್ದಾರೆ. ಲಿಯೊನೆಲ್ ಮೆಸ್ಸಿ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊರಲ್ಲಿ ಯಾರು ನಂ.1 ಫುಟ್ಬಾಲ್ ಆಟಗಾರ ಎನ್ನುವ ಚರ್ಚೆ ಈಗಲೂ ನಡೆಯುತ್ತಿದೆ. ಆದರೆ, ಈ ಇಬ್ಬರು ಈ ವರ್ಷದ ಗೂಗಲ್ ಸರ್ಚ್‌ನಲ್ಲಿ 2 ಹಾಗೂ 5ನೇ ಸ್ಥಾನ ಪಡೆದಿದ್ದಾರೆ.

ಟಾಪ್ 10 ಪಟ್ಟಿ ಹೀಗಿದೆ:
1. ವಿರಾಟ್ ಕೊಹ್ಲಿ
2. ಲಿಯೊನೆಲ್ ಮೆಸ್ಸಿ
3. ಸಚಿನ್ ತೆಂಡೂಲ್ಕರ್
4. ಎಂಎಸ್ ಧೋನಿ
5. ಕ್ರಿಶ್ಚಿಯಾನೊ ರೊನಾಲ್ಡೊ
6. ರೋಜರ್ ಫೆಡರರ್
7. ಸಾನಿಯಾ ಮಿರ್ಜಾ
8. ರೋಹಿತ್ ಶರ್ಮ
9. ಯುವರಾಜ್ ಸಿಂಗ್
10. ನೋವಾಕ್ ಜೋಕೊವಿಕ್

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X