ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಟಾಪ್ 5 ಏಕದಿನ ಕ್ರಿಕೆಟ್ ಇನ್ನಿಂಗ್ಸ್

 Virat Kohli turns 30: Heres his top 5 ODI innings

ಬೆಂಗಳೂರು, ನವೆಂಬರ್ 05: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಇಂದು 30ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕ್ರಿಕೆಟ್ ನ ಎಲ್ಲಾ ಮಾದರಿಗೂ ಸಲ್ಲಬಲ್ಲ ಆಟಗಾರನಾಗಿ ಕೊಹ್ಲಿ ಬೆಳೆದಿದ್ದಾರೆ. ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 10,000ರನ್ ಗಡಿಯನ್ನು ದಾಟಿ, ದಾಖಲೆ ಬರೆದಿದ್ದಾರೆ.

ಕ್ಯಾಪ್ಟನ್ ವಿರಾಟ್ ಕೊಹ್ಲಿ ಟಾಪ್ 05 ಟೆಸ್ಟ್ ಇನ್ನಿಂಗ್ಸ್

ಸಚಿನ್ ತೆಂಡೂಲ್ಕರ್ 10,000 ರನ್ ಗಡಿ ದಾಟಿಸಲು 254 ಇನ್ನಿಂಗ್ಸ್ ಗಳನ್ನು ಬಳಸಿಕೊಂಡಿದ್ದರೆ, ಕೊಹ್ಲಿ ಕೇವಲ 205 ಇನ್ನಿಂಗ್ಸ್ ಗಳಲ್ಲೇ 10,000 ರನ್ ಗಡಿ ದಾಟಿ ಸಚಿನ್ ದಾಖಲೆ ಮೀರಿಸಿದ್ದಾರೆ.

ಕೊಹ್ಲಿ ಹುಟ್ಟುಹಬ್ಬದ ಸಂತಸದಲ್ಲಿ ಮೈಖೇಲ್ ನಿಂದ ವಿಶೇಷ ಲೇಖನ ಇಲ್ಲಿದೆ.. ಟಾಪ್ 05 ಏಕದಿನ ಇನ್ನಿಂಗ್ಸ್ ಗಳು ಇಲ್ಲಿವೆ...

#1, 133, ಶ್ರೀಲಂಕಾ ವಿರುದ್ಧ 2012
ಹೋಬಾರ್ಟ್ ನ ಬ್ಲಂಡ್ ಸ್ಟೋನ್ ಅರೀನಾದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ ಅವರು 133 ರನ್ ಚೆಚ್ಚಿದರು. ಈ ಪಂದ್ಯದಲ್ಲಿ ಶ್ರೀಲಂಕಾದ ವಿರುದ್ಧ ಗೆಲುವಿನ ಜೊತೆಗೆ ಬೋನಸ್ ಅಂಕ ಪಡೆದರೆ ಮಾತ್ರ ಭಾರತವು ಫೈನಲ್ ತಲುಪಲು ಸಾಧ್ಯವಿತ್ತು. 320/4 ಗಳಿಸಿದ ಶ್ರೀಲಂಕಾಕ್ಕೆ ಫೈನಲ್ ನಲ್ಲಿ ಆಡುವ ಕನಸನ್ನು ಭಗ್ನಗೊಳಿಸಿದ್ದು ಕೊಹ್ಲಿ.

ಕೊಹ್ಲಿಗೆ 30: 'ನಿನ್ನನ್ನು ಹುಟ್ಟಿಸಿದ ದೇವರಿಗೆ ಥ್ಯಾಂಕ್ಸ್‌' ಎಂದ ಅನುಷ್ಕಾ

ಸಚಿನ್ ತೆಂಡೂಲ್ಕರ್ ಹಾಗೂ ವೀರೆಂದ್ರ ಸೆಹ್ವಾಗ್ ವಿಕೆಟ್ ಉರುಳಿದ ನಂತರ ಕಣಕ್ಕಿಳಿದ ಕೊಹ್ಲಿ ಅವರು 86 ಎಸೆತಗಳಲ್ಲಿ 133ರನ್ (16 ಬೌಂಡರಿ ಹಾಗೂ 6 ಸಿಕ್ಸರ್) ಬಾರಿಸಿ, 36.4 ಓವರ್ ಗಳಲ್ಲಿ ಟಾರ್ಗೆಟ್ ದಾಟಲು ನೆರವಾದರು. ಲಸಿತ್ ಮಾಲಿಂಗ 7.4-0-96-1ಗೆ ಭರ್ಜರಿ ತೆತ್ತರು. ಮಿಕ್ಕ ನಾಲ್ಕು ಟಾಪ್ 4 ಇನ್ನಿಂಗ್ಸ್ ಮುಂದಿದೆ...

#2 183 ವಿರುದ್ಧ ಪಾಕಿಸ್ತಾನ, 2012

#2 183 ವಿರುದ್ಧ ಪಾಕಿಸ್ತಾನ, 2012

ಆಸ್ಟ್ರೇಲಿಯಾದ ಹೋಬರ್ಟ್ ನಲ್ಲಿ ನಡೆದಿದ್ದ ಪಂದ್ಯದ ಕೆಲವೇ ವಾರದ ಬಳಿಕ ಕೊಹ್ಲಿ ಪಾಕಿಸ್ತಾನ ವಿರುದ್ಧ 183 ರನ್ ಬಾರಿಸಿದ್ದರು. ಢಾಕಾದಲ್ಲಿ ನಡೆದಿದ್ದ ಏಷ್ಯಾ ಕಪ್ 2012ರ ಪಂದ್ಯದಲ್ಲಿ ಪಾಕ್ 329 ರನ್ ಬಾರಿಸಿ ಗೆಲುವನ್ನು ಎದುರು ನೋಡುತ್ತಿತ್ತು. ಆದರೆ, 148 ಎಸೆತಗಳಿಗೆ 183 ರನ್ ಬಾರಿಸಿದ್ದ ಕೊಹ್ಲಿ, ತಂಡವನ್ನು ಇನ್ನೂ ಎರಡು ಓವರ್ ಗಳು ಬಾಕಿಯಿರುವಾಗಲೇ ಗೆಲ್ಲಿಸುವಲ್ಲಿ ನೆರವಾಗಿದ್ದರು.

#3 122 ವಿರುದ್ಧ ಇಂಗ್ಲೆಂಡ್, 2017

#3 122 ವಿರುದ್ಧ ಇಂಗ್ಲೆಂಡ್, 2017

2017ರಲ್ಲಿ ಪುಣೆಯಲ್ಲಿ ನಡೆದಿದ್ದ ಇಂಗ್ಲೆಂಡ್-ಭಾರತ ನಡುವಣ ಪಂದ್ಯದಲ್ಲಿ ಇಂಗ್ಲೆಂಡ್ 350 ರನ್ ಬಾರಿಸಿತ್ತು. ಭಾರತ 63 ರನ್ ಗಳಿಸುವ ವೇಳೆಗೆ ಅಮೂಲ್ಯ 4 ವಿಕೆಟ್ ಗಳನ್ನು ಕಳೆದುಕೊಂಡು ಸೋಲುವ ಭೀತಿಯಲ್ಲಿತ್ತು. ಆದರೆ 8 ಬೌಂಡರಿ, 6 ಸಿಕ್ಸರ್ ಗಳನ್ನು ಚಚ್ಚಿದ್ದ ಕೊಹ್ಲಿ ಭಾರತಕ್ಕೆ ಆಸರೆಯಾದರು. ಕೇದಾರ್ ಜಾಧವ್ ಕೂಡ 12 ಬೌಂಡರಿ, 4 ಸಿಕ್ಸರ್ ಗಳನ್ನು ಬಾರಿಸಿ ಸಾಥ್ ನೀಡಿದರು. ಭಾರತ 48.1 ಓವರ್ ನಲ್ಲೇ 7 ವಿಕೆಟ್ ಕಳೆದು 356 ರನ್ ನೊಂದಿಗೆ ಗೆಲುವನ್ನಾಚರಿಸಿತು.

#4, 115, ವಿರುದ್ಧ ಆಸ್ಟ್ರೇಲಿಯಾ, 2013

#4, 115, ವಿರುದ್ಧ ಆಸ್ಟ್ರೇಲಿಯಾ, 2013

2013ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ, ನಾಗ್ಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಭರ್ಜರಿ 350 ರನ್ ಸ್ಕೋರ್ ಮಾಡಿತ್ತು. ಶೇನ್ ವಾಟ್ಸನ್ 102, ಜಾರ್ಜ್ ಬೈಲಿ 156 ರನ್ ಗಳಿಸಿ, ಭಾರತಕ್ಕೆ ಉತ್ತಮ ರನ್ ಗುರಿ ನೀಡಿದ್ದರು. ಆದರೆ ಮತ್ತೆ ತಂಡದ ಗೆಲುವನ್ನು ಹೆಗಲಿಗೇರಿಸಿಕೊಂಡಿದ್ದ ಕೊಹ್ಲಿ, 115 ರನ್ ಬಾರಿಸಿದ್ದರು. ಈ ಪಂದ್ಯದಲ್ಲಿ 49.3 ಓವರ್‌ ನಲ್ಲಿ ಭಾರತ 4 ವಿಕೆಟ್ ಕಳೆದು 351 ರನ್ ಸೇರಿಸಿತ್ತು.

#5, 107, ವಿರುದ್ಧ ಪಾಕಿಸ್ತಾನ, 2015

#5, 107, ವಿರುದ್ಧ ಪಾಕಿಸ್ತಾನ, 2015

ಆಸ್ಟ್ರೇಲಿಯಾದ ಅಡಿಲೇಡ್ ಓವಲ್ ನಲ್ಲಿ 2015ರಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್ 4ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತಕ್ಕೆ ಕೊಹ್ಲಿ 107 ರನ್ ಸೇರಿಸಿದ್ದರು. ಶಿಖರ್ ಧವನ್ 73, ಸುರೇಶ್ ರೈನಾ 74 ರನ್ ರನ್ ಕೊಡುಗೆಯೊಂದಿಗೆ ಭಾರತ 7 ವಿಕೆಟ್ ಕಳೆದು ಭರ್ತಿ 300 ರನ್ ಮಾಡಿತ್ತು. ಪಾಕಿಸ್ತಾನ ಈ ವೇಳೆ 47 ಓವರ್ ಗೆ ಎಲ್ಲಾ ವಿಕೆಟ್ ಕಳೆದು 224 ರನ್ ಪೇರಿಸಿ ಶರಣಾಗಿತ್ತು.

Story first published: Monday, November 5, 2018, 23:53 [IST]
Other articles published on Nov 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X