ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಕೂ' ಸೇರಿದ 15 ದಿನಗಳಲ್ಲೇ ವಿರೇಂದ್ರ ಸೆಹ್ವಾಗ್‌ಗೆ 1 ಲಕ್ಷ ಅನುಯಾಯಿಗಳು!

Virender Sehwag hits 100K followers on Koo App within 15 days of joining the platform

ಬೆಂಗಳೂರು: ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್ ಅವರು ಬಹು ಭಾಷೆಯ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಕೂ ಆಪ್ ಸೇರಿದ ಕೇವಲ 15 ದಿನಗಳಲ್ಲಿ 1 ಲಕ್ಷ ಅನುಯಾಯಿಗಳನ್ನು ಪಡೆದಿದ್ದಾರೆ.

@VirenderSehwag ಹ್ಯಾಂಡಲ್ ಮೂಲಕ ಹಾಸ್ಯಮಯ, ನೇರ ಮಾತು ಹಾಗು ಚಮತ್ಕಾರಿ ಕಾಮೆಂಟ್ ಗಳಿಂದಾಗಿ ಸೆಹ್ವಾಗ್ ಅವರು ಮೇಕ್-ಇನ್-ಇಂಡಿಯಾ ವೇದಿಕೆಯಲ್ಲಿ ಎಲ್ಲಾ ಸ್ಥಳೀಯ ಭಾಷೆಗಳ ಜನರ ಆಕರ್ಷಣೆ ಗಳಿಸಿದ್ದಾರೆ.

ಅವರವರದ್ದೇ ಭಾಷೆಗಳಲ್ಲಿ ಅಭಿವ್ಯಕ್ತಿಗೊಳಿಸಲು ಒಂದು ಮುಕ್ತ ವೇದಿಕೆಯಾಗಿರುವ 'ಕೂ' ಗೆ ಇತ್ತೀಚೆಗೆ ಕ್ರಿಕೆಟ್ ಜಗತ್ತಿನ ಹೆಸರಾಂತ ಕ್ರಿಕೆಟಿಗರು ಮತ್ತು ವ್ಯಾಖ್ಯಾನಕಾರರು ಸೇರಿದ್ದು , ಡೌನ್‌ಲೋಡ್‌ಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕ್ರಿಕೆಟಿಗರು, ಸೆಲೆಬ್ರಿಟಿಗಳು ಸೇರಿದಂತೆ ವಿವಿಧ ಬಳಕೆದಾರರು ಪ್ಲಾಟ್‌ಫಾರ್ಮ್‌ನ ಬಹು ಭಾಷೆಯ ವೈಶಿಷ್ಟ್ಯಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕಳೆದ ಮಾರ್ಚ್ ನಲ್ಲಿ ಆಪ್ ಪ್ರಾರಂಭವಾಗಿದ್ದು, ಕೇವಲ 20 ತಿಂಗಳ ಅವಧಿಯಲ್ಲಿ 1.5 ಕೋಟಿ (15 ಮಿಲಿಯನ್) ಬಳಕೆದಾರರು ನೋಂದಾಯಿಸಿಕೊಂಡಿದ್ದಾರೆ. ಈ ಕ್ರಿಕೆಟ್ ಸೀಸನ್ ನಲ್ಲಿಯೇ 5 ಮಿಲಿಯನ್ ಜನರು ವೇದಿಕೆಗೆ ಸೇರಿಕೊಂಡಿದ್ದಾರೆ. ಟಿ 20 ವಿಶ್ವಕಪ್ ಸರಣಿ ನಡೆಯುತ್ತಿರುವ ಈ ಸಂದರ್ಭದಲ್ಲಿ ವೇದಿಕೆಗೆ ಮತ್ತಷ್ಟು ಜನರು ಸೇರುವ ನಿರೀಕ್ಷೆಯಿದೆ.

2021ರ ಟಿ20 ವಿಶ್ವಕಪ್‌ ಸಂದರ್ಭದಲ್ಲಿ ಕಂಟೆಂಟ್ ಕ್ರಿಯೇಟರ್‌ಗಳಿಗಾಗಿ ಕೂ ಆಕರ್ಷಕ ಪ್ರಚಾರ ಹಾಗೂ ಸ್ಪರ್ಧೆಗಳನ್ನು ಪ್ರಕಟಿಸಿದೆ. ಇದು ಭಾಷೆಗಳಲ್ಲಿ ತಲ್ಲೀನಗೊಳಿಸುವ ಮತ್ತು ಹೈಪರ್‌ಲೋಕಲ್ ಅನುಭವವನ್ನು ನೀಡುತ್ತದೆ. ಸೆಹ್ವಾಗ್ ಜೊತೆಗೆ ವೆಂಕಟೇಶ್ ಪ್ರಸಾದ್, ನಿಖಿಲ್ ಚೋಪ್ರಾ, ಸೈಯದ್ ಸಾಬಾ ಕರೀಮ್, ಪಿಯೂಷ್ ಚಾವ್ಲಾ, ಹನುಮ ವಿಹಾರಿ, ಜೋಗಿಂದರ್ ಶರ್ಮಾ, ಪ್ರವೀಣ್ ಕುಮಾರ್, ವಿಆರ್‌ವಿ ಸಿಂಗ್, ಅಮೋಲ್ ಮುಜುಮ್ದಾರ್, ವಿನೋದ್ ಕಾಂಬ್ಳಿ, ವಾಸಿಂ ಜಾಫರ್, ಆಕಾಶ್ ಚೋಪ್ರಾ, ದೀಪ್ ದಾಸ್‌ಗುಪ್ತಾ ಮುಂತಾದವರು ಕೂ ಆಪ್‌ಗೆ ಸೇರಿದ್ದಾರೆ. ಮತ್ತು ಅಭಿಮಾನಿಗಳೊಂದಿಗೆ ಸಂಪರ್ಕ ಹೊಂದಲು ಅವರು ಸಕ್ರಿಯವಾಗಿ ಕೂ ಮಾಡುತ್ತಿರುವುದರಿಂದ ಭಾರೀ ಅನುಯಾಯಿಗಳನ್ನು ಗಳಿಸುತ್ತಿದ್ದಾರೆ.

"ವೀರೇಂದ್ರ ಸೆಹ್ವಾಗ್ ಅವರು ಇಷ್ಟು ಕಡಿಮೆ ಅವಧಿಯಲ್ಲಿ 100,000 ಮೈಲಿಗಲ್ಲನ್ನು ದಾಟಿರುವುದಕ್ಕೆ ನಾವು ಸಂತೋಷಪಡುತ್ತೇವೆ. ಸ್ಥಳೀಯ ಭಾಷೆಗಳಲ್ಲಿ ಸಂಭಾಷಣೆ ನಡೆಸಲು ಕೂ ವೇದಿಕೆಯಾಗಿದೆ. ಭಾರತೀಯರಾದ ನಮಗೆ ಕ್ರಿಕೆಟ್ ಒಂದು ಭಾವನೆ ಮತ್ತು ಪಂದ್ಯಗಳ ಸುತ್ತ ಸಂಭಾಷಣೆಗಳು ಸಾಮಾಜಿಕ ಮಾಧ್ಯಮದಲ್ಲಿ ಎಂಗೇಜ್ಮೆಂಟ್ ಅನ್ನು ಉತ್ತೇಜಿಸುತ್ತದೆ. ನಮ್ಮ ಪ್ಲಾಟ್‌ಫಾರ್ಮ್ ಮೂಲಕ, ಬಳಕೆದಾರರು ತಮ್ಮ ನೆಚ್ಚಿನ ಆಟಗಾರರು ಮತ್ತು ಕಾಮೆಂಟೇಟರ್ಸ್ ಗಳ ತಮ್ಮ ಆಯ್ಕೆಯ ಭಾಷೆಯಲ್ಲಿ ಸಂಭಾಷಣೆಗೆ ಅವಕಾಶವಿದೆ. ವಿಶ್ವಕಪ್ ಮತ್ತು ಅದರಾಚೆಗೂ ಬಳಕೆದಾರರು ಪಾಲ್ಗೊಳ್ಳಲು ಕೂ ಮೈಕ್ರೋ ಬ್ಲಾಗಿಂಗ್ ವೇದಿಕೆಯಾಗಿದೆ' ಎಂದು ಕೂ ವಕ್ತಾರರು ವಿಶ್ವಾಸವ್ಯಕ್ತಪಡಿಸಿದ್ದಾರೆ.

ಪಾಕ್ ಕ್ರಿಕೆಟಿಗರಿಗೆ ಮಣ್ಣು ಮುಕ್ಕಿಸಲು ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಮುಂದಾದ ಟೀಂ ಇಂಡಿಯಾ | Oneindia Kannada

ಕೂ ಬಗ್ಗೆ:
ಕೂ ಅನ್ನು ಮಾರ್ಚ್ 2020 ರಲ್ಲಿ ಸ್ಥಾಪಿಸಲಾಯಿತು, ಬಹುಭಾಷಾ ಮೈಕ್ರೋ ಬ್ಲಾಗಿಂಗ್ ವೇದಿಕೆಯಾಗಿ ಭಾರತೀಯ ಭಾಷೆಗಳಲ್ಲಿ ಮತ್ತು ಈಗ ಭಾರತದಾದ್ಯಂತ 15 ಮಿಲಿಯನ್‌ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಇದು ಬಹು ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ, ಭಾರತದ ವಿವಿಧ ಪ್ರದೇಶಗಳ ಜನರು ತಮ್ಮ ಮಾತೃಭಾಷೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ತಾವು ವ್ಯಕ್ತಪಡಿಸಬಹುದು. ಕೇವಲ 10% ಇಂಗ್ಲಿಷ್ ಮಾತನಾಡುವ ನಮ್ಮ ದೇಶದಲ್ಲಿ, ಭಾರತೀಯ ಬಳಕೆದಾರರಿಗೆ ತಲ್ಲೀನಗೊಳಿಸುವ ಭಾಷೆಯ ಅನುಭವಗಳನ್ನು ನೀಡಲು ಮತ್ತು ಅವರನ್ನು ಸಂಪರ್ಕಿಸಲು ಸಹಾಯ ಮಾಡುವ ಸಾಮಾಜಿಕ ಮಾಧ್ಯಮ ವೇದಿಕೆಯ ಆಳವಾದ ಅವಶ್ಯಕತೆ ಇದೆ. ಭಾರತೀಯ ಭಾಷೆಗಳಿಗೆ ಆದ್ಯತೆ ನೀಡುವ ಭಾರತೀಯರ ಧ್ವನಿಗಳಿಗೆ ಕೂ ಒಂದು ಉತ್ತಮ ಬಳಕೆದಾರ ಸ್ನೇಹಿ ವೇದಿಕೆಯನ್ನು ಒದಗಿಸುತ್ತದೆ.

Story first published: Wednesday, October 20, 2021, 10:20 [IST]
Other articles published on Oct 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X