ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾರ್ಗನ್ ಗೆ ಮತ್ತೆ ಟ್ವೀಟ್ ಪೆಟ್ಟು ಕೊಟ್ಟ ಸೆಹ್ವಾಗ್

By Mahesh

ಲಂಡನ್, ಜುಲೈ 24 : ರಿಯೋ ಒಲಂಪಿಕ್ಸ್ ನಲ್ಲಿ ಭಾರತದ ಪ್ರದರ್ಶನದ ಬಗ್ಗೆ ಬ್ರಿಟಿಷ್ ಪತ್ರಕರ್ತ ನಿರಂತರವಾಗಿ ಟ್ವೀಟ್ ಮಾಡಿದ್ದು, ಅದಕ್ಕೆ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ತಕ್ಕ ಉತ್ತರ ನೀಡಿದ್ದು ನೆನಪಿರಬಹುದು. ಈಗ ಮತ್ತೊಮ್ಮೆ ಇವರಿಬ್ಬರ ವಾಕ್ಸಮರಕ್ಕೆ ಟ್ವಿಟ್ಟರ್ ವೇದಿಕೆ ಯಾಗಿದೆ.

ಬ್ರಿಟನ್ ಪತ್ರಕರ್ತ ಮಾರ್ಗನ್ ಅವರು ರಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಸಿಕ್ಕಿದ್ದ ಎರಡು ಪದಕಗಳ ಸಂಭ್ರಮಾಚರಣೆ ಬಗ್ಗೆ ವ್ಯಂಗ್ಯವಾಡಿದ್ದರು. ಇದಕ್ಕೆ ಉತ್ತರವಾಗಿ ಸೆಹ್ವಾಗ್ ಅವರು, ವಿಶ್ವಕ್ಕೆ ಕ್ರಿಕೆಟ್ ನ್ನು ಪರಿಚಯಿಸಿದ ಇಂಗ್ಲೆಂಡಿಗೆ ಒಂದೇ ಒಂದು ವಿಶ್ವಕಪ್ ನ್ನು ಗೆಲ್ಲಲು ಸಾಧ್ಯವಾಗಿಲ್ಲ ಎಂದು ಟ್ವೀಟ್ ಮಾಡಿದ್ದರು.

ಈಗ ಇಂಗ್ಲೆಂಡಿನ ಮಹಿಳಾ ತಂಡವು ವಿಶ್ವಕಪ್ ಗೆದ್ದು ಬೀಗುತ್ತಿದೆ. ಲಾರ್ಡ್ಸ್ ಮೈದಾನದಲ್ಲಿ ಭಾರತ ತಂಡವನ್ನು 9 ರನ್ ಗಳಿಂದ ಸೋಲಿಸಿ ವಿಶ್ವ ಚಾಂಪಿಯನ್ ಎನಿಸಿಕೊಂಡಿದೆ.



ಈ ಸಂಭ್ರಮಾಚರಣೆಯ ನಡುವೆ ಸೆಹ್ವಾಗ್ ರನ್ನು ಗೇಲಿ ಮಾಡಲು ಮಾರ್ಗನ್ ಅವರು ಯತ್ನಿಸಿದ್ದಾರೆ. 'ಯೂ, ಓಕೆ buddy?' ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಬಂದಿರುವ ಪ್ರತಿಕ್ರಿಯೆಗಳು ಮುಂದಿವೆ.
ಸೆಹ್ವಾಗ್ ಟ್ವೀಟ್ ಪ್ರತಿಕ್ರಿಯೆ

ಸೆಹ್ವಾಗ್ ಟ್ವೀಟ್ ಪ್ರತಿಕ್ರಿಯೆ

ಇಂಗ್ಲೆಂಡ್ ಬಳಿ ಒಂದೇ ಒಂದು ವಿಶ್ವಕಪ್ ಕೂಡಾ ಇಲ್ಲ, ಇನ್ನು ದಾನದ ಬಗ್ಗೆ ಹೇಳುವುದಾದರೆ, ನಮ್ಮ ಕೊಹಿನೂರು ವಜ್ರ ಈಗಲೂ ನಿಮ್ಮ ಬಳಿ ಇದೆ ಎಂದು ಸೆಹ್ವಾಗ್ ಹೆಸರಿನ ಅಕೌಂಟ್(ಅಧಿಕೃತ ಖಾತೆ ಅಲ್ಲ) ನಿಂದ ಟ್ವೀಟ್ ಆಗಿತ್ತು. ಈಗ ಮಾರ್ಗನ್ ಟ್ವೀಟ್ ಡಿಲೀಟ್ ಆಗಿತ್ತು.

ಸೆಹ್ವಾಗ್ ಟೈಮ್ ಸರಿಯಿಲ್ಲ

ಮಾರ್ಗನ್ ಗೆ ಉತ್ತರ ನೀಡಿದ ಸಾರ್ವಜನಿಕರೊಬ್ಬರು, ಸೆಹ್ವಾಗ್ ಟೈಮ್ ಸರಿಯಿಲ್ಲ, ಎರಡು ತಿಂಗಳಿನಿಂದ ಇದು ಎರಡನೇ ಬಾರಿ ಆಘಾತ ಎಂದು ತಮಾಷೆ ಮಾಡಿದ್ದಾರೆ.

ಮಹಿಳಾ ತಂಡದ ಬಗ್ಗೆ ಹೆಮ್ಮೆ

ಭಾರತದ ಮಹಿಳಾ ಕ್ರಿಕೆಟ್ ತಂಡದ ಬಗ್ಗೆ ಹೆಮ್ಮೆ ಇದೆ. ಉತ್ತಮ ಹೋರಾಟ ನೀಡಲಾಗಿದ್ದು, ತಂಡ ಇನ್ನಷ್ಟು ಸದೃಢವಾಗಿದೆ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಸೆಹ್ವಾಗ್ ಟ್ವೀಟ್

ಮಹಿಳಾ ಕ್ರಿಕೆಟ್ ತಂಡದ ಪ್ರದರ್ಶನದ ಬಗ್ಗೆ ಸೆಹ್ವಾಗ್ ಅವರು ಸಣಿ ಟ್ವೀಟ್ ಮಾಡಿ ಮಾರ್ಗನ್ ಗೆ ಉತ್ತರಿಸಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X