ಐಸ್‌ ಕ್ರಿಕೆಟ್‌ನಲ್ಲಿ ಸೆಹ್ವಾಗ್ ಬ್ಯಾಟಿಂಗ್ ಮಿಂಚು

Posted By:
Virendra Sehwag slams half century in Ice Cricket

ನವ ದೆಹಲಿ, ಫೆಬ್ರವರಿ 09: ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ವರ್ಷಗಳಾದರೂ ವಿರೇಂದ್ರ ಸೆಹ್ವಾಗ್ ತಮ್ಮ ಬ್ಯಾಟಿಂಗ್ ಮೊನಚು ಕಳೆದುಕೊಂಡಿಲ್ಲ. ನಿನ್ನೆ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ವಿಭಿನ್ನ ಐಸ್‌ಕ್ರಿಕೆಟ್‌ನಲ್ಲಿ ಸೆಹ್ವಾಗ್ ಭರ್ಜರಿ ಅರ್ಧ ಶತಕ ಗಳಿಸಿ ಮಿಂಚಿದ್ದಾರೆ.

ಸ್ವಿಟ್ಜರ್‌ಲ್ಯಾಂಡ್‌ ನಲ್ಲಿ ನಿನ್ನೆ ಮೋರ್ಟಿಜ್‌ ಐಸ್‌ಕ್ರಿಕೆಟ್‌ ಟಿ20 ಪಂದ್ಯದಲ್ಲಿ ಪ್ಯಾಲೆಸ್ ಡೈಮಂಡ್ ತಂಡದ ಪರ ಆಡಿದ ಸೆಹ್ವಾಗ್ ಅವರು ಭರ್ಜರಿ ಅರ್ಧಶತಕದೊಂದಿಗೆ 62 ರನ್ ಗಳಿಸಿ ಮಿಂಚಿದ್ದಾರೆ. ಡೈಮಂಡ್‌ ತಂಡದ ನಾಯಕರೂ ಆಗಿರುವ ಸೆಹ್ವಾಗ್ ಅವರ ಮ್ಯಾಚು ಅಫ್ರಿದಿ ನಾಯಕರಾಗಿರುವ ರಾಯಲ್ಸ್‌ ತಂಡದ ವಿರುದ್ಧ ಇತ್ತು.

ಮಂಜುಗಟ್ಟಿದ ಕೆರೆಯ ಮೇಲೆ ಸೀಂಥೆಟಿಕ್‌ ಪಿಚ್‌ ಹೊದಿಸಿ ಆಡಲಾದ ಐಸ್‌ಕ್ರಿಕೆಟ್‌ನಲ್ಲಿ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ಖ್ಯಾತಿಗೂ ಸೆಹ್ವಾಗ್ ಪಾತ್ರರಾಗಿದ್ದಾರೆ. ಸೆಹ್ವಾಗ್ ಕೇವಲ 25 ಬಾಲ್‌ಗಳಲ್ಲಿ ಅರ್ಧಶತಕ ಗಳಿಸಿದರು. ಇದರಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್‌ ಭಾರಿಸಿದ್ದರು.

ಅವರ ಎಂದಿನ ಬ್ಯಾಟಿಂಗ್ ಶೈಲಿಯಾದ ಮೊದಲ ಬಾಲಿಗೆ ಬೌಂಡರಿ ಹೊಡೆಯುವ ಸಂಪ್ರದಾಯವನ್ನೂ ಐಸ್‌ಕ್ರಿಕೆಟ್‌ನಲ್ಲೂ ಮುಂದುವರೆಸಿದ ಸೆಹ್ವಾಗ್‌ ಅವರು ಇಲ್ಲಿಯೂ ಮೊದಲ ಎಸೆತದಲ್ಲಿಯೇ ಬೌಂಡರಿ ಭಾರಿಸಿದರು. ಸೆಹ್ವಾಗ್‌ ತಂಡ 20 ಓವರ್‌ಗಳಿಗೆ 164 ರನ್‌ಗಳಿಸಿತು.

ನಂತರ ಬ್ಯಾಟಿಂಗ್‌ಗೆ ಇಳಿದ ಶಾಹಿದ್ ಅಫ್ರಿದಿ ತಂಡ ಕೇವಲ 15.4 ಓವರ್‌ಗಳಲ್ಲೇ ಗುರಿ ತಲುಪಿ ಗೆಲುವಿನ ರುಚಿ ನೋಡಿತು. ಕ್ರಿಕೆಟ್‌ನಿಂದ ವಿನೃತ್ತಿ ಹೊಂದಿದ ವಿವಿಧ ದೇಶಗಳ ಆಟಗಾರರನ್ನು ಸೇರಿಸಿ ಸ್ವಿಟ್ಜರ್‌ಲೆಂಡ್‌ನಲ್ಲಿ ಕ್ರಿಕೆಟ್ ಪ್ರಚಾರಕ್ಕಾಗಿ ಈ ಐಸ್‌ಕ್ರಿಕೆಟ್‌ ಆಡಿಸಲಾಗುತ್ತಿದೆ.

ಅರ್ಧ ಶತಕಗಳಿಸಿದ ಸೆಹ್ವಾಗ್ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಒದಗಿಸಿದರು. ಈ ಬಗ್ಗೆ ತಮ್ಮ ಎಂದಿನ ತಮಾಷೆ ಧಾಟಿಯಲ್ಲಿ ಟ್ವೀಟ್ ಕೂಡ ಮಾಡಿರುವ ಸೆಹ್ವಾಗ್ ಅವರು 'ಆಯುಧ ತ್ಯಜಿಸಿದ್ದೇನೆ, ಆದರೆ ಅದನ್ನು ಚಲಾಯಿಸುವುದನ್ನು ಮರೆತಿಲ್ಲ' ಎಂದಿದ್ದಾರೆ.

ಐಸ್‌ ಕ್ರಿಕೆಟ್‌ನ ಸೆಹ್ವಾಗ್‌ರ ಪ್ಯಾಲೆಸ್‌ಡೈಮಂಡ್ ತಂಡ ಇಂತಿದೆ.
ಪ್ಯಾಲೆಸ್‌ ಡೈಮಂಡ್: ವಿರೇಂದ್ರ ಸೆಹ್ವಾಗ್ (ಭಾರತ), ಜಹೀರ್ ಖಾನ್(ಭಾರತ), ಮಹಮದ್ ಕೈಫ್(ಭಾರತ), ಅಜಿತ್ ಅಗರ್ಕರ್(ಭಾರತ), ಮಿಥುನ್ ಮಾನಸ್(ಭಾರತ), ರಮೇಶ್ ಪವಾರ್(ಭಾರತ), ರೋಹನ್ ಜೈನ್ (ಸ್ವಿಟ್ಜರ್‌ಲ್ಯಾಂಡ್) ಮಹೇಲಾ ಜಯವರ್ಧನೆ (ಶ್ರೀಲಂಕಾ), ಲಸಿತ್ ಮಲಿಂಗಾ(ಶ್ರೀಲಂಕಾ), ತಿಲಕರತ್ನೆ ದಿಲ್ಶಾನ್(ಶ್ರೀಲಂಕಾ), ಮೈಕಲ್ ಹಸ್ಸಿ (ಆಸ್ಟ್ರೇಲಿಯಾ), ಆಂಡ್ರು ಸೈಮಂಡ್ಸ್‌ (ಆಸ್ಟ್ರೇಲಿಯಾ).

ಅಫ್ರಿದಿಯ ರಾಯಲ್ಸ್ ತಂಡ: ಶಾಹಿದ್ ಅಫ್ರಿದಿ (ಪಾಕಿಸ್ತಾನ), ಶೋಯೆಬ್ ಅಖ್ತರ್ (ಪಾಕಿಸ್ತಾನ), ಅಬ್ದುಲ್ ರಜಾಕ್ (ಪಾಕಿಸ್ತಾನ), ಜಾಕ್ ಕಾಲಿಸ್ (ದ.ಆಫ್ರಿಕಾ), ಗ್ರೇಮ್ ಸ್ಮಿತ್ (ದ.ಆಫ್ರಿಕಾ), ಡೇನಿಯಲ್ ವೆಟೋರಿ (ನ್ಯೂಜಿಲೆಂಡ್), ನ್ಯಾಥನ್ ಮೆಕಲಂ (ನ್ಯೂಜಿಲೆಂಡ್), ಗ್ರಾಂಟ್ ಎಲಿಯೋಟ್ (ನ್ಯೂಜಿಲೆಂಡ್), ಮಾಂಟಿ ಪೆನೆಸರ್ (ಇಂಗ್ಲೆಂಡ್), ಮ್ಯಾಟ್ ಪ್ರಿಯರ್ (ಇಂಗ್ಲೆಂಡ್), ಅಡಿಯನ್ ಆಂಡ್ರಿಸ್ (ಸ್ವಿಟ್ಜರ್‌ಲ್ಯಾಂಡ್‌)

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, February 9, 2018, 13:02 [IST]
Other articles published on Feb 9, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ