ಸೆಹ್ವಾಗ್ ಹಾದಿಯಲ್ಲಿ ನೆಹ್ರಾ, ಸ್ವಾಗತ ಕೋರಿದ ಲಕ್ಷ್ಮಣ್

Posted By:

ಕೋಲ್ಕತಾ, ನವೆಂಬರ್ 16: ಇತ್ತೀಚಿಗೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಗುಡ್ ಬೈ ಹೇಳಿದ ಎಡಗೈ ವೇಗಿ ಆಶೀಶ್ ನೆಹ್ರಾ ಅವರು ಇಂದಿನಿಂದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸೆಹ್ವಾಗ್ ಹಾದಿಯಲ್ಲಿ ಸಾಗುತ್ತಿರುವ ನೆಹ್ರಾ ಅವರನ್ನು ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ಅವರು ಸ್ವಾಗತಿಸಿ ಟ್ವೀಟ್ ಮಾಡಿದ್ದಾರೆ.

ನೆಹ್ರಾ ವಿದಾಯದ ಪಂದ್ಯಕ್ಕೆ ಗೆಲುವಿನ ಉಡುಗೊರೆ

38 ವರ್ಷ ವಯಸ್ಸಿನ ಆಶೀಶ್ ನೆಹ್ರಾ ಅವರು ಇಂದಿನಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

VVS Laxman welcomes Ashish Nehra on his new journey, tweets 'Welcome Ashu'

ಈ ಬಗ್ಗೆ ಮೊದಲಿಗೆ ವೀರೇಂದ್ರ ಸೆಹ್ವಾಗ್‌ ಅವರು ಟ್ವೀಟ್ ಮಾಡಿದ್ದರು. ಕೋಲ್ಕತ್ತಾದ ಈಡನ್‌ ಗಾರ್ಡನ್‌‌‌ನಲ್ಲಿ ಮೊದಲ ಟೆಸ್ಟ್ ಪಂದ್ಯ ಅಲ್ಲದೆ ಮೂರು ಟೆಸ್ಟ್‌‌ ಪಂದ್ಯಗಳನ್ನು ಉಭಯ ದೇಶಗಳು ಆಡಲಿವೆ.

ನವೆಂಬರ್‌‌‌ 1ರಂದು ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದ ನಂತರ ನೆಹ್ರಾ ಅಂತಾರಾಷ್ಟ್ರೀಯ ಕ್ರಿಕೆಟ್‌‌ಗೆ ವಿದಾಯ ಹೇಳಿದ್ದರು. ದೆಹಲಿಯ ಫಿರೋಜ್‌ ಷಾ ಕೊಟ್ಲಾ ಮೈದಾನದಲ್ಲಿ ವಿದಾಯ ಪಂದ್ಯವನ್ನಾಡಿದ್ದರು.

1999ರಲ್ಲಿ ಶ್ರೀಲಂಕಾ ವಿರುದ್ಧ ಆಡುವ ಮೂಲಕ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ನೆಹ್ರಾ ಅವರು 17 ಟೆಸ್ಟ್(44 ವಿಕೆಟ್) ,120 ಏಕದಿನ ಪಂದ್ಯ(157) ಹಾಗೂ 26 ಟಿ20ಐ(34) ಪಂದ್ಯಗಳನ್ನಾಡಿದ್ದಾರೆ. 2003ರಲ್ಲಿ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ 6/23 ಗಳಿಸಿದ್ದು ನೆನಪಿನಲ್ಲಿ ಉಳಿಯಬಹುದಾದ ಪ್ರದರ್ಶನವಾಗಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, November 16, 2017, 9:20 [IST]
Other articles published on Nov 16, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ