ಸ್ಫೋಟಕ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ಗೆ ಬಿಸಿಸಿಐನಿಂದಲೇ ಮೋಸ!

ಬಿಸಿಸಿಐ ನಿಂದಲೇ ಯುವರಾಜ್ ಗೆ ದೊಡ್ಡ ಮೋಸ.. | Oneindia Kannada
Was promised farewell game if I failed yo-yo Test, I passed: Yuvraj Singh

ಲಂಡನ್‌, ಜೂನ್‌ 10: ಭಾರತ ಕ್ರಿಕೆಟ್‌ ತಂಡದ ಯಶಸ್ಸಿಗೆ ಗಣನೀಯ ಸೇವೆ ಸಲ್ಲಿಸಿದ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಮತ್ತು ಐಪಿಎಲ್‌ ಎರಡಕ್ಕೂ ನಿವೃತ್ತಿ ಘೋಷಿಸಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಈ ಸಂದರ್ಭದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿರುವ 37 ವರ್ಷದ ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್‌ ಯುವಿ, ತಮ್ಮ ವೃತ್ತಿ ಬದುಕು ಅಂತ್ಯಗೊಳ್ಳುವುದಕ್ಕೆ ಯೋ ಯೋ ಟೆಸ್ಟ್‌ ಹೇಗೆ ಕಾರಣವಾಯಿತು ಹಾಗೂ ಬಿಸಿಸಿಐ ವಿರುದ್ಧದ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಒಡಿಐ ಕ್ರಿಕೆಟ್‌ನಲ್ಲಿ ಯುವರಾಜ್‌ಗೆ ಕೀರ್ತಿ ತಂದ 5 ಪಂದ್ಯಗಳಿವು!

ಅಷ್ಟೇ ಅಲ್ಲದೆ ತಮ್ಮೊಳಗಿನ ಬೇಸರ ಇನ್ನು ಸಾಕಷ್ಟಿದ್ದು ವಿಶ್ವಕಪ್‌ ಸಂದರ್ಭದಲ್ಲಿ ಇವೆಲ್ಲವನ್ನೂ ಹೊರಹಾಕಿ ವಿವಾದ ಸೃಷ್ಟಿಸುವುದು ಬೇಡ. ನಮ್ಮ ಆಟಗಾರರು ವಿಶ್ವಕಪ್‌ನಲ್ಲಿ ಯಾವುದೇ ಆತಂಕವಿಲ್ಲದೇ ಆಡಬೇಕು ಎಂಬ ಕಳಕಳಿಯನ್ನೂ ವ್ಯಕ್ತ ಪಡಿಸಿದ್ದಾರೆ.

ದಾದಾ, ತೆಂಡೂಲ್ಕರ್‌ ಸಾಲಿಗೆ ಸೇರಿದ ಶತಕ ವೀರ ಶಿಖರ್‌ ಧವನ್‌!

2011ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಟೂರ್ನಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಯುವರಾಜ್‌ ಸಿಂಗ್‌, ಬಳಿಕ ಕ್ಯಾನ್ಸರ್‌ಗೆ ತುತ್ತಾಗಿ ಚಿಕಿತ್ಸೆ ಪಡೆದರು. ಚಿಕಿತ್ಸೆ ಪಡೆದು ಚೇತರಿಸಿದ ಬಳಿಕ ಯುವಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಗತ್ತು ಕಳೆದುಕೊಂಡಿದ್ದರು. ಪರಿಣಾಮ 2013ರಿಂದೇಚೆ 2017ರವರೆಗೆ ಅವರಿಗೆ ಟೀಮ್‌ ಇಂಡಿಯಾದಲ್ಲಿ ಅವಕಾಶ ಸಿಕ್ಕಿರಲಿಲ್ಲ.

ಧೋನಿ ಬೆಂಬಲಿಸಿ 'ಬಲಿದಾನ್‌ ಬ್ಯಾಡ್ಜ್‌' ಪ್ರದರ್ಶಿಸಿದ ಅಭಿಮಾನಿಗಳು!

2017ರಲ್ಲಿ ಇಂಗ್ಲೆಂಡ್‌ ವಿರುದ್ಧದ ಸರಣಿಗೆ ಆಯ್ಕೆಯಾದ ಯುವರಾಜ್‌, ತಮ್ಮ ಏಕದಿನ ಕ್ರಿಕೆಟ್‌ ವೃತ್ತಿ ಬದುಕಿನ ವೈಯಕ್ತಿಕ ಗರಿಷ್ಠ ಮೊತ್ತವಾದ 150 ರನ್‌ ದಾಖಲಿಸಿ ಅಬ್ಬರಿಸಿದ್ದರು. ಬಳಿಕ 2017ರ ಚಾಂಪಿಯನ್ಸ್‌ ಟ್ರೋಫಿಯಲ್ಲೂ ಸ್ಥಾನ ಪಡೆದಿದ್ದ ಯುವರಾಜ್‌ ಸಿಂಗ್‌, ಇದಾದ ನಂತರ ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಯಲ್ಲಿ ಆಡಿದ್ದು ಭಾರತದ ಪರ ಅವರ ಕೊನೆಯ ಸರಣಿಯಾಗಿದೆ.

ಬಲವಂತವಾಗಿ ನಿವೃತ್ತಿಗೆ ಪ್ರಯತ್ನ!

ಬಲವಂತವಾಗಿ ನಿವೃತ್ತಿಗೆ ಪ್ರಯತ್ನ!

ಯೋ ಯೋ ಟೆಸ್ಟ್‌ನಲ್ಲಿ ಫೇಲ್‌ ಆದರೆ ನಿವೃತ್ತಿಯ ಪಂದ್ಯವನ್ನಾಡುವ ಅವಕಾಶ ನೀಡುವುದಾಗಿ ಬಿಸಿಸಿಐ ಯುವರಾಜ್‌ ಸಿಂಗ್‌ ಅವರ ಬಳಿ ಪ್ರಸ್ತಾಪಿಸಿತ್ತು. ಆದರೆ ಬಿಸಿಸಿಐನ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದ ಯುವಿ, "ಯೋ ಯೋ ಟೆಸ್ಟ್‌ನಲ್ಲಿ ಫೇಲ್‌ ಆದರೆ ನಾನು ಮನೆಗೆ ಹೋಗುತ್ತೇನೆ ನನಗೆ ಯಾವುದೇ ವಿದಾಯದ ಪಂದ್ಯ ಬೇಕಾಗಿಲ್ಲ. ಬಳಿಕ ನಾನು ಯೋ ಯೋ ಟೆಸ್ಟ್‌ನಲ್ಲಿ ಪಾಸ್‌ ಆದೆ. ಮುಂದಿನ ಯಾವುದೇ ನಿರ್ಧಾರಗಳು ನನ್ನದಲ್ಲ,'' ಎಂದು ಬಿಸಿಸಿಐ ತಮ್ಮಿಂದ ಬಲವಂತವಾಗಿ ನಿವೃತ್ತಿ ಬಯಸಿತ್ತು ಎಂದು ಯುವರಾಜ್‌ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಇದರೊಂದಿಗೆ ಬಿಸಿಸಿಐನಿಂದ ತಮಗಾದ ಮೋಸವನ್ನು ಯುವಿ ಮಾಧ್ಯಮಗಳ ಎದುರು ತೆರೆದಿಟ್ಟಿದ್ದಾರೆ.

ಯೋ ಯೋ ಟೆಸ್ಟ್‌ ಪ್ರಭಾವ

ಯೋ ಯೋ ಟೆಸ್ಟ್‌ ಪ್ರಭಾವ

ನಿವೃತ್ತಿ ಪ್ರಕಟಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಯುವರಾಜ್‌ ಸಿಂಗ್‌ ಟೀಮ್‌ ಇಂಡಿಯಾದ ಆಯ್ಕೆ ಪ್ರಕ್ರಿಯೆಯಲ್ಲಿ ಇರುವ ಯೋ ಯೋ ಟೆಸ್ಟ್‌ ತಮ್ಮ ಕ್ರಿಕೆಟ್‌ ವೃತ್ತಿ ಬದುಕಿನ ಮೇಲೆ ಬೀರಿದ ವ್ಯತಿರಿಕ್ತ ಪರಿಣಾಮದ ಕುರಿತಾಗಿ ವಿವರಿಸಿದರು. "ಯೋ ಯೋ ಟೆಸ್ಟ್‌ ಕುರಿತಾಗಿ ಸದ್ಯಕ್ಕೆ ಏನನ್ನೂ ಹೇಳಲು ಬಯಸುವುದಿಲ್ಲ. ಆದರೆ, ಮುಂದೊಂದು ದಿನ ಈ ಬಗ್ಗೆ ಖಂಡಿತಾ ಮಾತನಾಡುತ್ತೇನೆ,'' ಎಂದಿದ್ದಾರೆ.

ಹೇಳುವುದು ಬಹಳಷ್ಟಿದೆ!

ಹೇಳುವುದು ಬಹಳಷ್ಟಿದೆ!

"ಜೀವನದ ಮುಂದಿನ ದಿನಗಳಲ್ಲಿ ಹಲವು ವಿಷಯಗಳನ್ನು ಹೇಳುವುದಿದೆ. ಹೇಳ ಬೇಕಾಗಿರುವುದು ಬಹಳಷ್ಟಿದೆ. ಸದ್ಯಕ್ಕೆ ಏನನ್ನೂ ಹೇಳುವುದಿಲ್ಲ. ಏಕೆಂದರೆ ಭಾರತ ತಂಡ ವಿಶ್ವಕಪ್‌ನಲ್ಲಿ ಆಡುತ್ತಿದೆ. ಈ ಸಂದರ್ಭದಲ್ಲಿ ಆಟಗಾರರ ಸುತ್ತ ಯಾವುದೇ ವಿವಾದಗಳು ತಲೆಯೆತ್ತಬಾರದು ಎಂಬುದು ನನ್ನ ಉದ್ದೇಶ. ಮಾತನಾಡಲು ನನ್ನ ಸಮಯ ಬರಲಿದೆ. ನನ್ನ ಜೀವನದ ಮುಂದಿನ ಹಾದಿ ಕಂಡುಕೊಳ್ಳುವ ಉದ್ದೇಶದಿಂದ ನಿವೃತ್ತಿ ಹೊಂದಿದ್ದೇನೆ,'' ಎಂದು ಹೇಳಿರುವ ಯುವಿ ಭವಿಷ್ಯದ ದಿನಗಳಲ್ಲಿ ಹಲವು ವಿವಾದಾತ್ಮಕ ಸಂಗತಿಗಳನ್ನು ಹೊರಹಾಕುವ ಮುನ್ಸೂಚನೆ ನೀಡಿದ್ದಾರೆ.

ಯುವರಾಜ್‌ ಕ್ರಿಕೆಟ್‌ ಸಾಧನೆ

ಯುವರಾಜ್‌ ಕ್ರಿಕೆಟ್‌ ಸಾಧನೆ

40 ಟೆಸ್ಟ್‌ ಪಂದ್ಯ

1900 ರನ್‌

169 ಗರಿಷ್ಠ

33.92 ಸರಾಸರಿ

03 ಶತಕಜ

11 ಅರ್ಧಶತಕ

304 ಒಡಿಐ ಪಂದ್ಯ

8701 ರನ್‌

150 ಗರಿಷ್ಠ

36.55 ಸರಾಸರಿ

14 ಶತಕ

52 ಅರ್ಧಶತಕ

58 ಟಿ20-ಐ ಪಂದ್ಯ

1177 ರನ್‌

77* ಗರಿಷ್ಠ

28.02 ಸರಾಸರಿ

136.38 ಸ್ಟ್ರೈಕ್‌ ರೇಟ್‌

08 ಅರ್ಧಶತಕ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, June 10, 2019, 20:02 [IST]
Other articles published on Jun 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more