ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾನು ಯಾವುದೇ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿಲ್ಲ: ಹೀತ್ ಸ್ಟ್ರೀಕ್

Wasnt involved in any match-fixing, says Heath Streak

ಹರಾರೆ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ನಿಂದ 8 ವರ್ಷಗಳ ನಿಷೇಧಕ್ಕೀಡಾದ ಬಳಿಕ ಜಿಂಬಾಬ್ವೆ ಮಾಜಿ ನಾಯಕ ಹೀತ್ ಸ್ಟ್ರೀಕ್ ಬಾಯ್ದೆರೆದಿದ್ದಾರೆ. ನಾನು ಯಾವುದೇ ರೀತಿಯ ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿಲ್ಲ ಎಂದು ಸ್ಟ್ರೀಕ್ ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸ್ಟ್ರೀಕ್‌, ಕೋಲ್ಕತ್ತಾ ನೈಟ್ ರೈಡರ್ಸ್‌ನ ಬೌಲಿಂಗ್‌ ಕೋಚ್ ಕೂಡ ಆಗಿದ್ದರು.

ಐಪಿಎಲ್ 2021: ಬೆನ್ ಸ್ಟೋಕ್ಸ್‌ಗೆ ಬದಲಿಯಾಗಿ ರಾಜಸ್ಥಾನ್ ರಾಯಲ್ಸ್‌ಗೆ ದಕ್ಷಿಣ ಆಫ್ರಿಕಾದ ಆಟಗಾರ ಸೇರ್ಪಡೆಐಪಿಎಲ್ 2021: ಬೆನ್ ಸ್ಟೋಕ್ಸ್‌ಗೆ ಬದಲಿಯಾಗಿ ರಾಜಸ್ಥಾನ್ ರಾಯಲ್ಸ್‌ಗೆ ದಕ್ಷಿಣ ಆಫ್ರಿಕಾದ ಆಟಗಾರ ಸೇರ್ಪಡೆ

ಐಸಿಸಿ ಭ್ರಷ್ಟಾಚಾರ ವಿರೋಧಿ ನೀತಿ ಉಲ್ಲಂಘಿಸಿದ್ದಕ್ಕಾಗಿ ಹೀತ್‌ ಸ್ಟ್ರೀಕ್‌ಗೆ 8 ವರ್ಷಗಳ ನಿಷೇಧ ಹೇರಲಾಗಿತ್ತು. 2016-2018ರ ವರೆಗೆ ಜಿಂಬಾಬ್ವೆ ದೇಸಿ ಕ್ರಿಕೆಟ್ ತಂಡಗಳ ಕೋಚ್ ಜವಾಬ್ದಾರಿ ನಿರ್ವಹಿಸಿದ್ದ ಸ್ಟ್ರೀಕ್ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

'ನನ್ನ ಜವಾಬ್ದಾರಿಯ ಕಾಲಾವಧಿಯಲ್ಲಿ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್, ಪಂದ್ಯದ ಮೇಲೆ ಪ್ರಭಾವ ಬೀರೋದು ಅಥವಾ ಡ್ರೆಸ್ಸಿಂಗ್ ರೂಮ್ ಸಂಗತಿಗಳನ್ನು ಹೊರಗಿವರಿಗೆ ನೀಡೋದು ಹೀಗೆ ಯಾವುದರಲ್ಲೂ ನಾನು ಪಾಲ್ಗೊಂಡಿಲ್ಲ ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಜೊತೆ ಸ್ಟ್ರೀಕ್ ಹೇಳಿದ್ದಾರೆ.

'ಐಪಿಎಲ್ ಮಿಸ್ ಮಾಡಿಕೊಂಡಿದ್ದು ಒಳ್ಳೆದೇ ಆಯ್ತು' ಎಂದ ಆಸೀಸ್ ಆಟಗಾರ'ಐಪಿಎಲ್ ಮಿಸ್ ಮಾಡಿಕೊಂಡಿದ್ದು ಒಳ್ಳೆದೇ ಆಯ್ತು' ಎಂದ ಆಸೀಸ್ ಆಟಗಾರ

ಐಸಿಸಿ ಆ್ಯಂಟಿ ಕರಪ್ಶನ್ ಟ್ರಿಬ್ಯುನಲ್ ವಿಚಾರಣೆ ವೇಳೆ ಸ್ಟ್ರೀಕ್‌ ತಪ್ಪೆಸಗಿದ್ದಾಗಿ ಕಂಡು ಬಂದಿತ್ತು. ಹೀಗಾಗಿ ಅವರಿಗೆ 8 ವರ್ಷಗಳ ನಿಷೇಧ ವಿಧಿಸಲಾಗಿತ್ತು. 2029 ಮಾರ್ಚ್ 28ಕ್ಕೆ ಸ್ಟ್ರೀಕ್ ಮೇಲಿನ ಶಿಕ್ಷೆ ಕೊನೆಯಾಗಲಿದೆ. ಮಧ್ಯಮ ವೇಗಿ ಆಗಿರುವ ಸ್ಟ್ರೀಕ್ 65 ಟೆಸ್ಟ್ ಪಂದ್ಯಗಳಲ್ಲಿ 216 ವಿಕೆಟ್, 189 ಏಕದಿನ ಪಂದ್ಯಗಳಲ್ಲಿ 239 ವಿಕೆಟ್ ವಿಕೆಟ್ ದಾಖಲೆ ಹೊಂದಿದ್ದಾರೆ.

Story first published: Friday, April 30, 2021, 9:55 [IST]
Other articles published on Apr 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X