ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಗುಣಮಟ್ಟದ ಭಾರತೀಯ ಆಟಗಾರರ ಹೊಂದಲು ನಾವು ಅದೃಷ್ಟ ಮಾಡಿದ್ದೇವೆ'

We are fortunate to have quality Indian players with international experience, says Mohammad Kaif

ಅಬುಧಾಬಿ: ಅಂತಾರಾಷ್ಟ್ರೀಯ ಅನುಭವವುಳ್ಳ ಗುಣಮಟ್ಟದ ಅನೇಕ ಆಟಗಾರರು ತಂಡದಲ್ಲಿರುವುದಕ್ಕೆ ನಾವು ಅದೃಷ್ಟ ಮಾಡಿದ್ದೇವೆ. ಇದೇ ಕಾರಣಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಪ್ರದರ್ಶನ ನೀಡುತ್ತಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್‌ನ ಸಹ ಕೋಚ್ ಮೊಹಮ್ಮದ್ ಕೈಫ್ ಶುಕ್ರವಾರ (ಅಕ್ಟೋಬರ್‌ 1) ಹೇಳಿದ್ದಾರೆ.

 ಡಿಆರ್‌ಎಸ್ ಇಲ್ಲ, ನಾಟ್ ಔಟ್ ತೀರ್ಪು, ಆದರೂ ಹೊರ ನಡೆದ ಪೂನಂ: ವಿಡಿಯೋ ಡಿಆರ್‌ಎಸ್ ಇಲ್ಲ, ನಾಟ್ ಔಟ್ ತೀರ್ಪು, ಆದರೂ ಹೊರ ನಡೆದ ಪೂನಂ: ವಿಡಿಯೋ

ತಂಡದಲ್ಲಿ ಗುಣಮಟ್ಟದ ಭಾರತೀಯ ಆಟಗಾರರು ಇರುವುದೇ ತಂಡ ಉತ್ತಮ ಪ್ರದರ್ಶನ ನೀಡುತ್ತಿರುವುದಕ್ಕೆ ಪ್ರಮುಖ ಕಾರಣ ಎಂದು ಮೊಹಮ್ಮದ್ ಕೈಫ್ ಒತ್ತಿ ಹೇಳಿದ್ದಾರೆ. ಹಿಂದಿನ ಸೀಸನ್‌ನಲ್ಲಿ ಡೆಲ್ಲಿ ತಂಡ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಮುಂಬೈ ವಿರುದ್ಧ ಸೋತು ಚೊಚ್ಚಲ ಟ್ರೋಫಿ ಆಸೆಯನ್ನು ಕೈ ಚೆಲ್ಲಿತ್ತು.

"ತಂಡದಲ್ಲಿ ಗುಣಮಟ್ಟದ ಭಾರತೀಯ ಆಟಗಾರರನ್ನು ಹೊಂದಿರುವುದು ಯಾವುದೇ ಫ್ರಾಂಚೈಸಿಗಳ ಯಶಸ್ವಿಯ ಹಿಂದಿರುವ ಗುಟ್ಟು. ಗುಣಮಟ್ಟದ ಭಾರತೀಯ ಆಟಗಾರರನ್ನು ಪಡೆದಿರುವುದಕ್ಕೆ ನಾವು ಅದೃಷ್ಟ ಮಾಡಿದ್ದೇವೆ. ಅಲ್ಲದೆ, ಇವರಲ್ಲಿ ಕೆಲವರು ಅಂತಾರಾಷ್ಟ್ರೀಯ ಅನುಭವ ಹೊಂದಿರುವುದೂ ನಮ್ಮ ಅದೃಷ್ಟಕ್ಕೆ ಕಾರಣವಾಗಿದೆ," ಎಂದು ಕೈಫ್ ಹೇಳಿದ್ದಾರೆ.

"ತಂಡದಲ್ಲಿ ಆಡುವ ಏಳು ಮಂದಿ ಭಾರತಿಯ ಆಟಗಾರರಲ್ಲಿ ಯಾರೆಲ್ಲಾ ತಂಡಕ್ಕೆ ನಿಯಮಿತವಾಗಿ ಆಡುತ್ತಿರುತ್ತಾರೋ ಅವರು ಅವರ ಜವಾಬ್ದಾರಿ, ಪಾತ್ರ ಅರಿತುಕೊಂಡರೆ ಫ್ರಾಂಚೈಸಿ ಒಂದಕ್ಕೆ ಅದಕ್ಕಿಂತ ಬೇರೆ ಅನುಕೂಲ ಯಾವುದೂ ಇಲ್ಲ," ಎಂದು ಕೈಫ್ ಅಭಿಪ್ರಾಯಿಸಿದ್ದಾರೆ.

ಡೇವಿಡ್ ವಾರ್ನರ್‌ಗೆ ಸನ್‌ರೈಸರ್ಸ್ ತಂಡದೊಂದಿಗೆ ಪ್ರಯಾಣಕ್ಕೂ ಅವಕಾಶ ನೀಡದ ಫ್ರಾಂಚೈಸಿ!: ವರದಿಡೇವಿಡ್ ವಾರ್ನರ್‌ಗೆ ಸನ್‌ರೈಸರ್ಸ್ ತಂಡದೊಂದಿಗೆ ಪ್ರಯಾಣಕ್ಕೂ ಅವಕಾಶ ನೀಡದ ಫ್ರಾಂಚೈಸಿ!: ವರದಿ

ಐಪಿಎಲ್ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸದ್ಯ ದ್ವಿತೀಯ ಸ್ಥಾನದಲ್ಲಿದೆ. ಆಡಿರುವ 11 ಪಂದ್ಯಗಳಲ್ಲಿ 8ರಲ್ಲಿ ಗೆದ್ದಿರುವ ಡೆಲ್ಲಿ 16 ಪಾಯಿಂಟ್ಸ್‌ ಕಲೆ ಹಾಕಿದೆ. ಮೊದಲ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ತೃತೀಯ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳಿವೆ.

Story first published: Friday, October 1, 2021, 17:37 [IST]
Other articles published on Oct 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X