ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಈ ಆಟಗಾರ ಇನ್ನೂ ಚೆನ್ನಾಗಿ ಆಟವಾಡಬೇಕಿದೆ ಎಂದ ಕೊಹ್ಲಿ

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಪಂದ್ಯ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆಯಿತು. ಮೊದಲ ದಿನ ಯಾವುದೇ ಅಡಚಣೆಗಳಿಲ್ಲದೆ ಸರಾಗವಾಗಿ ನಡೆದ ಪಂದ್ಯಕ್ಕೆ ಎರಡನೇ ದಿನದಿಂದ ಸತತವಾಗಿ ಎಲ್ಲಾ ದಿನವೂ ವರುಣ ಅಡ್ಡಿಯುಂಟುಮಾಡಿದ್ದ. ಅದರಲ್ಲಿಯೂ ಮೊದಲನೇ ಟೆಸ್ಟ್ ಪಂದ್ಯದ ಕೊನೆಯ ದಿನದಂದು ಟೀಮ್ ಇಂಡಿಯಾಗೆ ಗೆಲ್ಲಲು 157 ರನ್ ಬೇಕಾಗಿದ್ದಾಗ ಇನ್ನೂ 9 ವಿಕೆಟ್‍ಗಳು ಕೈನಲ್ಲಿದ್ದವು. ಹೀಗೆ ಟೀಮ್ ಇಂಡಿಯಾ ಮೊದಲನೇ ಪಂದ್ಯವನ್ನು ಜಯಗಳಿಸುವ ಹಂತಕ್ಕೆ ತಲುಪಿದಾಗ ವರುಣನ ಆಗಮನವಾಗಿ ಪಂದ್ಯ ಡ್ರಾನಲ್ಲಿ ನೀರಸ ಅಂತ್ಯ ಕಂಡಿತು.

ಭಾರತ vs ಇಂಗ್ಲೆಂಡ್: ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಹೆಚ್ಚು ಪಂದ್ಯ ಗೆದ್ದಿರುವರಾರು ಗೊತ್ತಾ?ಭಾರತ vs ಇಂಗ್ಲೆಂಡ್: ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಹೆಚ್ಚು ಪಂದ್ಯ ಗೆದ್ದಿರುವರಾರು ಗೊತ್ತಾ?

ಹೀಗಾಗಿ ಗುರುವಾರದಿಂದ ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು ವರುಣನ ಆಗಮನವಾಗದೇ ಇದ್ದರೆ ಸಾಕು ಎಂಬುದು ಕ್ರೀಡಾಭಿಮಾನಿಗಳ ಬೇಡಿಕೆ. ಹೀಗೆ ಮೊದಲ ಟೆಸ್ಟ್ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡ ಬಗ್ಗೆ ಇತ್ತೀಚಿಗಷ್ಟೆ ವಿರಾಟ್ ಕೊಹ್ಲಿ ನಿರಾಸೆಯ ಮಾತುಗಳನ್ನಾಡುವುದರ ಮೂಲಕ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಫಲಿತಾಂಶದ ಕುರಿತು ಬೇಸರ ವ್ಯಕ್ತಪಡಿಸಿದ್ದರು.

ಭಾರತ vs ಇಂಗ್ಲೆಂಡ್: ಟೆಸ್ಟ್ ಸರಣಿಯಿಂದ ಹೊರಬಿದ್ದು ಭಾವುಕರಾದ ಸ್ಟುವರ್ಟ್ ಬ್ರಾಡ್ಭಾರತ vs ಇಂಗ್ಲೆಂಡ್: ಟೆಸ್ಟ್ ಸರಣಿಯಿಂದ ಹೊರಬಿದ್ದು ಭಾವುಕರಾದ ಸ್ಟುವರ್ಟ್ ಬ್ರಾಡ್

ಇನ್ನು ಗುರುವಾರದಿಂದ ಆರಂಭವಾಗಲಿರುವ ಲಾರ್ಡ್ಸ್ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿ ನಡೆಸಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಎರಡನೆ ಟೆಸ್ಟ್ ಪಂದ್ಯದ ಕುರಿತು ಮಾತನಾಡಿದರು. ಹೀಗೆ ಮಾತನಾಡುವಾಗ ತಮ್ಮ ತಂಡದ ಆಟಗಾರರ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ ರಿಷಭ್ ಪಂತ್ ಬಗ್ಗೆಯೂ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ರಿಷಭ್ ಪಂತ್ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಿದ ಆಟದ ಕುರಿತು ಮಾತನಾಡಿದ ವಿರಾಟ್ ಕೊಹ್ಲಿ ರಿಷಭ್ ಪಂತ್ ಕಡೆಯಿಂದ ಪಂದ್ಯದ ದಿಕ್ಕನ್ನು ಬದಲಾಯಿಸುವಂತ ಆಟವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ವಿರಾಟ್ ಕೊಹ್ಲಿ ರಿಷಭ್ ಪಂತ್ ಕುರಿತು ಈ ಕೆಳಕಂಡಂತೆ ಮಾತನಾಡಿದ್ದಾರೆ.

ರಿಷಭ್ ಪಂತ್ ವೇಗದ ಬ್ಯಾಟಿಂಗ್ ಸಮರ್ಥಿಸಿಕೊಂಡ ಕೊಹ್ಲಿ

ರಿಷಭ್ ಪಂತ್ ವೇಗದ ಬ್ಯಾಟಿಂಗ್ ಸಮರ್ಥಿಸಿಕೊಂಡ ಕೊಹ್ಲಿ

ರಿಷಭ್ ಪಂತ್‌ ವೇಗದ ಬ್ಯಾಟಿಂಗ್ ಆಡುವಂತಹ ಆಟಗಾರ. ಟೆಸ್ಟ್ ಇನ್ನಿಂಗ್ಸ್‌ನಲ್ಲಿಯೂ ತನ್ನ ಹೊಡಿಬಡಿ ಆಟದಿಂದಲೇ ರನ್ ಕಲೆಹಾಕುವ ರಿಷಭ್ ಪಂತ್ ತಮ್ಮ ತಂಡಕ್ಕೆ ಕಷ್ಟದ ಸಮಯಗಳಲ್ಲಿ ಉತ್ತಮ ಇನ್ನಿಂಗ್ಸ್‌ ಕಟ್ಟಿಕೊಟ್ಟಿರುವ ಮತ್ತು ಸೋಲುವ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ಉದಾಹರಣೆಗಳಿವೆ. ಹೀಗಾಗಿಯೇ ರಿಷಬ್ ಪಂತ್ ವೇಗದ ಬ್ಯಾಟಿಂಗ್ ಕುರಿತು ಮಾತನಾಡಿದ ವಿರಾಟ್ ಕೊಹ್ಲಿ 'ಆತ ಆಡುವುದೇ ಹಾಗೆ, ವೇಗದ ಬ್ಯಾಟಿಂಗ್ ಮೂಲಕವೇ ಹೆಚ್ಚಿನ ರನ್ ಗಳಿಸಿ ತಂಡಕ್ಕೆ ಸಹಕಾರಿಯಾಗಬಲ್ಲಂತಹ ಆಟಗಾರ' ಎಂದು ಹೇಳುವುದರ ಮೂಲಕ ರಿಷಭ್ ಪಂತ್ ವೇಗದ ಬ್ಯಾಟಿಂಗ್‌ನ್ನು ವಿರಾಟ್ ಕೊಹ್ಲಿ ಸಮರ್ಥಿಸಿಕೊಂಡಿದ್ದಾರೆ.

ರಿಷಭ್ ಪಂತ್ ಮೇಲೆ ನಿರೀಕ್ಷೆ ದೊಡ್ಡದಿದೆ

ರಿಷಭ್ ಪಂತ್ ಮೇಲೆ ನಿರೀಕ್ಷೆ ದೊಡ್ಡದಿದೆ

ಇನ್ನೂ ಮುಂದುವರೆದು ರಿಷಭ್ ಪಂತ್ ಆಟದ ಕುರಿತು ಮಾತನಾಡಿದ ವಿರಾಟ್ ಕೊಹ್ಲಿ, ರಿಷಭ್ ಪಂತ್ ವೇಗವಾಗಿ ಬ್ಯಾಟ್ ಬೀಸಿದರೂ ತನ್ನ ತಂಡಕ್ಕೆ ಬೇಕಾದ ರನ್ ಕಲೆಹಾಕಿ ಉತ್ತಮ ಇನ್ನಿಂಗ್ಸ್ ಆಡುವಂಥ ಆಟಗಾರ. ಹೀಗಾಗಿ ಆತನಿಂದ ದೊಡ್ಡ ಇನ್ನಿಂಗ್ಸ್‌ನ್ನು ನಿರೀಕ್ಷಿಸುತ್ತಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್ ಅಶ್ವಿನ್ಗೆ ಅವಕಾಶವೇ ಇಲ್ಲ | Oneindia Kannada
ರಿಷಭ್ ಪಂತ್ ಪಂದ್ಯವನ್ನೇ ಬದಲಾಯಿಸಬಲ್ಲಂತಹ ಆಟಗಾರ

ರಿಷಭ್ ಪಂತ್ ಪಂದ್ಯವನ್ನೇ ಬದಲಾಯಿಸಬಲ್ಲಂತಹ ಆಟಗಾರ

ರಿಷಭ್ ಪಂತ್ ಕಡೆಯಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸುತ್ತೇನೆ ಎಂದ ವಿರಾಟ್ ಕೊಹ್ಲಿ ರಿಷಭ್ ಪಂತ್ ತನ್ನ ವೇಗದ ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಬಲ್ಲಂತಹ ಆಟಗಾರ ಎಂದು ಹೊಗಳಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಮಾತಿನಂತೆ ರಿಷಭ್ ಪಂತ್ ಕೂಡ ಈ ಹಿಂದೆ ನಡೆದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಳಲ್ಲಿ ತಮ್ಮ ವೇಗದ ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸುವಂತಹ ಇನ್ನಿಂಗ್ಸ್ ಕಟ್ಟಿದ್ದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, August 12, 2021, 16:56 [IST]
Other articles published on Aug 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X