ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಪಾಕ್‌ ವಿರುದ್ಧ ಇಂಗ್ಲೆಂಡ್‌ ಸೋಲಿಗೆ ಇದೊಂದೇ ಕಾರಣವಂತೆ!

World Cup 2019 : ಅಚ್ಚರಿಯ ಮಾಹಿತಿ ನೀಡಿದ ಇಂಗ್ಲೆಂಡ್ ನಾಯಕ..?
We paid price for bad fielding, concedes Eoin Morgan

ನಾಟಿಂಗ್‌ಹ್ಯಾಮ್‌, ಜೂನ್‌ 04: ಕಳಪೆ ಕ್ಷೇತ್ರ ರಕ್ಷಣೆಯ ಒಂದೇ ಕಾರಣಕ್ಕೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸೋಲೆದುರಾಯಿತು ಎಂದು ಇಂಗ್ಲೆಂಡ್‌ ತಂಡದ ನಾಯಕ ಐಯಾನ್‌ ಮಾರ್ಗನ್‌ ಹೇಳಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ತಂಡ ತನ್ನ ಪಾಲಿನ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 348 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಇಂಗ್ಲೆಂಡ್‌ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 334 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಗಿ ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ಸೋಲಿನ ಆಘಾತಕ್ಕೊಳಗಾಯಿತು.

ಪಾಕಿಸ್ತಾನ ತಂಡ ಈ ಬಾರಿ ವಿಶ್ವಕಪ್‌ ಟ್ರೋಫಿ ಗೆದ್ದೇ ಗೆಲ್ಲುತ್ತಂತೆ!ಪಾಕಿಸ್ತಾನ ತಂಡ ಈ ಬಾರಿ ವಿಶ್ವಕಪ್‌ ಟ್ರೋಫಿ ಗೆದ್ದೇ ಗೆಲ್ಲುತ್ತಂತೆ!

ಇನ್ನು ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಕಳಪೆ ಫೀಲ್ಡಿಂಗ್‌ ಸೋಲಿಗೆ ಪ್ರಮುಖ ಕಾರಣ. ಪಂದ್ಯದಲ್ಲಿ 62 ಎಸೆತಗಳಲ್ಲಿ 84 ರನ್‌ಗಳಿಸಿ ಪಾಕ್‌ ಗೆಲುವಿನ ರೂವಾರಿಯಾದ ಮೊಹಮ್ಮದ್‌ ಹಫೀಝ್‌ 14 ರನ್‌ಗಳಿಸಿದ್ದಾಗ ನೀಡಿದ್ದ ಸುಲಭದ ಕ್ಯಾಚನ್ನು ಚೇಸನ್‌ ರಾಯ್‌ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದರು.

ಪಾಕ್‌ ಆಟಗಾರಿಗೆ ವಿರಾಟ್‌ ಕೊಹ್ಲಿ ರೀತಿ ಆಡುವ ಆಸೆಯಂತೆ!ಪಾಕ್‌ ಆಟಗಾರಿಗೆ ವಿರಾಟ್‌ ಕೊಹ್ಲಿ ರೀತಿ ಆಡುವ ಆಸೆಯಂತೆ!

ಜೇಸನ್‌ ರಾಯ್‌ ಮಾತ್ರವೇ ಅಲ್ಲ. ಕ್ಷೇತ್ರ ರಕ್ಷಣೆ ವೇಳೆ ನಡೆಸಿದ ಹಲವು ಎಡವಟ್ಟಿನಿಂದ ಒಂದೊಂದೇ ರನ್‌ಗಳನ್ನು ಬಿಟ್ಟುಕೊಡುವುದರ ಜೊತೆಗೆ, ಬೌಲರ್‌ಗಳು 11 ವೈಡ್‌ಗಳನ್ನು ಎಸೆದರು. ಇವೆಲ್ಲದರ ಪರಿಣಾಮ ಇಂಗ್ಲೆಂಡ್‌ ತಂಡಕ್ಕೆ ಹೆಚ್ಚುವರಿ 30 ರನ್‌ಗಳ ಗುರಿ ಬೆನ್ನತ್ತುವಂತಾಯಿತು.

 ವಿಶ್ವಕಪ್‌: ಅತಿ ಅಪರೂಪದ ದಾಖಲೆ ಬರೆದ ಬಾಂಗ್ಲಾ ಆಲ್‌ರೌಂಡರ್‌! ವಿಶ್ವಕಪ್‌: ಅತಿ ಅಪರೂಪದ ದಾಖಲೆ ಬರೆದ ಬಾಂಗ್ಲಾ ಆಲ್‌ರೌಂಡರ್‌!

"ಒಟ್ಟಾರೆ ಹೇಳುವುದಾದರೆ ನಮ್ಮ ತಂಡಕ್ಕೆ ಅಂಥದ್ದೇನು ಕೆಟ್ಟದಿನವಲ್ಲ. ಆದರೆ, ಕ್ಷೇತ್ರರಕ್ಷಣೆಯಲ್ಲಿ ನಿಜವಾಗಿಯೂ ಕೆಟ್ಟದಿನವೇ. ಕ್ಷೇತ್ರ ರಕ್ಷಣೆ ವೇಳೆ ನಮ್ಮ ತಂಡ ಸಾಮಾನ್ಯವಾಗಿ ಮಾಡದೇ ಇರುವಂತಹ ತಪ್ಪುಗಳನ್ನು ಎಸಗಿತು. ಇದರಿಂದ 15-20 ರನ್‌ಗಳನ್ನು ಹೆಚ್ಚುವರಿಯಾಗಿ ಬಿಟ್ಟುಕೊಟ್ಟೆವು,'' ಎಂದು ಮಾರ್ಗನ್‌ ಹೇಳಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾ ತಂಡದ ಗರಿಷ್ಠ ಮೊತ್ತಗಳ ದಾಖಲೆ!ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾ ತಂಡದ ಗರಿಷ್ಠ ಮೊತ್ತಗಳ ದಾಖಲೆ!

ಇಂಗ್ಲೆಂಡ್‌ ತಂಡ ತನ್ನ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಕಾರ್ಡಿಫ್‌ನಲ್ಲಿ ಪೈಪೋಟಿ ನಡೆಸಲಿದೆ. ಬಾಂಗ್ಲಾದೇಶ ತಂಡ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜಯ ದಾಖಲಿಸಿ ಆತ್ಮವಿಶ್ವಾಸದ ಅಲೆಯಲ್ಲಿದೆ.

Story first published: Tuesday, June 4, 2019, 19:28 [IST]
Other articles published on Jun 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X