ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಸರಣಿಗೆ 25 ಸದಸ್ಯರ ವೆಸ್ಟ್ ಇಂಡೀಸ್ ತಂಡ ಪ್ರಕಟ

West Indies Announce 25-man Squad For Test Series Against England

ಜಮೈಕಾ, ಜೂನ್ 3: ಕೊರೊನಾವೈರಸ್ ಮಹಾಮಾರಿಯ ನಡುವೆ ಕ್ರಿಕೆಟ್ ಚಟುವಟಿಕೆಗಳು ನಿಧಾನಗತಿಯಲ್ಲಿ ಆರಂಭವಾಗುತ್ತಿವೆ. ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಸರಣಿ ಘೋಷಣೆಯಾಗಿದೆ. ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ವೆಸ್ಟ್ ಇಂಡೀಸ್ ತಂಡದ ಸದಸ್ಯರನ್ನು ಇಂದು ಪ್ರಕಟಿಸಲಾಗಿದೆ.

25 ಆಟಗಾರರು ಪ್ಲಸ್ 11 ರಿಸರ್ವ್ ಆಟಗಾರರಿರುವ ತಂಡವನ್ನು ಕ್ರಿಕೆಟ್ ವೆಸ್ಟ್ ಇಂಡೀಸ್(CWI) ಆಯ್ಕೆ ಸಮಿತಿ ಜೂನ್ 3ರಂದು ಪ್ರಕಟಿಸಿದೆ. ಮೂವರು ಆಟಗಾರರು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕಿದ್ದಾರೆ.

 ವರ್ಣಬೇಧ ನೀತಿ ಬರೀ ಫುಟ್ಬಾಲ್‌ನಲ್ಲಲ್ಲ, ಕ್ರಿಕೆಟ್‌ನಲ್ಲೂ ಇದೆ: ಕ್ರಿಸ್ ಗೇಲ್ ವರ್ಣಬೇಧ ನೀತಿ ಬರೀ ಫುಟ್ಬಾಲ್‌ನಲ್ಲಲ್ಲ, ಕ್ರಿಕೆಟ್‌ನಲ್ಲೂ ಇದೆ: ಕ್ರಿಸ್ ಗೇಲ್

ಎಲ್ಲಾ ಆಟಗಾರರು, ಸಿಬ್ಬಂದಿಗೆ ಕೊವಿಡ್ 19 ಪರೀಕ್ಷೆ ಕಡ್ಡಾಯವಾಗಿದೆ. ಮೈದಾನದಲ್ಲಿ ಅನುಸರಿಸಬೇಕಾದ ಬಯೋ ಸುರಕ್ಷಿತ ನಿಯಮಾವಳಿಗಳನ್ನು ಉಭಯ ತಂಡಗಳಿಗೂ ತಲುಪಿಸಲಾಗಿದೆ.

ಇಂಗ್ಲೆಂಡ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳನ್ನಾಡಲಿರುವ ವೆಸ್ಟ್ ಇಂಡೀಸ್ ತಂಡವು ಜೂನ್ 9ರಂದು ಇಂಗ್ಲೆಂಡಿಗೆ ಆಗಮಿಸಲಿದ್ದು, 14 ದಿನಗಳ ಕಡ್ಡಾಯ ಕ್ವಾರಂಟೈನ್ ನಲ್ಲಿರಲಿದೆ. ನಂತರ ಓಲ್ಡ್ ಟ್ರಾಫರ್ಡ್ ನಲ್ಲಿ ತರಬೇತಿ ಶಿಬಿರ ನಡೆಯಲಿದೆ.

ತಂಡದಲ್ಲಿ ಇಬ್ಬರು ಹೊಸಬರು

ತಂಡದಲ್ಲಿ ಇಬ್ಬರು ಹೊಸಬರು

ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕ್ರುಮಾ ಬೊನರ್ ಹಾಗೂ ವೇಗದ ಬೌಲರ್ ಕೆಮಾರ್ ಹೋಲ್ಡರ್ ಹೊಸ ಮುಖಗಳಾಗಿದ್ದಾರೆ. ಹೋಲ್ಡರ್ 18 ಪಂದ್ಯಗಳಿಂದ 18.91 ಸರಾಸರಿಯಂತೆ 36 ವಿಕೆಟ್ ಗಳಿಸಿದ್ದಾರೆ. ಅಂಡರ್ 19 ತಂದದ ಸದಸ್ಯರಾಗಿದ್ದರು. 31 ವರ್ಷ ವಯಸ್ಸಿನ ಬೊನರ್ 58.11ರನ್ ಸರಾಸರಿಯಲ್ಲಿ 523ರನ್ ಗಳಿಸಿದ್ದಾರೆ. ವಿಂಡೀಸ್ ಪರ 2011 ಹಾಗೂ 2012ರಲ್ಲಿ ಟಿ20ಐ ಪಂದ್ಯಗಳನ್ನಾಡಿದ್ದರು. ಇದು ಮೊದಲ ಟೆಸ್ಟ್ ಸರಣಿಯಾಗಿದೆ.

ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ

ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ

ವೆಸ್ಟ್ ಇಂಡೀಸ್ ತಂಡದಿಂದ ಇಂಗ್ಲೆಂಡ್ ಸರಣಿ ವೇಳಾಪಟ್ಟಿ:
* ಮೊದಲ ಟೆಸ್ಟ್ : ಜುಲೈ 8 ರಿಂದ 12, ಏಜಸ್ ಬೌಲ್, ಸೌಂಥಾಪ್ಟನ್.
* ಎರಡನೇ ಟೆಸ್ಟ್ : ಜುಲೈ 16 ರಿಂದ 20, ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್.
* ಮೂರನೇ ಟೆಸ್ಟ್ : ಜುಲೈ 24 ರಿಂದ 28, ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್.

ವೆಸ್ಟ್ ಇಂಡೀಸ್ ತಂಡವು ಜೂನ್ 9ರಂದು ಇಂಗ್ಲೆಂಡಿಗೆ ಆಗಮಿಸಲಿದ್ದು, 14 ದಿನಗಳ ಕಡ್ಡಾಯ ಕ್ವಾರಂಟೈನ್ ನಲ್ಲಿರಲಿದೆ. ಈ ಸರಣಿಯನ್ನು ಸಂಪೂರ್ಣ ಜೀವ ರಕ್ಷಕ ವಾತಾವರಣದಲ್ಲಿ ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಸಲು ಉದ್ದೇಶಿಸಲಾಗಿದೆ.
ವೆಸ್ಟ್ ಇಂಡೀಸ್ ತಂಡದಲ್ಲಿ 11 ರಿಸರ್ವ್

ವೆಸ್ಟ್ ಇಂಡೀಸ್ ತಂಡದಲ್ಲಿ 11 ರಿಸರ್ವ್

ವೆಸ್ಟ್ ಇಂಡೀಸ್ ತಂಡ:
ಜಾಸನ್ ಹೋಲ್ಡರ್ (ನಾಯಕ), ಜೆ ಬ್ಲಾಕ್ ವುಡ್, ಕ್ರುಮಾ ಬೊನರ್, ಕೆ ಬ್ರಥ್ ವೈಟ್, ಎಸ್ ಬ್ರೂಕ್ಸ್, ಜಾಸನ್ ಕ್ಯಾಂಪ್ ಬೆಲ್, ಆರ್ ಚೇಸ್, ಆರ್ ಕಾರ್ನ್ ವಾಲ್, ಎಸ್ ಡೌರಿಚ್ (ವಿಕೆಟ್ ಕೀಪರ್), ಕೆಮಾರ್ ಹೋಲ್ಡರ್, ಶಾನ್ ಹೋಪ್, ಎ ಜೋಸೆಫ್, ಆರ್ ರೀಫರ್, ಕಿಮಾರ್ ರೋಚ್.
ರಿಸರ್ವ್: ಸುನಿಲ್ ಆಂಬ್ರಿಸ್, ಜೋಶುವಾ ಡಾ ಸಿಲ್ವಾ, ಶಾನನ್ ಗ್ರ್ಯಾಬ್ರಿಯಲ್, ಕಿಯಾನ್ ಹಾರ್ಡಿಂಗ್, ಕೈಲಿ ಮೇಯರ್ಸ್, ಪ್ರೆಸ್ಟನ್ ಮೆಕ್ ಸ್ವೀನ್, ಮಾರ್ಕ್ವೆನೊ ಮಿಂಡ್ಲೆ, ಶೇನ್ ಮೊಸೆಲೆ, ಆಂಡರ್ಸನ್ ಫಿಲಿಫ್, ಓಶಾನೆ ಥಾಮಸ್, ಜೊಮೆಲ್ ವಾರಿಕನ್.

ಜೂನ್ ತಿಂಗಳಲ್ಲೇ ಆರಂಭವಾಗಬೇಕಾಗಿತ್ತು

ಜೂನ್ ತಿಂಗಳಲ್ಲೇ ಆರಂಭವಾಗಬೇಕಾಗಿತ್ತು

ಈ ಸರಣಿ ಜೂನ್ ತಿಂಗಳಲ್ಲೇ ಆರಂಭವಾಗಬೇಕಾಗಿತ್ತು. ಆದರೆ ಕೊರೊನಾ ವೈರಸ್‌ನ ಕಾರಣದಿಂದಾಗಿ ಮುಂದೂಡಲ್ಪಟ್ಟಿದೆ. ಕೊರೊನಾ ವೈರಸ್‌ನ ನಂತರ ಸ್ಥಗಿತವಾಗಿರುವ ಕ್ರಿಕೆಟ್ ಪಂದ್ಯಕ್ಕೆ ಈ ಸರಣಿಯ ಮೂಲಕ ಮತ್ತೆ ಚಾಲನೆ ದೊರೆಯಲಿದೆ. ಹೀಗಾಗಿ ಈ ಟೆಸ್ಟ್ ಸರಣಿಯ ಮೇಲೆ ಅಭಿಮಾನಿಗಳು ಸಾಕಷ್ಟು ಕುತೂಹಲದಿಂದ ಕಣ್ಣಿಟ್ಟಿದ್ದಾರೆ. ಕೊರೊನಾವೈರಸ್ ಹಿನ್ನೆಲೆಯಲ್ಲಿ 11ಕ್ಕೂ ಅಧಿಕ ಬದಲಿ ಆಟಗಾರರನ್ನು ಹೆಸರಿಸಲಾಗಿದೆ, ಡರೇನ್ ಬ್ರಾವೋ, ಶಿಮ್ರೊನ್ ಹೆತ್ಮೇರ್, ಕೀಮೋ ಪಾಲ್ ಅವರು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲು ನಿರಾಕರಿಸಿದರು ಎಂದು ಆಯ್ಕೆ ಸಮಿತಿ ಹೇಳಿದೆ.

Story first published: Wednesday, June 3, 2020, 21:08 [IST]
Other articles published on Jun 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X