ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸೀಸ್‌ ವಿರುದ್ಧದ ಸೋಲಿನ ಬಳಿಕ ಬೇಸರ ಹೊರಹಾಕಿದ ವಿಂಡೀಸ್‌!

ICC World Cup 2019 : ಇಂತಹ ಕೆಟ್ಟ ಅಂಪೈರಿಂಗ್ ನಾವೆಲ್ಲೂ ನೋಡಿಲ್ಲ..! | Oneindia Kannada
West Indies frustrated over poor umpiring

ಲಂಡನ್‌, ಜೂನ್‌ 07: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಳಪೆ ಅಂಪೈರಿಂಗ್‌ ಕುರಿತಾಗಿ ವೆಸ್ಟ್‌ ಇಂಡೀಸ್‌ ತಂಡದ ಆಟಗಾರರು ಬೇಸರ ವ್ಯಕ್ತ ಪಡಿಸಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

"ಈ ರೀತಿಯ ಹೇಳಿಕೆ ನೀಡಿದರೆ ನನಗೆ ದಂಡ ವಿಧಿಸಲಾಗುತ್ತದೆಯೋ ಏನೋ ಗೊತ್ತಿಲ್ಲ. ಆದರೆ, ಪಂದ್ಯದಲ್ಲಿ ಅಂಪೈರಿಂಗ್‌ ಬಹಳ ಜಿಗುಪ್ಸೆ ತರುವಂತಿತ್ತು. ನಮ್ಮ ಬೌಲಿಂಗ್‌ ವೇಳೆಯೂ ಬ್ಯಾಟ್ಸ್‌ಮನ್‌ಗಳ ತಲೆ ಹತ್ತಿರವೇ ಚೆಂಡು ಹೋಗುತ್ತಿದ್ದರೂ ವೈಡ್‌ ಎಂದು ತೀರ್ಪು ನೀಡಲಾಗಿತ್ತು. ಇನ್ನು ಓವರ್‌ ಒಂದರಲ್ಲೇ ಮೂರು ತಪ್ಪು ನಿರ್ಧಾರ ನಿಜಕ್ಕೂ ಜಿಗುಪ್ಸೆ ಮೂಡಿಸುತ್ತದೆ,'' ಎಂದು ವೆಸ್ಟ್‌ ಇಂಡೀಸ್‌ ತಂಡದ ಆಲ್‌ರೌಂಡರ್‌ ಕಾರ್ಲೋಸ್‌ ಬ್ರಾತ್‌ವೇಟ್‌ ಪಂದ್ಯದ ಬಳಿಕ ತಮ್ಮ ಬೇಸರ ಹೊರಹಾಕಿದ್ದಾರೆ.

ವಿಶ್ವ ದಾಖಲೆ ಬರೆದ ಮಿಚೆಲ್‌ ಸ್ಟಾರ್ಕ್‌ಗೆ ಹೊಸ ನಿಕ್‌ ನೇಮ್‌!

ಗುರುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 289 ರನ್‌ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್‌ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 273 ರನ್‌ಗಳನ್ನು ಮಾತ್ರವೇ ಗಳಿಸಿ 15 ರನ್‌ಗಳ ಅಂತರದಲ್ಲಿ ಸೋಲುಂಡಿತು.

ಪಂದ್ಯದಲ್ಲಿ ಆನ್‌ಫೀಲ್ಡ್‌ ಅಂಪೈರ್‌ಗಳಾದ ಕ್ರಿಸ್‌ ಗಫಾನಿ ಮತ್ತು ರುಚಿರ ಪಲ್ಲಿಯಾಗುರುಗೆ ಒಟ್ಟು ನಾಲ್ಕು ಬಾರಿ ತಮ್ಮ ನಿರ್ಧಾರ ಬದಲಾಯಿಸಿದ್ದರು. ಅದರಲ್ಲೂ ಮಿಚೆಲ್‌ ಸ್ಟಾರ್ಕ್‌ ನೋಬಾಲ್‌ ಮೂಲಕ ವೆಸ್ಟ್‌ ಇಂಡೀಸ್‌ನ ಪ್ರಮುಖ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಅವರ ವಿಕೆಟ್‌ ಪಡೆದಿದ್ದರು. ಇದನ್ನು ಸ್ಟ್ರೈಕ್‌ ಅಂಪೈರ್‌ ಕ್ರಿಸ್‌ ಗಫಾನಿ ಗಮನಿಸುವಲ್ಲಿ ವಿಫಲರಾಗಿದ್ದರು.

 ಎಬಿ ಡಿ'ವಿಲಿಯರ್ಸ್‌ ಸೇವೆ ತಿರಸ್ಕರಿಸಿದ್ದಕ್ಕೆ ಕಾರಣಕೊಟ್ಟ ದಕ್ಷಿಣ ಆಫ್ರಿಕಾ! ಎಬಿ ಡಿ'ವಿಲಿಯರ್ಸ್‌ ಸೇವೆ ತಿರಸ್ಕರಿಸಿದ್ದಕ್ಕೆ ಕಾರಣಕೊಟ್ಟ ದಕ್ಷಿಣ ಆಫ್ರಿಕಾ!

"280+ ರನ್‌ಗಳ ಗುರಿ ಬೆನ್ನತ್ತಿರುವ ಸಂದರ್ಭದಲ್ಲಿ ಕ್ರಿಸ್‌ ಗೇಲ್‌ ವಿಕೆಟ್‌ ಕಳೆದುಕೊಂಡದ್ದು ದೊಡ್ಡ ನಷ್ಟ. ಏಕೆಂದರೆ ಅವರೊಬ್ಬರೇ ತಂಡದ ಮೊತ್ತವನ್ನು 180ರ ಗಡಿ ಮುಟ್ಟಿಸುವ ಸಾಮರ್ಥ್ಯ ಹೊಂದಿದ್ದಾರೆ. ಅಂಪೈರ್‌ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕ ಸೇವೆ ನೀಡುವ ಪ್ರಯತ್ನ ನಡೆಸಿದರೆ, ಆಟಗಾರರು ಮತ್ತು ಅಂಪೈರ್‌ಗಳ ನಡುವೆ ಯಾವುದೇ ಭಿನ್ನಾಭಿಪ್ರಾಯ ಮೂಡುವುದಿಲ್ಲ,'' ಎಂದು ಬ್ರಾತ್‌ವೇಟ್‌ ಹೇಳಿದ್ದಾರೆ.

ಇದೇ ವೇಳೆ ವೆಸ್ಟ್‌ ಇಂಡೀಸ್‌ ತಂಡದ ನಾಯಕ ಜೇಸನ್‌ ಹೋಲ್ಡರ್‌ ಕೂಡ ಬೇಸರ ವ್ಯಕ್ತ ಪಡಿಸಿದ್ದು, ತಮ್ಮ ತಂಡ ಮಾತ್ರ ಅಂಪೈರ್‌ಗಳ ಪ್ರಮಾದಕ್ಕೆ ಗುರಿಯಾದದ್ದು ದುರದೃಷ್ಟಕರ ಎಂದು ಹೇಳಿದ್ದಾರೆ.

ವಿಶ್ವಕಪ್‌ನಲ್ಲಿ ವಿಶೇಷ ದಾಖಲೆ ಬರೆದ ಆಸೀಸ್‌ನ ನೇಥನ್‌ ಕೌಲ್ಟರ್‌ ನೈಲ್‌!ವಿಶ್ವಕಪ್‌ನಲ್ಲಿ ವಿಶೇಷ ದಾಖಲೆ ಬರೆದ ಆಸೀಸ್‌ನ ನೇಥನ್‌ ಕೌಲ್ಟರ್‌ ನೈಲ್‌!

"ಅಂಪೈರ್‌ಗಳ ತಪ್ಪು ತೀರ್ಪುಗಳು ನಮ್ಮ ತಂಡದ ವಿರುದ್ಧವೇ ಮೂಡಿಬಂದದ್ದು ನಮ್ಮ ದುರದೃಷ್ಟ ಎಂದನಿಸುತ್ತದೆ. ಅಂಪೈರ್‌ಗಳ ಸಹಜ ತಪ್ಪಿದು ಎಂದು ನಂಬುತ್ತೇನೆ. ಈ ಕುರಿತಾಗಿ ಹೆಚ್ಚೇನೂ ಮಾತನಾಡುವುದಿಲ್ಲ. ಹೆಚ್ಚೇನು ಹೇಳಬೇಕು ಎಂಬುದೂ ತಿಳಿಯುತ್ತಿಲ್ಲ. ತಮಾಷೆ ಎಂದರೆ ಎಲ್ಲಾ ತಪ್ಪು ನಿರ್ಧಾರಗಳು ನಮ್ಮ ವಿರುದ್ಧವೇ ಮೂಡಿಬಂದಿರುವುದು. ಇವೆಲ್ಲವೂ ಆಟದ ಒಂದು ಭಾಗವೆಂದು ನಂಬಿದ್ದೇನೆ,'' ಎಂದು ಹೋಲ್ಡರ್‌ ಸೋಲಿನ ನಿರಾಸೆಯ ನಡುವೆಯೂ ಪ್ರಬುದ್ಧತೆಯ ಮಾತುಗಳನ್ನಾಡಿದ್ದಾರೆ.

ಮೈದಾನಕ್ಕೆ ನುಗ್ಗಿದ ಸ್ಮಿಮ್‌ ಸೂಟ್‌ ಸುಂದರಿಗೆ 11 ಲಕ್ಷ ರೂ. ದಂಡ!

ವೆಸ್ಟ್‌ ಇಂಡೀಸ್‌ ತಂಡ ಜೂನ್‌ 10ರಂದು ನಡೆಯಲಿರುವ ತನ್ನ ಮುಂದಿನ ಪಂದ್ಯದಲ್ಲಿ ಅಪಾಯಕಾರಿ ದಕ್ಷಿಣ ಆಫ್ರಿಕಾ ವಿರುದ್ಧ ಪೈಪೋಟಿ ನಡೆಸಲಿದೆ. ದಕ್ಷಿಣ ಆಫ್ರಿಕಾ ಸತತ ಮೂರು ಸೋಲುಂಡಿದ್ದು ಮೊದಲ ಗೆಲುವಿಗಾಗಿ ಹಸಿದ ಹೆಬ್ಬುಲಿಯಂತೆ ಕಾದು ಕುಳಿತಿದೆ.

Story first published: Friday, June 7, 2019, 21:22 [IST]
Other articles published on Jun 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X