ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂಜಾಬ್‍ ಕಿಂಗ್ಸ್‌ಗೆ ಕೆಎಲ್ ರಾಹುಲ್ ಧನ್ಯವಾದ, ಕಪ್ ನಮ್ದೇ ಎಂದ ಮ್ಯಾಕ್ಸ್‌ವೆಲ್: ಡಿ. 1ರ ಕ್ರಿಕೆಟ್‌ ಸುದ್ದಿಗಳು

What happened in the cricket world on December 1

ಡಿಸೆಂಬರ್ 1ರ ಬುಧವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ವಿದ್ಯಮಾನಗಳು ಜರುಗಿವೆ. ಒಂದೆಡೆ ಈ ಬಾರಿಯ ಐಪಿಎಲ್ ರಿಟೆನ್ಷನ್ ಪ್ರಕ್ರಿಯೆ ಮುಗಿದ ನಂತರ ರಿಟೈನ್ ಆದ ಮತ್ತು ಆಗದ ಆಟಗಾರರು ಪ್ರತಿಕ್ರಿಯಿಸಿದ್ದರೆ, ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಭವಿಷ್ಯದ ಕುರಿತು ಮಾತನಾಡಿರುವ ರಾಬಿನ್ ಉತ್ತಪ್ಪ ಎಂಎಸ್ ಧೋನಿ ನಂತರ ಯಾರು ತಂಡದ ನಾಯಕನಾಗಲಿದ್ದಾರೆ ಎಂಬುದನ್ನು ಊಹಿಸಿದ್ದಾರೆ. ಹೀಗೆ ಡಿಸೆಂಬರ್ 1ರಂದು ಜರುಗಿದ ಕ್ರಿಕೆಟ್‍ ವಿದ್ಯಮಾನಗಳ ವಿವರ ಈ ಕೆಳಕಂಡಂತಿದೆ.

* ನವೆಂಬರ್ 30ರಂದು ನಡೆದ ರಿಟೆನ್ಷನ್ ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿಗೆ 15 ಕೋಟಿ ನೀಡುವ ಮೂಲಕ ಮೊದಲನೇ ಆಟಗಾರನಾಗಿ ರಿಟೈನ್ ಮಾಡಿಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಜೊತೆಗಿನ ಪಯಣ ಮತ್ತೆ ಮುಂದುವರಿದಿದೆ. ಇನ್ನೂ 3 ವರ್ಷಗಳ ಕಾಲ ಈ ಫ್ರಾಂಚೈಸಿಯ ಜೊತೆ ಇರುವುದು ತುಂಬಾ ಖುಷಿಯ ವಿಚಾರ. ಇನ್ನೂ ಅತ್ಯುತ್ತಮವಾದದ್ದು ಬರಲಿವೆ ಎನ್ನುವ ವಿಶ್ವಾಸದಲ್ಲಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ. ಹೀಗೆ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕುರಿತಾಗಿ ರಿಟೇನ್ ಆದ ಬಳಿಕ ಮಾತನಾಡಿರುವ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು ಸಾಕಷ್ಟು ವೈರಲ್ ಆಗಿದೆ.

* ಪಂಜಾಬ್‌ ಕಿಂಗ್ಸ್ ತಂಡವು ನಾಯಕ, ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನು ಕೈಬಿಟ್ಟ ನಂತರ, ಅವರು ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಎಲ್ಲರಿಗೂ ಧನ್ಯವಾದ ತಿಳಿಸುವ ಪೋಸ್ಟ್ ಹಂಚಿಕೊಂಡಿದ್ದಾರೆ. ಮೈಕ್ರೋ ಬ್ಲಾಗಿಂಗ್ ವೇದಿಕೆಯಾದ ಕೂ ನಲ್ಲಿ ಕನ್ನಡದಲ್ಲಿ ತಮ್ಮ ಮನದ ಮಾತುಗಳ್ಳನ್ನು ಹಂಚಿಕೊಂಡಿರುವ ರಾಹುಲ್, ಇದೊಂದು ಉತ್ತಮ ಪಯಣವಾಗಿತ್ತು, ನಿಮ್ಮ ಪ್ರೀತಿಗೆ ಧನ್ಯವಾದಗಳು ಮತ್ತೊಮ್ಮೆ ಭೇಟಿಯಾಗೋಣ' ಎಂದು ಬರೆದುಕೊಂಡಿದ್ದಾರೆ.

* ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನನ್ನು ರಿಟೈನ್ ಮಾಡಿಕೊಂಡದಕ್ಕೆ ಸಂತಸ ವ್ಯಕ್ತಪಡಿಸಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಮುಂದಿನ ವರ್ಷ ಮತ್ತೊಂದಷ್ಟು ಹೆಜ್ಜೆಗಳನ್ನು ಮುಂದಿಡುವುದರ ಮೂಲಕ ಟ್ರೋಫಿಯನ್ನು ಗೆಲ್ಲಲಿದ್ದೇವೆ ಎಂದು ಭರವಸೆಯನ್ನು ನೀಡಿದ್ದಾರೆ.

ಮೊಹಮ್ಮದ್ ಸಿರಾಜ್ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನನ್ನು ರಿಟೈನ್ ಮಾಡಿಕೊಂಡಿರುವುದರ ಕುರಿತಾಗಿ ಮಾತನಾಡಿದ್ದು ತನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ತಮ್ಮ ಫ್ರಾಂಚೈಸಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಹಾಗೂ ಇದೇ ಸಮಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿರುವ ಮೊಹಮ್ಮದ್ ಸಿರಾಜ್ ಇದೇ ರೀತಿ ನಮ್ಮ ಮೇಲೆ ಪ್ರೀತಿ ಇಟ್ಟಿರಿ ಮತ್ತು ಪ್ರೋತ್ಸಾಹಿಸುತ್ತಿರಿ ಎಂದಿದ್ದಾರೆ.

*

Punjab ತಂಡದಿಂದ Rahul ಆಚೆ ಬಂದಿದ್ದರ ಹಿಂದಿನ ರಹಸ್ಯವೇನು | Oneindia Kannada

Story first published: Wednesday, December 1, 2021, 22:34 [IST]
Other articles published on Dec 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X