ಸಚಿನ್‌ಗೆ ವಿಭಿನ್ನವಾಗಿ ವಿಶ್ ಮಾಡಿದ ಕನ್ನಡಿಗ ವೆಂಕಟೇಶ್ ಪ್ರಸಾದ್

ಮುಂಬೈ: ಮಾಸ್ಟರ್ ಬ್ಲಾಸ್ಟರ್, ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುತ್ತಿದ್ದ ಭಾರತ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಏಪ್ರಿಲ್ 24ರ ಶನಿವಾರಕ್ಕೆ 48ರ ಹರೆಯಕ್ಕೆ ಕಾಲಿರಿಸಿದ್ದಾರೆ. ಕ್ರಿಕೆಟ್‌ ದಿಗ್ಗಜನಿಗೆ ಜನಪ್ರಿಯ ವ್ಯಕ್ತಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಮಂಕಾದ ಹಾಲಿ ಚಾಂಪಿಯನ್ಸ್ ; ರನ್ ಗಳಿಸುವಲ್ಲಿ ಮುಂಬೈ ಪದೇ ಪದೇ ಫ್ಲಾಪ್ ಆಗ್ತಿರೋದೇಕೆ?

ಕ್ರಿಕೆಟ್‌ ದಂತಕತೆಗಳು, ಸಿನಿಮಾ ತಾರೆಯರು, ಅಥ್ಲೀಟ್‌ಗಳು, ರಾಜಕರಣಿಗಳು, ಉದ್ಯಮಿಗಳು ಎಲ್ಲರೂ ಸಚಿನ್‌ಗೆ ಶುಭ ಕೋರಿ ಟ್ವೀಟ್‌ ಮಾಡಿದ್ದಾರೆ. ಕ್ರಿಕೆಟಿಗರಾದ ಯುವರಾಜ್ ಸಿಂಗ್, ಕನ್ನಡಿಗ ವೆಂಕಟೇಶ್ ಪ್ರಸಾದ್, ಸುರೇಶ್ ರೈನಾ, ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಹೀಗೆ ಬಹುತೇಕರು ಟ್ವೀಟ್‌ ಮೂಲಕ ಶುಭಕೋರಿದ್ದಾರೆ.

ಸಚಿನ್‌ಗೆ ಹುಟ್ಟುಹಬ್ಬದಂದು ಬಂದಿರುವ ಟ್ವೀಟ್‌ಗಳಲ್ಲಿ ವೆಂಕಟೇಶ್ ಪ್ರಸಾದ್ ಟ್ವೀಟ್ ಹೆಚ್ಚು ಗಮನ ಸೆಳೆಯುತ್ತಿದೆ. ಟ್ವೀಟ್ ಮಾಡಿರುವ ವೆಂಕಟೇಶ್, 'ಸಚ್‌ ಅಂದರೆ ಸತ್ಯ, ಸಚ್ ಅಂದರೆ ಬದುಕು, ಸಚ್ ಅಂದರೆ ಉತ್ತರ. ಸಚ್ ಅಂದರೆ ಅದೇ. ಜಗತ್ತು ಕಂಡ ಶ್ರೇಷ್ಠ ಕ್ರಿಕೆಟಿಗನಿಗೆ ಮಾತ್ರ ಶುಭಾಶಯಗಳಲ್ಲ, ಅನುಕಂಪದ, ಶ್ರೇಷ್ಠ ಮನುಷ್ಯನಿಗೂ ಹುಟ್ಟು ಹಬ್ಬದ ಶುಭಾಶಯಗಳು' ಎಂದು ಸಾಲು ಬರೆದುಕೊಂಡಿದ್ದಾರೆ.

ಸಚಿನ್ ಹೆಸರಿನಲ್ಲಿ ಚಾರಿಟಿಗಳೂ ಇವೆ. ಸಚಿನ್ ಈ ಚಾರಿಟಿಗಳ ಮೂಲಕ ಕಷ್ಟದಲ್ಲಿರುವವರಿಗೆ ನೆರವು ನೀಡುತ್ತಿದ್ದಾರೆ. ವೆಂಕಟೇಶ್ ವಿಶೇಷ ಟ್ವೀಟ್‌ಗೆ ಈ ಸಂಗತಿ ಕಾರಣ. ಕ್ರಿಕೆಟ್ ಕ್ಷೇತ್ರದಲ್ಲಿ 100 ಶತಕಗಳ ವಿಶ್ವ ದಾಖಲೆ ನಿರ್ಮಿಸಿರುವ ಸಚಿನ್, 200 ಟೆಸ್ಟ್ ಪಂದ್ಯಗಳಲ್ಲಿ 15921 ರನ್, 463 ಏಕದಿನ ಪಂದ್ಯಗಳಲ್ಲಿ 18426 ರನ್, 78 ಐಪಿಎಲ್ ಪಂದ್ಯಗಳಲ್ಲಿ 2334 ರನ್ ದಾಖಲೆ ಹೊಂದಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Saturday, April 24, 2021, 15:32 [IST]
Other articles published on Apr 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X