ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಫ್ಲ್ಯಾಷ್‌ಬ್ಯಾಕ್: ಇಂಗ್ಲೆಂಡ್-ಪಾಕಿಸ್ಥಾನ ರೋಚಕ ಕದನಗಳು

World Cup head-to-head: England and Pakistan are tied 4-4

ನವದೆಹಲಿ, ಮೇ 11: ಮುಂಬರಲಿರುವ ಐಸಿಸಿ ವಿಶ್ವಕಪ್‌ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ತನ್ನ ದ್ವಿತೀಯ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಸವಾಲು ಸ್ವೀಕರಿಸಲಿದೆ. ಅತ್ತ ಪಾಕಿಸ್ತಾನ ತಂಡ ಕೂಡ ತನ್ನ ದ್ವಿತೀಯ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಕಣಕ್ಕಿಳಿಯಲಿದೆ. 2019ರ ಐಸಿಸಿ ವಿಶ್ವಕಪ್ ಮೇ 30ರಿಂದ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಆರಂಭಗೊಳ್ಳಲಿದೆ.

ವಿಶ್ವಕಪ್‌ ಫ್ಲ್ಯಾಷ್‌ಬ್ಯಾಕ್‌: ಸ್ಕ್ವಾಷ್‌ ಬಾಲ್‌ನಿಂದ ಪಂದ್ಯ ಗೆಲ್ಲಿಸಿದ್ದ ಗಿಲ್‌ಕ್ರಿಸ್ಟ್‌!ವಿಶ್ವಕಪ್‌ ಫ್ಲ್ಯಾಷ್‌ಬ್ಯಾಕ್‌: ಸ್ಕ್ವಾಷ್‌ ಬಾಲ್‌ನಿಂದ ಪಂದ್ಯ ಗೆಲ್ಲಿಸಿದ್ದ ಗಿಲ್‌ಕ್ರಿಸ್ಟ್‌!

ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಕಾದಾಡಿದರೆ, ಪಾಕಿಸ್ತಾನ ತನ್ನ ಆರಂಭಿಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ಕಣಕ್ಕಿಳಿಯಲಿದೆ. ಎರಡೂ ತಂಡಗಳೂ ಜೂನ್ 3ರಂದು ವಿಶ್ವಕಪ್ 6ನೇ ಪಂದ್ಯದಲ್ಲಿ ನಾಟಿಂಗ್ಹ್ಯಾಮ್ ನಲ್ಲಿ ಕಾದಾಡುತ್ತಿವೆ.

ಐಪಿಎಲ್ ಫೈನಲ್‌: ಚೆನ್ನೈ vs ಮುಂಬೈ, ಕುತೂಹಲಕಾರಿ ಅಂಕಿ-ಅಂಶಗಳು!ಐಪಿಎಲ್ ಫೈನಲ್‌: ಚೆನ್ನೈ vs ಮುಂಬೈ, ಕುತೂಹಲಕಾರಿ ಅಂಕಿ-ಅಂಶಗಳು!

ಈವರೆಗೆ ಇಂಗ್ಲೆಂಡ್ ಮತ್ತು ಪಾಕಿಸ್ತಾನ 83 ಸಾರಿ ಮುಖಾಮುಖಿಯಾಗಿವೆ. ಇದರಲ್ಲಿ ಇಂಗ್ಲೆಂಡ್ 49-31ರ ಮುನ್ನಡೆ ಸಾಧಿಸಿದೆ. 3 ಪಂದ್ಯಗಳು ಫಲಿತಾಂಶವಿಲ್ಲವಾಗಿ ಘೋಷಿಸಲ್ಪಟ್ಟಿವೆ. ವಿಶ್ವಕಪ್‌ನಲ್ಲಿ ಇಂಗ್ಲೆಂಡ್-ಪಾಕಿಸ್ತಾನ ತಂಡಗಳ ಕುತೂಹಲಕಾರಿ ಪಂದ್ಯಗಳ ಇಣುಕುನೋಟ ಇಲ್ಲಿದೆ.

ಇಂಗ್ಲೆಂಡ್‌ಗೆ ಜಯ

ಇಂಗ್ಲೆಂಡ್‌ಗೆ ಜಯ

ಲೀಡ್ಸ್‌ನಲ್ಲಿ 1979 ಜೂನ್ 16ರಂದು ನಡೆದಿದ್ದ ವಿಶ್ವಕಪ್ 12ನೇ ಪಂದ್ಯದಲ್ಲಿ ಇಂಗ್ಲೆಂಡ್-ಪಾಕಿಸ್ತಾನ ತಂಡಗಳು ಕಾದಾಡಿದ್ದವು. ಇದು 60 ಓವರ್‌ಗಳ ಪಂದ್ಯ. ಇದರಲ್ಲಿ ನಾಯಕ ಆಸಿಫ್ ಇಕ್ಬಾಲ್ ಆಕರ್ಷಕ ಅರ್ಧಶತಕದ ಹೊರತಾಗಿಯೂ ಪಾಕಿಸ್ತಾನ 14 ರನ್‌ಗಳ ಹಿನ್ನಡೆ ಸನುಭವಿಸಿತ್ತು. ಇನ್ನು 1983 ಜೂನ್ 13ರಂದು ಲಾರ್ಡ್ಸ್ ನಲ್ಲಿ ನಡೆದಿದ್ದ ವಿಶ್ವಕಪ್ ಗ್ರೂಪ್ ಹಂತದ ಕದನದಲ್ಲೂ ಇಂಗ್ಲೆಂಡ್ 8 ವಿಕೆಟ್ ಗೆಲುವನ್ನಾಚರಿಸಿತ್ತು.

ಪಾಕ್‌ಗೆ ಮತ್ತೆ ಸೋಲು

ಪಾಕ್‌ಗೆ ಮತ್ತೆ ಸೋಲು

1983 ಜೂನ್ 18ರಲ್ಲಿ ಮ್ಯಾನ್ಚೆಸ್ಟರ್‌ನಲ್ಲಿ ನಡೆದಿದ್ದ ಇತ್ತಂಡಗಳ ಕಾದಾಟದಲ್ಲೂ ಇಂಗ್ಲೆಂಡ್ ತಂಡ ಮೇಲುಗೈ ಸಾಧಿಸಿತ್ತು. 60 ಓವರ್‌ಗಳ ಈ ಪಂದ್ಯದಲ್ಲಿ ಬ್ಯಾಟಿಂಗ್ ಆಯ್ದುಕೊಂಡಿದ್ದ ಪಾಕ್ 8 ವಿಕೆಟ್ ನಷ್ಟದಲ್ಲಿ 232 ರನ್ ಬಾರಿಸಿತ್ತು. ಗುರಿ ಬೆನ್ನತ್ತಿದ ಇಂಗ್ಲೆಂಡ್, ಗ್ರೇಮ್ ಫೌಲರ್ ಮತ್ತು ಕ್ರಿಸ್ ಟವೆರೆ ಅರ್ಧ ಶತಕದ ಬಲದೊಂದಿಗೆ 7 ವಿಕೆಟ್‌ ಗೆಲುವು ದಾಖಲಿಸಿತ್ತು. ಆದರೆ ಗೆಲುವಿನ ಲಯಕ್ಕಿಳಿದ ಪಾಕ್ ರಾವಲ್ಪಿಂಡಿಯಲ್ಲಿ ಅಕ್ಟೋಬರ್‌ 1987ರಲ್ಲಿ ನಡೆದಿದ್ದ ಪಂದ್ಯವನ್ನು 18 ನರ್‌ಗಳಿಂದ ಗೆದ್ದಿತ್ತು.

ಜಯದ ಕೇಕೆ ಮುಂದುವರೆಸಿದ್ದ ಪಾಕ್

ಜಯದ ಕೇಕೆ ಮುಂದುವರೆಸಿದ್ದ ಪಾಕ್

1987 ಅಕ್ಟೋಬರ್ 20ರಂದು ಕರಾಚಿಯಲ್ಲಿ ನಡೆದಿದ್ದ ಇತ್ತಂಡಗಳ ಕಾದಾಟದಲ್ಲಿ ಪಾಕಿಸ್ತಾನ ತಂಡ ಗೆಲುವನ್ನು ಮುಂದುವರೆಸಿತ್ತು. ಇಂಗ್ಲೆಂಡ್‌ನ ಬಿಲ್ ಅಥೆ ಮತ್ತು ನಾಯಕ ಮೈಕ್ ಗ್ಯಾಟಿಂಗ್ ಅರ್ಧ ಶತಕ ಬಾರಿಸಿದ್ದರಾದರೂ ತಂಡಕ್ಕೆ ಗೆಲುವು ತಂದುಕೊಡಲಾಗಿರಲಿಲ್ಲ. ಪಾಕ್ 7 ವಿಕೆಟ್ ಜಯ ಗಳಿಸಿತ್ತು. ಆದರೆ ಮಾರ್ಚ್ 1, 1992ರಂದು ಅಡಿಲೇಡ್‌ನಲ್ಲಿ ನಡೆದಿದ್ದ ಪಂದ್ಯ ಫಲಿತಾಂಶವಿಲ್ಲವೆಂದು ಘೋಷಿಸಲ್ಪಟ್ಟಿತು.

ಇತ್ತಂಡಗಳ 4-4ರ ಜಿದ್ದಾಜಿದ್ದಿ

ಇತ್ತಂಡಗಳ 4-4ರ ಜಿದ್ದಾಜಿದ್ದಿ

1992 ಮಾರ್ಚ್ 25ರಂದು ಮೆಲ್ಬರ್ನ್‌ನಲ್ಲಿ ನಡೆದಿದ್ದ ಪಂದ್ಯವನ್ನು ಪಾಕಿಸ್ತಾನ 22 ರನ್‌ಗಳಿಂದ ಗೆದ್ದುಕೊಂಡಿತು. 1996 ಮಾರ್ಚ್ 3ರಂದು ಕರಾಚಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಕಿಸ್ತಾನ 7 ವಿಕೆಟ್ ಜಯ ಸಂಭ್ರಮಿಸಿತ್ತು. ತಿರುಗಿಬಿದ್ದ ಇಂಗ್ಲೆಂಡ್ 2003 ಫೆಬ್ರವರಿ 22ರಲ್ಲಿ ಕೇಪ್ ಟೌನ್‌ನಲ್ಲಿ ನಡೆದಿದ್ದ ಪಂದ್ಯವನ್ನು ಭರ್ಜರಿ 112 ರನ್‌ಗಳಿಂದ ಗೆದ್ದಿತ್ತು. ಹೀಗೆ ಎರಡೂ ತಂಡಗಳು ಒಟ್ಟು 4-4 ವಿಶ್ವಕಪ್ ಪ್ರಮುಖ ಪಂದ್ಯಗಳಲ್ಲಿ ಜಯ ಸಾಧಿಸಿವೆ. 2019ರ ಮುಖಾಮುಖಿಯಲ್ಲಿ ಗೆಲ್ಲುವ ತಂಡ ಮೇಲುಗೈ ಸಾಧಿಸಲಿದೆ.

Story first published: Saturday, May 11, 2019, 22:44 [IST]
Other articles published on May 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X