ಚೆನ್ನೈ ವಿರುದ್ಧ ಹೋರಾಡಿ ಸೋತ ಬೆಂಗಳೂರು ಎಫ್‌ಸಿ

Posted By:
Bengaluru FC goes down to Chennaiyin FC in Indian Super League final

ಬೆಂಗಳೂರು, ಮಾರ್ಚ್ 17 : ಅಂತಿಮ ಕ್ಷಣದವರೆಗೆ ಉತ್ತಮ ಹೋರಾಟ ನಡೆಸಿದ ಬೆಂಗಳೂರು ಎಫ್ ಸಿ ತಂಡ, ಇಂಡಿಯನ್ ಸೂಪರ್ ಲೀಗ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ ವಿರುದ್ಧ 2-3ರಿಂದ ಪರಾಭವಗೊಂಡಿದೆ.

ಆರಂಭದಲ್ಲಿ ಬೆಂಗಳೂರು ಎಫ್ ಸಿ ತಂಡದ ನಾಯಕ ಸುನೀಲ್ ಚೆಟ್ರಿ ಅವರು 9ನೇ ನಿಮಿಷದಲ್ಲಿಯೇ ಗೋಲು ಬಾರಿಸಿ ಬೆಂಗಳೂರು ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರೂ, ನಂತರದ ಹಂತದಲ್ಲಿ ಚೆನ್ನೈಯಿನ್ ಎಫ್ ಸಿ ತಂಡ ಮೇಲುಗೈ ಸಾಧಿಸಿತು.

ಎರಡು ಅದ್ಭುತ ಹೆಡ್ಡರ್ ಮೂಲಕ, 17ನೇ ನಿಮಿಷ ಮತ್ತು 45ನೇ ನಿಮಿಷದಲ್ಲಿ ಎರಡು ಗೋಲು ಗಳಿಸಿದ ಚೆನ್ನೈ ತಂಡದ ಮೇಲ್ಸನ್ ಆಲ್ವೆಸ್ ಚಾಂಪಿಯನ್ ಶಿಪ್ ಪಂದ್ಯದ ಹೀರೋ ಆಗಿ ಮಿಂಚಿದರು. ಬೆಂಗಳೂರು ತಂಡದ ಪರವಾಗಿ 1 ಗೋಲು ಮತ್ತು ರಾಫೇಲ್ ಆಗಸ್ಟೋ 67ನೇ ನಿಮಿಷದಲ್ಲಿ ಒಂದೊಂದು ಗೋಲು ಗಳಿಸಿದರು.

Story first published: Saturday, March 17, 2018, 22:33 [IST]
Other articles published on Mar 17, 2018
+ ಇನ್ನಷ್ಟು
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ