ಕೋಲ್ಕತಾಗೆ ಬಂದಿಳಿದ ಫುಟ್ಬಾಲ್ ದಿಗ್ಗಜ ಮರಡೋನಾ

Posted By:

ಕೋಲ್ಕತಾ, ಡಿಸೆಂಬರ್ 11: ಫುಟ್ಬಾಲ್ ದಿಗ್ಗಜ ಡಿಯಾಗೋ ಮರಡೋನಾ ಅವರು ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೋಲ್ಕತಾಗೆ ಬಂದಿದ್ದು, ಸಾವಿರಾರು ಅಭಿಮಾನಿಗಳು ಸಂತಸದಿಂದ ಸ್ವಾಗತಿಸಿದರು.

ಮೆಸ್ಸಿ ಸಮಕ್ಕೆ ನಿಂತ ರೊನಾಲ್ಡೋ, ಟ್ವಿಟ್ಟರ್ ನಲ್ಲಿ ಪ್ರಶಂಸೆಯ ಮಳೆ

ನೀಲಿ ಟೀ ಶರ್ಟ್ ಕ್ಯಾಪ್ ಧರಿಸಿದ್ದ ಅರ್ಜೆಂಟೀನಾದ ಫುಟ್ಬಾಲ್ ತಾರೆ ಮರಡೋನಾ ಅವರು ದುಬೈ ಮೂಲಕ ಕೋಲ್ಕತಾಗೆ ಬಂದಿದ್ದು, ರಾಜರ್ಹಾತ್ ನ್ಯೂಟೌನ್ ನಲ್ಲಿರುವ ಹೋಟೆಲ್ ನಲ್ಲಿ ತಂಗಲಿದ್ದಾರೆ.

Legendary Diego Maradona arrives in Kolkata sans fan-frenzy

1986ರ ವಿಶ್ವಕಪ್ ವಿಜೇತ ಮರಡೋನಾ ಅವರು ಈ ಹಿಂದೆ ಡಿಸೆಂಬರ್ 2008ರಲ್ಲಿ ಕೋಲ್ಕತಾಗೆ ಭೇಟಿ ನೀಡಿದ್ದರು.

' ಭಾರತದಲ್ಲಿ ಫುಟ್ಬಾಲ್ ಕ್ರೇಜ್ ಹೆಚ್ಚಾಗುತ್ತಿದ್ದು, ಹೊಸ ಅಭಿಮಾನಿಗಳನ್ನು ಪಡೆಯುತ್ತಿದ್ದೇನೆ' ಎಂದಿದ್ದಾರೆ.

ಸೆಪ್ಟೆಂಬರ್ ತಿಂಗಳಿನಲ್ಲಿ ದುರ್ಗಾ ಪೂಜೆ ಸಮಯದಲ್ಲಿ ಬಂದು ಪೆಂಡಾಲ್ ಉದ್ಘಾಟಿಸಬೇಕಿದ್ದ ಮರಡೋನಾ ಅವರು ಈಗ ಕ್ಯಾನ್ಸರ್ ಪೀಡಿತ ರೋಗಿಗಳನ್ನು ಭೇಟಿ ಮಾಡಲಿದ್ದಾರೆ.

ಇದಲ್ಲದೆ, ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ ತಂಡ ಹಾಗೂ ಡಿಯಾಗೋ ಮರಡೋನಾ ತಂಡದ ನಡುವೆ ಪ್ರದರ್ಶನ ಪಂದ್ಯ ನಡೆಯಲಿದ್ದು, ಬರಸಾತ್ ಸ್ಟೇಡಿಯಂನಲ್ಲಿ ಡಿಸೆಂಬರ್ 12ರಂದು ಫುಟ್ಬಾಲ್ ಪ್ರೇಮಿಗಳಿಗೆ ರಸದೌತಣ ಸಿಗಲಿದೆ.

Story first published: Monday, December 11, 2017, 16:35 [IST]
Other articles published on Dec 11, 2017
+ ಇನ್ನಷ್ಟು
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ