ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ನಿಷೇಧಿತ ಫುಟ್ಬಾಲ್ ಪಟು ಸ್ವಾರೆಜ್ ಗೆ ಭರ್ಜರಿ ಸ್ವಾಗತ

By Mahesh

ಮಾಂಟೆ ವಿಡಿಯೋ(ಉರುಗ್ವೆ), ಜೂ.27: ಉರುಗ್ವೆ ತಂಡದ ಪ್ರಮುಖ ಆಟಗಾರ ಲೂಯಿಸ್ ಸ್ವಾರೆಜ್ ಅವರು ಇಟಲಿಯ ಕೆಲ್ಲಿನಿ ಅವರ ಭುಜ ಕಚ್ಚಿದ್ದಕ್ಕಾಗಿ ನಾಲ್ಕು ತಿಂಗಳ ಕಾಲ ಅಂತಾರಾಷ್ಟ್ರೀಯ ಫುಟ್ಬಾಲ್ ನಿಂದ ದೂರವುಳಿಯಬೇಕಾಗಿದೆ. ನಿಷೇಧಿತ ಆಟಗಾರನನ್ನು ಸ್ವಾಗತಿಸಲು ಉರುಗ್ವೆ ಅಧ್ಯಕ್ಷ ಜೀ ಮುಜಿಕಾ ಅವರು ಆಗಮಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಇಟಲಿ ತಂಡದ ಡಿಫೆಂಡರ್‌ ಜಾರ್ಜೊ ಕೆಲ್ಲಿನಿ ಭುಜಕ್ಕೆ ಕಚ್ಚಿದ್ದ ಸ್ವಾರೆಜ್, ದಂಡ ಸಹಿತ 9 ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿಷೇಧ ಶಿಕ್ಷೆ ಪಡೆದುಕೊಂಡಿದ್ದಾರೆ. ಜೊತೆಗೆ ಮುಂದಿನ 4 ತಿಂಗಳ ಕಾಲ ಯಾವುದೇ ಫುಟ್ಬಾಲ್​ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತ್ತಿಲ್ಲ ಎಂದು ಫೀಫಾ ಹೇಳಿದೆ.[ಕೆಲ್ಲಿನಿ ಕಚ್ಚಿದ ಸ್ವಾರೆಜ್ ಚಿತ್ರಗಳು]

ಮಂಗಳವಾರ ನಡೆದ ಉರುಗ್ವೆ ಮತ್ತು ಇಟಲಿ ನಡುವಿನ ಪಂದ್ಯದ ವೇಳೆ ಲೂಯಿಸ್ ಸ್ವಾರೆಜ್ ಅವರು ಇಟಲಿ ಆಟಗಾರ ಜಾರ್ಜೊ ಕೆಲ್ಲಿನಿ ಅವರನ್ನು ಕಚ್ಚಿ ಗಾಯಗೊಳಿಸಿದ್ದರು. ಘಟನೆ ರೆಫ್ರಿ ಕಣ್ಣಿಗೆ ಕಂಡಿರಲಿಲ್ಲ. 16ರ ಹಂತದಲ್ಲಿ ಉರುಗ್ವೆ ತಂಡ ಕೊಲಂಬಿಯಾವನ್ನು ಎದುರಿಸಲಿದೆ.[ವೇಳಾಪಟ್ಟಿ ನೋಡಿ]

ಆದರೆ, ಈ ಕುರಿತಂತೆ ಕೆಲ್ಲಿನಿ ಅವರು ಫೀಪಾಗೆ ದೂರು ನೀಡಿದ್ದು, ಫೀಫಾ ಅಧ್ಯಕ್ಷ ಕ್ಲಾಡಿಯೋ ಸಲ್ಸರ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಿದ ಅಧಿಕಾರಿಗಳು, ಸ್ವಾರೇಜ್ ಅವರಿಗೆ ನಾಲ್ಕು ತಿಂಗಳ ನಿಷೇಧ ಹೇರಿದ್ದಾರೆ. ಅಲ್ಲದೆ 1 ಲಕ್ಷ 12 ಸಾವಿರ ಡಾಲರ್ ಹಣವನ್ನು ದಂಡವಾಗಿ ಪಾವತಿಸುವಂತೆ ಸ್ವಾರೆಜ್‌ಗೆ ಸೂಚನೆ ನೀಡಿದ್ದಾರೆ. ಅಂತೆಯೇ ನಿಷೇಧವನ್ನು ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ಫೀಫಾ ಆದೇಶ ಹೊರಡಿಸಿದೆ. ಆದರೆ, ನಿಷೇಧಿತ ಆಟಗಾರನನ್ನು ಉರುಗ್ವೆ ದೇಶ ಬಿಗಿದಪ್ಪಿ ಬರಮಾಡಿಕೊಂಡಿದೆ.

ಕಚ್ಚುವುದು ನಿಷೇಧಕ್ಕೊಳಪಡುವುದು ಸ್ವಾರೆಜ್ ಹವ್ಯಾಸ

ಕಚ್ಚುವುದು ನಿಷೇಧಕ್ಕೊಳಪಡುವುದು ಸ್ವಾರೆಜ್ ಹವ್ಯಾಸ

ಸ್ವಾರೆಜ್‌ ಈ ರೀತಿ ಕಚ್ಚಿ ನಿಷೇಧಕ್ಕೊ ಒಳಗಾಗುತ್ತಿರುವುದು ಇದು ಮೂರನೇ ಬಾರಿ. ಕಳೆದ ವರ್ಷ ಪ್ರೀಮಿಯರ್‌ ಲೀಗ್‌ ವೇಳೆ ಅಶಿಸ್ತು ತೋರಿದ್ದರಿಂದ 10 ಪಂದ್ಯಗಳಿಂದ ನಿಷೇಧ ಮಾಡಲಾಗಿತ್ತು. 2010ರಲ್ಲೂ 7 ಪಂದ್ಯಗಳಿಂದ ನಿಷೇಧಕ್ಕೊಳಗಾಗಿದ್ದರು. ಈಗ ಮತ್ತೆ ಬ್ಯಾನ್ ಆಗಿರುವುದರಿಂದ ಅವರ ಫುಟ್ಬಾಲ್ ವೃತ್ತಿ ಜೀವನ ಕವಲು ದಾರಿ ಹಿಡಿದಿದೆ.

ಉರುಗ್ವೆಯಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ

ಉರುಗ್ವೆಯಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ

ಉರುಗ್ವೆಯಲ್ಲಿ ಸ್ವಾರೆಜ್ ಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಸ್ವಾರೆಜ್ ಒಬ್ಬ ಅದ್ಭುತ ಆಟಗಾರ, ಆತನ ನಡವಳಿಕೆ ತಿದ್ದುಕೊಳ್ಳಬೇಕಿದೆ ಎಂದು ಹೇಳಿರುವ ಅಧ್ಯಕ್ಷ ಮುಜಿಕಾ ಅವರು ಸ್ವಾರೆಜ್ ರನ್ನು ಸ್ವಾಗತಿಸಿದ್ದಾರೆ.

ಉರುಗ್ವೆ ಅಭಿಮಾನಿಗಳಿಂದ ಟ್ವೀಟ್

ಮಾಂಟೆ ವಿಡಿಯೋ ವಿಮಾನ ನಿಲ್ದಾಣದಲ್ಲಿ ಸೇರಿರುವ ಜನಸಂದಣಿ ಹಾಗೂ ಸ್ವಾರೆಜ್ ಸ್ವಾಗತದ ಬಗ್ಗೆ ಅಭಿಮಾನಿಗಳಿಂದ ಟ್ವೀಟ್

ಡಿಯಾಗೋ ಮರಡೋನಾರಿಂದ ಸಮರ್ಥನೆ

ಕೆಲ್ಲಿನಿ ಕಚ್ಚಿದ ಸ್ವಾರೆಜ್ ಪರ ಅರ್ಜೆಂಟಿನಾದ ದಿಗ್ಗಜ ಡಿಯಾಗೋ ಮರಡೋನಾರಿಂದ ಬೆಂಬಲ ಸಿಕ್ಕಿದೆ ಎನ್ನುತ್ತದೆ ಮಾಧ್ಯಮಗಳ ವರದಿ

ಬ್ಯೂಟಿಫುಲ್ ಗೇಮ್ ನಲ್ಲಿ ಸ್ವಾರೆಜ್ ಕಚ್ಚಾಟ

ಬ್ಯೂಟಿಫುಲ್ ಗೇಮ್ ನಲ್ಲಿ ಸ್ವಾರೆಜ್ ಕಚ್ಚಾಟ

ಬ್ಯೂಟಿಫುಲ್ ಗೇಮ್ ನಲ್ಲಿ ಪೆಪೆ ಡಿಚ್ಚಿ ಪ್ರಕರಣದ ನಂತರ ಸ್ವಾರೆಜ್ ಕಚ್ಚಾಟ ಕಪ್ಪು ಚುಕ್ಕೆಯಾಗಿದೆ. ಈ ಹಿಂದೆ ಕೂಡಾ ಇದೇ ರೀತಿ ಪ್ರಕರಣಗಳಲ್ಲಿ ಸ್ವಾರೆಜ್ ಸಿಕ್ಕಿಬಿದ್ದಿದ್ದರು.[ದೇವರ 'ಕೈ'ವಾಡದಿಂದ ಸೆಮೀಸ್ ಗೆ ಉರುಗ್ವೆ]

Story first published: Wednesday, January 3, 2018, 10:13 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X