ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್: ಸೆನೆಗಲ್ ವಿರುದ್ಧ ಕೊಲಂಬಿಯಾಕ್ಕೆ 1-0ಯ ಗೆಲುವು

FIFA World Cup 2018: Colombia beat Senegal 1-0

ಮಾಸ್ಕೋ, ಜೂ. 28: ಫೀಫಾ ವಿಶ್ವಕಪ್ ಗಾಗಿ ಇಂದು ರಷ್ಯಾದ ಸಮರಾ ಅರೇನಾದಲ್ಲಿ ನಡೆದ ಕೊಲಂಬಿಯಾ-ಸೆನೆಗಲ್ ಪಂದ್ಯದಲ್ಲಿ ಕೊಲಂಬಿಯಾ 1-0 ಅಂತರದ ಗೆಲುವು ದಾಖಲಿಸಿದೆ. ಪಂದ್ಯದ ದ್ವಿತೀಯಾರ್ಧದಲ್ಲಿ ಗೊಲ್ ಬಾರಿಸಿ ಕೊಲಂಬಿಯಾ ಗೆಲುವು ಸಂಬ್ರಮಿಸಿತು. ಈ ಗೆಲುವಿನೊಂದಿಗೆ ಕೊಲಂಬಿಯಾ 16 ಹಂತದ ಸ್ಪರ್ಧೆಗೆ ಪ್ರವೇಶಿಸಿದೆ.

ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಕ್ಲಿಕ್ ಮಾಡಿ

ಕೊಲಂಬಿಯಾದ ಯೆರಿ ಮಿನಾ ಅವರು 74ನೇ ನಿಮಿಷದಲ್ಲಿ ಗೋಲ್ ಸಿಡಿಸಿ ತಂಡಕ್ಕೆ 1-0ಯ ಮುನ್ನಡೆ ತಂದುಕೊಟ್ಟರು. ಪಂದ್ಯದ ಮೊದಲಾರ್ಧದಲ್ಲಿ 3 ಹೆಚ್ಚುವರಿ ನಿಮಿಷಗಳನ್ನು ಸೇರಿಸಲಾಯಿತು. ದ್ವಿತೀಯಾರ್ಧದಲ್ಲೂ 4 ಹೆಚ್ಚುವರಿ ನಿಮಿಷಗಳನ್ನು ಸೇರಿಸಲಾಯಿತು. ಆದರೆ ಸೆನೆಗಲ್ ನಿಂದ ಗೋಲ್ ದಾಖಲಾಗಲಿಲ್ಲ.

ಪಂದ್ಯ ಆರಂಭವಾಗುತ್ತಲೇ 17ನೇ ನಿಮಿಷದಲ್ಲಿ ಇತ್ತಂಡಗಳ ಮಧ್ಯೆ ಗಲಾಟೆ ಪೆನಾಲ್ಟಿ ವಿಚಾರಕ್ಕೆ ಜಗಳ ನಡೆಯುವುದರಲ್ಲಿತ್ತು. ಆದರೆ ಅಂತಿಮವಾಗಿ ಪೆನಾಲ್ಟಿಯನ್ನು ನಿರಾಕರಿಸಿ ತೀರ್ಪು ನೀಡಲಾಯಿತು. ಒಟ್ಟು 5 ಬಾರಿ ಇತ್ತಂಡಗಳಿಂದ ಆಟಗಾರರ ಬದಲಾವಣೆ ನಡೆಯಿತು. ಒಂದು ಬಾರಿ ಜಪಾನ್ ಆಟಗಾರ ತೋಮೋಆಕಿ ಮಕಿನೋ ವಿರುದ್ಧ ಯೆಲ್ಲೋ ಕಾರ್ಡ್ ಪ್ರದರ್ಶಿಸಲ್ಪಟ್ಟಿತು.

ಸೆನೆಗಲ್ ಪರ ಖಾದಿಮ್ ನಿಡಿಯಾಯ್; ಲಮೈನ್ ಗ್ಯಾಸ್ಸಮಾ, ಸಲೀಫ್ ಸಾನ್, ಕಾಲಿಡೋ ಕೌಲಿಬಾಲಿ, ಯೂಸುಸಾಫ್ ಸಬಾಲಿ; ಇಸ್ಮಾಯಿಲಾ ಸರ್ರ್, ಚೈಖೌ ಕೌಯೆಟ್, ಇಡ್ರಿಸ್ಸಾ ಗಾನಾ ಗುಯೆ, ಸೈಡಿಯೊ ಮಾನೆ (ಕ್ಯಾಪ್ಟನ್); ಕೀತಾ ಬಲ್ಡೆ ಕಣಕ್ಕಿಳಿದಿದ್ದರು.

ಕೊಲಂಬಿಯಾಪರ ಡೇವಿಡ್ ಓಸ್ಪಿನಾ; ಸ್ಯಾಂಟಿಯಾಗೊ ಏರಿಯಾಸ್, ಡೇವಿನ್ಸನ್ ಸ್ಯಾಂಚೆಝ್, ಯೆರಿ ಮಿನಾ, ಜೋಹಾನ್ ಮೊಜಿಕ; ಮಾಟಸ್ ಉರಿಬೆ, ಕಾರ್ಲೋಸ್ ಸ್ಯಾಂಚೆಝ್; ಜುವಾನ್ ಕ್ಯುಡ್ರಾಡೊ, ಜುವಾನ್ ಕ್ವಿಂಟರ್ರೊ, ಜೇಮ್ಸ್ ರೊಡ್ರಿಗಜ್; ರಾಡಮೆಲ್ ಫಾಲ್ಕವೊ (ಕ್ಯಾಪ್ಟನ್) ಆಡಿದ್ದರು.

Story first published: Thursday, June 28, 2018, 21:43 [IST]
Other articles published on Jun 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X