ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್ ಗೆ ತಂಡಗಳು ಹೇಗೆ ಅರ್ಹತೆ ಗಳಿಸುತ್ತವೆ?

By Mahesh
Fifa World Cup 2018 : How teams qualify for the football world cup

ಬೆಂಗಳೂರು, ಜೂನ್ 14: ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆ ಫುಟ್ಬಾಲ್ ನ ಜಾಗತಿಕ ಹಬ್ಬ ಇಂದಿನಿಂದ ರಷ್ಯಾದಲ್ಲಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಅತಿಥೇಯ ರಷ್ಯಾ ಹಾಗೂ ಸೌದಿ ಅರೇಬಿಯಾ ಕಾದಾಡಲಿವೆ.

ಸಿಂಹಾವಲೋಕನ : ಜಾಗತಿಕ ಫುಟ್ಬಾಲ್ ಸಮರ ಫೀಫಾ ವಿಶ್ವಕಪ್ 2018ಸಿಂಹಾವಲೋಕನ : ಜಾಗತಿಕ ಫುಟ್ಬಾಲ್ ಸಮರ ಫೀಫಾ ವಿಶ್ವಕಪ್ 2018

ಜೂನ್ 14ರಿಂದ ಜುಲೈ 15ರ ತನಕ 32 ದೇಶಗಳು, 12 ಮೈದಾನಗಳಲ್ಲಿ ಪಂದ್ಯಗಳು ನಡೆಯಲಿದೆ. ಜರ್ಮನಿಯಲ್ಲಿ 2006 ಟೂರ್ನಮೆಂಟ್ ನಡೆದ ಬಳಿಕ ಪುನಃ ಯುರೋಪಿಗೆ ಈ ಪ್ರತಿಷ್ಠಿತ ಟೂರ್ನಮೆಂಟ್ ಹಿಂತಿರುಗಿದೆ.

ಫೀಫಾ ವಿಶ್ವಕಪ್ : ಚಿನ್ನದ ಬೂಟು ವಿಜೇತರ ಪಟ್ಟಿ ಫೀಫಾ ವಿಶ್ವಕಪ್ : ಚಿನ್ನದ ಬೂಟು ವಿಜೇತರ ಪಟ್ಟಿ

ಅತಿಥೇಯ ರಾಷ್ಟ್ರವಾಗಿ ರಷ್ಯಾಕ್ಕೆ ಸುಲಭವಾಗಿ ಅರ್ಹತೆ ಸಿಕ್ಕಿದ್ದರೆ, ಮಿಕ್ಕ 31 ರಾಷ್ಟ್ರಗಳು ಅರ್ಹತಾ ಸುತ್ತಿನಲ್ಲಿ ಸೆಣಸಾಡಿ, ಆಯ್ಕೆಯಾಗಿವೆ.

ಜೂನ್ 14ರಂದು ಅತಿಥೇಯ ರಷ್ಯಾ ಹಾಗೂ ಸೌದಿ ಅರೇಬಿಯಾ ವಿರುದ್ಧ ಮೊದಲ ಪಂದ್ಯ ನಡೆದರೆ, ಜುಲೈ 15ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಈ ಬಾರಿಯ ಚಾಂಪಿಯನ್ ಯಾರು ತಿಳಿಯಲಿದೆ.

ಫೀಫಾ ವಿಶ್ವಕಪ್ 2018 ವಿಶೇಷ ಪುಟ : ವೇಳಾಪಟ್ಟಿ | ತಂಡಗಳು

ಪ್ರತಿ ವಿಶ್ವಕಪ್ ಮುಗಿದ ಆರು ತಿಂಗಳೊಳಗೆ ಮುಂದಿನ ವಿಶ್ವಕಪ್ ಗೆ ತಯಾರಿ ಆರಂಭವಾಗುತ್ತದೆ ಎಂದರೆ ತಪ್ಪಾಗಲಾರದು. ವಿಶ್ವಕಪ್ ನ ಅರ್ಹತಾ ಸುತ್ತಿನ ಪಂದ್ಯಗಳು 1934 ರ ವಿಶ್ವಕಪ್ ನಂತರ ಶುರುವಾದ ಅರ್ಹತಾ ಸುತ್ತಿನ ಪಂದ್ಯಗಳ ಪರ್ವಕಾಲ. ಇಂದಿನವರೆಗೂ ಅದೇ ಮಾದರಿಯಲ್ಲಿ ಮುಂದುವರೆದಿದೆ..

ಅತಿಥೇಯ ದೇಶಕ್ಕೆ ಅರ್ಹತಾ ಸುತ್ತಿನ ರಗಳೆ ಇಲ್ಲ

ಅತಿಥೇಯ ದೇಶಕ್ಕೆ ಅರ್ಹತಾ ಸುತ್ತಿನ ರಗಳೆ ಇಲ್ಲ

ವಿಶ್ವಕಪ್ ನಡೆಯುವ ದೇಶಕ್ಕೆ ಮಾತ್ರ ಅರ್ಹತಾ ಸುತ್ತಿನ ರಗಳೆ ಇರುವುದಿಲ್ಲ. ನೇರವಾಗಿ ತಮ್ಮ ಗುಂಪಿನ ಎದುರಾಳಿಗಳೊಡನೆ ಕಾದಾಡಬಹುದು. ಇಲ್ಲಿ ಇನ್ನೊಂದು ವಿಶೇಷ ಎಂದರೆ ಈ ನಿಯಮ ವಿಶ್ವಕಪ್ ಆತಿಥ್ಯವಹಿಸುವ ತಂಡಕ್ಕೆ ಮಾತ್ರ ಮೀಸಲು. ಹಾಲಿ ವಿಶ್ವಕಪ್ ಚಾಂಪಿಯನ್ ತಂಡ ಕೂಡ ಅರ್ಹತಾ ಸುತ್ತಿನಲ್ಲಿ ಸೆಣಸಿ ಮುಂದಿನ ಹಂತ ತಲುಪಬೇಕು.

ಮೊದಲು ಗುಂಪಿನ ಸುತ್ತು ಆಮೇಲೆ ನಾಕೌಟ್ ಹಂತ ಇರುತ್ತದೆ. ನಾಕೌಟ್ ಹಂತದಲ್ಲಿ ತಂಡಗಳು ಸಮಬಲವಾದರೆ ಹೆಚ್ಚಿನ ಅವಧಿ ನೀಡಿಕೆ ಹಾಗೂ ಪೆನಾಲ್ಟಿ ಶೂಟೌಟ್ ನೀಡಿ ಪಂದ್ಯದ ನಿರ್ಣಯ ಪಡೆಯಲಾಗುತ್ತದೆ. ನಂತರ 16 ರ ಹಂತ ಇದರಲ್ಲಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡ, ವಿರುದ್ಧ ಗುಂಪಿನಲ್ಲಿ ದ್ವಿತೀಯ ಸ್ಥಾನ ಪಡೆದ ತಂಡದ ವಿರುದ್ಧ ಸೆಣೆಸಲಿದೆ. ನಂತರ ಕ್ವಾಟರ್ ಫೈನಲ್ಸ್ , ಉಪಾಂತ್ಯ, ಮೂರನೇ ಸ್ಥಾನಕ್ಕಾಗಿ ಕಾದಾಟ, ಕೊನೆಯಲ್ಲಿ ಅಂತಿಮ ಹಣಾಹಣಿ ಇರುತ್ತದೆ.

ಅರ್ಹತಾ ಸುತ್ತಿನ ಪ್ರಕ್ರಿಯೆ ಹೇಗೆ ನಡೆಯಲಿದೆ?

ಅರ್ಹತಾ ಸುತ್ತಿನ ಪ್ರಕ್ರಿಯೆ ಹೇಗೆ ನಡೆಯಲಿದೆ?

ಪ್ರತಿ ವಿಶ್ವಕಪ್ ಮುಗಿದ ಆರು ತಿಂಗಳೊಳಗೆ ಮುಂದಿನ ವಿಶ್ವಕಪ್ ಗೆ ತಯಾರಿ ಆರಂಭವಾಗುತ್ತದೆ ಎಂದರೆ ತಪ್ಪಾಗಲಾರದು. ವಿಶ್ವಕಪ್ ನ ಅರ್ಹತಾ ಸುತ್ತಿನ ಪಂದ್ಯಗಳು 1934 ರ ವಿಶ್ವಕಪ್ ನಂತರ ಶುರುವಾದ ಅರ್ಹತಾ ಸುತ್ತಿನ ಪಂದ್ಯಗಳ ಪರ್ವಕಾಲ. ಇಂದಿನವರೆಗೂ ಅದೇ ಮಾದರಿಯಲ್ಲಿ ಮುಂದುವರೆದಿದೆ

ಅಫ್ರಿಕಾ(CAF), ಏಷ್ಯಾ(AFC), ಉತ್ತರ ಹಾಗೂ ಮಧ್ಯ ಅಮೆರಿಕ, ಕೆರೆಬಿಯನ್ (Concacaf), ದಕ್ಷಿಣ ಅಮೆರಿಕ(Conmebol), ಓಷಾನಿಯ(OFC) ಮತ್ತು ಯುರೋಪ್ (UEFA) ರಾಷ್ಟ್ರಗಳು ಹೀಗೆ ವಿವಿಧ ಗುಂಪಿನಡಿಯಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತವೆ.

ಅರ್ಹತಾ ಸುತ್ತಿನ ಪಂದ್ಯಗಳು ಮುಗಿಯಲು ಕನಿಷ್ಠವೆಂದರೂ ಮೂರು ವರ್ಷಗಳು ಬೇಕಾಗುತ್ತದೆ. ಈ ಬಾರಿಯ ವಿಶ್ವಕಪ್ ಗೆ ಅರ್ಹತೆ ಪಡೆಯಲು ಸುಮಾರು 211 ದೇಶಗಳು ಸ್ಪರ್ಧಿಸಿದ್ದವು. ಅಂತಿಮವಾಗಿ 32 ದೇಶಗಳು ಒಂದು ತಿಂಗಳು ಕಪ್ ಗಾಗಿ ಕಾದಾಟ ನಡೆಸಲಿವೆ.

ದೊಡ್ಡ ತಂಡಗಳ ಅಭಿಯಾನ ಯಾವಾಗ?

ದೊಡ್ಡ ತಂಡಗಳ ಅಭಿಯಾನ ಯಾವಾಗ?

ದಕ್ಷಿಣ ಅಮೆರಿಕ(Conmebol) ನ ಅರ್ಜೆಂಟೀನಾ ಹಾಗೂ ಬ್ರೆಜಿಲ್ ನಂಥ ರಾಷ್ಟ್ರಗಳ ಪಂದ್ಯಗಳು ಒಂದು ತವರು ನೆಲದಲ್ಲಿ ಮತ್ತೊಂದು ಎದುರಾಳಿ ದೇಶದಲ್ಲಿ ಪಂದ್ಯವಾಡಲಿದೆ. ಅಂಕಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನ ಪಡೆದ ತಂಡಗಳು ವಿಶ್ವಕಪ್ ಗೆ ಅರ್ಹತೆ ಪಡೆಯಲಿವೆ. ಏಷ್ಯಾದಲ್ಲಿ 47 ತಂಡಗಳಿದ್ದು, ಹೊಸ ತಂಡಗಳಿಗೂ ಸಮಾನ ಅವಕಾಶ ಸಿಗುತ್ತದೆ.

ಎಷ್ಟು ತಂಡಗಳು ಅರ್ಹತೆ ಪಡೆಯುತ್ತವೆ?

ಎಷ್ಟು ತಂಡಗಳು ಅರ್ಹತೆ ಪಡೆಯುತ್ತವೆ?

211 ತಂಡಗಳು ಅರ್ಹತಾ ಸುತ್ತಿನಲ್ಲಿ ಸೆಣಸಿ ಅಂತಿಮವಾಗಿ 32 ದೇಶಗಳು ಒಂದು ತಿಂಗಳು ಕಪ್ ಗಾಗಿ ಕಾದಾಟ ನಡೆಸಲಿವೆ. ಯುರೋಪಿನಿಂದ 14, ಏಷ್ಯಾ ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕಾದಿಂದ ತಲಾ ಐದು ತಂಡಗಳು ಆಯ್ಕೆಯಾಗಿವೆ.

ತಂಡಗಳನ್ನು ಗುಂಪಾಗಿ ವಿಂಗಡಿಸುವುದು ಹೇಗೆ?

ಒಟ್ಟು 8 ಗುಂಪುಗಳಲ್ಲಿ ನಾಲ್ಕು ತಂಡಗಳಿರುತ್ತವೆ. ಉತ್ತಮ ಶ್ರೇಯಾಂಕದ 8 ತಂಡಗಳು ಬೇರೆ ಬೇರೆ ಗುಂಪಿನಲ್ಲಿರುವಂತೆ ಮಾಡಲಾಗುತ್ತದೆ. ಹೀಗಾಗಿ, ಏಷ್ಯಾ ಖಂಡದ ಎರಡು ತಂಡಗಳು ಒಂದೇ ಗುಂಪಿನಲ್ಲಿರುವುದಿಲ್ಲ. ಯುರೋಪಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹತೆ ಗಳಿಸಿರುವುದರಿಂದ ಪ್ರತಿ ಗುಂಪಿನಲ್ಲಿ 2 ತಂಡಗಳು ಇರಲಿವೆ.

ಭಾರತದ ಅರ್ಹತೆ ಕಥೆ ಏನಾಯ್ತು?

ಭಾರತದ ಅರ್ಹತೆ ಕಥೆ ಏನಾಯ್ತು?

ಜನವರಿ 2015ರಲ್ಲಿ ಫೀಫಾ ಶ್ರೇಯಾಂಕದಂತೆ ಭಾರತ ಉತ್ತಮ ಸ್ಥಾನ ಹೊಂದಿರಲಿಲ್ಲ. ಏಷ್ಯಾದ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾದಾಗ ನೇಪಾಳ ವಿರುದ್ಧ 2-0ರ ಜಯದೊಂದಿಗೆ ಶುಭಾರಂಭ ಮಾಡಿತ್ತು. ಆದರೆ, ನಂತರ ಇರಾನ್. ಒಮಾನ್, ತುರ್ಕೇನಿಸ್ತಾನ್ ಹಾಗೂ ಗುವಾಮ್ ತಂಡಗಳ ವಿರುದ್ಧ ನಿರಾಶಾದಾಯಕ ಪ್ರದರ್ಶನ ನೀಡಿತು. 8 ಪಂದ್ಯಗಳಲ್ಲಿ 7 ಪಂದ್ಯ ಸೋತು, ಗುಂಪಿನಲ್ಲಿ ಕೊನೆ ಸ್ಥಾನ ಗಳಿಸಿ, ಅರ್ಹತೆ ಪಡೆಯುವಲ್ಲಿ ವಿಫಲವಾಯಿತು.

Story first published: Friday, June 15, 2018, 13:20 [IST]
Other articles published on Jun 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X