ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ 2018: ವಿಶ್ವದ ಗಮನ ಸೆಳೆಯಬಲ್ಲ ಯುವ ಪ್ರತಿಭೆಗಳ XI

By ಮೈಖೇಲ್ ತಂಡ
FIFA World Cup 2018: Mbappe, Asensio, Iheanacho - Youngsters to look out for

ಬೆಂಗಳೂರು, ಜೂನ್ 19: ರಷ್ಯಾದಲ್ಲಿ ಆರಂಭವಾಗಿರುವ ಫೀಫಾ ವಿಶ್ವಕಪ್‌ನಲ್ಲಿ ಭಾಗವಹಿಸಿರುವ ಎಲ್ಲ ತಂಡಗಳು ಬಹುತೇಕ ಯುವಪಡೆ ಹಾಗೂ ಅನುಭವಿಕ ಆಟಗಾರರು ಎರಡರ ಮಧ್ಯೆ ಸಮತೋಲನ ಸಾಧಿಸಲು ಯತ್ನಿಸಿವೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ತಂಡಗಳ ಮ್ಯಾನೇಜರ್‌ಗಳು ತಮ್ಮ ತಂಡದಲ್ಲಿ ಯೌವನ ಭರಿತ ಹೊಸ ಪ್ರತಿಭಾವಂತರು ಹಾಗೂ ಅದರೊಂದಿಗೆ ಸಾಕಷ್ಟು ಅನುಭವವಿರುವ ಹಳಬರು ಇಬ್ಬರಿಗೂ ಸಮನಾದ ಅವಕಾಶ ನೀಡಿರುವಂತಿದೆ. ಈ ಹಿಂದಿನ ಸಂಪ್ರದಾಯದಂತೆ ಈ ಬಾರಿಯ ವಿಶ್ವಕಪ್‌ನಲ್ಲಿ ಸಹ ಎಲ್ಲರ ಗಮನ ಸ್ಟಾರ್ ಪ್ಲೇಯರ್‌ಗಳ ಮೇಲೆಯೇ ಕೇಂದ್ರೀಕೃತವಾಗಿರಲಿದೆ.

ಆದರೆ, ಅನೇಕ ತಂಡಗಳಲ್ಲಿ ಆಟವಾಡುತ್ತಿರುವ, ಯಾವಾಗ ಬೇಕಾದರೂ ಎದುರಾಳಿ ತಂಡಕ್ಕೆ ಅಚ್ಚರಿ ಮೂಡಿಸಬಲ್ಲ ಯುವ ಆಟಗಾರರನ್ನು ಹಗುರಾಗಿ ಪರಿಗಣಿಸುವಂತಿಲ್ಲ. ಇಡೀ ವಿಶ್ವವೇ ಕಣ್ಣು ಬಿಟ್ಟು ನೋಡುತ್ತಿರುವ ಫುಟ್‌ಬಾಲ್ ವಿಶ್ವಕಪ್ ಪಂದ್ಯಗಳು ಯುವ ಪ್ರತಿಭಾನ್ವಿತರಿಗೆ ತಮ್ಮ ಶಕ್ತಿ, ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲು ಸಿಕ್ಕ ಅವಕಾಶಗಳಾಗಿವೆ. ಫ್ರಾನ್ಸ್ ಹಾಗೂ ನೈಜೀರಿಯಾ ತಂಡಗಳಲ್ಲಿ ಯುವ ಆಟಗಾರರ ಪಡೆ ಅತ್ಯುತ್ತಮವಾಗಿದೆ.

ಈ ಬಾರಿಯ ವಿಶ್ವಕಪ್ ಸರಣಿ 23 ವರ್ಷ ವಯಸ್ಸಿನೊಳಗಿನ ಅನೇಕ ಆಟಗಾರರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಒದಗಿಸಲಿದೆ. ಇವರಲ್ಲಿ ಅನೇಕರು ಈಗಾಗಲೇ ಕ್ಲಬ್ ಲೆವಲ್‌ನಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಇನ್ನುಳಿದವರು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಈ ಬಾರಿ ಎಲ್ಲರ ಗಮನಸೆಳೆದಿರುವ ಪ್ರಮುಖ ಯುವ ಆಟಗಾರರ ಪಟ್ಟಿ ಮುಂದಿದೆ.

ರಾಡ್ರಿಗೊ ಬೆಂಟಾಂಕುರ್ (ಉರುಗ್ವೆ/ಯುವೆಂಟಸ್), ವಯಸ್ಸು 21 ವರ್ಷ

ಬೋಕಾ ಜ್ಯೂನಿಯರ್ಸ್ ಪರವಾಗಿ 57 ಪಂದ್ಯಗಳನ್ನಾಡಿದ ನಂತರ, ಬೆಂಟಾಂಕುರ್ 2017 ರಲ್ಲಿ ಜುವೆಂಟಸ್‌ಗೆ ಸೇರಿದರು. ತಮ್ಮ 20ನೇ ಹುಟ್ಟುಹಬ್ಬದ ಕೆಲ ದಿನಗಳಲ್ಲಿಯೇ ಅವರು ಜುವೆಂಟಸ್ ಸೇರಿದ್ದು ವಿಶೇಷವಾಗಿತ್ತು. ಮಿಡ್‌ಫೀಲ್ಡರ್ ಆಗಿರುವ ಇವರು ಜುವೆಂಟಸ್ ಸೇರಿದ ಆರಂಭದಲ್ಲಿ ತಮ್ಮ ದೈಹಿಕ ಸಾಮರ್ಥ್ಯ ವೃದ್ಧಿಗೆ ಕಸರತ್ತು ಮಾಡಲಾರಂಭಿಸಿದರು.

ಕೆಲವೇ ದಿನಗಳಲ್ಲಿ 11 ಪೌಂಡ್ ತೂಕ ಹೆಚ್ಚಿಸಿಕೊಂಡ ರಾಡ್ರಿಗೊ ಬೆಂಟಾಂಕುರ್, ಆಟದಲ್ಲಿ ತಂತ್ರಗಾರಿಕೆಯ ನಿಪುಣತೆ ಸಾಧಿಸಿದರು. ಅತಿ ಶೀಘ್ರದಲ್ಲಿ ತಂಡದ ಅನಿವಾರ್ಯ ಆಟಗಾರರಾಗಿ ಹೊರ ಹೊಮ್ಮಿದ ಅವರಿಗೆ ಉಜ್ವಲ ಭವಿಷ್ಯ ಗೋಚರಿಸುತ್ತಿದೆ. ವಿಶ್ವಕಪ್‌ಗಿಂತ ಕೆಲವೇ ತಿಂಗಳು ಮುಂಚೆ ದೇಶದ ತಂಡ ಸೇರ್ಪಡೆಯಾದ ಇವರು, ಅಂದಿನಿಂದ ಎಲ್ಲ ಪಂದ್ಯಗಳಲ್ಲೂ ಆಡಿದ್ದಾರೆ. ತಂಡದ ಸ್ಫೋಟಕ ಜೋಡಿಯಾದ ಲೂಯಿಸ್ ಸಾರೆಜ್ ಹಾಗೂ ಎಡಿನ್ಸನ್ ಕವಾನಿ ಅವರೊಂದಿಗೆ ಮಿಡ್‌ಫೀಲ್ಡ್‌ನಲ್ಲಿ ಬೇಕಾದ ಶಕ್ತಿಯನ್ನು ಒದಗಿಸುತ್ತಿದ್ದಾರೆ.

ಮಾರ್ಕೊ ಅಸೆನ್ಸಿಯೊ (ಸ್ಪೇನ್/ರಿಯಲ್ ಮ್ಯಾಡ್ರಿಡ್), ವಯಸ್ಸು 22

ಮಾರ್ಕೊ ಅಸೆನ್ಸಿಯೊ (ಸ್ಪೇನ್/ರಿಯಲ್ ಮ್ಯಾಡ್ರಿಡ್), ವಯಸ್ಸು 22

ಮಾರ್ಕೊ ಅಸೆನ್ಸಿಯೊ ಸ್ಪ್ಯಾನಿಷ್ ತಂಡದ ಅತ್ಯಂತ ಪ್ರತಿಭಾವಂತ ಯುವ ಆಟಗಾರರಾಗಿದ್ದಾರೆ. ಕಾಲಿನಲ್ಲಿ ಬಾಲ್‌ನೊಂದಿಗೆ ವೇಗವಾಗಿ ಸಾಗುವ ಇವರು ಉತ್ತಮ ಆಟದ ತಂತ್ರಗಾರಿಕೆಯನ್ನು ಮೈಗೂಡಿಸಿಕೊಂಡಿದ್ದಾರೆ. ಹೀಗಾಗಿಯೇ ರಾಷ್ಟ್ರೀಯ ತಂಡದಲ್ಲಿ ಸುಲಭವಾಗಿ ತಮ್ಮ ಸ್ಥಾನ ಭದ್ರಪಡಿಸಿಕೊಂಡರು. ಜಿನೆಡೆನ್ ಜಿದಾನೆ ಅವರಿಂದ ಮೊಟ್ಟ ಮೊದಲ ಬಾರಿಗೆ ರಿಯಲ್ ಮ್ಯಾಡ್ರಿಡ್ ಸೇರಿದ ಮಾರ್ಕೊ, 19 ಲಾ ಲೀಗಾ ಪಂದ್ಯಗಳಲ್ಲಿ ಆಟವಾಡಿ 6 ಗೋಲ್ ಗಳಿಸಿದ್ದಾರೆ ಹಾಗೂ ಇನ್ನೂ ಆರು ಗೋಲು ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಆಂಡ್ರಿಯಾಸ್ ಕ್ರಿಸ್ಟೆನ್ಸನ್ (ಡೆನ್ಮಾರ್ಕ್ / ಚೆಲ್ಸಿಯಾ), ವಯಸ್ಸು 22

ಡೆನ್ಮಾರ್ಕ್ ಕೋಚ್ ಏಜ್ ಹ್ಯಾರಿಡ್, ಕ್ರಿಸ್ಟೆನ್ಸನ್ ಅವರನ್ನು ಜರ್ಮನಿಯ ಒಂದು ಕಾಲದ ಖ್ಯಾತ ಫುಟ್‌ಬಾಲ್ ಆಟಗಾರ ಫ್ರಾಂಜ್ ಬ್ರೆಕೆನ್‌ಬಾರ್ ಅವರಿಗೆ ಹೋಲಿಸುತ್ತಾರೆ. ಆಟಗಾರ ಗ್ಯಾರಿ ಕಾಹಿಲ್ ಅವರನ್ನು ಬೆಂಚ್‌ಗೆ ಸರಿಸಿದ ಯುವ ಡಿಫೆಂಡರ್ ಕ್ರಿಸ್ಟೆನ್ಸನ್ ಈ ಸೀಸನ್‌ನಲ್ಲಿ ಚೆಲ್ಸಿಯಾದ ಬ್ಯಾಕ್‌ಲೈನ್‌ನಲ್ಲಿ ಸ್ಥಾನ ಪಡೆದುಕೊಂಡರು.

ಚೆಲ್ಸಿಯಾ ಸ್ಟಾರ್ಟರ್ ಆಗುವ ಮುಂಚೆ ಇವರು ಬೊರುಸಿಯಾ ಮಾಂಚೆಂಗ್‌ಲಾಡಬ್ಯಾಚ್‌ನಲ್ಲಿ ಎರಡು ಅವಧಿ ಯಶಸ್ವಿಯಾಗಿ ಆಡಿದ ಅನುಭವ ಹೊಂದಿದ್ದಾರೆ. 22 ವರ್ಷಕ್ಕೆ ಈ ಸಾಧನೆ ಅಸಾಮಾನ್ಯವಾಗಿದೆ.

ಆಟಗಾರ ಬ್ರಾಂಡ್‌ಬಿ ಅವರ ಕಟ್ಟಾ ಫ್ಯಾನ್ ಆಗಿರುವ ಕ್ರಿಸ್ಟೆನ್ಸನ್, ರಿಪಬ್ಲಿಕ್ ಆಫ್ ಐರ್ಲಂಡ್ ವಿರುದ್ಧ ಡೆನ್ಮಾರ್ಕ್ 5-1 ರಿಂದ ಜಯಿಸಿದ ಪಂದ್ಯದಲ್ಲಿ ತಮ್ಮ ಗೋಲ್ ಸಂಪಾದಿಸಿದ್ದರು. ಸಾಮಾನ್ಯವಾಗಿ ರೈಟ್ ಬ್ಯಾಕ್ ಸ್ಥಾನದಲ್ಲಿ ಆಡುವ ಇವರ ರಕ್ಷಣಾತ್ಮಕ ಆಟಗಾರಿಕೆಯೂ ಅದ್ಭುತವಾಗಿದ್ದು, ಗ್ರೂಪ್‌ನಲ್ಲಿರುವ ಫ್ರಾನ್ಸ್, ಆಸ್ಟ್ರೇಲಿಯಾ ಹಾಗೂ ಪೆರು ದೇಶಗಳ ವಿರುದ್ಧ ಸಹಕಾರಿಯಾಗಲಿದೆ.

ಕಾಸ್ಪರ್ ಡೋಲ್ಬರ್ಗ್ (ಡೆನ್ಮಾರ್ಕ್ / ಎಜಾಕ್ಸ್ ಆಮ್‌ಸ್ಟರ್‌ಡ್ಯಾಂ), ವಯಸ್ಸು 20

ಕಾಸ್ಪರ್ ಡೋಲ್ಬರ್ಗ್ (ಡೆನ್ಮಾರ್ಕ್ / ಎಜಾಕ್ಸ್ ಆಮ್‌ಸ್ಟರ್‌ಡ್ಯಾಂ), ವಯಸ್ಸು 20

ಇನ್ನೂ ತನ್ನ ಹದಿಹರೆಯದಲ್ಲಿರುವ ಈ ಯುವಕ 2016-17ರ ಸೀಸನ್‌ನ ಇರೆಡೆವೈಸ್ ಲೀಗ್‌ನಲ್ಲಿ 16 ಗೋಲ್ ಬಾರಿಸುವ ಮೂಲಕ ಇಡೀ ಯುರೋಪ್‌ದಾದ್ಯಂತ ಧೂಳೆಬ್ಬಿಸಿದ್ದರು. ಕಳೆದ ವರ್ಷ ನಡೆದ ಯುರೋಪಾ ಲೀಗ್‌ನ ಫೈನಲ್‌ನಲ್ಲಿ ಮ್ಯಾಂಚೆಸ್ಟರ್ ವಿರುದ್ಧ ಸೋತ ಎಜಾಕ್ಸ್ ತಂಡದಲ್ಲಿ ಆಟವಾಡಿದ್ದರು. ಈ ಸೀಸನ್‌ನಲ್ಲಿ ಅಷ್ಟೊಂದು ಸಾಧನೆ ಕಂಡು ಬರದಿದ್ದರೂ ಎದುರಾಳಿಗಳ ರಕ್ಷಣಾ ಕೋಟೆ ಭೇದಿಸಲು ಅವರು ಸಾಹಸ ಮಾಡಲಿದ್ದಾರೆ.

ಕಿಲಿಯನ್ ಎಂಬಾಪೆ (ಫ್ರಾನ್ಸ್ / ಪ್ಯಾರಿಸ್ ಸೇಂಟ್ ಜರ್ಮನ್), ವಯಸ್ಸು 19

ಕಿಲಿಯನ್ ಎಂಬಾಪೆ (ಫ್ರಾನ್ಸ್ / ಪ್ಯಾರಿಸ್ ಸೇಂಟ್ ಜರ್ಮನ್), ವಯಸ್ಸು 19

ಫುಟ್‌ಬಾಲ್ ವಿಶ್ವದ ಅತಿ ದೊಡ್ಡ ಪ್ರತಿಭೆಯಾಗುವ ಭರವಸೆ ಮೂಡಿಸಿರುವ ಎಂಬಾಪೆ, ಮೊನಾಕೊದಿಂದ ಪಿಎಸ್‌ಜಿ ಸೇರಲು 166 ಮಿಲಿಯನ್ ಪೌಂಡ್‌ಗಳ ಒಪ್ಪಂದವನ್ನು ಇಷ್ಟರಲ್ಲೇ ಪೂರ್ಣಗೊಳಿಸಲಿದ್ದಾರೆ. ಪ್ಯಾರಿಸ್ ಪರ ಗುತ್ತಿಗೆಯಾಗಿ ಆಟವಾಡಿದ ಇವರು 23 ಗೋಲ್ ಗಳಿಸಿ, ಇನ್ನೂ 11 ಗೋಲ್‌ಗಳು ಬರಲು ಸಹಾಯವಾಗಿದ್ದರು.

ಆಫ್ರಿಕನ್ ಫುಟ್‌ಬಾಲ್‌ನ ಭವಿಷ್ಯದ ಬಗ್ಗೆ ಜಾರ್ಜ್ ವಾ ಹಾಗೂ ಎಮ್ಯಾನ್ಯುಯೆಲ್ ಮ್ಯಾಕ್ರಾನ್ ಅವರೊಂದಿಗೆ ಚರ್ಚಿಸಲು ಎಂಬಾಪೆ ಅವರನ್ನು ಆಹ್ವಾನಿಸಲಾಗಿತ್ತು ಎಂದರೆ ಇವರ ಜನಪ್ರಿಯತೆ ಎಷ್ಟಿದೆ ಎಂಬುದನ್ನು ಅರಿಯಬಹುದು.

ತನ್ನ ಸಹ ಆಟಗಾರರಿಂದ 'ಡೊನಾಟೆಲ್ಲೊ' ಎಂದು ಕರೆಯಲ್ಪಡುವ ಇವರು ಫ್ರಾನ್ಸ್‌ಗೆ ಯಾವ ರೀತಿ ಕೊಡುಗೆ ನೀಡಲಿದ್ದಾರೆ ಎಂಬುದನ್ನು ಜಗತ್ತು ಕಾತರದಿಂದ ಕಾಯುತ್ತಿದೆ. ಫ್ರಾನ್ಸ್ ತಂಡದ ಇನ್ನೂ ಅನೇಕರ ಮೇಲೆಯೂ ಈಗ ಎಲ್ಲರ ಗಮನ ಕೇಂದ್ರೀಕೃತವಾಗುತ್ತಿರುವುದು ಒಂದು ರೀತಿ ಒಳ್ಳೆಯದೇ ಆಗಿದೆ. ಒತ್ತಡವಿಲ್ಲದೆ ಗೋಲ್ ಗಳಿಸುವತ್ತ ಎಂಬಾಪೆ ಈಗ ಗಮನ ಹರಿಸಬಹುದು.

ಓಸ್ಮಾನೆ ಡಂಬೆಲೆ (ಫ್ರಾನ್ಸ್ / ಬಾರ್ಸಿಲೋನಾ), ವಯಸ್ಸು 21

ತನ್ನ ಡ್ರಿಬ್ಲಿಂಗ್ ಕೌಶಲ್ಯದಿಂದ ಹೆಸರುವಾಸಿಯಾದ ಓಸ್ಮಾನೆ ಅವರನ್ನು ಟೀಂ ಮೇಟ್ ಸ್ಯಾಮ್ಯುಯೆಲ್ ಉಮ್ಟಿಟಿ ಅವರು 'ಲೆ ಮಾಸ್ಕಿಟೊ' ಎಂದು ಕರೆಯುತ್ತಾರೆ. ವೇಗದ ವಿಂಗರ್ ಆಟಗಾರನಾದ ಇವರು ಯಾವಾಗಲೂ ಒಂದು ಅಚ್ಚರಿಯನ್ನು ಮೂಡಿಸುತ್ತಾರೆ. ಹಲವಾರು ಸಾಧನೆ ಮಾಡಿದ ಬೋರುಸಿಯಾ ಡಾರ್ಟಮುಂಡ್ ನಂತರ ಇವರು ಬಾರ್ಸಿಲೋನಾಗೆ ಬಂದರು. ನೇಮಾರ್ ಅವರ ನಿರ್ಗಮನದ ನಂತರ ತಂಡ ಸೇರಿದ ಇವರಿಗೆ ಆರಂಭದಲ್ಲಿ ಗಾಯ ಹಾಗೂ ಒತ್ತಡಗಳಿಂದ ಬಳಲುವಂತಾಗಿತ್ತು. ಆಗ ಕೇವಲ ಮೂರು ಗೋಲ್ ಗಳಿಸಿ, ಎರಡು ಗೋಲ್‌ಗಳಿಗೆ ಸಹಾಯ ಮಾಡಿದ್ದರು. ಆದರೆ ಈಗ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ.

ಥಾಮಸ್ ಲೆಮಾರ್ (ಫ್ರಾನ್ಸ್ / ಮೊನಾಕೊ), ವಯಸ್ಸು 22

ಥಾಮಸ್ ಲೆಮಾರ್ (ಫ್ರಾನ್ಸ್ / ಮೊನಾಕೊ), ವಯಸ್ಸು 22

ಸಮ್ಮರ್ ಸೀಸನ್‌ನಲ್ಲಿ ಆರ್ಸೆನಲ್‌ನ 100 ಮಿಲಿಯನ್ ಯುರೋಗಳ ಆಫರ್ ಅನ್ನು ತಿರಸ್ಕರಿಸಿದ್ದ, ಲೆಮಾರ್ ಯುರೋಪಿಯನ್ ಫುಟ್‌ಬಾಲ್‌ನ ಅತಿ ದೊಡ್ಡ ಉದಯೋನ್ಮುಖ ತಾರೆಯಾಗಿದ್ದಾರೆ. ಲೆಮಾರ್ ಸ್ಟಾರ್ಟರ್ ಆಗಿ ಆಡದಿದ್ದರೂ ತಂಡಕ್ಕೆ ವೇಗ ಹಾಗೂ ಚೈತನ್ಯವನ್ನು ತುಂಬಲಿದ್ದಾರೆ. ಮೊನಾಕೊನಲ್ಲಿನ ಪಂದ್ಯದಲ್ಲಿ ಲೆಫ್ಟ್, ರೈಟ್ ಹಾಗೂ ಸೆಂಟರ್ ಮಿಡ್‌ಫೀಲ್ಡ್ ಹೀಗೆ ಎಲ್ಲ ವಿಭಾಗಗಳಲ್ಲಿಯೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರು. ಲಿವರ್‌ಪೂಲ್ ಸೇರಿದಂತೆ ಯುರೋಪಿನ ಖ್ಯಾತ ಫುಟ್‌ಬಾಲ್ ಕ್ಲಬ್‌ಗಳು ಈ ವಿಶ್ವಕಪ್‌ನಲ್ಲಿ ಲೆಮಾರ್ ಮೇಲೆ ಗಮನ ಕೇಂದ್ರೀಕರಿಸಿವೆ.

ಪ್ರೆಸ್ನೆಲ್ ಕಿಂಪೆಂಬೆ (ಫ್ರಾನ್ಸ್ / ಪ್ಯಾರಿಸ್ ಸೇಂಟ್ ಜರ್ಮೇನ್), ವಯಸ್ಸು 22

ಆಗಿನ ಪಿಎಸ್‌ಜಿ ಕೋಚ್ ಉನಾಯ್ ಎಮೆರಿ ಅವರಿಂದ ರಿಯಲ್ ಮ್ಯಾಡ್ರಿಡ್ ವಿರುದ್ಧ ಆಟವಾಡಲು ಕಿಂಪೆಂಬೆ ಅವರನ್ನು ತಂಡಕ್ಕೆ ತಂದಿದ್ದರು. ತಿಯಾಗೋ ಸಿಲ್ವಾ ಅವರ ನಿರ್ಗಮನದ ನಂತರ ಕಿಂಪೆಂಬೆ ಹಲವಾರು ಒತ್ತಡದ ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸಿದರು. ಇವರು ಫ್ರಾನ್ಸ್‌ನಿಂದ ಹೊರಗೆ ಅಷ್ಟಾಗಿ ಹೆಸರು ಮಾಡಿಲ್ಲವಾದರೂ, ಖ್ಯಾತ ಆಟಗಾರ ವಿಲಿಯಂ ಗಲ್ಲಾಸ್ ಅವರಂಥವರು ಕಿಂಪೆಂಬೆ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ.

ದೀರ್ಘಾವಧಿಯವರೆಗೆ ಗಾಯಾಳುವಾಗಿದ್ದ ಎಲಿಯಂ ಮಂಗಾಲಾ ಅವರ ಜಾಗದಲ್ಲಿ ಕಿಂಪೆಂಬೆ ಸ್ಥಾನ ಪಡೆದರು. ಪಿಎಸ್‌ಜಿ ಪರವಾಗಿ ಮಂಗಾಲಾ ಆಡಿದ 27 ಪಂದ್ಯಗಳಲ್ಲಿ, 1.4 ಟ್ಯಾಕಲ್ಸ್ ಹಾಗೂ 2.6 ಕ್ಲಿಯರನ್ಸ್‌ಗಳು ಮಾತ್ರ ಸಾಧನೆ ಮಾಡಿದ್ದು ಸಹ ಕಿಂಪೆಂಬೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಕಾರಣವಾಯಿತು.

ವಿಲ್‌ಫ್ರೆಡ್ ನಿಡಿ (ನೈಜೀರಿಯಾ / ಲೈಸೆಸ್ಟರ್ ಸಿಟಿ), ವಯಸ್ಸು 21

ಲಿಸೆಸ್ಟರ್‌ನ ಯಶಸ್ಸಿನಲ್ಲಿ ಇವರೊಬ್ಬ ಹೊಗಳಿಕೆ ಇಲ್ಲದ ಹೀರೊ ಆಗಿದ್ದಾರೆ. ಫ್ರೆಂಚ್ ಫುಟ್‌ಬಾಲ್ ಮ್ಯಾನೇಜರ್ ಕ್ಲಾಡ್ ಪುವೆಲ್ ಅವರ ತಂಡವನ್ನು ಸಮತೋಲನ ಸ್ಥಿತಿಯಲ್ಲಿ ಕಾಯ್ದುಕೊಳ್ಳಲು ನೆರವಾದ ವಿಲ್‌ಫ್ರೆಡ್, ಎಂಗೊಲೊ ಕಾಂಟೆ ಅವರ ನಿರ್ಗಮನದಿಂದ ಉಂಟಾಗಿದ್ದ ಕೊರತೆಯನ್ನು ತುಂಬಿಸಿದರು. ಈ ಸೀಸನ್‌ನ ಪ್ರಿಮಿಯರ್ ಲೀಗ್‌ನಲ್ಲಿ ಪ್ರತಿ ಮ್ಯಾಚ್‌ನಲ್ಲಿ ಅತಿ ಹೆಚ್ಚು ಇಂಟರ್‌ಸೆಪ್ಷನ್ ಮಾಡಿದ ಮಿಡ್‌ಫೀಲ್ಡರ್ ಇವರಾಗಿದ್ದಾರೆ.

ಈ ಸೀಸನ್ 33 ಬಾರಿ ಆಡಿದ್ದು ಹೆಗ್ಗಳಿಕೆಯಾಗಿದೆ. ಇವರ ಶ್ರೇಷ್ಠ ಗುಣಮಟ್ಟದ ಆಟ ಎಲ್ಲ ಖ್ಯಾತ ಫುಟ್‌ಬಾಲ್ ಕ್ಲಬ್‌ಗಳ ಕಣ್ಣು ಸೆಳೆದಿದ್ದು, ರಶಿಯಾದಲ್ಲಿನ ಶೋ ನಂತರ ಇವರ ಫೀಸ್ ಮತ್ತಷ್ಟು ಹೆಚ್ಚಾಗಲಿದೆ.

ಕೆಲೆಚಿ ಇಹಿನಾಚೊ (ನೈಜೀರಿಯಾ / ಲೈಸೆಸ್ಟರ್‌ಸಿಟಿ), ವಯಸ್ಸು 21

ಕೆಲೆಚಿ ಇಹಿನಾಚೊ (ನೈಜೀರಿಯಾ / ಲೈಸೆಸ್ಟರ್‌ಸಿಟಿ), ವಯಸ್ಸು 21

2013 ರ ಅಂಡರ್-17 ವಿಶ್ವಕಪ್‌ನಲ್ಲಿ ಗೋಲ್ಡನ್ ಬಾಲ್ ಪ್ರಶಸ್ತಿ ಗೆದ್ದುಕೊಂಡಿದ್ದ ಕೆಲೆಚಿ, ಪ್ರತಿ ಮ್ಯಾಚ್‌ಗೆ ಒಂದು ಗೋಲ್ ಮಾಡುವ ಮೂಲಕ ಮ್ಯಾಂಚೆಸ್ಟರ್ ಸಿಟಿ ತಂಡದಲ್ಲಿ ಎತ್ತರದ ಸ್ಥಾನ ಗಳಿಸಿಕೊಂಡಿದ್ದರು. ಆದರೆ ಲಿಸೆಸ್ಟರ್‌ಗೆ ಬಂದ ಮೇಲೆ ಇವರ ಪ್ರದರ್ಶನ ಕಳಪೆಯಾಗಿದೆ. ಆರಂಭಿಕ 11 ರಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ತಮ್ಮ ಸ್ವ ಸಾಮರ್ಥ್ಯದ ಮೇಲೆ ಲೈನ್ ಲೀಡ್ ಮಾಡಲು ಇವರಿಂದ ಸಾಧ್ಯವಾಗದ ಕಾರಣ ನೈಜೀರಿಯಾ ಮತ್ತೊಬ್ಬ ಸ್ಟ್ರೈಕರ್ ಅನ್ನು ಅವಲಂಬಿಸಿದೆ. ಆದರೆ ಈ ಹಿಂದೆ ಬೆಂಚ್‌ನಲ್ಲಿರುವಾಗ ಮಾಡಿದ 3 ಗೋಲ್ ಹಾಗೂ 3 ಅಸಿಸ್ಟ್ ಗಳು ಈಗಲೂ ಇವರ ಕೈಹಿಡಿದಿವೆ.

ಅಲೆಕ್ಸ್ ಇವೊಬಿ (ನೈಜೀರಿಯಾ / ಆರ್ಸೆನಲ್), ವಯಸ್ಸು 22

ಅಲೆಕ್ಸ್ ಇವೊಬಿ (ನೈಜೀರಿಯಾ / ಆರ್ಸೆನಲ್), ವಯಸ್ಸು 22

ಫೀಫಾ ವಿಶ್ವಕಪ್‌ನಲ್ಲಿ ಝಾಂಬಿಯಾ ವಿರುದ್ಧ ಗೋಲ್ ಗಳಿಸಿ ನೈಜೀರಿಯಾಗೆ ವಿಶ್ವಕಪ್ ಎಂಟ್ರಿ ಕೊಡಿಸಿದ ಇವೋಬಿ ನೈಜೀರಿಯಾದಲ್ಲಿ ಜನಪ್ರಿಯರಾಗಿದ್ದಾರೆ. ಇವೊಬಿ, ಮಾಜಿ ನೈಜೀರಿಯಾ ಅಂತಾರಾಷ್ಟ್ರೀಯ ಆಟಗಾರ ಜೆ ಜೆ ಓಕೋಚಾ ಅವರ ಸೋದರ ಸಂಬಂಧಿಯಾಗಿದ್ದಾರೆ.
ಇಂಗ್ಲಂಡ್ ಅಂಡರ್ -17 ಹಾಗೂ ಅಂಡರ್ 18 ತಂಡಗಳಲ್ಲಿ ಇವೊಬಿ ಆಟವಾಡಿದ್ದಾರೆ. ಆದರೆ ಓಕೋಚಾ ಅವರ ರೀತಿಯಲ್ಲಿಯೇ ಇವೊಬಿ ನೈಜೀರಿಯಾ ಪೌರತ್ವ ಪಡೆದುಕೊಂಡರು. ಕ್ಲಬ್ ಮಟ್ಟದ ಪಂದ್ಯಗಳಲ್ಲಿ ಇವೊಬಿ ಮಿಶ್ರಫಲ ಕಂಡಿದ್ದಾರೆ. 22 ಪಂದ್ಯಗಳನ್ನು ಆಡಿದರೂ ಕೇವಲ 8 ಗೋಲ್ ಮಾತ್ರ ಗಳಿಸಲು ಸಫಲರಾಗಿದ್ದಾರೆ. ಅರ್ಜೆಂಟಿನಾ ವಿರುದ್ಧದ ಫ್ರೆಂಡ್ಲಿ ಮ್ಯಾಚ್‌ನಲ್ಲಿ ಮುಖ್ಯ ಸ್ಟ್ರೈಕರ್ ಹಿಂದಿನಿಂದ ಗಳಿಸಿದ ಎರಡು ಗೋಲ್‌ಗಳು ಅವರ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತವೆ.

Story first published: Tuesday, June 19, 2018, 21:43 [IST]
Other articles published on Jun 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X