ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫಿಫಾ ವಿಶ್ವಕಪ್: ಟ್ಯುನಿಸಿಯಾ ವಿರುದ್ಧ ಗೆದ್ದ ಆಸ್ಟ್ರೇಲಿಯಾ: ವಿಶ್ವಕಪ್ ಕನಸು ಜೀವಂತ

FIFA World cup 2022: Australia win against Tunisia by 1-0 Highlights

ಫಿಫಾ ವಿಶ್ವಕನ್‌ನಲ್ಲಿ ಟ್ಯುನೀಶಿಯಾ ವಿರುದ್ಧದ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿದೆ. ಈ ಮೂಲಕ ಫಿಫಾ ವಿಶ್ವಕಪ್‌ ಇತಿಹಾಸದಲ್ಲಿ ಆಸ್ಟ್ರೇಲಿಯಾ ತಂಡ ಕೇವಲ ಮೂರನೇ ಗೆಲುವು ಸಾಧಿಸಿದಂತಾಗಿದೆ. ಶನಿವಾರ ಟ್ಯುನಿಸಿಯಾ ವಿರುದ್ಧ ನಡೆದ ಪಂದ್ಯದಲ್ಲಿ 1-0 ಗೋಲಿನ ಅಂತರದ ವಿಜಯ ಸಾಧಿಸುವಲ್ಲಿ ಆಸ್ಟ್ರೇಲಿಯಾ ಯಶಸ್ವಿಯಾಗಿದೆ. ಈ ಮೂಲಕ ಕ್ವಾರ್ಟರ್‌ಫೈನಲ್‌ಗೇರುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ಸ್ಟ್ರೈಕರ್ ಮಿಚ್ ಡ್ಯೂಕ್ ಏಕೈಕ ಗೋಲು ಸಿಡಿಸಿದ್ದಾರೆ. ಮೊದಲಾರ್ಧದಲ್ಲಿ ಹೆಡರ್ ಮೂಲಕ ಗೋಲು ಸಿಡಿಸಿ ಟ್ಯುನಿಸಿಯಾ ಬೆಂಬಲಿಗರಿಗೆ ಆಘಾತವನ್ನು ನೀಡಿದರು. ಈ ಮುನ್ನಡೆಯನ್ನು ಅಂತಿಮ ಹಂತದವರೆಗೂ ಕಾಪಾಡುಕೊಳ್ಳುವಲ್ಲಿ ಆಸಿಸ್ ಪಡೆ ಯಶಸ್ವಿಯಾಗಿದೆ.

IND vs NZ: ಎರಡನೇ ಪಂದ್ಯದಲ್ಲಿ ಗೆದ್ದರಷ್ಟೇ ಸರಣಿ ಜೀವಂತ, ಸಂಭಾವ್ಯ ಆಡುವ ಬಳಗ, ಪಿಚ್ ಮತ್ತು ಹವಾಮಾನ ವರದಿIND vs NZ: ಎರಡನೇ ಪಂದ್ಯದಲ್ಲಿ ಗೆದ್ದರಷ್ಟೇ ಸರಣಿ ಜೀವಂತ, ಸಂಭಾವ್ಯ ಆಡುವ ಬಳಗ, ಪಿಚ್ ಮತ್ತು ಹವಾಮಾನ ವರದಿ

ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ ಡಿ ಗುಂಪಿನ ಅಂಕಪಟ್ಟಿಯಲ್ಲಿ ಎರಡು ಪಂದ್ಯಗಳಲ್ಲಿ ಮೂರು ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಆಸ್ಟ್ರೇಲಿಯಾ 1-4 ಅಂತರದಿಂದ ಸೋಲು ಅನುಭವಿಸಿತ್ತು. ಹೀಗಾಗಿ ಗ್ರೂಪ್ ಹಂತದ ಅಂತಿಮ ಪಂದ್ಯದ ಆಸ್ಟ್ರೇಲಿಯಾಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಆಸ್ಟ್ರೇಲಿಯಾ ತಂಡ ತನ್ನ ಗ್ರೂಪ್ ಹಂತದ ಅಂತಿಮ ಪಂದ್ಯವನ್ನು ಡೆನ್ಮಾರ್ಕ್ ವಿರುದ್ಧ ಆಡಲಿದೆ.

ಫಿಫಾ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದು 2006ರಲ್ಲಿ. ಟಿಮ್ ಕಾಹಿಲ್, ಹ್ಯಾರಿ ಕೆವೆಲ್ ಮತ್ತು ಮಾರ್ಕ್ ವಿದುಕಾ ಅವರಂಥಾ ಸ್ಟಾರ್ ಆಟಗಾರರನ್ನು ಹೊಂದಿದ್ದ ಅಂದಿನ ತಂಡ ಅಂತಿಮ 16ರ ಘಟ್ಟಕ್ಕೆ ತಲುಪಿತ್ತು. ಆದರೆ ಈಗ ಗ್ರಹಾಂ ಅರ್ನಾಲ್ಡ್ ನೇತೃತ್ವದ ಆಸ್ಟ್ರೇಲಿಯಾದಲ್ಲಿ ಅಂತಾ ಬಲಿಷ್ಠ ಆಟಗಾರರು ಇಲ್ಲದಿದ್ದರೂ ಸಾಕಷ್ಟು ಪ್ರಮಾಣದ ಅಭಿಮಾನಿಗ ಬಳಗವನ್ನು ಹೊಂದಿದ್ದಾರೆ. ಅಲ್ ಜನೌಬ್ ಸ್ಟೇಡಿಯಂನಲ್ಲಿ 42,000 ಪ್ರೇಕ್ಷಕರ ಸಮ್ಮುಖದಲ್ಲಿ ಅದ್ಭುತ ಗೆಲುವು ಸಾಧಿಸುವಲ್ಲಿ ಆಸ್ಟ್ರೇಲಿಯಾ ಯಶಸ್ವಿಯಾಗಿದೆ.

IND vs NZ: ಹ್ಯಾಮಿಲ್ಟನ್‌ ಸವಾಲಿನಲ್ಲಿ ಗೆಲ್ಲುತ್ತಾ ಭಾರತ? ಇಲ್ಲಿ ಭಾರತ ಗೆದ್ದಿರುವ ಪಂದ್ಯಗಳೆಷ್ಟು ಗೊತ್ತಾ?IND vs NZ: ಹ್ಯಾಮಿಲ್ಟನ್‌ ಸವಾಲಿನಲ್ಲಿ ಗೆಲ್ಲುತ್ತಾ ಭಾರತ? ಇಲ್ಲಿ ಭಾರತ ಗೆದ್ದಿರುವ ಪಂದ್ಯಗಳೆಷ್ಟು ಗೊತ್ತಾ?

ಟ್ಯುನಿಸಿಯಾ XI: ದಹ್ಮೆನ್, ಡ್ರಾಗರ್, ತಲ್ಬಿ, ಮೆರಿಯಾ, ಬ್ರೋನ್, ಅಬ್ದಿ , ಸ್ಕಿರಿ, ಲೈಡೌನಿ, ಸ್ಲಿಟಿ, ಮಸಾಕ್ನಿ, ಜೆಬಾಲಿ

ಆಸ್ಟ್ರೇಲಿಯಾ XI: ರಯಾನ್, ಕರಾಸಿಕ್, ರೌಲ್ಸ್, ಸೌಟರ್, ಬೆಹಿಚ್, ಮೂಯ್, ಮೆಕ್‌ಗ್ರೀ, ಇರ್ವಿನ್, ಲೆಕಿ, ಡ್ಯೂಕ್, ಗುಡ್‌ವಿನ್.

Story first published: Saturday, November 26, 2022, 20:27 [IST]
Other articles published on Nov 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X