ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

FIFA World Cup 2022: ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ ಭಾರತದ ದಿಗ್ಗಜ ಕ್ರಿಕೆಟಿಗರು

FIFA World Cup 2022: Former Cricketers Ravishastri And Gavaskar Will Watch Final At The Stadium

ಪ್ರಪಂಚದ ಅತಿ ದೊಡ್ಡ ಟೂರ್ನಿ ಫಿಫಾ ವಿಶ್ವಕಪ್‌ 2022ಕ್ಕೆ ತೆರೆ ಬೀಳಲಿದೆ. ಫೈನಲ್‌ ತಲುಪಿರುವ ಫ್ರಾನ್ಸ್ ಮತ್ತು ಅರ್ಜೆಂಟೀನಾ ಚಾಂಪಿಯನ್ ಪಟ್ಟಕ್ಕಾಗಿ ಹೋರಾಡಲಿವೆ. ಭಾನುವಾರ ರಾತ್ರಿ 8.30ಕ್ಕೆ ಪಂದ್ಯ ಆರಂಭವಾಗಲಿದೆ.

ಲಿಯೋನೆಲ್ ಮೆಸ್ಸಿ ವಿಶ್ವಕಪ್‌ ಗೆಲ್ಲುವ ಮೂಲಕ ತಮ್ಮ ಕನಸು ನನಸು ಮಾಡಿಕೊಳ್ಳಯವ ವಿಶ್ವಾಸದಲ್ಲಿದ್ದರೆ, ಹಾಲಿ ಚಾಂಪಿಯನ್ ಫ್ರಾನ್ಸ್ ಮತ್ತೆ ವಿಶ್ವಕಪ್ ಎತ್ತಿಹಿಡಿಯುವ ಹುಮ್ಮಸ್ಸಿನಲ್ಲಿದೆ.

ಕೋಟ್ಯಂತರ ಮಂದಿ ಅಭಿಮಾನಿಗಳು ಈ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಪಂದ್ಯವನ್ನು ಕ್ರೀಡಾಂಗಣದಲ್ಲಿ ನೇರವಾಗಿ ವೀಕ್ಷಿಸಲು ಜಗತ್ತಿನ ಹಲವು ಪ್ರಮುಖರು ಕತಾರ್‍‌ ಗೆ ಪ್ರಯಾಣ ಬೆಳೆಸಿದ್ದಾರೆ. ಇನ್ನೂ, ಭಾರತದಲ್ಲಿ ಕೂಡ ಫುಟ್ಬಾಲ್ ಕ್ರೀಡೆಯನ್ನು ಪ್ರೀತಿಸುವವರ ಸಂಖ್ಯೆಗೇನೂ ಕಡಿಮೆಯಿಲ್ಲ.

ಭಾರತದ ಮಾಜಿ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್ ಮತ್ತು ರವಿಶಾಸ್ತ್ರಿ ಫುಟ್ಬಾಲ್‌ ಪಂದ್ಯಗಳನ್ನು ಹೆಚ್ಚು ನೋಡುತ್ತಾರೆ. ಈ ಬಾರಿಯ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲು ಇಬ್ಬರೂ ದಿಗ್ಗಜರು ಕತಾರ್ ಗೆ ಪ್ರಯಾಣ ಮಾಡಿದ್ದು, ಪಂದ್ಯವನ್ನು ಕಣ್ತುಂಬಿಕೊಳ್ಳಲಿದ್ದಾರೆ.

ಲೆಜೆಂಡ್ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಫುಟ್‌ಬಾಲ್‌ ಅಭಿಮಾನಿ, ಇಂಗ್ಲಿಷ್ ಪ್ರೀಮಿಯರ್ ಲೀಗ್ ದೈತ್ಯ ಆರ್ಸೆನಲ್‌ನ ಮಾಜಿ ಮುಖ್ಯ ಕೋಚ್ ಆರ್ಸೆನೆ ವೆಂಗರ್ ಎಂದರೆ ಸುನಿಲ್ ಗವಾಸ್ಕರ್ ಅವರಿಗೆ ಅಚ್ಚುಮೆಚ್ಚು. ಫಿಫಾ ವಿಶ್ವಕಪ್‌ ಫೈನಲ್‌ಗೆ ಮೊದಲು, ಸುನಿಲ್ ಗವಾಸ್ಕರ್, ಆರ್ಸೆನೆ ವೆಂಗರ್ ಪರಸ್ಪರ ಭೇಟಿಯಾಗಿದ್ದಾರೆ. ಅವರಿಬ್ಬರು ಭೇಟಿಯಾದ ಫೋಟೊವನ್ನು ಸುನಿಲ್ ಗವಾಸ್ಕರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

FIFA World Cup 2022: Former Cricketers Ravishastri And Gavaskar Will Watch Final At The Stadium

ರೋಮಾಂಚನಕಾರಿ ಅನುಭವ ಎಂದ ಗವಾಸ್ಕರ್

"ಫಿಫಾ ವಿಶ್ವಕಪ್‌ ಫೈನಲ್‌ಗೆ ಮುನ್ನಾದಿನದಂದು, ಆರ್ಸೆನೆ ವೆಂಗರ್ ಅವರನ್ನು ಭೇಟಿ ಮಾಡುವುದು ರೋಮಾಂಚನಕಾರಿ ಅನುಭವ. ಅವರು ಶ್ರೇಷ್ಠ ಫುಟ್ಬಾಲ್ ಮ್ಯಾನೇಜರ್‌ಗಳಲ್ಲಿ ಒಬ್ಬರು" ಎಂದು ಗವಾಸ್ಕರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಗವಾಸ್ಕರ್ ಹೊರತಾಗಿ, ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಅಂತಿಮ ಹಣಾಹಣಿಯನ್ನು ವೀಕ್ಷಿಸಲು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಕೂಡ ಕತಾರ್‌ಗೆ ಪ್ರಯಾಣ ಬೆಳೆಸಿದ್ದಾರೆ.

FIFA World Cup 2022: Former Cricketers Ravishastri And Gavaskar Will Watch Final At The Stadium

ಫಿಫಾ ವಿಶ್ವಕಪ್ 2022 ರ ಅಂತಿಮ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾವನ್ನು ಎದುರಿಸಲಿದೆ. ವಿಶ್ವದ ಅತ್ಯಂತ ಜನಪ್ರಿಯ ಫುಟ್ಬಾಲ್ ತಾರೆಯಾಗಿರುವ ಲಿಯೋನೆಲ್ ಮೆಸ್ಸಿಗೆ ಈ ಬಾರಿ ವಿಶ್ವಕಪ್‌ ಗೆಲ್ಲುವ ಮಹತ್ವದ ಗುರಿ ಹೊಂದಿದ್ದಾರೆ. ಲುಸೇಲ್ ಐಕಾನಿಕ್ ಸ್ಟೇಡಿಯಂನಲ್ಲಿ ನಡೆಯುವ ಫೈನಲ್‌ ಪಂದ್ಯದಲ್ಲಿ ಏನಾದರೂ ಫ್ರಾನ್ಸ್ ಗೆಲುವು ಸಾಧಿಸಿದರೆ, 60 ವರ್ಷಗಳಲ್ಲಿ ತಂಡವೊಂದು ಸತತ ಎರಡನೇ ಬಾರಿ ಕಪ್‌ ಗೆದ್ದ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Story first published: Sunday, December 18, 2022, 19:09 [IST]
Other articles published on Dec 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X