2022ರ ಫಿಫಾ ಫುಟ್ಬಾಲ್ ವಿಶ್ವಕಪ್ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕ್ಲಿನಿಕಲ್ ಪ್ರದರ್ಶನ ನೀಡಿದ ನೆದರ್ಲ್ಯಾಂಡ್ಸ್ ತಂಡ ಶನಿವಾರ ಯುಎಸ್ಎ ತಂಡದ ವಿಶ್ವಕಪ್ ಕನಸನ್ನು ನುಚ್ಚುನೂರು ಮಾಡಿತು ಮತ್ತು 3-1 ಅಂತರದ ಗೆಲುವಿನೊಂದಿಗೆ ಕ್ವಾರ್ಟರ್-ಫೈನಲ್‌ಗೆ ಪ್ರವೇಶ ಪಡೆಯಿತು.
ಖಲೀಫಾ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಅಂತಿಮ-16ರ ಪಂದ್ಯದಲ್ಲಿ ಅನುಭವಿ ಕೋಚ್ ಲೂಯಿಸ್ ವ್ಯಾನ್ ಗಾಲ್ ಹುಡುಗರು ಅರ್ಹ ಗೆಲುವು ಗಳಿಸಿದರು.
ಫಿಫಾ ವಿಶ್ವಕಪ್: ಮೆಸ್ಸಿಯ ಚೊಚ್ಚಲ ನಾಕೌಟ್ ಗೋಲು; ಆಸೀಸ್ ವಿರುದ್ಧ ಗೆದ್ದು 8ರ ಘಟ್ಟ ಪ್ರವೇಶಿಸಿದ ಅರ್ಜೆಂಟೀನಾ
ನೆದರ್ಲ್ಯಾಂಡ್ಸ್ ಪರ ಮೆಂಫಿಸ್ ಡಿಪೇ ಮತ್ತು ಡೇಲಿ ಬ್ಲೈಂಡ್‌ರಿಂದ ಮೊದಲಾರ್ಧದ ಗೋಲುಗಳು ಮತ್ತು ಡೆನ್ಜೆಲ್ ಡಮ್‌ಫ್ರೈಸ್‌ನ ದ್ವಿತಿಯಾರ್ಧದ ಸ್ಟ್ರೈಕ್‌ಗಳು ಅರ್ಹ ವಿಜಯ ತಂದುಕೊಟ್ಟಿತು. ನೆದರ್ಲ್ಯಾಂಡ್ಸ್ ಆಟಗಾರರು ಅಮೇರಿಕನ್ ಎದುರಾಳಿಗಳಿಗೆ ದೊಡ್ಡ ಕಾಟ ನೀಡಿದರು.
ಹಿಂದಿನ ಮೂರು ಫೈನಲ್‌ಗಳಲ್ಲಿ ಸೋತ ನಂತರ ತಮ್ಮ ಮೊದಲ ವಿಶ್ವಕಪ್ ಗೆಲ್ಲುವ ತವಕದಲ್ಲಿರುವ ನೆದರ್ಲ್ಯಾಂಡ್ಸ್ ತಂಡಕ್ಕೆ ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ.
ಯುಎಸ್ಎ ಆಟಗಾರರು ಮೊದಲಾರ್ಧದಲ್ಲಿ ಆಕ್ರಮಣಕಾರಿ ಪ್ರದರ್ಶನ ನೀಡಿದರೂ, ಪಂದ್ಯದುದ್ದಕ್ಕೂ ಇದು ಮುಂದುವರೆಯಲಿಲ್ಲ. ಅಂತಿಮ ವೇಳೆಯಲ್ಲಿ ಪಂದ್ಯದ ಮೇಲೆ ಹಿಡಿತ ಕಳೆದುಕೊಂಡ ಯುಎಸ್ಎ ಆಟಗಾರರು ನೆದರ್ಲ್ಯಾಂಡ್ಸ್ ತಂಡಕ್ಕೆ ಗೋಲು ಬಿಟ್ಟುಕೊಟ್ಟರು.
ಯುಎಸ್ಎ ಫಾರ್ವರ್ಡ್ ಅಟಗಾರ ಕ್ರಿಶ್ಚಿಯನ್ ಪುಲಿಸಿಕ್ ಅವರು ಕೇವಲ ಮೂರು ನಿಮಿಷಗಳ ನಂತರ ತಮ್ಮ ತಂಡವನ್ನು 1-0 ಮುನ್ನಡೆ ಗಳಿಸುವ ಸುವರ್ಣ ಅವಕಾಶವನ್ನು ಹಾಳುಮಾಡಿದರು. ಆದರೂ ಆ ಆರಂಭಿಕ ಅವಕಾಶದಿಂದ ಉತ್ತೇಜಿತರಾದ ಅಮೇರಿಕನ್ ಆಟಗಾರರು ಮೈದಾನದಲ್ಲಿ ಮುಂಚಿನಂತೆ ಓಡಿದರು.
ಆದರೆ 10 ನಿಮಿಷದಲ್ಲಿ ನೆದರ್ಲ್ಯಾಂಡ್ಸ್ ಮುನ್ನಡೆ ಸಾಧಿಸಿತು. ಮಿಡ್‌ಫೀಲ್ಡ್‌ನಲ್ಲಿ ಅದ್ಭುತವಾದ ಇಂಟರ್‌ಪ್ಲೇ ಚೆಂಡನ್ನು ಇಂಟರ್ ಮಿಲನ್‌ನ ಡಮ್‌ಫ್ರೈಸ್‌ಗೆ ಬಲಭಾಗದ ಕೆಳಗೆ ಚೆಂಡು ಕಳಿಸಿ ಗೋಲು ಗಳಿಸಿದರು.
ಇನ್ನು ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡವು ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ನಂತರ ನಿರಾಳರಾಗಿದ್ದಾರೆ. ಫಿಫಾ ವಿಶ್ವಕಪ್ ಕ್ವಾರ್ಟರ್-ಫೈನಲ್‌ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಕಠಿಣ ಮುಖಾಮುಖಿಯನ್ನು ಎದುರಿಸಲಿದೆ.
ಲಿಯೋನೆಲ್ ಮೆಸ್ಸಿ ಮತ್ತೊಮ್ಮೆ ತನ್ನ ರಾಷ್ಟ್ರಕ್ಕಾಗಿ ಗೋಲು ಗಳಿಸಿದ್ದು, ಅರ್ಜೆಂಟೀನಾ ಪರ ತನ್ನ ಮೊದಲ ವಿಶ್ವಕಪ್ ನಾಕೌಟ್ ಗೋಲ್‌ನೊಂದಿಗೆ ಶನಿವಾರದಂದು ಆಸ್ಟ್ರೇಲಿಯಾವನ್ನು 2-1 ಗೋಲುಗಳಿಂದ ಸೋಲಿಸಲು ನೆರವಾದನು.