ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫಿಫಾ ವಿಶ್ವ ರ‍್ಯಾಂಕಿಂಗ್: ಅರ್ಜೆಂಟಿನಾ ಅಲ್ಲ, ಕ್ವಾ.ಫೈನಲ್‌ನಲ್ಲಿ ಸೋತ ಈ ತಂಡವೇ ನಂ.1!

FIFA World Ranking: Brazil continues in top spot despite ended world cup campaign in quarterfinal

ಭಾನುವಾರ ನಡೆದ ಫಿಫಾ ವಿಶ್ವಕಪ್ 2022ರ ಫೈನಲ್ ಸೆಣೆಸಾಟದಲ್ಲಿ ಅರ್ಜೆಂಟಿನಾ ತಂಡ ಗೆದ್ದು ವಿಶ್ವ ಚಾಂಪಿಯನ್ ಪಟ್ಟಕ್ಕೇರಿದೆ. ಹಾಗಿದ್ದರು ಕೂಡ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ಫಿಫಾ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರಲು ಸಾಧ್ಯವಾಗಿಲ್ಲ. ಈ ವಿಶ್ವಕಪ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ನಲ್ಲಿ ನಿರ್ಗಮಿಸಿದ ಬ್ರೆಜಿಲ್ ತಂಡವೇ ವಿಶ್ವದ ನಂಬರ್ 1 ಫುಟ್ಬಾಲ್ ತಂಡವಾಗಿ ಹೊರಹೊಮ್ಮಿದೆ.

ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಬೆಲ್ಜಿಯಂ ತಂಡವನ್ನು ಕೆಳಕ್ಕಿಳಿಸಿ ಬ್ರೆಜಿಲ್ ತಂಡ ನಂಬರ್ 1 ತಂಡವಾಗಿ ಮುಂದುವರಿದಿದೆ. ಆದರೆ ಈ ಬಾರಿಯ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ಫೈನಲ್ ಹಂತದಲ್ಲಿ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿದ್ದರೂ ವಿಶ್ವಚಾಂಪಿಯನ್ ಅರ್ಜೆಂಟಿನಾ ತಂಡಕ್ಕೆ ಬ್ರೆಜಿಲ್ ತಂಡವನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ.

ಫಿಫಾ ವಿಶ್ವಕಪ್ ಫೈನಲ್: ಗೋಲ್ಡನ್ ಬೂಟ್, ಗೋಲ್ಡನ್ ಬಾಲ್ ಪಡೆದ ಆಟಗಾರರು ಯಾರು?ಫಿಫಾ ವಿಶ್ವಕಪ್ ಫೈನಲ್: ಗೋಲ್ಡನ್ ಬೂಟ್, ಗೋಲ್ಡನ್ ಬಾಲ್ ಪಡೆದ ಆಟಗಾರರು ಯಾರು?

ಬ್ರೆಜಿಲ್ ತಂಡ ಈ ವಿಶ್ವಕಪ್‌ನಲ್ಲಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಲೀಗ್ ಹಂತದಲ್ಲಿ ಕ್ಯಾಮರೂನ್ ವಿರುದ್ಧ ಸೋಲು ಅನುಭವಿಸಿದ್ದ ಬ್ರೆಜಿಲ್ ಕ್ವಾರ್ಟರ್‌ಫೈನಲ್‌ನಲ್ಲಿ ಕ್ರೊಯೇಶಿಯಾ ವಿರುದ್ಧ ಸೋತು ವಿಶ್ವಕಪ್ ಅಭಿಯಾನವನ್ನು ಅಂತ್ಯಗೊಳಿಸಿತು.

ಇತ್ತ ಅರ್ಜೆಂಟಿನಾ ಈ ವಿಶ್ವಕಪ್ ಟೂರ್ನಿಯಲ್ಲಿ ಒಂದು ಪಂದ್ಯದಲ್ಲಿ ಮಾತ್ರವೇ ಸೋಲು ಅನುಭವಿಸಿದೆ. ತಮ್ಮ ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಸೋಲು ಕಂಡಿದ್ದ ಮೆಸ್ಸಿ ಪಡೆ ಬಳಿಕ ಒಂದಾದ ಬಳಿಕ ಮತ್ತೊಂದು ಗೆಲುವು ಸಾಧಿಸುತ್ತಾ ಫೈನಲ್‌ಗೆ ಪ್ರವೇಶಿಸಿತ್ತು. ಫೈನಲ್‌ನಲ್ಲಿ 4-2 ಅಂತರದಿಂದ ಫೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟಿನಾ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದೆ.

2021ರ ಕೋಪಾ ಅಮೆರಿಕಾ ಹಾಗೂ ಕತಾರ್ ವಿಶ್ವಕಪ್ ಗೆದ್ದು ಹೊರತಾಗಿಯೂ ಮೆಸ್ಸಿ ಪಡೆ ನಂಬರ್ 1 ಸ್ಥಾನಕ್ಕೇರಲು ಸಾಧ್ಯವಾಗಿಲ್ಲ. ಬ್ರೆಜಿಲ ಅಗ್ರಸ್ಥಾನದಲ್ಲಿ ಮುಂದುವರಿದರೆ ಅರ್ಜೆಂಟಿನಾ ಎರಡನೇ ಶ್ರೇಯಾಂಕ ಹಾಘೂ ರನ್ನರ್‌ಅಪ್ ಫ್ರಾನ್ಸ್ ಮೂರಬೇ ಸ್ಥಾನವನ್ನು ಪಡೆದುಕೊಂಡಿದೆ. ಲೀಗ್ ಹಂತದಿಂದ ಹೊರಬಿದ್ದ ಬೆಲ್ಜಿಯಂ ಎರಡು ಸ್ಥಾನಗಳ ಕುಸಿತ ಕಂಡಿದ್ದು ನಾಲ್ಕನೇ ಶ್ರೇಯಾಂಕ ಪಡೆದುಕೊಂಡಿದೆ.

Story first published: Tuesday, December 20, 2022, 2:15 [IST]
Other articles published on Dec 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X