ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್ ಆವರಣದಲ್ಲಿ ಮಹಿಳೆಯರಿಗೆ ಕಾಮುಕರ ಕಾಟ!

Harassment of women FAREs most reported concern to FIFA

ಮಾಸ್ಕೋ, ಜುಲೈ 12: ದೊಡ್ಡ ಕ್ರೀಡಾಕೂಟ, ಪಂದ್ಯಾಟಗಳ ವೇಳೆ ಮಹಿಳೆಯರಿಗೆ ಲೈಂಗಿಕ ಕಿರುಕುಕ್ಕೊಳಗಾಗುವುದು ಸುದ್ದಿಯಾಗುತ್ತಿರುತ್ತವೆ. ಈ ಬಾರಿಯ ಫೀಫಾ ವಿಶ್ವಕಪ್ ನಲ್ಲೂ ಕಾಮುಕರ ಕಾಟ ಹೆಚ್ಚಾಗಿದೆ. ಈ ಹಿಂದೆಯೂ 2018ರ ಫೀಫಾ ವಿಶ್ವಕಪ್ ವರದಿಗಾಗಿ ತೆರಳಿದ ವನಿತಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿತ್ತು. ಈಗ ಇನ್ನಷ್ಟು ದೂರುಗಳು ಪ್ರತಿ‍ಷ್ಠಿತ ಟೂರ್ನಿಗೆ ಕಪ್ಪುಚೆಕ್ಕೆಯಾಗಿ ಪರಿಣಮಿಸುತ್ತಿದೆ.

ಫೀಫಾ ವಿಶ್ವಕಪ್ 2018ರ ಕಾರ್ಯ ನಿರ್ವಾಹಕ ನಿರ್ದೇಶಕರಾಗಿರುವ ಪಿಯರಾ ಪೊವಾರ್ ಹೇಳುವಂತೆ ಸುಮಾರು 10ಕ್ಕೂ ಹೆಚ್ಚು ಲೈಂಗಿಕ ದೌರ್ಜನ್ಯದ ಪ್ರಕರಣಗಳು ಕೇಳಿಬಂದಿವೆ. ಪೊವಾರ್ ಅವರೇ ತಿಳಿಸಿದಂತೆ 10 ಮೇಲ್ನೋಟಕ್ಕೆ ಸಿಗುವ ಸಂಖ್ಯೆಯಷ್ಟೇ. ವಾಸ್ತವವಾಗಿ ಇದಕ್ಕೆ ದುಪ್ಪಟ್ಟು ಸಂಖ್ಯೆಯ ಲೈಂಗಿಕ ಕಿರುಕುಳ ಸಂಗತಿಗಳು ವಿಶ್ವಕಪ್ ಆವರಣದಲ್ಲಿ ನಡೆಯುತ್ತಿವೆಯಂತೆ.

ಇಲ್ಲಿ ಹೆಚ್ಚಾಗಿ ಲೈಂಗಿಕ ಕಿರುಕುಳಕ್ಕೆ ಒಳಗಾಗುವವರು ಮಹಿಳಾ ಪತ್ರಕರ್ತರೆ. ಇವರೊಂದಿಗೆ ಮಹಿಳಾ ಅಭಿಮಾನಿಗಳಿಗೂ ಕಿರುಕುಳ ತಪ್ಪಿದ್ದಲ್ಲ. ಹೆಚ್ಚಿನ ಸಾರಿ ಪುರುಷ ಅಭಿಮಾನಿಗಳೇ ಎಲ್ಲೆ ಮೀರಿ ನಡೆಯುತ್ತಿರುವ ದೂರುಗಳು ಕೇಳಿಬಂದಿವೆ. ಪತ್ರಕರ್ತೆಯರು ವರದಿ ಮಾಡುತ್ತಿರುವ ವೇಳೆ ಏಕಾಏಕಿ ಮುತ್ತಿಕ್ಕಿ ಪರಾರಿಯಾಗುವ ಕಿಡಿಗೇಡಿ ಅಭಿಮಾನಿಗಳಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಲುಜ್ನಿಕಿ ಸ್ಟೇಡಿಯಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪೊವಾರ್, 'ಹೆಚ್ಚಿನ ಜನರು ಇದೊಂದು ಆಸಕ್ತಿದಾಯಕ ಟೂರ್ನಮೆಂಟ್ ಎಂದು ಭಾವಿಸಿದ್ದಾರೆ. ಇಲ್ಲಿ ಅಂತ ಹೆಚ್ಚಿನ ಅಹಿತಕರ ಘಟನೆ ನಡೆದಿಲ್ಲವಾದರೂ ಲೈಂಗಿಕ ಕಿರುಕುಳಗಳ ಪ್ರಕರಣಗಳು ನಡೆದಿವೆ. ಈವರೆಗೆ ಸುಮಾರು 30ಕ್ಕೂ ಹೆಚ್ಚು ಮಹಿಳಾ ಪತ್ರಕರ್ತರಿಗೆ ಇದರ ಕಹಿ ಅನುಭವವಾಗಿವೆ. ಆದರೆ ಹೆಚ್ಚಿನವರು ಇದನ್ನು ತೋರಿಕೊಳ್ಳಲು ಬಯಸುವುದಿಲ್ಲ. ಹಾಗಾಗಿ ಸುಮಾರು 10 ಪ್ರಕರಣಗಳಷ್ಟೇ ದಾಖಲಾಗಿವೆ' ಎಂದಿದ್ದಾರೆ.

Story first published: Thursday, July 12, 2018, 0:36 [IST]
Other articles published on Jul 12, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X