ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ 2019: ಎಟಿಕೆ ವಿರುದ್ಧ ಚೊಚ್ಚಲ ಪಂದ್ಯವನ್ನಾಡಲಿದೆ ಹೈದರಾಬಾದ್

By Isl Media
Hyderabad FC out to make a mark against ATK on ISL debut

ಕೋಲ್ಕತ್ತ, ಅಕ್ಟೋಬರ್ 25: ಹೀರೋ ಇಂಡಿಯನ್ ಲೀಗ್ ನ ನೂತನ ಕ್ಲಬ್, ಹೈರಾಬಾದ್ ಎಫ್ಸಿ, ಇಲ್ಲಿನ ಯುವ ಭಾರತಿ ಕ್ರೀಡಾಂಗಣದಲ್ಲಿ ಎಟಿಕೆ ವಿರುದ್ಧ ಆಡುವ ಮೂಲಕ ಇಂಡಿಯನ್ ಸೂಪರ್ ಲೀಗ್ ಗೆ ಪಾದಾರ್ಪಣೆ ಮಾಡಲಿದೆ.

ಕೇರಳ ಬ್ಲಾಸ್ಟರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸೋಲನುಭವಿಸಿದ ಎಟಿಕೆ ತಂಡ ಈಗ ಜಯದ ಒತ್ತಡದಲ್ಲಿದೆ. ಕಾರ್ಲ್ ಮ್ಯಾಕ್ ಹಗ್ ಗಳಿಸಿದ ಗೋಲಿನಿಂದ ಕೇರಳ ಬ್ಲಾಸ್ಟರ್ಸ್ ದಿಟ್ಟ ಹೆಜ್ಜೆಯನ್ನೇ ಇಟ್ಟಿತ್ತು, ಆದರೆ ಚೆಂಡನ್ನು ನಿಯಂತ್ರಿಸುವಲ್ಲಿ ಕೊಲ್ಕತಾ ಪಡೆ ವಿಫಲವಾಗಿತ್ತು. ಕೋಚ್ ಅಂಟೋನಿಯೋ ಹಬ್ಬಾಸ್ ಅವರ ಪ್ರಕಾರ ಕೊಚ್ಚಿಯಲ್ಲಿ ತಮ್ಮ ತಂಡ ಸೋಲುತ್ತದೆಂದು ಊಹಿಸಿರಲಿಲ್ಲ ಎಂದಿದ್ದಾರೆ. ಹೈದೆರಾಬಾದ್ ವಿರುದ್ಧದ ಪಂದ್ಯದಲ್ಲಿ ತಮ್ಮ ತಂಡ ಸುಧಾರಣೆ ಕಂಡುಕೊಳ್ಳಲೇ ಬೇಕು ಎಂದಿದ್ದಾರೆ.

ಐಎಸ್‌ಎಲ್: ಎಟಿಕ್ vs ಹೈದರಾಬಾದ್ ಎಫ್‌ಸಿ, Live ಸ್ಕೋರ್‌ಕಾರ್ಡ್

1
2026430

''ತಂಡದಲ್ಲಿ ಇನ್ನೂ ಹೊಂದಾಣಿಕೆಯ ಅಗತ್ಯವಿದೆ. ಆಟಗಾರರು ಸುಧಾರಣೆ ಕಾಣಬೇಕು. ನಮ್ಮ ತಂಡದಲ್ಲಿ ಏಳು ಹೊಸ ಆಟಗಾರರಿದ್ದಾರೆ. ಆದ್ದರಿಂದ ಹೊಸ ತಂಡದ ವಿರುದ್ಧ ನಿಖರವಾದ ಸಮತೋಲನವನ್ನು ಕಾಯ್ದುಕೊಳ್ಳುವುದು ಕಷ್ಟವಾಗಿದೆ. ನಮಗೆ ಗೋಲು ಗಳಿಸಲು ಸಾಕಷ್ಟು ಅವಕಾಶ ಇದ್ದಿತ್ತು, ಅದು ನಾವು ಸೋಲುವ ಪಂದ್ಯವಾಗಿರಲಿಲ್ಲ. ಆದರೆ ಈಗ ನಾವು ಮುಂದಿರುವ ಪಂದ್ಯಗಳ ಬಗ್ಗೆ ಯೋಚಿಸಬೇಕಾಗಿದೆ,'' ಎಂದು ಎಟಿಕೆ ಕೋಚ್ ಹೇಳಿದ್ದಾರೆ.

ಬಾಂಗ್ಲಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಟಿ20 ತಂಡಕ್ಕೆ ರೋಹಿತ್ ನಾಯಕಬಾಂಗ್ಲಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಟಿ20 ತಂಡಕ್ಕೆ ರೋಹಿತ್ ನಾಯಕ

ಕೊಚ್ಚಿಯಲ್ಲಿ ನಡೆದ ಪಂದ್ಯದಲ್ಲಿ ಸ್ಟಾರ್ ಸ್ಟ್ರೈಕರ್ ರಾಯ್ ಕೃಷ್ಣ ಅವರಿಗೆ ಗೋಲು ಗಳಿಸಲು ಉತ್ತಮ ಅವಕಾಶ ಇದ್ದಿತ್ತು. ಜಾವಿ ಹೆರ್ನಾಂಡೀಸ್ ಅಟ್ಯಾಕ್ ವಿಭಾಗದಲ್ಲಿ ಎಟಿಕೆಯ ಪ್ರಮುಖ ಅಸ್ತ್ರ. ಅದೇ ರೀತಿ ಮೈಕಲ್ ಸೂಸೈರಾಜ್ ಉತ್ತಮ ರೀತಿಯಲ್ಲಿ ನೆರವು ನೀಡುವ ಸಾಧ್ಯತೆ ಇದೆ.

ಐಎಸ್ ಎಲ್ ಗೆ ಪದಾರ್ಪಣೆ ಮಾಡುತ್ತಿರುವ ನೂತನ ತಂಡದ ವಿರುದ್ಧ ಎಟಿಕೆ ಮೇಲುಗೈ ಸಾಧಿಸುವ ಗುರಿ ಹೊಂದಿದೆ. ''ನಾಳೆ ನಾವು ಗೆಲ್ಲಲೇ ಬೇಕೆಂದು ನನ್ನ ಮನಸ್ಸು ಹೇಳುತ್ತಿದೆ. ನಮ್ಮ ಪ್ರದರ್ಶನಗಳಲ್ಲಿ ಕುಶಲತೆಯನ್ನು ಪ್ರದರ್ಶಿಸಬೇಕಾಗಿದೆ. ಪಂದ್ಯಗಳನ್ನು ಗೆಲ್ಲಲು ಉತ್ತಮ ಪ್ರದರ್ಶನ ತೋರಬೇಕು ಎಂಬುದೇ ಪ್ರಜಮುಖವಾದುದು,'' ಎಂದು ಹಬ್ಬಾಸ್ ಹೇಳಿದ್ದಾರೆ.

ಭಾರತ vs ಬಾಂಗ್ಲಾ: ಟೀಮ್ ಇಂಡಿಯಾದಲ್ಲಿ ಕೊಹ್ಲಿ ಬದಲು ಪಂತ್, ಸ್ಯಾಮ್ಸನ್?!ಭಾರತ vs ಬಾಂಗ್ಲಾ: ಟೀಮ್ ಇಂಡಿಯಾದಲ್ಲಿ ಕೊಹ್ಲಿ ಬದಲು ಪಂತ್, ಸ್ಯಾಮ್ಸನ್?!

ಹೈದರಾಬಾದ್ ತಂಡ ಇಂಡಿಯನ್ ಸೂಪರ್ ಲೀಗ್ ಗೆ ಹೊಸತಾಗಿರಬಹುದು, ಆದರೆ, ತಂದಲ್ಲಿರುವ ಆಟಗಾರರು ಮಾತ್ರ ಐಎಸ್ ಎಲ್ ಗೆ ಹೊಸಬರಲ್ಲ. ಮರ್ಸಿಲಿನೊ ಮತ್ತು ಮಾರ್ಕೊ ಸ್ಟಾಂಕೋವಿಕ್ ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಹೊಂದಿರುವ ಆಟಗಾರರು. ಋತುವನ್ನು ಉತ್ತಮ ರೀತಿಯಲ್ಲಿ ಆರಂಭಿಸುವ ಆತ್ಮವಿಶ್ವಾಸ ಇದೆ ಎಂದು ಹೈದರಾಬಾದ್ ತಂಡದ ಕೋಚ್ ಫಿಲ್ ಬ್ರೌನ್ ಹೇಳಿದ್ದಾರೆ.

''ಎಫ್ ಸಿ ಪುಣೆ ಸಿಟಿ ತಂಡದಲ್ಲಿದ್ದ ಅರ್ಧದಷ್ಟು ಭಾರತೀಯ ಆಟಗಾರರರನ್ನು ಕರೆತಂದಿರುವೆ,. ಇಬ್ಬರು ವಿದೇಶಿ ಆಟಗಾರರಾದ ಮಾರ್ಸಿಲಿನೊ ಹಾಗೂ ಮಾರ್ಕೊ ಸ್ಟಾಂಕೋವಿಕ್ ಭಾರತದ ಫುಟ್ಬಾಲ್ ಆಟವನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ. ಎಲ್ಲೇ ಆಡಿದರೂ ಜಯ ತಂದು ಕೊಡುವಂಥ ಸಾಮರ್ಥ್ಯ ಹೊಂದಿರುವ ಆಟಗಾರ ಮರ್ಸಿಲಿನೊ,'' ಬ್ರೌನ್ ಹೇಳಿದ್ದಾರೆ.

Hyderabad FC out to make a mark against ATK on ISL debut

ಹೈದರಾಬಾದ್ ಕೂಡ ಉತ್ತಮ ರೀತಿಯಲ್ಲಿ ದಾಳಿ ಮಾಡಬಲ್ಲ ಆಟಗಾರರಿಂದ ಕೂಡಿದೆ. ಜಮೈಕಾದ ಫಾರ್ವರ್ಡ್ ಆಟಗಾರ ಗಿಲೆಸ್ ಬಾರ್ನೆಸ್ ಮತ್ತು ಬ್ರೆಜಿಲ್ ಮೂಲದ ಆಟಗಾರ ಬೊಬೊ ತಂಡದ ಶಕ್ತಿ ಎನಿಸಿದ್ದಾರೆ. ಸ್ಪೇನ್ ನ ಮಿಡ್ ಫೀಲ್ಡರ್ ಗಾರ್ಡಿಲೋ ಅವರಿಗೆ ಅಖಿಲ ಭಾರತೀಯ ಫುಟ್ಬಾಲ್ ಫೆಡರೇಷನ್ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಡಿಸೇಂಬರ್ ವರೆಗೂ ಅವರು ತಂಡದಿಂದ ಹೊರಗುಳಿಯಲಿದ್ದಾರೆ.

ನಿಜವಾಯ್ತು ಗಂಗೂಲಿ ಮಾತು, ಬಾಂಗ್ಲಾದೇಶ ಕ್ರಿಕೆಟಿಗರ ಮುಷ್ಕರ ಅಂತ್ಯನಿಜವಾಯ್ತು ಗಂಗೂಲಿ ಮಾತು, ಬಾಂಗ್ಲಾದೇಶ ಕ್ರಿಕೆಟಿಗರ ಮುಷ್ಕರ ಅಂತ್ಯ

''ನೀವೊಂದು ಹೊಸ ತಂಡವಾಗಿದ್ದು, ಲೀಗ್ ನಲ್ಲಿ ಮೊದಲ ಬಾರಿಗೆ ಆಡುವಾಗ ಅದರ ಘನತೆಗೆ ತಕ್ಕಂತೆ ಜವಾಬ್ದಾರಿಯಿಂದ ಆಡಬೇಕಾಗುತ್ತದೆ. ಒಟ್ಟು ಹತ್ತು ತಂಡಗಳಿವೆ, ಆದರೆ ನಿಮಗೆ ಇನ್ನೂ ಗುರುತು ಇಲ್ಲ. ನಾನು ಉತ್ತಮ ಆಟದ ಮೂಲಕ ನಮ್ಮನ್ನು ಗುರುತಿಸಿಕೊಳ್ಳಬೇಕು. 11-12 ದಿನಗಳ ಅಂತರದಲ್ಲಿ ನಮಗೆ ನಾಲ್ಕು ಪಂದ್ಯಗಳಿವೆ, ಪ್ರತಿಯೊಂದು ಪಂದ್ಯವೂ ನಮ್ಮ ಗುರುತಾಗಿರುತ್ತದೆ,'' ಎಂದರು.

ಬ್ರೌನ್ ಅವರ ತಂಡ ತಮ್ಮ ಕೋಚ್ ಅವರ ಆತ್ಮವಿಶ್ವಾಸವನ್ನು ಜಯವಾಗಿ ಪರಿವರ್ತಿಸುವುದೇ, ಅಥವಾ, ಕೇರಳ ವಿರುದ್ಧದ ಸೋಲಿನಿಂದ ಎಟಿಕೆ ಚೇತರಿಸಿಕೊಳ್ಳುವುದೇ ಕಾದು ನೋಡಬೇಕು.

Story first published: Thursday, October 24, 2019, 19:55 [IST]
Other articles published on Oct 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X