ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ Live Score: ಸಚಿನ್ ತೊರೆದ ಕೇರಳ ಬ್ಲಾಸ್ಟರ್ಸ್ ಸಂಕಷ್ಟದಲ್ಲಿ!

By Isl Media
ISL 2018: Time running out for Kerala Blasters FC

ಕೊಚ್ಚಿ, ಡಿಸೆಂಬರ್ 4: ಈ ಹಿಂದೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸಹ ಮಾಲಕತ್ವದಲ್ಲಿದ್ದ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಈ ಬಾರಿಯ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ನಿಜವಾಗಿ ಸಂಕಷ್ಟಕ್ಕೆ ಸಿಲುಕಿದೆ. ಎರಡು ಬಾರಿ ಪ್ಲೇ ಆಫ್ ಹಂತ ತಲುಪಿದ್ದ ತಂಡ ಈ ಬಾರಿಯೂ ಬಹುತೇಕ ಪ್ಲೇ ಆಫ್ ನಿಂದ ಹೊರ ಉಳಿದಂತೆಯೆ. ಈ ಬಾರಿ ಎಟಿಕೆ ವಿರುದ್ಧದ ಪಂದ್ಯದಲ್ಲಿ ಗೆದ್ದ ನಂತರ ಕೇರಳ ದಯನೀಯ ಸ್ಥಿತಿ ತಲುಪಿದೆ.

ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
1022347

ಈಗ ಎಲ್ಲವೂ ಅವರ ಕೈಯಲ್ಲಿದೆ. ಡೇವಿಡ್ ಜೇಮ್ಸ್ ಪಡೆಗೆ ಈಗಲೂ ಪ್ಲೇ ಆಫ್ ಹಂತ ತಲಪುವ ಅವಕಾಶ ಇದೆ. ಆದರೆ ತಂಡ ಜಯ ಗಳಿಸುವುದನ್ನು ಆರಂಭಿಸಬೇಕು. ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಕೇರಳ ಗೆಲ್ಲಲೇಬೇಕಾಗಿದೆ.

ಕುಲದೀಪ್ ಎಸೆತಕ್ಕೆ ಬ್ಯಾಟ್ ಬೀಸಿದ ಕೊಹ್ಲಿ ಆಸೀಸ್‌ಗೆ ಸಂದೇಶ ರವಾನಿಸಿದರೆ?!ಕುಲದೀಪ್ ಎಸೆತಕ್ಕೆ ಬ್ಯಾಟ್ ಬೀಸಿದ ಕೊಹ್ಲಿ ಆಸೀಸ್‌ಗೆ ಸಂದೇಶ ರವಾನಿಸಿದರೆ?!

ಕೇರಳ ತಂಡ ಇದುವರೆಗೂ ಆಡಿರುವ 8 ಪಂದ್ಯಗಳಲ್ಲಿ ಜಯ ಕಂಡಿಲ್ಲ. ಇದು ಐಎಸ್ ಎಲ್ ಇತಿಹಾಸ ದಲ್ಲೇ ತಂಡವೊಂದು ಜಯ ಕಾಣದಿರುವುದು ಇದೆ ಮೊದಲು. ಗೆಲ್ಲುವ ಅವಕಾಶ ಇದ್ದರೂ ಜೇಮ್ಸ್ ಪಡೆ ಕೊನೆಯ ಕ್ಷಣದಲ್ಲಿ ಗೋಲು ನೀಡಿ ಏಳು ಅಂಕಗಳನ್ನು ಕಳೆದುಕೊಂಡಿದೆ.

ಜಯದ ಸಮೀಪ ತಲುಪಿದ್ದೆವು

ಜಯದ ಸಮೀಪ ತಲುಪಿದ್ದೆವು

'ಹಲವು ಬಾರಿ ನಾವು ಜಯದ ಸಮೀಪ ತಲುಪಿದ್ದೆವು. ಲೀಗ್ ನ ಆರಂಭದಲ್ಲಿ ನಾವು ಕೈಗೊಂಡ ಕೆಲವು ತೀರ್ಮಾನ ಫಲ ತರಲಿಲ್ಲ. ನಾವು ಹಲವು ಅವಕಾಶಗಳನ್ನು ನಿರ್ಮಿಸಿದರೂ ಪ್ರಯೋಜನವಾಗಲಿಲ್ಲ' ಎಂದು ಜೇಮ್ಸ್ ಹೇಳಿದರು.

ಗೆಲ್ಲುವುದೇ ಆಶಯ

ಗೆಲ್ಲುವುದೇ ಆಶಯ

'ಒಬ್ಬ ಹೆಡ್ ಕೋಚ್ ಆಗಿ ಎಲ್ಲ ಪಂದ್ಯಗಳನ್ನು ಗೆಲ್ಲಬೇಕೆಂಬುದು ನನ್ನ ಆಶಯ. ಪ್ರತಿ ವರ್ಷವೂ ನಾವು ಫೈನಲ್ ತಲುಪುವ ಗುರಿಯೊಂದಿಗೆ ಆಡುತ್ತೇವೆ. ಪ್ರೇಕ್ಷಕರಿಗೆ ಮನರಂಜನೆ ನೀಡುವುದು ನಮ್ಮ ಗುರಿ. ಎಟಿಕೆ ವಿರುದ್ಧದ ಮೊದಲ ಪಂದ್ಯ ನೋಡಿದಾಗ ನಾವು ಜಯದ ಹಾದಿಯಲ್ಲೇ ಮುಂದುವರಿಯುತ್ತಿದ್ದೆವು. ನಮ್ಮ ಕೋಚ್ ಹಾಗೂ ಆಟಗಾರರು ಶೇ 100 ಶ್ರಮ ವಹಿಸಿದ್ದಾರೆ." ಎಂದು ಹೇಳಿದರು.

ಪ್ಲೇ ಆಫ್ ಹಾದಿ ಕಠಿಣ

ಪ್ಲೇ ಆಫ್ ಹಾದಿ ಕಠಿಣ

ಮಂಗಳವಾರದ (ಡಿಸೆಂಬರ್ 4) ಪಂದ್ಯದಲ್ಲೂ ಕೇರಳ ಸೋತರೆ ಪ್ಲೇ ಆಫ್ ಹಾದಿ ಕಠಿಣವಾಗಲಿದೆ. ಕಳೆದ ಋತುವಿನಲ್ಲಿ 30 ಅಂಕಗಳನ್ನು ತಂಡ ಗಳಿಸಿತ್ತು. ಈಗ ಎಂಟು ಪಂದ್ಯಗಳು ಉಳಿದಿದ್ದು ಗಳಿಸಿದ್ದು ಕೇವಲ ಎಂಟು ಅಂಕಗಳು. ಕರೇಜ್ ಪೆಕುಸನ್ ಹಾಗೂ ಸ್ಲಾವಿಸಾ ಸ್ಟೊಜಾನೊವಿಕ್ ತಂಡಕ್ಕೆ ಆಗಮಿಸಿರುವುದು ಜೇಮ್ಸ್ ಪಾಲಿಗೆ ಸಂತಸದ ವಿಷಯ. ಜೆಮ್ಷೇಡ್ಪುರದ ವಿರುದ್ಧ ಕೇರಳ ಮೇಲುಗೈ ಸಾಧಿಸುವ ಸಾಮರ್ಥ್ಯ ಹೊಂದಿದೆ. ಟಾಟಾ ಪಡೆ ಈ ಪಂದ್ಯಕ್ಕೆ ಆಗಮಿಸುವಾಗ ಡ್ರಾದೊಂದಿಗೆ ಬಂದಿದೆ. 10 ಪಂದ್ಯಗಳಲ್ಲಿ ಜೆಮ್ಷೆಡ್ಪುರ ಆರು ಡ್ರಾ ಕಂಡಿದೆ ಸೋತಿರುವುದು ಒಂದು ಮಾತ್ರ.

ಜೆಮ್ಷೆಡ್ಪುರ ವಿಫಲ

ಜೆಮ್ಷೆಡ್ಪುರ ವಿಫಲ

ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ಗೋಲು ಗಳಿಸುವಲ್ಲಿ ಜೆಮ್ಷೆಡ್ಪುರ ವಿಫಲವಾಗಿತ್ತು. ಇದು ಮೊದಲ ಬಾರಿಗೆ ತಂಡ ಗೋಲು ಗಳಿಸುವಲ್ಲಿ ವಿಫಲವಾಗಿದೆ. ಸರ್ಗಿಯೋ ಸಿಡೊಂಚಾ ಮೂರು ಹೋಳುಗಳನ್ನು ಗಳಿಸಿದ್ದು ಹಾಗೂ ಮೂರು ಗೋಲುಗಳಿಗೆ ನೇರವಾಗಿದ್ದಾರೆ.

Story first published: Tuesday, December 4, 2018, 17:37 [IST]
Other articles published on Dec 4, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X