ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಬೆಂಗಳೂರಿಗೆ ಆಘಾತವಿತ್ತ ಡೆಲ್ಲಿ ಡೈನಮೋಸ್!

By Isl Media
ISL 2019: Delhi hand Bengaluru another shocking loss

ಹೊಸದಿಲ್ಲಿ, ಫೆಬ್ರವರಿ 18: ಉಲಿಸಸ್ ದಾವಿಲಾ (9ನೇ ನಿಮಿಷ), ಡೇನಿಯಲ್ ಲಾಲ್ಲಿಂಪುಯ (77 ಮತ್ತು 81ನೇ ನಿಮಿಷ) ಗಳಿಸಿದ ಗೋಲಿನಿಂದ ಡೆಲ್ಲಿ ಡೈನಮೋಸ್ ತಂಡ ಇಂಡಿಯನ್ ಸೂಪರ್ ಲೀಗ್ ನ ಬಲಿಷ್ಠ ತಂಡ ಬೆಂಗಳೂರು ಎಫ್ ಸಿ ವಿರುದ್ಧ 3-2 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಅಚ್ಚರಿ ಮೂಡಿಸಿತು. ಬೆಂಗಳೂರು ಪರ ಬೊಯ್ತಾಂಗ್ ಹಾಕಿಪ್ (19ನೇ ನಿಮಿಷ) ಹಾಗೂ ಸುನಿಲ್ ಛೆಟ್ರಿ (72ನೇ ನಿಮಿಷ) ತಲಾ ಒಂದು ಗೋಲು ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಗೆ ವಿಂಡೀಸ್ ಸ್ಟಾರ್ ಬ್ಯಾಟ್ಸ್ಮನ್ ಗೇಲ್ ನಿರ್ಧಾರ!ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಗೆ ವಿಂಡೀಸ್ ಸ್ಟಾರ್ ಬ್ಯಾಟ್ಸ್ಮನ್ ಗೇಲ್ ನಿರ್ಧಾರ!

ಪ್ರಥಮಾರ್ಧದಲ್ಲಿ ಬೆಂಗಳೂರು ಹಾಗೂ ಡೆಲ್ಲಿ ಡೈನಮೋಸ್ ನಡುವಿನ ಪಂದ್ಯ 1-1 ರಲ್ಲಿ ಸಮಬಲಗೊಂಡಿತು. ಬೆಂಗಳೂರು ತಂಡ ಇತ್ತೀಚಿನ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ತೋರುತ್ತಿಲ್ಲ ಎಂಬುದಕ್ಕೆ ಡೆಲ್ಲಿ ತಂಡ 9ನೇ ನಿಮಿಷದಲ್ಲೇ ಗೋಲು ಗಳಿಸಿರುವುದು ಸಾಕ್ಷಿಯಾಯಿತು.

ಡರ್ಬನ್: ಶ್ರೀಲಂಕಾಕ್ಕೆ ಐತಿಹಾಸಿಕ ಜಯ ತಂದಿತ್ತ ಕುಸಲ್ ಪೆರೇರಾಡರ್ಬನ್: ಶ್ರೀಲಂಕಾಕ್ಕೆ ಐತಿಹಾಸಿಕ ಜಯ ತಂದಿತ್ತ ಕುಸಲ್ ಪೆರೇರಾ

ನಂದಕುಮಾರ್ ಶೇಕರ್ ಕೆಳಮಟ್ಟದ ಪಾಸೊಂದನ್ನು ಪೆನಾಲ್ಟಿ ವಲಯಕ್ಕೆ ನೀಡಿದರು. ಗುರ್‌ಪ್ರೀತ್ ಸಿಂಗ್ ಸಂದೂ ಅದನ್ನು ತಡೆಯಲೆತ್ನಿಸಿದರು, ಚೆಂಡನ್ನು ಕೈಯಿಂದ ಪಂಚ್ ಮಾಡಲು ಯತ್ನಿಸಿದರು. ಆದರೆ ಚೆಂಡು ಮುಂದಕ್ಕೆ ಸಾಗದೆ, ಯುಲಿಸಸ್ ಡಾವಿಲಾ ಅವರಿದ್ದಲ್ಲಿಗೆ ಸಾಗಿತು. ಬಲಿಷ್ಠ ಬೆಂಗಳೂರು ವಿರುದ್ಧ ಡೆಲ್ಲಿ ಡೈನಮೋಸ್ ಆರಂಭದಲ್ಲೇ 1-0 ಗೋಲಿನಿಂದ ಮುನ್ನಡೆ ಕಂಡಿತು.

ಡೆಲ್ಲಿಗೆ ಬೆಂಗಳೂರು ತಿರುಗೇಟು

ಡೆಲ್ಲಿಗೆ ಬೆಂಗಳೂರು ತಿರುಗೇಟು

ಗೋಲು ಗಳಿಸಿದ ಹುಮ್ಮಸ್ಸಿನಲ್ಲಿದ್ದ ಡೆಲ್ಲಿಯ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ, ಬೆಂಗಳೂರು ಪರ ಬೊಯ್ತಾಂಗ್ ಹಾಕಿಪ್ 19ನೇ ನಿಮಿಷದಲ್ಲಿ ಗಳಿಸಿದ ಗೋಲು ಪಂದ್ಯ ಸಮಬಲಗೊಳಿಸುವಂತೆ ಮಾಡಿತು. ಕ್ಸಿಸ್ಕೋ ಹೆರ್ನಾಂಡೇಸ್ ಬಲ‘ಭಾಗದಲ್ಲಿ ಸಿಕ್ಕ ಪಾಸನ್ನು ಗೋಲ್‌ಕೀಪರರ್ ಫ್ರಾನ್ಸಿಸ್ಕೋ ಡೊರೊನ್ಸೊರೊ ಅವರೆಡೆ ಕಳುಹಿಸಿದರು. ಡೊರೊನ್ಸೊ ಎಡಭಾಗಕ್ಕೆ ಕಳುಹಿಸುವವರಿದ್ದರು, ಆದರೆ ಪ್ರಮಾದವಶಾತ್ ಬೊಯ್ತಾಂಗ್ ಹಾಕಿಪ್ ಅವರ ನಿಯಂತ್ರಣಕ್ಕೆ ಸಿಲುಕಿತು. ಹಾಕಿಪ್ ಮೊದಲ ಬಾರಿಗೆ ಗೋಲು ಗಳಿಸಿದರು. ಇದರೊಎದಿಗೆ ಪ್ರಥಮಾರ್ಧ 1-1ರಲ್ಲಿ ಸಮಬಲಗೊಂಡಿತು.

ಸೋಲನುಭವಿಸಿರಲಿಲ್ಲ

ಸೋಲನುಭವಿಸಿರಲಿಲ್ಲ

ಇಂಡಿಯನ್ ಸೂಪರ್ ಲೀಗ್‌ನ 79ನೇ ಪಂದ್ಯದಲ್ಲಿ ಡೆಲ್ಲಿ ಡೈನಮೋಸ್ ಹಾಗೂ ಬೆಂಗಳೂರು ಎಫ್ ಸಿ ತಂಡಗಳು ಮುಖಾಮುಖಿಯಾದವು. ಆತಿಥೇಯ ಡೆಲ್ಲಿ 9ನೇ ಸ್ಥಾನದಲ್ಲಿದ್ದರೂ ಸತತ ನಾಲ್ಕು ಪಂದ್ಯಗಳಲ್ಲಿ ಸೋಲನುಭವಿಸಿರಲಿಲ್ಲ. ಡೆಲ್ಲಿ ತಂಡ ಸೆಮಿಫೈನಲ್ ತಲುಪಲು ಸಾಧ್ಯವಿಲ್ಲ, ಅದರೆ ಉತ್ತಮ ಪ್ರದರ್ಶನ ತೋರಿ ಋತುವನ್ನು ಮುಗಿಸಲು ಉತ್ಸುಕವಾಗಿದೆ. ಅದೇ ರೀತಿ ತಂಡ ಉತ್ತಮ ಪ್ರದರ್ಶನ ತೋರಿಸುತ್ತಿದೆ.

ಒಂದು ಸ್ಥಾನ ಮೇಲಕ್ಕೆ

ಒಂದು ಸ್ಥಾನ ಮೇಲಕ್ಕೆ

ಇಲ್ಲಿ ಜಯ ಗಳಿಸಿದರೆ ಡೆಲ್ಲಿ ತಂಡ ಕೇರಳಕ್ಕಿಂತ ಒಂದು ಸ್ಥಾನ ಮೇಲಕ್ಕೇರಲಿದೆ. ಕೇರಳ ಬ್ಲಾಸ್ಟರ್ಸ್ ತಂಡ 8ನೇ ಸ್ಥಾನದಲ್ಲಿದೆ. ಬೆಂಗಳೂರು ತಂಡ ಈ ಬಾರಿಯ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸೆಮಿಫೈನಲ್ ತಲುಪಿದ ಮೊದಲ ತಂಡವೆನಿಸಿದೆ. ಚೆನ್ನೈಯಿನ್ ತಂಡದ ವಿರುದ್ಧ ಸೋಲಿನ ನಂತರ ಬೆಂಗಳೂರು ತಂಡ ಡೆಲ್ಲಿ ವಿರುದ್ಧ ಹೋರಾಟಕ್ಕೆ ಆಗಮಿಸಿತು. ಆದರೆ ಸೋಲು ಬೆಂಗಳೂರಿನ ಪ್ರಭುತ್ವಕ್ಕೆ ಯಾವುದೇ ಅಡ್ಡಿ ಮಾಡಲಿಲ್ಲ. ಡಿಫೆನ್ಸ್ ಬೆಂಗಳೂರು ತಂಡದ ಪ್ರಮುಖ ಅಸ್ತ್ರ. ಈ ತಂಡ ಇದುವರೆಗೂ ನೀಡಿದ್ದು ಕೇವಲ 14 ಗೋಲುಗಳು.

ಸಾಮರ್ಥ್ಯಕ್ಕೆ ತಕ್ಕಂತೆ ಆಡಿರಲಿಲ್ಲ

ಸಾಮರ್ಥ್ಯಕ್ಕೆ ತಕ್ಕಂತೆ ಆಡಿರಲಿಲ್ಲ

ಕಳೆದ ಆರು ಪಂದ್ಯಗಳಲ್ಲಿ ಬೆಂಗಳೂರು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಿರಲಿಲ್ಲ. ಆರು ಪಂದ್ಯಗಳಲ್ಲಿ ಎದುರಾಳಿ ತಂಡಕ್ಕೆ ಆರು ಗೋಲುಗಳನ್ನು ಗಳಿಸಲು ಅವಕಾಶ ನೀಡಿದೆ. ಚಳಿಗಾಲದ ವಿಶ್ರಾಂತಿಯಿಂದ ಆಗಮಿಸಿದ ನಂತರ ಬೆಂಗಳೂರು ತಂಡ ತನ್ನ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ.

Story first published: Monday, February 18, 2019, 11:02 [IST]
Other articles published on Feb 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X