ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಗೋವಾಕ್ಕೆ ಸಂಭ್ರಮದ ಸಮಾಪನ ಸಾಧ್ಯವಿದೆ

By Isl Media
ISL 2019: FC Goa can finish with a flourish

ಮುಂಬೈ ಮಾರ್ಚ್ 5: ಹೀರೋ ಇಂಡಿಯನ್ ಸೂಪರ್‌ಲೀಗ್‌ನ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈ ಸಿಟಿ ವಿರುದ್ಧ ಹೋರಾಡಲಿರುವ ಎಫ್ಸಿ ಗೋವಾದ ಬಗ್ಗೆ ಆ ತಂಡದ ಅಭಿಮಾನಿಗಳು ಅತ್ಯಂತ ಕುತೂಹಲದಲ್ಲಿರುವುದು ಸಹಜ. ಈ ಋತುವಿನಲ್ಲಿ ಗೋವಾ ತಂಡ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿದೆ, ಕಳೆದ ಬಾರಿ ಸೆಮಿಫೈನಲ್‌ನಲ್ಲಿ ಸೋಲುಂಡ ಗೋವಾದ ತಂಡದಿಂದ ಅಭಿಮಾನಿಗಳು ಈ ಬಾರಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಪಂದ್ಯ ಗೆದ್ದರೆ ಟೀಮ್ ಇಂಡಿಯಾ ಹೊಸ ದಾಖಲೆ!ಭಾರತ vs ಆಸ್ಟ್ರೇಲಿಯಾ: ಪಂದ್ಯ ಗೆದ್ದರೆ ಟೀಮ್ ಇಂಡಿಯಾ ಹೊಸ ದಾಖಲೆ!

ಫೈನಲ್‌ನಲ್ಲಿ ಸ್ಥಾನ ಪಡೆಯಲು ಗೋವಾ ತಂಡ ಮುಂಬೈ ವಿರುದ್ಧ ಸೆಣಸಲಿದೆ. ತಂಡದಲ್ಲಿ ಈಗ ಹೊಸ ಭರವಸೆ ಹಾಗೂ ಉತ್ಸಾಹ ಮನೆ ಮಾಡಿದೆ. ಲೀಗ್ ಹಂತದಲ್ಲಿ ಗೋವಾ ತಂಡ ಮುಂಬೈ ವಿರುದ್ಧ ಆಡಿರುವ ಪಂದ್ಯಗಳಲ್ಲಿ ಒಟ್ಟು 7-0 ಅಂತರದಲ್ಲಿ ಜಯ ಗಳಿಸಿದೆ. ಕಳೆದ ಋತುವಿಗಿಂತ, ಅಲ್ಲದೆ ಈ ಹಿಂದಿನ ಪಂದ್ಯಗಳಿಗಿಂತ ಗೋವಾ ಇನ್ನೂ ಉತ್ತಮವಾಗಿ ಮುಂಬೈ ವಿರುದ್ಧ ಆಡುವ ಆತ್ಮವಿಶ್ವಾಸವನ್ನು ಹೊಂದಿದೆ.

1
1052775

ಈಗಾಗಲೇ ಲೀಗ್ ಹಂತದಲ್ಲಿ ಗೋವಾ ತಂಡ ಉತ್ತಮ ಪ್ರದರ್ಶನ ತೋರಿದೆ. ನಾರ್ತ್ ಈಸ್ಟ್ ಯುನೈಟೆಡ್ ತಂಡವನ್ನು ಹೊರತುಪಡಿಸಿದರೆ ಗೋವಾ ಅತಿ ಕಡಿಮೆ ಗೋಲುಗಳನ್ನು ಎದುರಾಳಿ ತಂಡಕ್ಕೆ ಬಿಟ್ಟುಕೊಟ್ಟ ತಂಡವೆನಿಸಿದೆ. ಅಲ್ಲದೆ ಎಂಟು ಕ್ಲೀನ್ ಶೀಟ್ ಸಾಧನೆಯನ್ನು ತನ್ನ ಹೆಸರಿನಲ್ಲಿ ದಾಖಲಿಸಿಕೊಂಡಿದೆ. ಸರ್ಗಿಯೊ ಲೆಬೆರಾ ಅವರು ಡಿಫೆನ್ಸ್ ಬಗ್ಗೆ ಹೆಚ್ಚಿನ ಗಮನ ಹರಿಸಿದ ಕಾರಣ ತಂಡ ಈ ಬಾರಿ ಕೇವಲ 20 ಗೋಲುಗಳನ್ನು ಎದುರಾಳಿ ತಂಡಕ್ಕೆ ನೀಡಿದೆ.

ಗೋವಾದ ಆಕ್ರಮಣಕಾರಿ ಆಟಕ್ಕೆ ಯಾವುದೇ ರೀತಿಯಲ್ಲಿ ನೆನಪಿಸುವ ಅಗತ್ಯವಿರುವುದಿಲ್ಲ. ತಂಡ ಈಗಾಗಲೇ 36 ಗೋಲುಗಳನ್ನು ಗಳಿಸಿದೆ. ತಂಡವೊಂದು ಅತಿ ಹೆಚ್ಚು ಗಳಿಸಿರುವ ಗೋಲು ಗೋವಾದ ಹೆಸರಿನಲ್ಲಿದೆ, ಅಲ್ಲದೆ ಫೆರಾನ್ ಕೊರೊಮಿನಾಸ್ 15 ಗೋಲುಗಳನ್ನು ಗಳಿಸಿದ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರೆನಿಸಿದ್ದಾರೆ.

ಅಂತಾರಾಷ್ಟ್ರೀಯ ಏಕದಿನ ಆಟ ನಿಲ್ಲಿಸಲು ದಕ್ಷಿಣ ಆಫ್ರಿಕಾದ ತಾಹಿರ್ ನಿರ್ಧಾರಅಂತಾರಾಷ್ಟ್ರೀಯ ಏಕದಿನ ಆಟ ನಿಲ್ಲಿಸಲು ದಕ್ಷಿಣ ಆಫ್ರಿಕಾದ ತಾಹಿರ್ ನಿರ್ಧಾರ

'ಈ ಋತು ಆರಂಭವಾಗುವುದಕ್ಕೆ ಮುನ್ನ ನಮ್ಮ ಡಿಫೆನ್ಸ್ ವಿಭಾಗದಲ್ಲಿ ಸ್ಪಲ್ಪ ಮಟ್ಟಿನ ಸಮಸ್ಯೆ ಇದ್ದಿತ್ತು. ನಾವು ಅದರಲ್ಲಿ ಸುಧಾರಣೆ ಕಂಡುಕೊಂಡಿದ್ದೇವೆ ಎಂಬ ನಂಬಿಕೆ ಇದೆ. ತಂಡದ ಪ್ರದರ್ಶನದ ವಿಚಾರ ಬಂದಾಗ ಇದು ನಿತ್ಯ ಹಾಗೂ ಪ್ರತಿಯೊಂದು ಆಟದಲ್ಲೂ ಅಳವಡಿಕೆಯಾಗಿದೆ. ನಾವು ಅದನ್ನು ಸಾಧಿಸಿ ತೋರಿಸಿದ್ದೇವೆ ಎಂಬ ನಂಬಿಕೆ ಇದೆ. ತಂಡ ವಿವಿಧ ಹಂತಗಳಲ್ಲಿ ಆಡಿದೆ, ಆದರೆ ನಾವು ಆ ಸ್ಥಿರತೆಯನ್ನು ಕಾಪಾಡಿಕೊಂಡಿದ್ದೇವೆ ಎಂಬ ನಂಬಿಕೆ ಇದೆ, ' ಎಂದು ಲೊಬೆರಾ ಹೇಳಿದ್ದಾರೆ.

ಡಿಫೆನ್ಸ್‌ನಲ್ಲಿ ಮೌರ್ತಾದಾ ಫಾಲ್ ಹಾಗೂ ಕಾರ್ಲೋಸ್ ಪೆನಾ ಅವರನ್ನು ಆಡಿಸಿದ್ದು ಸ್ಪೇನ್‌ನ ಕೋಚ್ ಕಂಡುಕೊಂಡ ಒಂದು ಉತ್ತಮ ರಣತಂತ್ರ. ಈ ಜೋಡಿ ಲೀಗ್‌ನಲ್ಲಿ ಉತ್ತಮ ರೀತಿಯಲ್ಲಿ ಹೊಂದಾಣಿಕೆಯ ಆಟವಾಡಿದ್ದು ಗಮನಾರ್ಹ. ಡಿಫೆನ್ಸ್ ವಿಭಾಗದ ಎಡದಲ್ಲಿ, ಮಂದಾರ ರಾವ್ ದೇಸಾಯಿ ತಮ್ಮ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದ್ದಾರೆ. ಕಳೆದ ಋತುವಿನಲ್ಲಿ ಲೆಫ್ಟ್ ಬ್ಯಾಕ್‌ನಲ್ಲಿದ್ದ ಯುವಕರು ಈ ಬಾರಿ ಮಿಂಚಿನ ಆಟವಾಡಿದ್ದಾರೆ. ಇದು ಲೊಬೆರಾ ಅವರು ಆಟಗಾರರ ಮೇಲಿಟ್ಟ ನಂಬಿಕೆ. ಬಲಭಾಗದಲ್ಲಿ ಸೆರಿಟಾನ್ ಫೆರ್ನಾಂಡೀಸ್ ಅದ್ಭುತ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಕೊಹ್ಲಿಯನ್ನು ಜಂಪಾ ಔಟ್ ಮಾಡಿದ್ದು ಭಾರತದ ಮಾಜಿ ಕ್ರಿಕೆಟಿಗನ ನೆರವಿನಿಂದ!ಕೊಹ್ಲಿಯನ್ನು ಜಂಪಾ ಔಟ್ ಮಾಡಿದ್ದು ಭಾರತದ ಮಾಜಿ ಕ್ರಿಕೆಟಿಗನ ನೆರವಿನಿಂದ!

ಗೋವಾದ ಬ್ಯಾಕ್ ಲೇನ್ ಶಕ್ತಿ ಕೂಡ ಸಂಘಟಿತ ಹೋರಾಟ ನೀಡಿದೆ. ಉತ್ತಮ ಗೋಲ್‌ಕೀಪರ್ ಜೋಡಿ ಇರುವುದು ಕೂಡ ಗೋವಾದ ಡಿಫೆನ್ಸ್ ವಿಭಾಗ ಅತ್ಯಂತ ಆತ್ಮವಿಶ್ವಾಸದಲ್ಲಿ ಪ್ರದರ್ಶನ ತೋರಲು ಮತ್ತೊಂದು ಕಾರಣ. ಕಳೆದ ಬಾರಿ ಲಕ್ಷ್ಮೀಕಾಂತ್ ಕಟ್ಟಿಮನಿ ಅವರು ಮಾಡಿದ ಪ್ರಮಾದಗಳಿಂದಾಗಿ ಅದು ಗೋಲಾಗಿ ರೂಪುಗೊಂಡಿತ್ತು. ಈ ಬಾರಿ ಗೋಲ್‌ಕೀಪಿಂಗ್‌ನಲ್ಲಿ ಬದಲಾವಣೆ ಮಾಡಿರುವುದು ಲೊಬೆರಾ ಅವರ ಪ್ರಯತ್ನಕ್ಕೆ ಉತ್ತಮ ಫಲ ಸಿಕ್ಕಿದೆ. ಯುವ ಗೋಲ್‌ಕೀಪರ್ ಮೊಹಮ್ಮದ್ ನವಾಜ್ ಅವರು ಅದ್ಭುತ ರೀತಿಯಲ್ಲಿ ಕೀಪಿಂಗ್ ಮಾಡಿದ್ದಾರೆ.

ಪಂಜಾಬ್ ಮೂಲದ ನವೀನ್ ಕುಮಾರ್ ಅವರನ್ನೂ ಗೋಲ್‌ಕೀಪಿಂಗ್‌ನಲ್ಲಿ ಬಳಸಿಕೊಂಡಿದ್ದು, ನವಾಜ್ ಅವರಿಗೆ ಬದಲಿ ಗೋಲ್‌ಕೀಪರ್ ಆಗಿ ರೂಪುಗೊಂಡರು. ಈ ಋತುವಿನಲ್ಲಿ ಗೋವಾದ ಡಿಫೆನ್ಸ್ ವಿಭಾಗ ಉತ್ತಮಗೊಂಡಿರಲು ಅದು ಲೊಬೆರಾ ಅವರ ಸೂತ್ರವೇ ಕಾರಣ. ಸ್ಪೇನ್ ಮೂಲದ ಕೋಚ್ ತಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿತು. ಈ ರೀತಿಯ ಬದಲಾವಣೆ, ಯಶಸ್ಸು ಗೋವಾ ತಂಡ ಈ ಋತುವಿನಲ್ಲಿ ಮತ್ತಷ್ಟು ಉನ್ನತ ಮಟ್ಟಕ್ಕೇರುವುದರಲ್ಲಿ ಸಂಶಯವಿಲ್ಲ.

Story first published: Tuesday, March 5, 2019, 15:18 [IST]
Other articles published on Mar 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X