ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಮುಂಬೈ ಕಾದಾಟ

By Isl Media
ISL 2019: Mumbai City feel at home in NorthEast

ಗುವಾಹಟಿ, ನವೆಂಬರ್ 27: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ತನ್ನ ಸದ್ಯದ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ನಾರ್ತ್ ಈಸ್ಟ್ ಯುನೈಟೆಡ್ ತಂಡ ಬುಧವಾರ ಮುಂಬೈ ಸಿಟಿ ಎಫ್‌ಸಿ ವಿರುದ್ಧ ಇಲ್ಲಿನ ಇಂದಿರಾ ಗಾಂಧಿ ಅಥ್ಲೆಟಿಕ್ಸ್ ಅಂಗಣದಲ್ಲಿ ಹೋರಾಟ ನಡೆಸಲಿದೆ.

ಸೌತ್ ಏ‍ಷಿಯನ್ ಗೇಮ್ಸ್‌: ಕಬಡ್ಡಿ ತಂಡದ ನಾಯಕನಾಗಿ ದೀಪಕ್ ಹೂಡಾಸೌತ್ ಏ‍ಷಿಯನ್ ಗೇಮ್ಸ್‌: ಕಬಡ್ಡಿ ತಂಡದ ನಾಯಕನಾಗಿ ದೀಪಕ್ ಹೂಡಾ

ಪರ್ವತ ಪ್ರದೇಶದ ತಂಡ ಈ ಬಾರಿ ಉತ್ತಮ ರೀತಿಯಲ್ಲಿ ಅಭಿಯಾನ ಆರಂಭಿಸಿದ್ದು ಇವರೆಗೂ ಸೋಲು ಕಾಣದ ಮೂರು ತಂಡಗಳಲ್ಲಿ ಒಂದೆನಿಸಿದೆ. ಕೋಚ್ ರಾಬರ್ಟ್ ಜರ್ಮಿ ಆಟಗಾರರೊಂದಿಗೆ ಉತ್ತಮ ರೀತಿಯಲ್ಲಿ ಹೊಂದಾಣಿಕೆ ಕಾಯ್ದುಕೊಂಡಿದ್ದು ಆಡಿರುವ ನಾಲ್ಕು ಪಂದ್ಯಗಳಲ್ಲಿ ಎಂಟು ಅಂಕ ಗಳಿಸಿದೆ.

ನಾರ್ತ್ ಈಸ್ಟ್ ಯುನೈಟೆಡ್ vs ಮುಂಬೈ ಸಿಟಿ ಎಫ್‌ಸಿ, Live ಸ್ಕೋರ್‌ಕಾರ್ಡ್

1
2026449

ಕ್ರೊಯೇಷಿಯಾದ ಕೋಚ್ ತಂಡದ ಯುವ ಆಟಗಾರ ರೆಡೀಮ್ ತ್ಲ್ಯಾಂಗ್ ಅವರ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಆಟಗಾರ ಈಗಾಗಲೇ ಎರಡು ಗೋಲು ಗಳಿಸಿ ಗಮನ ಸೆಳೆದಿದ್ದಾರೆ. ಅಂತಾರಾಷ್ಟ್ರೀಯ ಬಿಡುವಿಗೆ ಮುನ್ನ ಗಾಯಗೊಂಡಿದ್ದ ಸ್ಟಾರ್ ಸ್ಟ್ರೈಕರ್ ಅಸಮಾಹ್ ಗ್ಯಾನ್ ನಾಳೆಯ ಪಂದ್ಯದಲ್ಲಿ ಆಡಲಿದ್ದಾರೆ.

ಈ ತಿಂಗಳ ಆರಂಭದಲ್ಲಿ ಗೋವಾ ವಿರುದ್ಧ ನಡೆದ ಪಂದ್ಯದಲ್ಲಿ ಜಗಳವಾಡಿದ ಕಾರಣ ಸೆಂಟ್ರಲ್ ಡಿಫೆಂಡರ್ ಕೈ ಹೀರಿಂಗ್ಸ್ ಅನುಪಸ್ಥಿತಿ ತಂಡವನ್ನು ಕಾಡಲಿದೆ.

ISL 2019: Mumbai City feel at home in NorthEast

ಬಲಿಷ್ಠ ಮುಂಬೈ ವಿರುದ್ಧ ತಮ್ಮ ತಂಡ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ ಎಂದು ನಾರ್ತ್ ಈಸ್ಟ್ ನ ಸಹಾಯಕ ಕೋಚ್ ಖಾಲಿದ್ ಜಮೀಲ್ ಹೇಳಿದ್ದಾರೆ. ''ಮುಂಬೈ ವಿರುದ್ಧದ ಮೂರು ಅಂಕ ಪ್ರಮುಖವಾಗಿದೆ. ಗಾಯದ ಸಮಸ್ಯೆ ಇಲ್ಲ, ಆದರೆ, ಕೈ ಹೀರಿಂಗ್ಸ್ ಅವರು ಆಡುವುದಿಲ್ಲ, ನಾವು ಎಂದಿನಂತೆ ನಮ್ಮ ಆಟವನ್ನು ಆಡಲಿದ್ದೇವೆ. ನಾವು ಉತ್ತಮ ತಂಡದ ವಿರುದ್ಧ ಉತ್ತಮವಾಗಿಯೇ ಆಡಲಿದ್ದೇವೆ. ಆದರಿಂದ ಅವರನ್ನು ನಾವು ಹಗುರವಾಗಿ ಪರಿಗಣಿಸುವುದಿಲ್ಲ'' ಎಂದಿದ್ದಾರೆ.

ಬಂಗಾರ ವಿಜೇತ ಬಾಡಿಬಿಲ್ಡರ್ ಸೈನಿಕನಿಗೆ ಬೆಂಗಳೂರಿನಲ್ಲಿ ಭವ್ಯ ಸ್ವಾಗತಬಂಗಾರ ವಿಜೇತ ಬಾಡಿಬಿಲ್ಡರ್ ಸೈನಿಕನಿಗೆ ಬೆಂಗಳೂರಿನಲ್ಲಿ ಭವ್ಯ ಸ್ವಾಗತ

ಗಾಯಗೊಂಡಿರುವ ಆಟಗಾರರು ಮುಂಬೈ ಸಿಟಿ ತಂಡವನ್ನು ಸೇರಿಕೊಂಡಿದ್ದಾರೆ. ರೌಲಿನ್ ಬೋರ್ಗೆಸ್, ಮೊದೌ ಸೌಗೌ ಮತ್ತು ಮ್ಯಾಟೋ ಗ್ರಗಿಸಿ ತಂಡಕ್ಕೆ ಮರಳಿದ್ದಾರೆ. ಇದು ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಕೋಚ್ ಜೋರ್ಜ್ ಕೋಸ್ಟಾ ಅವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಮುಂಬೈ ಸಿಟಿ ತಂಡ ಉತ್ತಮ ಸ್ಥಿತಿಯಲ್ಲಿ ಇಲ್ಲ, ಮನೆಯಂಗಣದ ಹೊರಗಡೆ ನಡೆದ ಎರಡು ಪಂದ್ಯಗಳಲ್ಲಿ ನಾಲ್ಕು ಅಂಕಗಳನ್ನು ಗಳಿಸಿದರೂ, ಮನೆಯಂಗಣದಲ್ಲಿ ನಡೆದ ಪಂದ್ಯದಲ್ಲಿ ಒಡಿಶಾ ಹಾಗೂ ಗೋವಾ ವಿರುದ್ಧ 4-2 ಗೋಲುಗಳ ಅಂತರದಲ್ಲಿ ಸೋಲನುಭವಿಸಿತ್ತು. ಕಳೆದ ಬಾರಿಯೂ ನಾಲ್ಕು ಪಂದ್ಯಗಳ ನಂತರ ಇದೇ ರೀತಿಯ ಅಂಕ ಹೊಂದಿತ್ತು, ಆದರೆ ಗೋವಾ ವಿರುದ್ಧ ಹೀನಾಯ ಸೋಲನುಭವಿಸಿತ್ತು, ಕೋಸ್ಟಾ ಅವರು ಹಿಂದಿನ ವರ್ಷದ ಕಹಿ ನೆನಪು ಮರುಕಳಿಸದಂತೆ ನೋಡಿಕೊಳ್ಳುತ್ತಿದ್ದಾರೆ.

''ಕಳೆದ ವರ್ಷದಂತೆಯೇ ನಾವು ಈ ಬಾರಿ ಆರಂಭವನ್ನು ಕಂಡಿದ್ದೇವೆ. ಅದೇ ರೀತಿ ನಾಲ್ಕು ಅಂಕಗಳನ್ನು ಗಳಿಸಿದ್ದೇವೆ. ನಾವು ಉತ್ತಮ ರೀತಿಯಲ್ಲಿ ಆರಂಭ ಕಂಡು ನಂತರ ಸಮಸ್ಯೆಗಳನ್ನು ಎದುರಿಸಿದೆವು. ನನಗೆ ನನ್ನ ಆಟಗಾರರ ಬಗ್ಗೆ ಸಂಪೂರ್ಣ ನಂಬಿಕೆ ಇದೆ. ಅವರಿಗೆ ಏನು ಮಾಡಬೇಕೆಂಬುದು ಗೊತ್ತು. ನನಗೆ ಏನು ಮಾಡಬೇಕೆಂಬುದು ಗೊತ್ತು, ನಮಗೆ ಇದು ಅತ್ಯಂತ ಮುಖ್ಯ ಪಂದ್ಯ, ಮೂರು ಅಂಕಗಳನ್ನು ಗಳಿಸುವುದು ನಮ್ಮ ಗುರಿಯಾಗಿದೆ,''ಎಂದು ಕೋಸ್ಟಾ ಹೇಳಿದರು.

''ಇಲ್ಲಿಯ ವಾತಾವರಣ ನಮ್ಮ ಆಟಗಾರರಿಗೆ ಉತ್ತಮವಾಗಿದೆ, ಮುಂಬೈಯಲ್ಲಿ ಸಾಕಷ್ಟು ಸೆಕೆ. ಆದರೂ ನಾವು ಯಾವುದೇ ಪರಿಸ್ಥಿತಿಯಲ್ಲಿ ಆಡಲು ಸಜ್ಜಾಗಿದ್ದೇವೆ. ಈ ರೀತಿಯ ವಾತಾವರಣ ಇದ್ದಾಗ ನಮ್ಮ ಆಯ್ಕೆ ಮೊದಲಾಗಿರುತ್ತದೆ,'' ಎಂದರು.

Story first published: Wednesday, November 27, 2019, 15:33 [IST]
Other articles published on Nov 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X